ಹುಬ್ಬಳ್ಳಿ : ಹಿಂದಿ ಭಾಷೆ ಹೇರಿಕೆ ವಿಚಾರ. ನಟ ಸುದೀಪ್ ಹೇಳಿದ್ದು ಸರಿಯಿದೆ. ಭಾಷಾವಾರು ಪ್ರಾಂತವಾರು ಆದಮೇಲೆ ಎಲ್ಲವೂ ಮಾತೃಭಾಷೆ ಆಗಿದೆ. ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯೇ ಸಾರ್ವಭೌಮವಾಗಿದೆ ಎಂದು ನಗರದ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 4 ನೇ ಅಲೆಯ ಭೀತಿ ಹಿನ್ನೆಲೆ ಟೆಸ್ಟ್ ಗಳನ್ನ ಮತ್ತೆ ಜಾಸ್ತಿ ಮಾಡುತ್ತೇವೆ. 8500 ಜಿನೋಮ್ ಟೆಸ್ಟ್ ಗಳನ್ನ ಈಗಾಗಲೇ ಮಾಡಿದ್ದೇವೆ. ಸಾರಿ ,ಐ ಎಲ್ ಐ ಟೆಸ್ಟ್ ಮಾಡಿದ್ರೆ ಟ್ರೀಟ್ಮೆಂಟ್ ಗೆ ಅನುಕೂಲವಾಗುತ್ತದೆ.
ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಈಗಾಗಲೇ ಮಾಡಿದ್ದೇವೆ. ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಅದನ್ನ ತೆಗೆದುಕೊಳ್ಳಲಾಗಿದೆ. ಈಗ 4 ನೇ ಅಲೆ ಇನ್ನು ಬಂದಿಲ್ಲ, ಆದ್ರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ.
ಸುದೀಪ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಹ ಬೆಂಬಲ ವ್ಯಕ್ತಪಡಿಸಿದರು. 6 ವರ್ಷದಿಂದ 12 ವರ್ಷದ ವರೆಗೆ ಲಸಿಕೆ ಕೊಡೋ ನಿರ್ಧಾರ ಆಗಿದೆ. ಗರ್ಭಪಾತ ಪ್ರಕರಣ ಹಿನ್ನೆಲೆ ಇದು 2017ರಲ್ಲಿ ನಡೆದ ಪ್ರಕರಣ ಅದರ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತೇನೆ ನಂತರ ಕ್ರಮ ಕೈಗೊಳ್ಳಲಾಗುವುದು. ನಾಳೆ ದೆಹಲಿಗೆ ತೆರಳಲಿದ್ದೇನೆ. ನಾಡಿದ್ದು ಚೀಫ್ ಮಿನಿಸ್ಟರ್ ಹಾಗೂ ಚೀಫ್ ಜಸ್ಟೀಸ್ ಸಮ್ಮೇಳನ ನಡೆಯಲಿದೆ. ಈ ವೇಳೆ ಹಲವು ನ್ಯಾಯಾಂಗ ವಿಷಯಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

