Breaking News

admin

ಶಿವಮೊಗ್ಗದ 14 ವರ್ಷದ ವಿನಾಯಕಿಯಾ ಜೈನ ಸನ್ಯಾಸ ಸ್ವೀಕಾರ

ನವಲಗುಂದ: ಇಲ್ಲಿನ ಕುಸುಗಲ್ ರಸ್ತೆಯ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಗುರುವಾರ ಶಿವಮೊಗ್ಗದ 14 ವರ್ಷ ವಯಸ್ಸಿನ ಸಿದ್ಧಿ ವಿನಾಯಕಿಯಾ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಆಶ್ರಯದಲ್ಲಿನರೇಶ ಮುನೀಜಿ , ಶಾಲಿಭದ್ರ ಮುನೀಜಿ , ಸತ್ಯ ಪ್ರಭಾಜಿ ಹಾಗೂ ಶಾಲಿಭದ್ರ ಮುನೀಜಿ ಅವರು ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.ಬೆಳಿಗ್ಗೆ ಸತ್ಯ , ಅಹಿಂಸಾ , ಮಾನವೀಯ ಏಕತೆ , ತ್ಯಾಗ ಮತ್ತು ವಿಶ್ವಶಾಂತಿಗೆ …

Read More »

ಪುಟಾಣಿಗಳಿಂದ ವಿಶ್ವ ಭೂದಿನ ಮಹತ್ವದ ಆಚರಣೆ

ಹುಬ್ಬಳ್ಳಿ : ಪುಟಾಣಿಗಳು ವಿಶ್ವ ಭೂದಿನದ ಅಂಗವಾಗಿ ಪರಿಸರದ ಬಗ್ಗೆ ತಮಗರಿವಿರುವಷ್ಟು ಜಾಗೃತಿ ಮೂಡಿಸಿದ್ದಾರೆ . ಇಂತದೊಂದು ಅಪರೂಪದ ದೃಶ್ಯ ಕಂಡು ಬಂದದ್ದು ಧಾರವಾಡದಲ್ಲಿ , ಧಾರವಾಡದ ಯುವ ಡ್ಯಾನ್ಸ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂದಿನದ ಕಾರ್ಯಕ್ರಮದಲ್ಲಿ ಪುಟಾಣಿಗಳು , ಮರವನ್ನು ರಕ್ಷಿಸಿ , ನೀರನ್ನು ಮಿತವಾಗಿ ಬಳಸಿ ಎಂಬ ಇತ್ಯಾದಿ ಸಂದೇಶಗಳುಳ್ಳ ಬೋರ್ಡ್‌ಗಳನ್ನು ಹಿಡಿದ ಜಾಗೃತಿ ಮೂಡಿಸಿದರು .

Read More »

ನ್ಯಾಯಾಧೀಶರ ಮುಂದೆ ಮಾಸ್ಟರ್ ಮೈಂಡ್ ಕಣ್ಣೀರು

ಹುಬ್ಬಳ್ಳಿ : ಹಳೆ ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ನನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ನಾಲ್ಕನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಹೊರಡಿಸಿದೆ .ನ್ಯಾಯಾಧೀಶರ ಮುಂದೆ ಹಾಜರು ಪಡಿಸಿರುವ ವೇಳೆಯಲ್ಲಿ ತೌಫಿಲ್ ಕಣ್ಣಿರು ಹಾಕಿದ್ದಾರೆ. ಪೊಲೀಸರು 10 ದಿನ ಪೊಲೀಸ್ ಕಸ್ಟಡಿಗೆ ಕೇಳಿದ್ದರು . ಆದರೆ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ . ಇವತ್ತು …

Read More »

ನ್ಯಾಯಾಲಯ ಮೇಟಿಲ್ಲ ಏರೀದ ಡಿಕೆಶಿ

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು. ಖುದ್ದು ಹಾಜರಾಗುವಂತೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಶಿವಕುಮಾರ್‌ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಜೂ. 2ಕ್ಕೆ ಮುಂದೂಡಿತು.

Read More »

ಏ.24ರಂದು ಡಾ.ರಾಜ್‍ಕುಮಾರ್ ಜಯಂತಿ ಆಚರಣೆ

ಹೊಸಪೇಟೆ : ವಿಜಯನಗರ ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಜಯಂತಿಯನ್ನು ಏ.24ರಂದು ಬೆಳಗ್ಗೆ 9:30ಕ್ಕೆ ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಚರಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಮಹೇಶಬಾಬು ಅವರು ತಿಳಿಸಿದ್ದಾರೆ. ಏ.24ರಂದು ಸಂಜೆ 5ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ರಾಜಕುಮಾರ್ ಜನ್ಮದಿನಾಚರಣೆ ಹಾಗೂ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Read More »

ರಾಜ್ಯ ಹೈಕೋರ್ಟ್‌ಗೆ ಏ.24ರಿಂದ ಬೇಸಿಗೆ ರಜೆ

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಏ.24ರಿಂದ ಮೇ 21ರವರೆಗೆ ಬೇಸಿಗೆ ರಜೆ ಇರಲಿದೆ. ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರ್ಗಿ ಪೀಠಗಳಿಗೆ ಈ ಬೇಸಿಗೆ ರಜೆ ಅನ್ವಯವಾಗಲಿದೆ. ಈ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ವಿವಿಧ ದಿನಾಂಕಗಳಂದು ಏಳು ದಿನ ರಜಾ ಕಾಲದ ನ್ಯಾಯಪೀಠಗಳು ಕಾರ್ಯನಿರ್ವಹಣೆ ಮಾಡಲಿದೆ.ಏಪ್ರಿಲ್‌ 26, 28, ಮೇ 5, 10, 12, 17 ಮತ್ತು 19 ರಂದು ರಜಾ ಕಾಲದ ಪೀಠಗಳು ಕಾರ್ಯನಿರ್ವಹಿಸಲಿವೆ. ಬೇಸಿಗೆ …

Read More »

ರಾಜ್ಯದಲ್ಲಿ ಮಳೆ ಅಬ್ಬರ : ಇಬ್ಬರು ಬಲಿ

ಬೆಂಗಳೂರು: ಕಲ್ಯಾಣ ಕರ್ನಾಟಕದ ಕೆಲಭಾಗಗಳಲ್ಲಿ ಶುಕ್ರವಾರ ಬೇಸಿಗೆ ಮಳೆಯಾಗಿದ್ದು ಬಾಲಕ ಸೇರಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಬಾಲಕ ನಾಗರಾಜ(11) ಹೊಲಕ್ಕೆ ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ.ಕಲಬುರಗಿ ಜಿಲ್ಲೆ ರೇವನೂರ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಶುಕ್ರವಾರ ಸಂಜೆ ಶೇಂಗಾ ಬಿಡಿಸುತ್ತಿದ್ದ ರೈತ ಮಹಾದೇವಪ್ಪ(44) ಸಿಡಿಲಿಗೆ ಬಲಿಯಾಗಿದ್ದಾರೆ.

Read More »

ಭಾತರಕ್ಕೆ ಧನ್ಯವಾದ ತಿಳಿಸಿದ ಬ್ರಿಟನ್ ಪ್ರಧಾನಿ ಯಾಕೆ ಗೊತ್ತಾಈ ಸುದ್ದಿ ನೋಡಿ?

ನವದೆಹಲಿ: ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್ ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಿ ಕೋವಿಡ್​ ಲಸಿಕೆ ವಿಚಾರವಾಗಿ ಮಾತನಾಡುತ್ತಾ, ‘ನನ್ನ ತೋಳಿಗೆ ಭಾರತದ ಕೋವಿಡ್ ಲಸಿಕೆ ಹಾಕಲಾಗಿದೆ. ಇದಕ್ಕಾಗಿ ನಾನು ಭಾರತಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದರು. ಈ ವೇಳೆ ಭಾರತದಲ್ಲೇ ತಯಾರುಗೊಂಡಿರುವ ಕೋವಿಡ್​ ಲಸಿಕೆಯನ್ನು ತಾವು ಪಡೆದುಕೊಂಡಿರುವ ವಿಚಾರ ಬಹಿರಂಗಪಡಿಸಿದರು. ಹೈದರಾಬಾದ್​ ಹೌಸ್​​ನಲ್ಲಿ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ …

Read More »

ಚಲಿಸುವ ಬೈಕ್ ಮೇಲೆ ಲವ್ವಿ ಡವ್ವಿ ಆಡುತ್ರಿದ್ದ ಯುವಕ ಪೊಲೀಸರ ವಶ

ಚಾಮರಾಜನಗರ: ಚಾಮರಾಜನಗರ – ಗುಂಡ್ಲು ಪೇಟೆ ರಸ್ತೆಯಲ್ಲಿ ಯುವತಿಯನ್ನು ಬೈಕ್​ನ ಪೆಟ್ರೋಲ್​ ಟ್ಯಾಂಕ್​ ಮೇಲೆ ಎದುರಾಗಿ ಕೂರಿಸಿಕೊಂಡು, ಹೆಲ್ಮೆಟ್ ಸಹ ಧರಿಸದೇ ಅಜಾಗರೂಕತೆಯಿಂದ ಜಾಲಿ ರೈಡ್ ಮಾಡಿ ತನ್ನ ಹುಚ್ಚಾಟ ಮೆರೆದಿದ್ದ ಯುವಕನನ್ನು ಪೊಲೀಸರು ಬೈಕ್ ಸಮೇತ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿ. ಸ್ವಾಮಿ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿದ್ದ ಯುವಕನಾಗಿದ್ದಾನೆ. ಈತ ಏ. 21ರಂದು ಸಂಜೆ …

Read More »

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ: ಎಐಎಂಐಎಂ ಬ್ಯಾನ್ ಮಾಡಿ ಸ್ಪೋಟಕ ಮಾಹಿತಿ!

ಹುಬ್ಬಳ್ಳಿ: ದೇಶದಲ್ಲಿ ಅಶಾಂತಿಯನ್ನು ಹುಟ್ಟು ಹಾಕುವ ಎಐಎಂಐಎಂ, ಎಸ್.ಡಿ.ಪಿ.ಐ, ಆರ್.ಎಸ್.ಎಸ್ ಭಜರಂಗದಳ ಎಲ್ಲವನ್ನೂ ಬ್ಯಾನ್ ಮಾಡಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸರ್ಕಾರ ಅಶಾಂತಿಯನ್ನುಂಟು ಮಾಡುವ ಯಾವುದೇ ಸಂಘಟನೆಯಾಗಿದ್ದರೂ ಬ್ಯಾನ್ ಮಾಡಲಿ ಅದರಲ್ಲಿ ಎಐಎಂಐಎಂ, ಎಸ್.ಡಿ.ಪಿ.ಐ, ಭಜರಂಗದಳ ಹಾಗೂ ಆರ್.ಎಸ್.ಎಸ್ ಎಲ್ಲವನ್ನೂ ಬ್ಯಾನ್ ಮಾಡಲಿ ಎಂದರು. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ …

Read More »