ಹುಬ್ಬಳ್ಳಿ: ನವಲಗುಂದ ಪುರಸಭೆಯಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಸ್ಪಷ್ಟಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಎಂತಹ ಪರಿಸ್ಥಿತಿ ಎದುರಾದರೂ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸುವುದಿಲ್ಲ. ನವಲಗುಂದ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿಯೇ ಬಿಜೆಪಿಯವರೇ ಕಾಂಗ್ರೆಸ್ ಅಭ್ಯರ್ಥಿಗೆ ಮತಚಲಾಯಿಸಿದ್ದಾರೆ. ಆ ಸಂದರ್ಭದಲ್ಲಿ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಇದೀಗ 17 ಸದಸ್ಯರ ಬಹುಮತ ಕಾಂಗ್ರೆಸ್ ಗೆ ಇದ್ದು, ನಮ್ಮ …
Read More »ಕಲಾಸಿರಿ ಇನ್ಸ್ಟಿಟ್ಯೂಟ್ ನಿಂದ ಉಚಿತ ಕಾರ್ಯಗಾರ
ಹುಬ್ಬಳ್ಳಿ : ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಜನರಿಗೆ ಸಾಮನ್ಯ ತಿಳುವಲಳಿಕೆ ಅತ್ಯಗತ್ಯ ಈ ನಿಟ್ಟಿನಲ್ಲಿ ಧಾರವಾಡ ಕಾಲಸಿರಿ ಪಿಲ್ಮ ಇನಸ್ಟಿಟ್ಯೂಟ್ ನಿಂದ ಉಚಿತ ಕಾರ್ಯಗಾರವನ್ನು ಏಪ್ರಿಲ್ ೨ ರಂದು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ಧೆಶಕ ಸಿದ್ದಾರ್ಥ ಜಾಲಿಹಾಳ ಹೇಳಿದರು. ನಗರದರಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಿರ್ದೇಶನ ಅಭಿನಯ ಛಾಯಾಗ್ರಹಣ ಸಂಗೀತ ಮುಂತಾದ ತರಬೇತಿಯನ್ನು ನಿಡಲಾಗುವುದು, ಈ ಕಾರ್ಯಗಾರವು ಧಾರವಾಡ ಗಾಂಧಿನಗರದ ಬಂಡೆಮ್ಮ ದೇವಸ್ಥಾನದ ಹತ್ತಿರ ಇರುವ ಸಭಾಭವನದಲ್ಲಿ ಹಮ್ಮಿಕೋಳ್ಳಲಾಗಿದೆ ಎಂದರು …
Read More »ಹುಬ್ಬಳ್ಳಿಯಲ್ಲಿ ಬಸ್ ಸ್ಟ್ಯಾಂಡ್ ಕೊರತೆ: ಬಿಸಿಲಿನ ತಾಪಕ್ಕೆ ಕಂಗಾಲಾದ ಜನತೆ
ಹುಬ್ಬಳ್ಳಿ: ಮೊದಲೆ ಬಿಸಿಲು ನೆತ್ತಿಯ ಮೇಲೆ ಧಗ ಧಗ ಕುದಿಯುತ್ತಿದೆ. ಸಾಯಂಕಾಲ ವೇಳೆ ಮಳೆಯ ಆರ್ಭಟ. ಇವೆಲ್ಲದರ ನಡುವೆ ಜನರು ತಮ್ಮ ಜೀವನವನ್ನು ಸಾಗಿಸಬೇಕು. ನಮ್ಮ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಆಗುತ್ತಿದೆ ನಿಜಾ. ಆದರೆ ಇದ್ದ ಬಸ್ ನಿಲ್ದಾಣವನ್ನು ತೆರುವು ಮಾಡಿ ಈಗ ಜನರನ್ನು ನಡು ರಸ್ತೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ…. ವಾಣಿಜ್ಯ ನಗರಿ ಹುಬ್ಬಳ್ಳಿಯ ಕೇಂದ್ರ ಭಾಗವಾದ ಕಾರ್ಪೊರೇಷನ್ ಬಸ್ ನಿಲ್ದಾಣವನ್ನು ಕಳೆದ ಎರಡು ವರ್ಷಗಳ ಹಿಂದೆಯೇ ತೆರವುಗೋಳಿಸಿದ್ದರು. …
Read More »ಬೆಲೆ ಏರಿಕೆ ಮುಕ್ತ ಭಾರತಕ್ಕೆ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿಯಲ್ಲಿ ವಿಭಿನ್ನ ಪ್ರತಿಭಟನೆ
ಹುಬ್ಬಳ್ಳಿ : ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನದ ಭಾಗವಾಗಿ ಸಿಲಿಂಡರ್, ಸ್ಕೂಟರ್, ಬೈಕ್ ಗಳಿಗೆ ಹೂವಿನ ಹಾರ ಹಾಕಿ, ಹಲಗಿ ಬಾರಿಸುವ ಮೂಲಕ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆಯನ್ನು ನಗರದ ಗೋಪನಕೊಪ್ಪ ವೃತ್ತದಲ್ಲಿಂದು ನಡೆಸಲಾಯಿತು. ವಿದ್ಯಾನಗರ ಮತ್ತು ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯುಕ್ತಾಶ್ರಯದಲ್ಲಿ ವಿನೂತನ ಪ್ರತಿಭಟನೆ ನಡೆಸಿದ ಕಾಂಗ್ರೆಸಿಗರು, ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾನಗರ ಬ್ಲಾಕ್ …
Read More »ಸರಣಿ ಕಳ್ಳತನ : ಆಭರಣ ದೊಚಿಕೊಂಡು ಪರಾರಿ
ಧಾರವಾಡ: ನಗರದಲ್ಲಿ ನಿನ್ನೆ ತಡರಾತ್ರಿ ಕಳ್ಳತನ ನಡೆದಿದ್ದು . ಕೆಲಗೇರಿಯ ಆಂಜನೇಯ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು , ಮೂರ್ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿ ಅಪಾರ ಪ್ರಮಾಣದ ನಗದು ಹಣ, ಚಿನ್ನ, ಬೆಳ್ಳಿಯ ಆಭರಣಗಳನ್ನು ದೊಚಿಕೊಂಡು ಹೋದ ಘಟನೆ ನಡೆದಿದೆ. ಆಂಜನೇಯ ನಗರದ 4 ನೇ ಕ್ರಾಸ್ನಲ್ಲಿರುವ ಪ್ರಕಾಶ್ ದೊಡ್ಡಮನಿ ಎಂಬ ಸಿಆರ್ಪಿಎಫ್ ಪೊಲೀಸ್ ಮನೆಯಲ್ಲಿ ಮೊದಲು ಕಳ್ಳರು ಕಳ್ಳತನ ಮಾಡಿದ್ದು ಇವರ ಮನೆಯಲ್ಲಿದ್ದ ಒಂದೂವರೆ ಕೆಜೆ ಬೆಳ್ಳಿ …
Read More »ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ಕ್ರ
ಬುಧವಾರ ರಾತ್ರಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಸೀಸನ್ ೧೫ ರಲ್ಲಿ ಗೆಲುವಿನ ಖಾತೆ ತೆರೆದಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಫಾಪ್ ಡುಪ್ಲೇಸಿಸ್ ಪಡೆ , ಕೆಕೆಆರ್ ಬ್ಯಾಟ್ಸ್ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.ಆರ್ಸಿಬಿ ಬೌಲರ್ ಗಳ ಬೌಲಿಂಗ್ ದಾಳಿಗೆ ತತ್ತರಿಸಿ ಕೆಕೆಆರ್ , 18.5 …
Read More »ಬಿಜೆಪಿ ಶಾಸಕರಿಗೆ ವಿಶೇಷ ಉಡುಗೊರೆ ನೀಡಿದ ಕಲಾವಿದ ಆನಂದ
ಧಾರವಾಡ : ತಮ್ಮಅತ್ಯದ್ಭುತ ಕೈಚಳಕದಿಂದ ಶಾಸಕ ಅರವಿಂದ ಬೆಲ್ಲದ ಅವರ ಭಾವ ಚಿತ್ರವೊಂದನ್ನು ಪ್ರತಿಭಾವಂತ ಕಲಾವಿದರಾದ ಆನಂದ ಹಿರೇಮಠ ಅವರು ಚಿತ್ರಿಸಿ ಶಾಸಕರಿಗೆ ಉಡುಗೊರೆಯಾಗಿ ನೀಡಿದ್ದಾರೆ . ಅವರ ಪ್ರೀತಿ – ಗೌರವ – ಅಭಿಮಾನಕ್ಕೆ ಋಣಿಯಾಗಿದ್ದು , ಅವರ ಕಲಾ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದು ಶಾಸಕರು ಹೇಳಿದರು .
Read More »ಕಬಡ್ಡಿ ಟೂರ್ನಾಮೆಂಟ್ ಗೆ ಬಿಜೆಪಿ ಮುಖಂಡ ಚಾಲನೆ
ಕುಂದಗೋಳ : ಶ್ರೀ ರಾಮ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಬಡ್ಡಿ ಟೂರ್ನಾಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಮುಖಂಡ ಬಸವರಾಜ ಕುಂದಗೋಳ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಹಜರತ್ ಅಲಿ ಜೋಡಮನಿ , ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರಾದ ಶ್ರೀಮತಿ ಶಕೀನಾಬಿ ನದಾಫ್ , ನಾಗನಗೌಡ ಸಾತಮಾರ , ಗ್ರಾ . ಪಂ.ಸದಸ್ಯರು ಹಾಗೂ ಊರಿನ ಯುವಕರು ಹಿರಿಯರು …
Read More »ಏ. 2 ರಂದು ಪೊಲೀಸ್ ಧ್ವಜ ದಿನಾಚರಣೆ ಆಚರಣೆ
ಹುಬ್ಬಳ್ಳಿ : ಜಿಲ್ಲಾ ಸಶಸ್ತ್ರಮೀಸಲು ಪಡೆಯ ಕವಾಯತು ಮೈದಾನದಲ್ಲಿ ಏ. 2 ರಂದು ಬೆಳಿಗ್ಗೆ 8 ಗಂಟೆಗೆ ಪೊಲೀಸ್ ಧ್ವಜ ದಿನಾಚರಣೆ , ನಿವೃತ್ತರ ಸೇವಾ ಸುಸ್ಮರಣೆ ಹಾಗೂ ಗೌರವ ಸಮರ್ಪಣಾ ಸಮಾರಂಭವನ್ನು ಏರ್ಪಡಿಸಲಾಗಿದೆ . ನಿವೃತ್ತ ಆರಕ್ಷಕ ನಿರೀಕ್ಷಕ ಬಸವರಾಜ ಸಿ . ಕಲ್ಲಮ್ಮನವರ ಅತಿಥಿಗಳಾಗಿ ಆಗಮಿಸುವರು ಎಂದು ಪೊಲೀಸ್ ಅಧೀಕ್ಷಕ ಪಿ . ಕೃಷ್ಣಕಾಂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Read More »ಕರ್ನಾಟಕದಲ್ಲಿ ಕೋವಿಡ್ ಕನಿಷ್ಠ ಸಂಖ್ಯೆ ದಾಖಲು
ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ 35 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಇದು ಸುಮಾರು ಎರಡು ವರ್ಷಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಇದಕ್ಕೂ ಕಡಿಮೆ ಅಂದರೆ ಕೇವಲ 24 ಹೊಸ ಕೋವಿಡ್-19 ಪ್ರಕರಣಗಳು ಕಳೆದ ವರ್ಷದ ಮೇ 14ರಂದು ದಾಖಲಾಗಿದ್ದವು. ಬುಧವಾರ ರಾಜ್ಯದಲ್ಲಿ ದಾಖಲಾದ 35 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 25 ಪ್ರಕರಣಗಳು ವರದಿಯಾಗಿವೆ. ಬುಧವಾರ ರಾಜ್ಯದ 21 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಎಂಟು ಜಿಲ್ಲೆಗಳು ಸಂಪೂರ್ಣ ಕೋವಿಡ್ ಮುಕ್ತ ಜಿಲ್ಲೆಗಳಾಗಿದ್ದು, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





