Breaking News

admin

ಏ. 12 ರಂದು ಕೆಡಿಪಿ ಸಭೆ

ಧಾರವಾಡ : ಏಪ್ರೀಲ್ 12 ರಂದು ಮಧ್ಯಾಹ್ನ 3 ಘಂಟೆಗೆ ಧಾರವಾಡ ತಾಲೂಕು ಪಂಚಾಯತ ಸಭಾಭವನದಲ್ಲಿ2021-22ನೇ ಸಾಲಿನ ಮಾರ್ಚ -2022 ರ ಅಂತ್ಯದ ವರೆಗೆ ಧಾರವಾಡ ತಾಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆಡಿಪಿ ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಅಮೃತ ಅಯ್ಯಪ್ಪ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ  ಜರುಗಲಿದೆ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಬಿ.ಜಗಲಾಸಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Read More »

ಉಚಿತ ಹೃದಯ ತಪಾಸಣಾ ಶಿಬಿರಕ್ಕೆ ಅಮೃತ ದೇಸಾಯಿ ಚಾಲನೆ

ಹುಬ್ಬಳ್ಳಿ : ಶ್ರೀ ಗುರುದೇವ ಆತ್ಮಾನಂದ ಸೇವಾ ಸಂಸ್ಥೆ ಪುಡಕಲಕಟ್ಟಿ ಅವರಿಂದ ಆಯೋಜಿಸಿದ ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು . ಇದೆ ವೇಳೆಯಲ್ಲಿ ಶಿಬಿರವನ್ನು ಉದ್ದೇಶಿಸಿ ಶಾಸಕರು ಮಾತನಾಡಿಶ್ರೀ ಗುರುದೇವ ಆತ್ಮಾನಂದ ಸೇವಾ ಸಂಸ್ಥೆಯವರು ಕಾರ್ಯವನ್ನು ಶ್ಲಾಘಿಸಿದರು .

Read More »

ಬಿಜೆಪಿಯಲ್ಲಿ ಯಾವುದೂ ಶಾಶ್ವತ ಅಲ್ಲ, ಕಾಲಕ್ಕೆ ಬದಲಾವಣೆ : ಸಿ ಟಿ ರವಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ನಾನು ಪಕ್ಷದ ಕಾರ್ಯಕರ್ತನಾಗಿದ್ದು, ಯಾವುದೇ ಹುದ್ದೆಯ ಅಕಾಂಕ್ಷಿ ಅಲ್ಲ. ಪಕ್ಷ ನೀಡುವ ಜವಾಬ್ದಾರಿಗೆ ನಾನು ಬದ್ಧ. ಬಿಜೆಪಿಯಲ್ಲಿ ಯಾವುದೂ ಶಾಶ್ವತ ಅಲ್ಲ. ಎಲ್ಲವೂ ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ ಎಂದು ಹೇಳಿದರು.

Read More »

ಮೇ ತಿಂಗಳನಲ್ಲಿ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಮೇ ತಿಂಗಳ 3ನೇ ವಾರ ಪ್ರಕಟವಾಗಲಿದೆ. ಪರೀಕ್ಷೆ ಮಾರ್ಚ್ 28ರಂದು ಆರಂಭವಾಗಿದ್ದು, ಎಪ್ರಿಲ್ 11ಕ್ಕೆ ಕೊನೆಗೊಳ್ಳಲಿದೆ. ಎಪ್ರಿಲ್ 23ರಂದು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಲಿದೆ.ಈ ಪ್ರಕ್ರಿಯೆ 10-15 ದಿನಗಳಲ್ಲಿ ಮುಗಿಯಲಿದೆ ಎಂದು ಕರ್ನಾಟಕ ಸೆಕೆಂಡರಿ ಎಜ್ಯುಕೇಶನ್ ಎಕ್ಸಾಮಿನೇಶನ್ ಬೋರ್ಡ್‍ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

Read More »

ಗೃಹ ಸಚಿವ ಅವರನ್ನು ಸಂಪುಟದಿಂದ ವಜಾ ಮಾಡವಂತೆ ಡಿಕೆಶಿ ಆಗ್ರಹ

ಬೆಂಗಳೂರು: ಪ್ರಚೋದನಕಾರಿ ಹೇಳಿಕೆ ಕೊಡುತ್ತಿರುವ ಮತ್ತು ಸಮಾಜದಲ್ಲಿ ಅಶಾಂತಿ, ಜಾತಿ- ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸುತ್ತೀರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತತ್‌ಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್‌ ಆಯುಕ್ತರು ಗೃಹ ಸಚಿವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾವೇ ಪಕ್ಷದ ವತಿಯಿಂದ ದೂರು …

Read More »

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಔಟ್‌

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡಿ ವಿಶ್ವ ಸಂಸ್ಥೆಯ ಮಹಾ ಸಭೆಯು ಆದೇಶ ಹೊರಡಿಸಿದೆ. ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡುವ ನಿರ್ಣಯವನ್ನು ಮಹಾ ಸಭೆಯಲ್ಲಿ ಮತಕ್ಕೆ ಹಾಕಲಾಗಿತ್ತು.ಅಮಾನತು ಮಾಡಬಹುದು ಎಂಬ ನಿರ್ಣಯಕ್ಕೆ ಹೆಚ್ಚಿನ ಮತಗಳು ಬಂದ ಕಾರಣ, ಮಹಾ ಸಭೆಯು ಈ ಕ್ರಮ ತೆಗೆದುಕೊಂಡಿದೆ.

Read More »

ಆಜಾನ್‌ ಧ್ವನಿವರ್ಧಕ ವಿವಾದ: 301 ಧಾರ್ಮಿಕ ಸಂಸ್ಥೆಗಳಿಗೆ ನೋಟಿಸ್

ಬೆಂಗಳೂರು : ರಾಜ್ಯದಲ್ಲಿ ಆಜಾನ್‌ ಧ್ವನಿವರ್ಧಕ ವಿವಾದ ಭುಗಿಲೆದ್ದಿದ್ದು, ಒಟ್ಟು 301 ಧಾರ್ಮಿಕ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್‌ ಆಯುಕ್ತರು, ‘ರಾಜ್ಯದ ಮಸೀದಿಗಳು, ದೇವಾಲಯಗಳು, ಚರ್ಚ್ಗಳು ಸೇರಿ ಇತರೆ 301 ಸಂಸ್ಥೆಗಳು ತಮ್ಮ ಧ್ವನಿವರ್ಧಕಗಳನ್ನ ಅನುಮತಿಸಬಹುದಾದ ಡೆಸಿಬಲ್ ಮಟ್ಟದೊಳಗೆ ಬಳಸುವಂತೆ ಪೊಲೀಸರಿಂದ ನೋಟಿಸ್ಗಳನ್ನು ಸ್ವೀಕರಿಸಿವೆ’ ಎಂದರು.

Read More »

ಸಾಯಿಬಾಬ ಮಂದಿರದಲ್ಲಿ ಬೃಹತ ರಕ್ತದಾನ ಶಿಬಿರ

ಹುಬ್ಬಳ್ಳಿ : ನಗರದ ಸಾಯಿಬಾಬಾ ಮಂದಿರದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಮೆಮೊರಿಯಲ್ ಮತ್ತು ರಾಷ್ಟ್ರೋತ್ಥಾನ ರಕ್ತ ನಿದಿ ಕೆಂದ್ರ ಇವರ ಸಂಯುಕ್ತ ಆರ್ಶಯದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೋಳ್ಳಲಾಗಿತ್ತು.ರಾಮನವಮಿ ನಿಮಿತ್ತ ಈ ಶಿಬಿರವನ್ನು ಹಮ್ಮಿಕೊಂಡಿದ್ದು 80 ಕ್ಕೂ ಹೆಚ್ಚು ಯುವಕ ಮತ್ತು ಯುವತಿಯರು ಸೇರಿದಂತೆ ರಕ್ತದಾನ ಮಾಡಿದರು.ಈ ಶಿಬಿರಲ್ಲಿ ರಕ್ತದಾನದಿಂದ ಆಗುವ ಉಪಯೋಗಳನ್ನು ಹಾಗೂ ಆರೋಗ್ಯದ ಬಗ್ಗೆ ಜನರಲ್ಲಿ ಜಾಗ್ರತೆ ಮೂಡಿಸಿದರು.

Read More »

ನಿವೇಶನ ರಹಿತ ಸರ್ವೆ ಕುರಿತು ಎಂದು ಪ್ರತಿಭಟನೆ

ಹುಬ್ಬಳ್ಳಿ : ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ ಅವಳಿ ನಗರದಲ್ಲಿ ಆರ್ಥಿಕ ವಾಗಿ ದುರ್ಬಲ ವರ್ಗದ ನಿವೇಶನ ರಹಿತರನ್ನು ಸರ್ವೆ ಮೂಲಕ ಗುರುತಿಸು ಕರ್ಯಾ ಪ್ರಾರಂಭ ಮಾಡಿ ಎಂದು ಕರ್ನಾಟಕ ರಾಜ್ಯ ನಿವೇಶನ ರಹಿತ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಅವಳಿ ನಗರದಲ್ಲಿ ಸುಮಾರು ವರ್ಷಗಳಿಂದ ಆರ್ಥಿಕ ವಾಗಿ ಹಿಂದುಳಿದ ದುರ್ಬಲ ವರ್ಗದವರನ್ನು ಸರ್ವೆ ಮುಖಾಂತರ ಗುರಿತಿಸುವ ಕಾರ್ಯ ಅಗಿಲ್ಲ. ಆದ ಕಾರಣ ಹೋರಾಟ ಸಮಿತಿಯಿಂದ ಈ ಹಿಂದೆ ಆಯುಕ್ತರಿಗೆ …

Read More »

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಭವನ ಚಲೋ

ಹುಬ್ಬಳ್ಳಿ : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಇದೇ ದಿ. ೧೨ ರಂದು‘ಕಾರ್ಮಿಕ ಭವನ ಚಲೋ’ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ದುರ್ಗಪ್ಪ ಚಿಕ್ಕತುಂಬಳ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಕಾರ್ಮಿಕ ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಅನೇಕ ಸೌಲಭ್ಯಗಳನ್ನು ರೂಪಿಸಿದ್ದಿ,,ಯಾವುದೇ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ …

Read More »