Breaking News

ನಮ್ಮಿಂದೇನೂ ತಪ್ಪಾಗಿಲ್ಲ.. ಇದಕ್ಕೆಲ್ಲ ಪರೀಕ್ಷಾರ್ಥಿಗಳೇ ಕಾರಣ’- ಸಿಪಿಆರ್ ಒ ಇ. ವಿಜಯಾ ಸ್ಪಷ್ಟನೆ

ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು 8 ಗಂಟೆ ತಡವಾದ ಪ್ರಕರಣ.
ರೈಲು ತಡವಾಗಿದ್ದರಿಂದ ಡಿ.ಆರ್ ಪರೀಕ್ಷೆ ವಂಚಿತರಾಗಿದ್ದ 3000ಕ್ಕೂ ಹೆಚ್ಚು ಪರೀಕ್ಷಾರ್ಥಿಗಳು.
ರೊಚ್ವಿಗೆದ್ದ ಪರೀಕ್ಷಾರ್ಥಿಗಳು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ನೈರುತ್ಯ ರೈಲ್ವೆಯ ಡಿಜಿಎಂ 
ಇ. ವಿಜಯಾ ಸ್ಪಷ್ಟನೆ.
ಇ. ವಿಜಯಾ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ,  ನೈರುತ್ಯ ರೈಲ್ವೆ, ಹುಬ್ಬಳ್ಳಿ
ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿರೋದು ನಿಜ.
ಮೇನ್ ಟ್ರ್ಯಾಕ್ ಸಮಸ್ಯೆ ಇದ್ದಿದ್ದರಿಂದ ಗೂಡ್ಸ್ ಮತ್ತು ರಾಣಿ ಚೆನ್ನಮ್ಮ ರೈಲು ಒಂದೇ ಹಳಿಯಲ್ಲಿ ಚಲಿಸುತ್ತಿದ್ದವು.
ಗೂಡ್ಸ್ ರೈಲಿನ್ ಎಂಜಿನ್ ನಿನ್ನೆ ಕೈಕೊಟ್ಟಿತ್ತು.
ಹಾಗಾಗಿ ಅದನ್ನ ಹಳಿಯಿಂದ ಸರಿಸಲು ರಾಣಿಚೆನ್ನಮ್ಮ ರೈಲಿನ ಎಂಜಿನ್ ಜೋಡಿಸಲಾಗಿತ್ತು.
ರೈಲಿನ ಚಾಲನೆಯಲ್ಲಿ ಕೇವಲ ಒಂದು ಗಂಟೆ ಮಾತ್ರ ತಡವಾಗಿದೆ, 8ಗಂಟೆ‌ ಲೇಟ್ ಅನ್ನೋದು ತಪ್ಪು.
ಮಧ್ಯರಾತ್ರಿ 1ಗಂಟೆಗೆ ಮತ್ತೆ ಚೆನ್ನಮ್ಮ ರೈಲಿಗೆ ಎಂಜಿನ್ ಜೋಡಿಸಲಾಗಿತ್ತು.
ಒಂದು ಗಂಟೆ ತಡವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು, ಪರೀಕ್ಷಾರ್ಥಿಗಳು ರೊಚ್ಚಿಗೆದ್ದಿದ್ದರು.
ಗಾಡಿ ಮೂವ್ ಆಗೋಕೆ ಬಿಡದೇ, ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ರು.
ಅವರನ್ನ ಸಂತಯಿಸಿ ರೈಲು ಮುಂದೆ ಸಾಗುತ್ತಿದ್ದಂತೆ ಅಲಾರಾಮ್ ಚೈನ್ ಎಳೆಯಲಾಗುತ್ತಿತ್ತು.
ಮೂರು ಕಿ.ಮೀ ಪ್ರಯಾಣಿಸುತ್ತಿದ್ದಂತೆ 10ಕ್ಕೂ ಹೆಚ್ಚು ಜನ ಚೈನ್ ಎಳೆದಿದ್ರು.
ನಾವು ಅವರಿಗೆ ಸಂತೈಸುವ ಸ್ಥಿತಿಯಲ್ಲಿ ಆಗ ಇರಲಿಲ್ಲ.
ನಮ್ಮ ಪ್ರಕಾರ ಎಷ್ಟೇ ತಡವಾದ್ರೂ ರೈಲು ಇಂದು ಬೆಳಗ್ಗೆ 7ಗಂಟೆ ಹೊತ್ತಿಗೆ ಬೆಂಗಳೂರಿನಲ್ಲಿರುತ್ತಿತ್ತು.
ಹಾಗಾಗಿ ಈ ಸಮಸ್ಯೆ ನಮ್ಮದಲ್ಲ, ಇದಲ್ಲಿ ಇಲಾಖೆಯ ವೈಫಲ್ಯವಿಲ್ಲ.
ಪ್ರಯಾಣಿಕರು ಪರೀಕ್ಷಾರ್ಥಿಗಳು ಪ್ರತಿಭಟನೆ ಮಾಡಿದ್ರಿಂದ್ಲೇ ತಡವಾಗಿದೆಯೇ ಹೊರತು ನಮ್ಮಿಂದಲ್ಲ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಇ. ವಿಜಯಾ.
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *