ಬೆಂಗಳೂರು : ಸಮುದಾಯ ಆರೋಗ್ಯ ಹಾಗೂ ಅದರ ಮೇಲ್ದರ್ಜೆಯ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳ ಕಾಲ ತುರ್ತು ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ತುರ್ತು ಸೇವೆಗಳ ಸಿಬ್ಬಂದಿಗಳಾದ ವೈದ್ಯಾಧಿಕಾರಿಗಳು, ಶುಶ್ರೂಷಾಧಿಕಾರಿಗಳು ಹಾಗೂ ಗ್ರೂಪ್ ಡಿ ನೌಕರರು ಕರ್ತವ್ಯದಲ್ಲಿ ಹಾಜರಿರತಕ್ಕದ್ದು, ಕರ್ತವ್ಯದ ಪಾಳಿ ಮುಗಿದ ನಂತರ ಮತ್ತೊಬ್ಬ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಾಗುವವರೆಗೆ ಕರ್ತವ್ಯದಲ್ಲಿ ಮುಂದುವರೆಯುವಂತೆ ಹಾಗೂ …
Read More »ವಾಹನ ಸವಾರರಿಗೆ ಬಿಗ್ ಶಾಕ್
ದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಇಂದು ಕೂಡ ಏರಿಕೆಯಾಗಿದೆ. 15 ದಿನಗಳಲ್ಲಿ 13 ನೇ ಬಾರಿ ಹೆಚ್ಚಳವಾಗಿದ್ದು, ಲೀಟರ್ ಗೆ 9.20 ರೂ.ನಷ್ಟು ಏರಿಕೆ ಕಂಡಿದೆ. ದೆಹಲಿಯಲ್ಲಿ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ ಎರಡು ವಾರಗಳಲ್ಲಿ ಲೀಟರ್ ಗೆ 9.20 ರೂ. ಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಈ ಹಿಂದೆ 103.81 ರೂ.ನಿಂದ 104.61 ರೂ., ಹಾಗೂ ಡೀಸೆಲ್ …
Read More »ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಏ. 6ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬೆಂಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
Read More »ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದ ಭಾಸ್ಕರ್ ರಾವ್
ಬೆಂಗಳೂರು ; ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಸೇರಿದರು. “ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಕರ್ನಾಟಕದ ಬದಲಾವಣೆ ಸಾಧ್ಯ” ಎಂದು ಭಾಸ್ಕರ್ ರಾವ್ ಹೇಳಿದರು. ದೆಹಲಿಯ ಎಎಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಸ್ಕರ್ ರಾವ್ ಅರವಿಂದ್ ಕೇಜ್ರಿವಾಲ್, ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
Read More »ಮನೆಗೆ ಆಹಾರ ಪದಾರ್ಥಗಳನ್ನು ತಲುಪಿಸುವ ಕಂಪನಿಗಳ ವಿರುದ್ಧ ದೂರು
ನವದೆಹಲಿ: ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಮತ್ತು ಜೊಮ್ಯಾಟೊ ಕಂಪನಿಗಳ ವಿರುದ್ಧ ತನಿಖೆಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಸೋಮವಾರ ಆದೇಶಿಸಿದೆ. ರಾಷ್ಟ್ರೀಯ ರೆಸ್ಟಾರೆಂಟ್ ಸಂಘ (ಎನ್ಆರ್ಎಐ) ಸಲ್ಲಿಸಿದ ದೂರು ಆಧರಿಸಿ ಈ ಆದೇಶ ಹೊರಡಿಸಲಾಗಿದೆ. ಈ ಕಂಪನಿಗಳ ಮಾರುಕಟ್ಟೆ ಶಕ್ತಿಯನ್ನು ತೋರಿಸುತ್ತಿದೆ. ಸಮಾನ ನೆಲೆಯಲ್ಲಿ ಆಗಬೇಕಿರುವ ಸ್ಪರ್ಧೆಯ ಮೇಲೆ ಪರಿಣಾಮ ಉಂಟುಮಾಡುವಷ್ಟು ಇವು ಶಕ್ತಿಶಾಲಿ ಆಗಿರುವುದನ್ನೂ ತೋರಿಸುತ್ತಿದೆ’ ಎಂದು ಸಿಸಿಐ ಹೇಳಿದೆ.
Read More »ಜಾತಿ , ಬೇಧ ಮರೆತು ಶ್ರೀಗಳ ದರ್ಶನ ಪಡೆದ ಮುಸ್ಲಿಂ ಮುಖಂಡರು
ಹುಬ್ಬಳ್ಳಿ; ಕೇಸರಿ ಶಾಲು, ಹಿಜಾಬ್ ವಿವಾದದಿಂದ ಜನರ ಸೌಹಾರ್ದತೆಗೆ ದಕ್ಕೆ ಉಂಟು ಮಾಡಿದ್ದ ಕೆಲವೊಂದು ಘಟನೆಗಳನ್ನು ಮೆಟ್ಟಿನಿಂತು ಹುಬ್ಬಳ್ಳಿಯು ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಹಳೆ ಹುಬ್ಬಳ್ಳಿಯ ಹಿರೇಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಹಿಂದೂ ಮುಸ್ಲಿಂ ಎಂಬುವಂತ ಬೇಧವನ್ನು ಮರೆತು ಉತ್ಸವದಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇಸ್ಲಾಂ ಧರ್ಮದ ಪವಿತ್ರ ರಂಜಾನ್ ತಿಂಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡ …
Read More »ಐಪಿಎಲ್ ಕ್ರಿಕೆಟ್ ಬೆಟಿಂಗ್ : ಆರೋಪಿ ಬಂಧನ
ಹುಬ್ಬಳ್ಳಿ : ನಗರದ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಅಕ್ಷಯ ಹೊಟೇಲ್ ಎದುರಿಗೆ ಐಪಿಎಲ್ ಕ್ರಿಕೆಟ್ ಬೆಟಿಂಗ್ ಆಡುತ್ತಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಪೋಲಿಸರು ಬಂಧಿಸಿದ್ದಾರೆ. ಹಳೆ ಹುಬ್ಬಳ್ಳಿ ಎಆರ್ಟಿ ನಗರದ ನಿವಾಸಿ ಪ್ರವೀಣ ಬದ್ದಿ ಎಂಬಾತ ಬೆಟ್ಟಿಂಗ್ ಆಡುವಾಗು ಸಿಕ್ಕಿರುವ ಆರೋಪಿ ಇತ್ತೀಚೆಗೆ ನಡೆಸ ಕಲ್ಕತ್ತಾ ಮತ್ತು ಬೆಂಗಳೂರಿನ ನಡುವಿನ ಪಂದ್ಯದ ವೇಳೆ ಬೆಟಿಂಗ್ ಆಡುತ್ತಿದ್ದಾಗ ಪೊಲೀಸರು ಬಂಧನ ಮಾಡಿದ್ದಾರೆ .ಆತನಿಂದ 1,040 ರೂ .1 , 500 ರೂ …
Read More »ಧಾರವಾಡಲ್ಲಿ ಐಪಿಎಲ್ ಬೆಟಿಂಗ್ ಹಾವಳಿ : 3 ಆರೋಪಿಗಳು ಬಂಧನ
ಧಾರವಾಡ : ನಗರದ ಕೆಲಗೇರಿ ಬಳಿಯ ಆಂಜನೇಯ ನಗರದಲ್ಲಿ ಮೊಬೈಲ್ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳನ್ನ ಸಿಸಿಬಿ ಇನ್ಸಪೆಕ್ಟರ್ ಎಚ್.ಎಂ. ಪಾಟೀಲ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ . ಆಂಜನೇಯ ನಗರದ ಬಸವರಾಜ ಧರಿಯಪ್ಪ ಬಳ್ಳೋಳ್ಳಿ ಮತ್ತು ಕಾರ್ತಿಕ ಪರಶುರಾಮ ಗೊಡ್ಡೆಮ್ಮಿ ಎಂಬುವವರು ಬೆಂಟಿಗ್ ಆಡುತ್ತೀದ್ದ ಆರೋಪಿಗಳು ಆಗದ್ದಾರೆ. ದಾಳಿ ಸಂದರ್ಭದಲ್ಲಿ ಬಸವರಾಜ ವಾಲೀಕಾರ ಮತ್ತು ರವಿ ವಾಲೀಕಾರ ಎಂಬುವರು ಪರಾರಿಯಾಗಿದ್ದಾರೆ. ಬಂಧಿತರಿಂದ 2020 ರೂಪಾಯಿ ನಗದು ಮತ್ತು 2 …
Read More »ಶ್ರೀ ಸಿದ್ಧಾರೂಢ ಮಠ ಸ್ವಾಮಿ ಕಮೀಟಿ ವತಿಯಿಂದ ಮನವಿ ಸಲ್ಲಿಕೆ
ಹುಬ್ಬಳ್ಳಿ : ನಗರದ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಭಕ್ತರ ನಿವಾಸ , ಡಾರಮೇಟರಿ ನಿರ್ಮಿಸುವ ನಿಮಿತ್ತ ಹಾಗೂ ಶ್ರೀಮಠದ ಜಲರಥೋತ್ಸವ ನಡೆಯುವ ಕರೆಯ ಸೌಂದರೀಕರಣ ಮಾಡುವ ನಿಮಿತ್ತ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ನಿಮಿತ್ತ ಗೋವಾದಲ್ಲಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಶ್ರೀಪಾದ ನಾಯ್ಕ ಅವರನ್ನು ಭೇಟಿಯಾಗಿ ಕಮೀಟಿಯಿಂದ ಸಲ್ಲಿಸಲಾಯಿತು . ಟ್ರಸ್ಟ್ ಮನವಿ ಪತ್ರ ಮಾಡಲಿಕ್ಕೆ ನೀಡಿ ಮನವಿ ಸ್ವೀಕರಿಸಿದ ಸಚಿವ ಶ್ರೀಪಾದ ನಾಯ್ಕ …
Read More »ಅಚ್ಚರಿ ಮೂಡಿಸಿದ ಕುಂದಗೋಳ ಯುವತಿಯ ನಿಗೂಢ ಸಾವು
ಕುಂದಗೋಳ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಗೋಳ ತಾಲೂಕಿನ ಹಿರೇಹರುಣಿ ಗ್ರಾಮದಲ್ಲಿ ನಡೆದಿದೆ . ಹಿರೇಹರಕುಣಿ ಗ್ರಾಮದ ಪೂಜಾ ಮಂಜುನಾಥ ಹುಬ್ಬಳ್ಳಿ ( 24 ) ಎಂಬ ಮಹಿಳೆ ಭಾನುವಾರ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ . ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ , ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





