Breaking News

Shaikh BIG TV NEWS, Hubballi

ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ತತಲಾಖ್….

ಹೈದರಾಬಾದ್: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಪತ್ನಿಗೆ ಮೊಬೈಲ್​ ಮೂಲಕ ಪತಿ ತಲಾಖ್​ ನೀಡಿದ ಅಮಾನವೀಯ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.ನಗರದ ತೊಲಿಚೌಕಿ ಪ್ರದೇಶದ ಮಹಿಳೆಗೆ ಮೂರು ವಾರಗಳ ಹಿಂದೆ ಪತಿ ತಲಾಖ್ ನೀಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ಕೂಡ ದಾಖಲಿಸಿದ್ದಾರೆ. ಜನವರಿ 6, 2017ರಂದು ಮಹಿಳೆಗೆ ಷರೀಫ್​​ ಎನ್ನುವಾತನ ಜೊತೆ ವಿವಾಹವಾಗಿತ್ತು. ಇತ್ತೀಚಿಗೆ ದಂಪತಿಗೆ ಹೆಣ್ಣು ಮಗು ಜನಿಸಿತ್ತು. …

Read More »

ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ : 6 ತಿಂಗಳ ಮಗು ಸೇರಿ 8 ಮಂದಿ ಸಾವು

ಮುಂಬೈ: ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿ 6 ತಿಂಗಳ ಮಗು ಸೇರಿದಂತೆ 8 ರೋಗಿಗಳು ಮೃತಪಟ್ಟಿರುವ ಘಟನೆ ಮುಂಬೈ ಹೊರವಲಯದ ಅಂಧೇರಿಯಲ್ಲಿ ನಡೆದಿದೆ.ಆಸ್ಪತ್ರೆಯಲ್ಲಿದ್ದ 140ಕ್ಕೂ ಹೆಚ್ಚು ಜನರನ್ನ ರಕ್ಷಿಸಲಾಗಿದೆ. ನಿನ್ನೆ ಸಂಜೆ 4.20ರ ಸಮಯದಲ್ಲಿ ಇಎಸ್​ಐಸಿ ಕಾಮ್ಗರ್​​ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿ, ಹೊಗೆಯ ತೀವ್ರತೆ ಹೆಚ್ಚಾಯಿತು ಎಂದು ತಿಳಿದುಬಂದಿದೆ. ಬೆಂಕಿ ಅವಘಡದಿಂದ ನಿನ್ನೆ 6 …

Read More »

ರೈತರ ಸಾಲ ಮನ್ನಾ ಮಾಡೋವರೆಗೂ ಮೋದಿಗೆ ನಿದ್ದೆ ಮಾಡಲು ಬಿಡಲ್ಲ’

ನವದೆಹಲಿ: ರೈತರ ಸಾಲ ಮನ್ನ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿಗೆ ನಿದ್ದೆ ಮಾಡಲು ಬಿಡುವುದಿಲ್ಲ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಇಂದು ವರದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ 6 ಗಂಟೆಗಳಲ್ಲಿ ಸಾಲ ಮನ್ನಾ ಘೋಷಣೆ ಮಾಡಿದೆ. ರಾಜಸ್ಥಾನದಲ್ಲೂ ಶೀಘ್ರದಲ್ಲೇ ಮಾಡಲಿದ್ದೇವೆ ಎಂದು ಹೇಳಿದ್ರು.ನೋಡಿದ್ರಾ, ಆಗಲೇ ಕೆಲಸ ಶುರುವಾಗಿದೆ ಎಂದು ಸಂಸತ್​​​ ತಲುಪುತ್ತಿದ್ದಂತೆ ರಾಹುಲ್ ಗಾಂಧಿ ಹೇಳಿದ್ರು. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​​ …

Read More »

ಏಳನೇ ವೇತನ ಆಯೋಗ: ಕೇಂದ್ರ ಸರ್ಕಾರದ ಈ ನೌಕರರಿಗೆ ಹೆಚ್ಚಾಗಲಿದೆ ವೇತನ.

ನವದೆಹಲಿ: ವೇತನ ಮತ್ತು ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಬಿಎಸ್ಎನ್ಎಲ್ ನೌಕರರು ಇತ್ತೀಚೆಗೆ ದೇಶಾದ್ಯಂತ ನಡೆಸಿದ ಪ್ರತಿಭಟನೆಗೆ ಕೊನೆಗೂ ಫಲ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರವು ತನ್ನ ಎಲ್ಲಾ ಬಿಎಸ್ಎನ್ಎಲ್ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಡಿಸೆಂಬರ್ 13ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.ಅಧಿಸೂಚನೆಯ ಪ್ರಮುಖ ಅಂಶಗಳು1. ಮೂಲ ವೇತನದ ಆಧಾರದ ಮೇಲೆ ಪಿಂಚಣಿ ಪಾಲು ಪಾವತಿಮೂಲ ವೇತನದ ಆಧಾರದ …

Read More »

HONDA ಕಾರ್ ಶೋ ರೂಂನಲ್ಲಿ ಬೆಂಕಿ ಅವಘಡ, 15ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿ

ನವದೆಹಲಿ: ಪೂರ್ವ ದೆಹಲಿಯ ಪಟ್ಪಂಗಂಜ್ ಪ್ರದೇಶದಲ್ಲಿ ಹೋಂಡಾ ಕಾರ್ ಶೋ ರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 15 ಕ್ಕಿಂತ ಹೆಚ್ಚು ದುಬಾರಿ ಕಾರುಗಳು ಬೆಂಕಿಗಾಹುತಿ ಆಗಿರುವ ಘಟನೆ ನಡೆದಿದೆ.ಈ ದುರಂತದಲ್ಲಿ ಲಕ್ಷಾಂತರ ರೂ. ಮೌಲ್ಯದ ನಷ್ಟ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.ಮಂಗಳವಾರ ಬೆಳಿಗ್ಗೆ 4 ಗಂಟೆಗೆ ದೆಹಲಿಯ ಪಟ್ಪಂಗಂಜ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಪ್ರಾಥಮಿಕ ವರದಿ ಪ್ರಕಾರ, ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭಸಿದೆ ಎಂದು …

Read More »

ಸಿಸಿಬಿ ಪೊಲೀಸರ ವಿರುದ್ಧವೇ ಎಫ್​ಐಆರ್…

ಬೆಂಗಳೂರು:‌ ಸಿಸಿಬಿ ಪೊಲೀಸರ ಮೇಲೆಯೇ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ್ಯಾಯಾಲಯದ ಅದೇಶದಂತೆ ಇಬ್ಬರು‌ ಸಿಸಿಬಿ ಇನ್ಸಪೆಕ್ಟರ್ ಒಬ್ಬ ಸಬ್ ಇನ್ಸ್​ಪೆಕ್ಟರ್ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. ಕಳೆದ ಮಾರ್ಚ್ 28 ರಂದು‌ ಜಿತೇಶ್ ಎಂಬವರ ರಿಕ್ರಿಯೇಶನ್ ಕ್ಲಬ್ ಮೇಲೆ ಸಿಸಿಬಿ ದಾಳಿ ಮಾಡಿತ್ತು. ಈ ವೇಳೆ ಕ್ಲಬ್​ ಮಾಲೀಕ ‌ಜಿತೇಶ್​ರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ಜಿತೇಶ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ …

Read More »

ಕ್ರೈಂ ಡಿಟೆಕ್ಷನ್​ನಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್​ ಕುಮಾರ್​ ದಾಖಲೆ..

ಬೆಂಗಳೂರು: ಕ್ರೈಂ ಡಿಟೆಕ್ಷನ್​ನಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್​ ಕುಮಾರ್​ ದಾಖಲೆ ಬರೆದಿದ್ದಾರೆ. ದಾಖಲಾದ ಅಷ್ಟೂ ರೇಪ್ ಕೇಸ್​ಗಳನ್ನ ಸಾಲ್ವ್ ಮಾಡಿದ್ದಾರೆ. ಆ ಮೂಲಕ ಈ ಹಿಂದಿನ ಹಿಂದಿನ ಕಮೀಷನರ್​ಗಳನ್ನ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೇ ನವೆಂಬರ್ ಅಂತ್ಯದ ವರೆಗೂ ದಾಖಲಾದ ಬಹುತೇಕ ಎಲ್ಲಾ ಕೇಸ್​ಗಳನ್ನ ಕ್ಲಿಯರ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದಾಖಲಾದ 202 ಮರ್ಡರ್ ಕೇಸ್​ಗಳಲ್ಲಿ 194 ಕೇಸ್​ಗಳನ್ನ ಕ್ಲೀಯರ್ ಮಾಡಿದ್ದಾರೆ. ಇನ್ನು 636 ರಾಬರಿ ಪ್ರಕರಣದಲ್ಲಿ 411 …

Read More »

ಅರ್ಹ ಎಲ್ಲಾ ಪಲಾನುಭವಿಗಳಿಗೆ ಅನಿಲಭಾಗ್ಯ ಯೋಜನೆ ಮಂಜೂರು- ಶಾಸಕ ಸಿ.ಎಸ್.ಶಿವಳ್ಳಿ

ಹುಬ್ಬಳ್ಳಿ, ಡಿ.15 : ಅನಿಲ ಭಾಗ್ಯ ಯೋಜನೆಯಡಿ ಕುಂದಗೋಳ ಮತ ಕ್ಷೇತ್ರದ ವ್ಯಾಪ್ತಿಯ ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೋಬಳಿಗೆ ಸಂಬಂದಪಟ್ಟಂತೆ ಒಟ್ಟು 1703 ಅರ್ಜಿಗಳು ಸ್ವೀಕೃತವಾಗಿವೆ. ಮೊದಲ ಹಂತದಲ್ಲಿ 316 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಅನಿಲಭಾಗ್ಯ ಯೋಜನೆಯನ್ನು ಮಂಜೂರು ಮಾಡಲಾಗುವುದು ಎಂದು ಕುಂದಗೋಳ ಶಾಸಕರಾದ ಸಿ.ಎಸ್.ಶಿವಳ್ಳಿಯವರು ಹೇಳಿದರು.ಇಂದು ಮಿನಿವಿಧಾನ ಸೌಧದ ತಾಲೂಕು ಸಭಾಂಗಣದಲ್ಲಿ 24 ಅನಿಲ ಭಾಗ್ಯ ಫಲಾನುಭವಿಗಳಿಗೆ ಗ್ಯಾಸ್‍ಸಿಲೆಂಡರ್ ಹಾಗೂ ಒಲೆಗಳನ್ನು ವಿತರಿಸಿ …

Read More »

ದೇವಸ್ಥಾನದಲ್ಲಿ ವಿಷ ಪ್ರಸಾದ ಪ್ರಕರಣ: 7 ವರ್ಷದ ಬಾಲಕ ಸಾವು

ಮೈಸೂರು: ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥರಾಗಿದ್ದವರಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. 7 ವರ್ಷದ ಪ್ರೀತನ್​ ಮೃತ ಬಾಲಕ. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಪ್ರೀತನ್​ ಮೃತಪಟ್ಟಿದ್ದಾನೆ. ಘಟನೆಯಿಂದ ಅಸ್ವಸ್ಥಗೊಂಡ 50ಕ್ಕೂ ಹೆಚ್ಚು ಜನರಿಗೆ ಮೈಸೂರಿನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

Read More »

ಮಾರಮ್ಮ ದೇವಸ್ಥಾನ ಪ್ರಸಾದ ದುರಂತ: ಮೃತರ ಗುರುತು ಪತ್ತೆ..

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯಲ್ಲಿ ನಿನ್ನೆ ಮಾರಮ್ಮ ದೇವಿಯ ಪ್ರಸಾದ ಸೇವಿಸಿ 11 ಜನರು ಮೃತಪಟ್ಟಿದ್ದು, ಮೃತಪಟ್ಟವರ ಗುರುತು ಪತ್ತೆಯಾಗಿದೆ. ಪಾಪಣ್ಣ(70), ರಾಚಯ್ಯ(58), ಶಕ್ತಿವೇಲು, ಶಾಂತರಾಜು(30), ಗೋಪಿಯಮ್ಮ(40), ಅನಿತಾ(12), ಅಣ್ಣಯ್ಯಪ್ಪ, ಶಿವು(30), ಕೃಷ್ಣನಾಯ್ಕ(40), ದೊಡ್ಡಮಾದಯ್ಯ ಹಾಗೂ ಪ್ರೀತನ್​(7) ಮೃತ ದುರ್ದೈವಿಗಳು.ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಆರ್​​ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡ 45ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಅಸ್ವಸ್ಥರಾದವರನ್ನು ಖಾಸಗಿ …

Read More »