ಹುಬ್ಬಳ್ಳಿ: ಇಲ್ಲಿಯ ತಬಿಬ ಲ್ಯಾಂಡನ್ ವಾಟರ್ ಟ್ಯಾಂಕ್ ಹತ್ತಿರ ಐಪಿಎಲ್ ಕ್ರಿಕೆಟ್ ಬೆಂಟಿಂಗ್ ಆಡುತ್ತಿದ್ದ ಮೂವರುನ್ನು ಶಹರ ಠಾಣಾ ಪೊಲೀಸರು ಬಂಧಿಸಿ ಅವರಿಂದ ೩೮,೨೦೦ ರೂ ವಶಪಡಿಸಿಕೊಂಡಿದ್ದಾರೆ.
ಮಂಟೂರ ರಸ್ತೆಯ ಇಂದ್ರಾ ಕಾಲೋನಿ ನಿವಾಸಿ ದಾವಲಸಾಬ ಕಟನಾಲಿ, ಮಂಟೂರ ರಸ್ತೆಯ ನಿವಾಸಿ ಆಯೂಬ್‌ಖಾನ ಪಾಟೀಲ ಮತ್ತು ಬಂಕಾಪುರ ಚೌಕನ ದೇಸಾಯಿ ಓಣಿ ನಿವಾಸಿ ನಾಗರಾಜ ಜಾಧವ ಎಂಬಾತರು ಬಂಧಿತ ಆರೋಪಿಗಳು.
ಭಾನುವಾರ ನಡೆದ ಮುಂಬೈ ಮತ್ತು ದೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೇಳೆ ಬೆಂಟಿಂಗ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಶಹರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

