Breaking News

ಮಂತ್ರಿ ಆಸೆಯಿಂದ ಬೆಂಗಳೂರಿಗೆ ಹೋಗಿದ್ದ ಶೆಟ್ಟರ್ ನಿರಾಸೆ..?

ಬೆಂಗಳೂರು: ಅಸ್ತಿತ್ವಕ್ಕೆ ಬಂದಿರುವ ಹೊಸ ಕಾಂಗ್ರೆಸ್ ಸರ್ಕಾರದ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗಬಹುದು ಎನ್ನುವ ಆಶಯದೊಂದಿಗೆ,ಚುನಾವಣೆಯಲ್ಲಿ ಜನರಿಂದ ತಿರಸ್ಕೃತ ಗೊಂಡು ಸೋತಿರುವ ಜಗದೀಶ್ ಶೆಟ್ಟರ್ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಹೋಗಿ ಕಾಲಿ ಕೈಯಲ್ಲಿ ವಾಪಸ್ ಆಗುವ ಸಂದರ್ಭ ನಿರ್ಮಾಣವಾಗಿದೆ,

ಹೌದು ತನ್ನನ್ನು ಮಂತ್ರಿ ಮಾಡ್ತಾರೆ ಅಂತ ಜಗದೀಶ್ ಶೆಟ್ಟರ್ ಯಾರು ಕರಿಯದೆ ಇದ್ದರೂ ಬೆಂಗಳೂರಿಗೆ ಹೋಗಿದ್ದರುತಾವು ಸೋತರು ತಮ್ಮ ಸಂಬಂಧಿಗಳ ಕೃಪಾಕಟಾಕ್ಷದಿಂದ ತನಗೆ ಮಂತ್ರಿ ಸ್ಥಾನ ಸಿಗುವ ಭ್ರಮೆಯೊಂದಿಗೆ ಜಗದೀಶ್ ಶೆಟ್ಟರ್ ಇದ್ದರೂ ಎಂದು ಹೇಳಲಾಗುತ್ತಿದೆ,ಹೀಗಾಗಿ ತಮ್ಮ ಇಬ್ಬರು ಮಕ್ಕಳು, ಸೊಸೆಯಂದಿರು,..? ಹಾಗೂ ಮಡದಿಯೊಂದಿಗೆ ಬೆಂಗಳೂರಿನಲ್ಲಿ ಶೆಟ್ಟರ್ ಟಿಕಾಣಿ ಹೂಡಿದ್ದರು, ಆದರೆ ಇತ್ತ ಕಾಂಗ್ರೆಸ್ ಹೈಕಮಾಂಡ್ ಸಿಎಂ ಆಕೆಯ ಜಟಾಪಟಿಯಲ್ಲಿ ಶೆಟ್ಟರ್ ಕಡೆ ಗಮನ ಹರಿಸಿಲ್ಲ ಎಂದು ತಿಳಿದು ಬಂದಿದೆ,ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬಂದರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಶೆಟ್ಟರ್ಸಿ

ದ್ದರಾಮಯ್ಯನವರಿಗೆ ಶುಭಾಶಯ ತಿಳಿಸಿ, ಒಳಗೊಳಗೆ ನೋವಿಟ್ಟುಕೊಂಡು ವಾಪಸ್ಸು ಮನೆಗೆ ಸೇರಿದ್ದಾರೆ, ಏನೇ ಆದರೂ ಕೇವಲ ಟಿಕೆಟ್ಗಾಗಿ ತಮ್ಮ ಸಿದ್ದಾಂತ, ತತ್ವ, ಹಾಗೂ ತಾವೇ ಕಟ್ಟಿದ ಪಕ್ಷವನ್ನ ತೊರೆದು ಕಾಂಗ್ರೆಸ್ ಸೇರಿರುವ ಶೆಟ್ಟರಿಗೆ ತುಂಬಾನೇ ವೇಗವಾಗಿ ಮೂಲೆಗುಂಪಾಗುವ ಸುಳಿವು ಇದೀಗ ಸಿಕ್ಕಂತಾಗಿದೆ, ಮುಂದಿನ ದಿನಗಳಲ್ಲಿ ಶೆಟ್ರ ಅವರನ್ನು ಕಾಂಗ್ರೆಸ್ ಗೆ ಕರೆ ತಂದ ಶಾಮನೂರು ಹಾಗೂ ಎಂಬಿ ಪಾಟೀಲರು ಅದ್ಯಾವ ಸ್ಥಾನ ಮಾನ ಶೆಟ್ಟರಿಗೆ ತಂದು ಕೊಡುವಲ್ಲಿ ಯಶಸ್ವಿ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕು…

Share News

About Shaikh BigTv

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *