ಬೆಂಗಳೂರು: ಖಾಸಗಿ ವಾಹನಗಳ ಮಾಲೀಕರ ಶೋಷಣೆಗೆ ಅವಕಾಶ ನೀಡುತ್ತಿರುವ ಮೋಟಾರು ವಾಹನ ತಿದ್ದುಪಡಿ ವಿಧೇಯಕ-2017 ಅನ್ನು ಕೈ ಬಿಡಬೇಕೆಂದು ಒತ್ತಾಯಿಸಿ ನಾಳೆ(ಆ.7) ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ತಿಳಿಸಿವೆ. ರಸ್ತೆ ಸಾರಿಗೆ ಕ್ಷೇತ್ರದಲ್ಲಿರುವ ಕಾರ್ಮಿಕರು ಮತ್ತು ಮಾಲೀಕರ ಸಂಘಟನೆಗಳ ವೇದಿಕೆಯಿಂದ ಈ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ನಾಳೆ ಬೆಳಗ್ಗೆ 6ಗಂಟೆಯಿಂದ ಸಂಜೆ 6 ರವರೆಗೆ ಸಂಪೂರ್ಣ ಬಂದ್ ನಡೆಸಲು ವೇದಿಕೆ ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ಟೌನ್‌ಹಾಲ್ ನಿಂದ …
Read More »ಪುಂಡರಿಗೆ ಖಾಕಿ ಕೊಟ್ಟಿತು ಪನೀಶಮೆಂಟ್,, ರೋಡ್ ರೊಮಿಯೋಗಳ ಬಾಲ ಕಟ್..
ಕೋಲಾರ ಸ್ಟೈಲಿಷ್ ಗಡ್ಡದಾರಿಗಳಿಗೆ, ಪುಂಡ ಪೋಕರಿಗಳಿಗೆ ತಲೆ ಬೋಳಿಸಿದ ಪೊಲೀಸರು. ಚಿತ್ರವಿಚಿತ್ರ ಗಡ್ಡ, ತಲೆಗೂದಲು ಬಿಟ್ಟ ಯುವಕರನ್ನು ಹಿಡಿದು ಶೇವಿಂಗ್, ಹೇರ್ ಕಟ್ ಮಾಡಿಸಿ ಯುವಕರಿಗೆ ಅರಿವು ಮೂಡಿಸಿದ ಮಾಲೂರು ಪೋಲಿಸರು. ಕೋಲಾರ ಜಿಲ್ಲೆ ಮಾಲೂರು ಠಾಣೆಯ ಮುರಳಿ ಯುವಕರಿಗೆ ಶಿಸ್ತಿನ ಪಾಠ ಕಲಿಸಿದ ಸಬ್ ಇನ್ಸ್ ಪೆಕ್ಟರ್. ಕಳೆದ ಗುರುವಾರ ಮಾಲೂರು ಪಟ್ಟಣದಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿತ್ತು. ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ವಿದ್ಯಾರ್ಥಿನಿ ಹತ್ಯೆ …
Read More »ಗೌರಿ ಕೊಲೆ ಆರೋಪಿ ತಾಯಿ ಅಸ್ವಸ್ಥ, ಸೋದರನಿಗೆ ಕಂಪನಿಯಿಂದ ಗೇಟ್ ಪಾಸ್
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಕೇಸಿನಲ್ಲಿ ಸಿಲುಕಿಕೊಂಡು ಹುಬ್ಬಳ್ಳಿಯ ಇಬ್ಬರು ಯುವಕರು ವಿಚಾರಣೆ ಎದುರಿಸ್ತಿದಾರೆ. ಗೌರಿ ಮರ್ಡರ್ ಪ್ರಕರಣದಲ್ಲಿ 11 ಮಂದಿ ಆರೋಪಿಗಳು ಎಸ್ಐಟಿ ವಶದಲ್ಲಿದಾರೆ. ಈಗ ಗಣೇಶ ಮಿಸ್ಕಿನ್ ಸೋದರನನ್ನ ವಿಚಾರಣೆಗೆ ಕರೆದಿದ್ದಕ್ಕೆ ಚಿಂತೆಗೊಳಗಾದ ತಾಯಿ ಆಘಾತಕ್ಕೊಳಗಾಗಿ ಈಗ ಹಾಸಿಗೆ ಹಿಡಿದಿದಾರೆ. ಈತ ರವಿ ಮಿಸ್ಕಿನ್.. ಪತ್ರಕರ್ತೆ ಗೌರಿ ಲಂಕೇಶ ಕೊಲೆ ಕೇಸಿನಲ್ಲಿ ಎಸ್ಐಟಿ ವಶದಲ್ಲಿರೋ ಗಣೇಶ್ ಮಿಸ್ಕಿನ್ ಸೋದರ. ನಿನ್ನೆ ಇದ್ದಕ್ಕಿದ್ದಂತೆಯೇ ಬೆಂಗಳೂರಿನಿಂದ ಓಡೋಡಿ ಹುಬ್ಬಳ್ಳಿಯ …
Read More »ಜಮ್ಮು ಮತ್ತು ಕಾಶ್ಮೀರ: ಪರಿಶೀಲನೆ, ಅರ್ಜಿ ವಿಚಾರಣೆ ಮುಂದೂಡಿದ ‘ಸುಪ್ರೀಂ’
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ 35ಎ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯಿತಿ ಮತ್ತು ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಇರುವುದರಿಂದ ಕಲಂ 35ಎ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಮಾಡಿದ್ದ ಅರ್ಜಿಗೆ ಮನ್ನಣೆ ನೀಡಿ ಸರ್ವೋಚ್ಛ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 27ಕ್ಕೆ …
Read More »ವಿಜಯ ಗುಂಟ್ರಾಳ ಬಂಧನಕ್ಕೆ ಆಗ್ರಹಿಸಿ ಪ್ರೊಟೆಸ್ಟ್
ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷನ ಬಂಧನ ಒತ್ತಾಯಿಸಿ ಪ್ರತಿಭಟನೆ ಹು-ಧಾ ಪಾಲಿಕೆಯ ಪೌರ ಕಾರ್ಮಿಕರಿಂದ ಪ್ರತಿಭಟನೆ ಮೆರವಣಿಗೆ ಹುಬ್ಬಳ್ಳಿಯ ಪಾಲಿಕೆ ಕಚೇರಿಯಿಂದ ತಹಸಿಲ್ದಾರ ಕಚೇರಿವರೆಗೆ ಪ್ರತಿಭಟನೆ ಮಾಡಿ ಆಕ್ರೋಶ ಗುತ್ತಿಗೆ ಪೌರ ಕಾರ್ಮಿಕ ಅಧ್ಯಕ್ಷ ವಿಜಯ ಗುಂಟ್ರಾಲ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹು-ಧಾ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಪೌರಕಾರ್ಮಿಕ ಅಧ್ಯಕ್ಷ ವಿಜಯ ಜುಲೈ ೨೬ ರಂದು ಗುತ್ತಿಗೆ ಪೌರ ಕಾರ್ಮಿಕರು ಮಲ ಸುರಿದುಕೊಂಡು ಪ್ರತಿಭಟನೆಗೆ …
Read More »ಬೆಂಗಳೂರಿನಲ್ಲೇ ನಡೆಯುತ್ತಾ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ?
ಯಲಹಂಕ ಏರ್ ಫೋರ್ಸ್ ನಿಲ್ದಾಣದಲ್ಲಿ ನಡೆಯುವ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಯು, ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಊಹಾಪೋಹಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಏರ್ ಶೋ ನಡೆಸುವ ಬಗ್ಗೆ ಬೇರೆ ಬೇರೆ ರಾಜ್ಯಗಳು ಮನವಿ ಸಲ್ಲಿಸಿವೆ. ಆದರೆ ಇಲ್ಲಿಯವರೆಗೆ ಆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ …
Read More »ನಮ್ಮಿಂದೇನೂ ತಪ್ಪಾಗಿಲ್ಲ.. ಇದಕ್ಕೆಲ್ಲ ಪರೀಕ್ಷಾರ್ಥಿಗಳೇ ಕಾರಣ’- ಸಿಪಿಆರ್ ಒ ಇ. ವಿಜಯಾ ಸ್ಪಷ್ಟನೆ
ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು 8 ಗಂಟೆ ತಡವಾದ ಪ್ರಕರಣ. ರೈಲು ತಡವಾಗಿದ್ದರಿಂದ ಡಿ.ಆರ್ ಪರೀಕ್ಷೆ ವಂಚಿತರಾಗಿದ್ದ 3000ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು. ರೊಚ್ವಿಗೆದ್ದ ಪರೀಕ್ಷಾರ್ಥಿಗಳು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನೈರುತ್ಯ ರೈಲ್ವೆಯ ಡಿಜಿಎಂ ಇ. ವಿಜಯಾ ಸ್ಪಷ್ಟನೆ. ಇ. ವಿಜಯಾ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ, ಹುಬ್ಬಳ್ಳಿ ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿರೋದು ನಿಜ. ಮೇನ್ ಟ್ರ್ಯಾಕ್ ಸಮಸ್ಯೆ ಇದ್ದಿದ್ದರಿಂದ …
Read More »ನೈರುತ್ಯ ರೈಲ್ವೆ ಆಡಳಿತಾತ್ಮಕ ‘ಎಂಜಿನ್’ ಫೇಲ್.. ಡಿಎಆರ್ ಎಕ್ಸಾಂ ತಪ್ಪಿದವರಿಗೆ ಇನ್ನೊಂದ್ಸಾರಿ ಚಾನ್ಸ್..
ಧಾರವಾಡ ಬಳಿ ನಡೆದಿದ್ದ ಒಂದ್ ಘಟನೆ ಉತ್ತರಕರ್ನಾಟಕದ ಸಾವಿರಾರು ಯುವಕರ ಸರ್ಕಾರಿ ನೌಕರಿ ಪಡೆಯೋ ಅವಕಾಶಕ್ಕೆ ಕಲ್ಲು ಹಾಕಿತ್ತು. ಕರ್ತವ್ಯ ಪ್ರಜ್ಞೆಯಿಲ್ಲದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ವರ್ತಿಸಿದ್ರಿಂದಾಗಿ ಯುವಕರು ರಾತ್ರಿಯಿಡೀ ನಿದ್ದೆಗೆಟ್ಟಿದ್ರಲ್ಲದೇ, ತಾವ್ ತಪ್ರು ಮಾಡದೇ ಅವಕಾಶ ಕಳ್ಕೊಂಡು ಕೈಕೈ ಹಿಸುಕಿಕೊಳ್ತಿದ್ರು. ಆದ್ರೇ, ರಾಜ್ಯ ಸರ್ಕಾರ ಅಷ್ಟೇ ಬೇಗ ಸ್ಪಂದಿಸಿ, ಯುವಕರ ಮೊಗದಲ್ಲಿ ಮಂದಹಾಸ ಮೂಡಿಸಿತು. ಅಷ್ಟಕ್ಕೂ ಆಗಿರೋದೇನು, ಇಲ್ಲಿದೆ ನೋಡಿ. ಸಮಯ ಬೆೆಳಗ್ಗೆ 6 ಗಂಟೆ. ಹುಬ್ಬಳ್ಳಿಯ ನೈರುತ್ಯ …
Read More »ಎನ್ಆರ್ ಸಿ ವಿಚಾರದಲ್ಲಿ ಕೈ ಯೂಟರ್ನ್, ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ಸ್ಪಷ್ಟನೆ
ಅಸ್ಸಾಂ ಕಾಂಗ್ರೆಸ್ ನಿಂದ ಸಲಹೆ ಬಂದ ಬೆನ್ನಲ್ಲೇ ನಿಲುವು ಬದಲಿಸಿದ ಕಾಂಗ್ರೆಸ್‌ನ ಗ್ರಹ ಚಿತ್ರ ನವದೆಹಲಿ: ಎನ್ಆರ್ ಸಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವಿನಿಂದ ಕಾಂಗ್ರೆಸ್ ಯೂಟರ್ನ್ ಹೊಡೆದಿದ್ದು, ಎನ್ಆರ್ ಸಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಪ್ರಮುಖವಾಗಿ ಅಸ್ಸಾಂ ನ ಅಕ್ರಮ ಬಾಂಗ್ಲಾ ವಲಸಿಗರಿಂದ ಮೂಲ ಅಸ್ಸಾಂ ನಿವಾಸಿಗರಿಗೆ ತೊಂದರೆಯಾಗುತ್ತಿದೆ ಎಂಬ ಭಾವನೆ ಆ ರಾಜ್ಯದಲ್ಲಿ ಬಲವಾಗಿ ನೆಲೆಯೂರಿದ್ದು, ಇದೇ ಕಾರಣಕ್ಕೆ ಇದೀಗ ಕಾಂಗ್ರೆಸ್ ಪಕ್ಷ ಕೂಡ …
Read More »ದೆಹಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ
ನವದೆಹಲಿ: ದೇಶದ ಪ್ರತಿಷ್ಠಿತ ರಂಗಭೂಮಿ ತರಬೇತಿ ಕೇಂದ್ರವಾದ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿನಿಯೋಬ್ಬರಿಗೆ ಅತಿಥಿ ಶಿಕ್ಷಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ವಿದ್ಯಾರ್ಥಿನಿ ದಾಖಲಿಸಿರುವ ಕಿರುಕುಳ ಪ್ರಕರಣದಲ್ಲಿ ಎನ್ ಎಸ್ ಡಿ ಈ ಅತಿಥಿ ಶಿಕ್ಷಕ ಅಸಂಬದ್ದವಾಗಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಗಸ್ಟ್ 1 ರಂದು ಪೊಲೀಸರು ಅತಿಥಿ ಶಿಕ್ಷಕ ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿ, ದೃಶ್ಯದ ಬಗ್ಗೆ ನಟಿಸಲು ಅತಿಥಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





