Breaking News

admin

ಹುಬ್ಬಳ್ಳಿ ಗಲಭೆಯನ್ನು ತೀವ್ರ ವಾಗಿ ಖಂಡಿಸಿದ ನಾಗೇಶ ಕಲಬುರ್ಗಿ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ್ದಲ್ಲದೇ , ಠಾಣೆ ಮತ್ತು ಆಸ್ಪತ್ರೆ ಮೇಲೆ ಕಲ್ಲು ತೂರಾಟ ಮಾಡಿದ ಘಟನೆಯನ್ನು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ತೀವ್ರವಾಗಿ ಖಂಡಿಸಿದ್ದಾರೆ . ಕಿಡಿಗೇಡಿ ಬಂಧನವನ್ನು ಕಾನೂನನ್ನು ಕೈಗೆತ್ತಿಕೊಂಡು ಕೃತ್ಯ ಎಸಗಿದ ಪೊಲೀಸರು ಯುವಕನ ಮಾಡಿದ್ದರೂ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕೆಲವರು ಕಾರಣರಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದಿದ್ದಾರೆ . ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಸಹನೆಯಿಂದ ವರ್ತಿಸಲು ಕಲಬುರ್ಗಿ …

Read More »

ಶಾಸಕನ ಪತ್ನಿ ನೇಣಿಗೆ ಶರಣು

ಮಹಾರಾಷ್ಟ್ರದ ಕುರ್ಲಾ ವಿಧಾನಸಭಾ ಕ್ಷೇತ್ರದ ಶಿವಸೇನಾ ಶಾಸಕ ಮಂಗೇಶ್ ಕುಡಾಲ್ಕರ್ ಅವರ ಪತ್ನಿ ರಜನಿ ಮಂಗೇಶ್ ಕುಡಾಲ್ಕರ್ ಅವರ ಮೃತದೇಹ ಭಾನುವಾರ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಜನಿ ರಾತ್ರಿ 9 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ . ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ . ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ . ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ .

Read More »

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ನವಲಗುಂದ : ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ನಿನ್ನೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ . ಆತ್ಮಹತ್ಯೆ ಮಾಡಿಕೊಂಡ ರೈತ 26 ವಯಸ್ಸಿನ ಸಂಜೀವ ಶಿವಪುತ್ರಪ್ಪ ಕಾಲವಾಡ ಎಂದು ತಿಳಿದು ಬಂದಿದೆಮ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದ್ದು , ತನ್ನ ಜಮೀನಿನಲ್ಲಿಯ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ . ಈ ಬಗ್ಗೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಕೈಗೊಂಡಿದ್ದಾರೆ .

Read More »

ಗಲಭೆಯಲ್ಲಿ ಗಾಯಗೊಂಡ ಪೋಲಿಸ್ ಆರೋಗ್ಯ ವಿಚಾರಿಸಿದ ಸಚಿವರ ತಂಡ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿಗಳ ಆರೋಗ್ಯ ವಿಚಾರಿಸಲು ಸೆಕ್ಯೂರ್ ಆಸ್ಪತ್ರೆಗೆ ಭೇಟಿ ಸಚಿವರ ತಂಡ ಭೇಟಿ ನೀಡಿ ಆತ್ಮಸ್ಥೆರ್ಯ ತುಂಬದಿರು . ಗಲಭೆಯಲ್ಲಿ ದುಷ್ಕರ್ಮಿಗಳಿಂದ ಕಲ್ಲೆಸತಕ್ಕೆ ಒಳಗಾದ ಆಂಜನೇಯ ಸ್ವಾಮಿ ದೇವಾಲಯಕ್ಕೂ ಈ ಸಂದರ್ಭದಲ್ಲಿ ಭೇಟಿ ನೀಡಿ ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರೊಂದಿಗೆ ಚರ್ಚಿಸಿದರು . ಜೊತೆಗೆ ಹಾನಿಗೊಳಗಾದ ದೇವಾಲಯದ ಭಾಗವನ್ನು ಮರು ನಿರ್ಮಾಣ ಮಾಡುವ ಬಗ್ಗೆಯೂ ಚರ್ಚಿಸಿದರು . ಈ ವೇಳೆಯಲ್ಲಿ …

Read More »

ಮುನೇನಕೊಪ್ಪಗೆ ವಿವಿಧ ಸಮಸ್ಯೆ ಈಡೇರಿಸುವಂತೆ ಮನವಿ ಸಲ್ಲಿಕೆ

ನವಲಗುಂದ : ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಮತ್ತು ಸಾರ್ವಜನಿಕರು ತಮ್ಮವಿವಿಧ ಸಮಸ್ಯೆಗಳ ಕುರಿತು ಸಚಿವ ಎಸ್ಪಿ ಮುನೇನಕೊಪ್ಪ ಅವರ ಗೃಹ ಕಛೇರಿಯಲ್ಲಿ  ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ರೈತರ ಸಮಸ್ಯೆಗಳು ಆದಷ್ಟೂ ಬೇಗ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದರು .

Read More »

ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್

ಉಡಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನಾ ಮೋನೋಸಿಲ್ ಎಂಬ ಕೀಟನಾಶಕವನ್ನು ಜೂಸ್ ಗೆ ಬೆರೆಸಿ ಕುಡಿದಿರುವ ಶಂಕೆ ವ್ಯಕ್ತವಾಗಿದೆ.ಈ ಬಗ್ಗೆ ಉಡುಪಿಯ ಲಾಡ್ಜಿನ ಕಸದ ತೊಟ್ಟಿಯಲ್ಲಿ ವಿಷದ ಬಾಟಲಿಯೊಂದನ್ನು ಪೊರೆನ್ಸಿಕ್ ತಜ್ಞರು ಪತ್ತೆ ಹಚ್ಚಿದ್ದಾರೆ. ಜೊತೆಗೆ ಅದನ್ನು ವಶಪಡಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಲಾಡ್ಜ್ ನಲ್ಲಿ ಪತ್ತೆಯಾದ ಬಾಟಲ್ ಮೋನೊಸಿಲ್ ಎಂಬುದಾಗಿ ತಿಳಿದು ಬಂದಿದೆ. ಇದು ಗಿಡಗಳಿಗೆ ಹುಳ ಬಾಧೆ ತಡೆಯಲು ಬಳಸಲಾಗುವ ಮೋನೊಸಿಲ್ ಎಂಬ ಕೀಟನಾಶಕ. ಇದನ್ನು ಜೂಸ್ ನಲ್ಲಿ ಬೆರೆಸಿ …

Read More »

ಗಾಯಾಳುಗಳಿಗೆ ಕಾರು ಬಿಟ್ಟುಕೊಟ್ಟ ಮಾನವೀಯತೆ ಮೇರೆದ ಸಚಿವೆ

ವಿಜಯನಗರ: ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆ ಸಾಗಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕರ್ತವ್ಯ ಮೆರೆದಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಲು ಶೋಭ ಕರಂದ್ಲಾಜೆ ಅವರು ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅಪಘಾತವಾಗಿರುವುದನ್ನು ಕಂಡ ಶೋಭಾ ಅವರು, ಕೂಡಲೇ ಕಾರು ನಿಲ್ಲಿಸಿ ತಮ್ಮ ಕಾರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಿಟ್ಟು ಕೊಟ್ಟಿದ್ದಾರೆ.

Read More »

ಹುಬ್ಬಳ್ಳಿ ಗಲಭೆಯಲ್ಲಿ ಯಾವುದೇ ಕುಲ, ಗೋತ್ರ, ಪಕ್ಷ ನೋಡದೆ ಬಂಧಿಸಿ‌: ಸಿದ್ದರಾಮಯ್ಯ

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಗಳು ಅತ್ಯಂತ ಖಂಡನೀಯ. ಇದಕ್ಕೆ ಹೊಣೆಗಾರರಾಗಿರುವ ಕಿಡಿಗೇಡಿಗಳು ಯಾವುದೇ ಜಾತಿ, ಧರ್ಮ ಇಲ್ಲವೇ ಪಕ್ಷದವರೇ ಆಗಿರಲಿ ಪೊಲೀಸರು ಅವರನ್ನು ಬಂಧಿಸಿ ಅಲ್ಲಿನ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು.ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅವಕಾಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಭಾನುವಾರ ಸರಣಿ ಟ್ವೀಟ್‌ ಮಾಡಿದ್ದಾರೆ.’ಕೋಮುದ್ವೇಷವನ್ನು ಹುಟ್ಟುಹಾಕಿ, ಹರಡುವ ಮೂಲಕ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕೆಡಿಸುವ …

Read More »

ಸಿಎಂ ಹೇಳಿಕೆ ಆಘಾತಕಾರಿ ವಿಷಯವಾಗಿದೆ : ಫಕೀರ ದಿಂಗಾಲೇಶ್ವರ ಶ್ರೀಗಳ ಅಸಮಾಧಾನ

ಹುಬ್ಬಳ್ಳಿ : ಲಿಂಗೈಕ್ಯ ತೋಂಟದಾರ್ಯ ಸಿದ್ದಲಿಂಗ ಶ್ರೀಗಳ ದಿನವನ್ನು ಭಾವೈಕ್ಯತೆ ದಿನವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಯಾರದೋ ಮನವಿಗೆ ಬೆಲೆ ಕೊಟ್ಟು ಹೇಳಿಕೆ ನೀಡಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ದಿವಸ ಸಿಎಂ ಅವರು ಗದಗನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದು ಆಘಾತಕಾರಿ ವಿಷಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. …

Read More »

ಅಹಿತಕರ ಘಟನೆ ನಡೆಯದಂತೆ ಪಥಸಂಚಲನ

ಹುಬ್ಬಳ್ಳಿ: ಗಲಿಭೆ ಪ್ರಕರಣ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡಲು ವಿವಿಧ ಪೊಲೀಸ್ ಠಾಣೆ ಅಧಿಕಾರಿಗಳು ನೇತೃತ್ವದಲ್ಲಿ ಕೆಎಸ್ ಆರ್ ಪಿ ತುಕಡಿಯ ಪಥಸಂಚಲನ ನಡೆಯಿತ್ತು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಹೊರಟ ಪಥ ಸಂಚಲನ ರಾಲಿ ಹಿರೇಪೇಟೆ, ಭೀರ್ ಬಂದ್ ಓಣಿ, ಜಂಗ್ಲೀಪೇಟೆ, ಅಕ್ಕಿ ಪೇಟೆ , ಮಸ್ತಾನ್ ಸೋಪಾ, ಕಸಬಾ ಪೊಲೀಸ್ ಠಾಣೆ ಮ್ಯಾದರ ಓಣಿ ಮೂಲಕ ಪಥಸಂಚಲನ ನಡೆಯಿತ್ತು. ನೂರಾರು …

Read More »