Breaking News

ಭಾರತದಲ್ಲಿ ಇಳಿಮುಖ ಕಂಡ ಕರೋನಾ


ನವದೆಹಲಿ: ಚೀನಾ ಸೇರಿ ಪ್ರಪಂಚದ ವಿವಿಧ ಭಾಗಗಳಲ್ಲಿ ಕೋವಿಡ್‌ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ವೇಳೆಯಲ್ಲಿ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಪ್ರಮಾಣ ತೀವ್ರವಾಗಿ ಇಳಿಮುಖವಾಗಿದೆ. ಕಳೆದ ವಾರ ಕೇವಲ 1103 ಪ್ರಕರಣ ದಾಖಲಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ.ಈ ಮೂಲಕ ಸೋಂಕು, ಸಾವು 32 ತಿಂಗಳ (ಸುಮಾರು 2.5 ವರ್ಷ) ಕನಿಷ್ಠ ಎನ್ನಿಸಿಕೊಂಡಿವೆ.

ನವೆಂಬರ್‌ ಮೊದಲ ವಾರದಿಂದಲೂ ಇಳಿಕೆ ಹಾದಿಯಲ್ಲಿರುವ ಕೋವಿಡ್‌ ಕೇಸುಗಳು ಡಿ.12-18ನೇ ತಾರೀಖಿನ ವಾರದಲ್ಲಿ ಕನಿಷ್ಠಕ್ಕಿಳಿದಿವೆ. ಈ ಅವಧಿಯಲ್ಲಿ 1103 ಪ್ರಕರಣ ದಾಖಲಾಗಿದ್ದು, ಕೇವಲ 12 ಮಂದಿ ಮಾತ್ರ ಸೋಂಕಿಗೆ ಬಲಿಯಾಗಿದ್ದಾರೆ. ಅದರಲ್ಲೂ 3 ದಿನಗಳು ಶೂನ್ಯ ಸಾವು ದಾಖಲಾಗಿದೆ. ಇಷ್ಟು ಕಡಿಮೆ ಪ್ರಕರಣಗಳು 2020ರ ಮಾರ್ಚ್‌ 23-29ನೇ ತಾರೀಖಿನ ವಾರದ ಬಳಿಕ ಅತಿ ಕನಿಷ್ಠವಾಗಿದೆ. 2020ರ ಆ ವಾರದಲ್ಲಿ 736 ಪ್ರಕರಣಗಳು ದಾಖಲಾಗಿದ್ದವು. ಇದರ ನಂತರದ ವಾರದಲ್ಲಿ 3,154 ಪ್ರಕರಣಗಳು ದಾಖಲಾಗಿದ್ದವು ಹಾಗೂ ಸೋಂಕು ಏರುತ್ತಲೇ ಹೋಗಿತ್ತು.

ಜು.18-24ನೇ ತಾರೀಖಿನ ವಾರದಲ್ಲಿ 1.36 ಲಕ್ಷ ಪ್ರಕರಣ ದಾಖಲಾಗಿತ್ತು. ಆದರೆ ಇದಾದ 5 ತಿಂಗಳಿನಿಂದ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಪ್ರಮಾಣ ಇಳಿಕೆಯ ಹಾದಿಯಲ್ಲಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *