Breaking News

Shaikh BIG TV NEWS, Hubballi

ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಸುನೀಲ್ ಅರೋರಾ ನೇಮಕ

ನವದೆಹಲಿ: ಸುನೀಲ್ ಅರೋರಾ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸೋಮವಾರದಂದು ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಒ.ಪಿ. ರಾವತ್ ಅವರ ಅಧಿಕಾರಾವಧಿ ಡಿಸೆಂಬರ್ 1ಕ್ಕೆ ಕೊನೆಗೊಳ್ಳುತ್ತಿದ್ದು, ಡಿಸೆಂಬರ್ 2 ರಂದು ಆರೋರಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.1980ರ ರಾಜಸ್ಥಾನ ಕೇಡರ್ಸ್ ನ ಹಿರಿಯ ಅಧಿಕಾರಿಯಾಗಿರುವ ಸುನೀಲ್ ಅರೋರಾ ಪ್ರಸ್ತುತ ಚುನಾವಣಾ ಆಯೋಗದಲ್ಲಿ ಹಿರಿಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅರೋರ ಅವರು ಹಣಕಾಸು, ಜವಳಿ ಮತ್ತು …

Read More »

ಕಲಬುರ್ಗಿ ಹತ್ಯೆ ಪ್ರಕರಣ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ: ಖ್ಯಾತ ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ವಿಳಂಬ ಮಾಡಿರುವುದಕ್ಕೆ ಸೋಮವಾರ ಸುಪ್ರೀಂ ಕೋರ್ಟ್​ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.ತನಿಖೆ ಮಾಡಲು ಸರ್ಕಾರಕ್ಕೆ ಎಷ್ಟು ಸಮಯ ಬೇಕು? ತನಿಖೆಗೆ ವಿಳಂಬ ಆಗಿರುವುದಾದರೂ ಏಕೆ? ಎಂದು ನ್ಯಾ. ರೊಹಿಂಟನ್ ನಾರಿಮನ್ ನೇತೃತ್ವದ ದ್ವಿಸದಸ್ಯ ಪೀಠ ಆಕ್ರೋಶ ವ್ಯಕ್ತಪಡಿಸಿತು. ಜೊತೆಗೆ ಎರಡು ವಾರದೊಳಗೆ ತನಿಖೆಯ ಸಂಪೂರ್ಣ ವಿವರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.ವಿಚಾರಚಾದಿ ಎಂ.ಎಂ. ಕಲ್ಬುರ್ಗಿ ಅವರನ್ನು ಧಾರವಾಡದ ಅವರ ನಿವಾಸದಲ್ಲಿ …

Read More »

ಕುಡಿದು ಕಾರ್ ಓಡಿಸಿ ಪೊಲೀಸರ ಕೈಗೆ ತಗ್ಲಾಕೊಂಡ ನಟಿ..

ಚೆನ್ನೈ: ಒಬ್ಬ ಸ್ಟಾರ್​ ಅಂದ್ರೆ ಅವ್ರಿಗೆ ನೂರಾರು ಜನ ಅಭಿಮಾನಿಗಳು ಇರ್ತಾರೆ. ಅವರು ಏನೇ ಮಾಡಿದ್ರೂ ಅದನ್ನೇ ಫಾಲೋ ಮಾಡೋವಷ್ಟು ಹುಚ್ಚು ಅಭಿಮಾನಿಗಳು ಕೂಡ ಇರ್ತಾರೆ. ಹಾಗಾಗಿ ಒಬ್ಬ ನಟ ಅಥವಾ ನಟಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆದ್ರೆ ಕೆಲವು ಸೆಲೆಬ್ರಿಟಿಗಳು ಜನರಿಗೆ ಮಾದರಿಯಾಗೋ ಬದಲು ತಾವೇ ತಪ್ಪು ಮಾಡುತ್ತಿರುತ್ತಾರೆ. ಅದಕ್ಕೆ ತಾಜಾ ಎಕ್ಸಾಂಪಲ್ ಅಂದ್ರೆ ತಮಿಳುನಾಡಿನ ನಟಿ ಗಾಯತ್ರಿ ರಘುರಾಂ.ವೀಕೆಂಡ್ ಮಸ್ತಿಯಲ್ಲಿದ್ದ ಈ ನಟಿ ಎಂಆರ್​ಸಿ ನಗರದಲ್ಲಿರುವ ಸ್ಟಾರ್ …

Read More »

ಕೆಲಸ ನೀಡುವುದಾಗಿ ಮಹಿಳೆ ಅಪಹರಣ, 2 ಲಕ್ಷಕ್ಕೆ ಮಾರಾಟ, ನಿರಂತರ 24 ದಿನ ಅತ್ಯಾಚಾರ!

ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಈ ಕೃತ್ಯವೆಸಗಲಾಗಿದ್ದು, ಅಪಹರಣಕಾರರು ಆಕೆಯನ್ನು 2 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಬಳಿಕ ಆಕೆಯನ್ನು ಕೊಂಡವರು ನಿರಂತರ 24 ದಿನಗಳ ಕಾಲ ನಿರಂತರ ಅತ್ಯಾಚಾರ ವೆಸಗಿದ್ದಾರೆ. ಪ್ರಸ್ತುತ ಪೊಲೀಸರು ಆಕೆಯನ್ನು ರಕ್ಷಿಸಿದ್ದು, ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ.ಏನಿದು ಘಟನೆ?30 ವರ್ಷದ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಸಂತ್ರಸ್ತೆಗೆ ಅಕ್ಟೋಬರ್ 28 ರಂದು ಅಪರಿಚಿತರೊಬ್ಬರು ಕರೆ ಮಾಡಿ ತಾವು ಸುಭಾಷ್ ಯಾದವ್ ಎಂದು …

Read More »

ಇಬ್ಬರು ಅಪ್ರಾಪ್ತರು ಸೇರಿ 6 ಮಂದಿ ಮೀನುಗಾರರಿಂದ ಯುವತಿ ಮೇಲೆ ಅತ್ಯಾಚಾರ

ಮಂಗಳೂರು: ಯುವತಿ ಮೇಲೆ ಮೀನುಗಾರರ ಗುಂಪೊಂದು ಅತ್ಯಾಚಾರ ನಡೆಸಿದ ಪ್ರಕರಣ ಮಂಗಳೂರು ಸಮೀಪ ತೋಟ ಬೆಂಗ್ರೆ ಎಂಬಲ್ಲಿ ನಡೆದಿದೆ.ವಾರದ ಹಿಂದೆ ಈ ಘಟನೆ ನಡೆದಿದ್ದರೂ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.ಯುವತಿ ಮೇಲೆ ಆರು ಮಂದಿ ಮೀನುಗಾರರು ತೋಟ ಬೆಂಗ್ರೆ ಎಂಬಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಖಚಿತಪಡಿಸಿದ್ದಾರೆ.ವಾರದ ಹಿಂದೆ ಈ ಘಟನೆ ನಡೆದಿದ್ದರೂ ಕೂಡ ಮಾಹಿತಿ ಪಡೆಯುವಾಗ ವಿಳಂಬವಾಯಿತು. …

Read More »

ಜಾತ್ಯತೀತ ನಾಯಕರಾಗಿ ಎಲ್ಲರ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನ ಜಾಫರ್ ಷರೀಫ್

ಬೆಂಗಳೂರು: ಭಾನುವಾರ ನಿಧನರಾದ ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಈದ್ಗಾ ಖುದ್ದೂಸ್‌ನಲ್ಲಿ ನೆರವೇರಲಿದೆ.ಮಾಜಿ ಕೇಂದ್ರ ಸಚಿವರಾದ ಜಾಫರ್ ಷರೀಫ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಉಪಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್, ಜಾತ್ಯತೀತ ನಾಯಕರಾಗಿ ಎಲ್ಲ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.ಮುಸ್ಲಿಂ ಸಮುದಾಯದ ಪ್ರಭಾವಿ ಹಾಗೂ ರಾಜ್ಯದ ಹಿರಿಯ ರಾಜಕಾರಣಿ ಜಾಫ‌ರ್‌ ಷರೀಫ್ ಇಂದಿರಾಗಾಂಧಿ ಕಾಲದಿಂದಲೂ ನಿಷ್ಠಾವಂತ ಕಾಂಗ್ರೆಸ್ಸಿಗರಲ್ಲೊಬ್ಬರು.ಕಾಂಗ್ರೆಸ್‌ …

Read More »

ಅಭಿಮಾನಿಸಾಗರದ ಮಧ್ಯೆ ಅಂಬಿ ಅಂತಿಮ ಯಾತ್ರೆ ಆರಂಭ

ಬೆಂಗಳೂರು: ನಟ ಅಂಬರೀಶ್​ ಅಂತಿಮ ಯಾತ್ರೆ ಆರಂಭವಾಗಿದೆ. ಅಭಿಮಾನಿಸಾಗರದ ಮಧ್ಯೆ ನಗರದ ಕಂಠೀರವ ಸ್ಟೇಡಿಯಂನಿಂದ ವಿಶೇಷ ವಾಹನದಲ್ಲಿ ಕಂಠೀರವ ಸ್ಟುಡಿಯೋವರೆಗೂ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಅಂತಿಮ ಯಾತ್ರೆಯ ವಾಹನದಲ್ಲಿ ಸುಮಲತಾ ಇದ್ದಾರೆ.ಒಟ್ಟು 13 ಕಿಲೋಮೀಟರ್​ವರೆಗೂ ಸಿಸಿಟಿವಿ ಕಣ್ಗಾವಲು ಏರ್ಪಡಿಸಲಾಗಿದೆ. ರಸ್ತೆ ಸಂಚಾರ ಸುಗಮಗೊಳಿಸಲು 4 ಡಿಸಿಪಿ, 4000 ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 11,000 ಪೊಲೀಸ್ ಸಿಬ್ಬಂದಿ, 30 ಕೆಎಸ್​ಆರ್​ಪಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. …

Read More »

ಮಾಜಿ ಕೇಂದ್ರ ಸಚಿವ ಸಿ ಕೆ ಜಾಫರ್​ ಷರೀಫ್​ ಇನ್ನಿಲ್ಲ

ಬೆಂಗಳೂರು: ಮಾಜಿ ಕೇಂದ್ರ ಸಚಿವ ಸಿ ಕೆ ಜಾಫರ್​ ಷರೀಫ್​ ಅವರು ಇಂದು ತೀವ್ರ ಅನಾರೋಗ್ಯದಿಂದ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.ನಾಳಿದ್ದು ಮಂಗಳವಾರ ಜಾಫರ್​ ಷರೀಫ್​ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ನಾಳೆ ನಗರಕ್ಕೆ ಆಗಮಿಸಲಿದ್ದು, ಜಾಫರ್​ ಷರೀಫ್​ ಅವರ ಅಂಯಿಮ ದರ್ಶನ ಪಡೆಯಲಿದ್ದಾರೆ. ಇದೇ ವೇಳೆ ಅವರು ನಿನ್ನೆ ನಿಧನರಾದ ಮಾಜಿ ಕೇಂದ್ರ ಸಚಿವ ಅಂಬರೀಶ್​ …

Read More »

ಸಂಜೆ 4 ಗಂಟೆಗೆ ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ ರವಾನೆ..

ಬೆಂಗಳೂರು: ಶನಿವಾರ ರಾತ್ರಿ ತೀವ್ರ ಎದೆನೋವಿನಿಂದ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ರವಾನಿಸಲು ಸೇನಾ ಹೆಲಿಕಾಪ್ಟರ್ ಬಳಸಲು ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ. ಹೀಗಾಗಿ ಸಂಜೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ದೊರೆಯಲಿದೆ.ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ ತರಲೇಬೇಕೆಂದು ಜನತೆ ಪಟ್ಟುಹಿಡಿದ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಪಾರ್ಥಿವ ಶರೀರ ರವಾನಿಸಲು ಸೇನಾ ಹೆಲಿಕಾಪ್ಟರ್ ಬಳಸಲು ಅನುಮತಿ ನೀಡುವಂತೆ ರಕ್ಷಣಾ ಸಚಿವೆ …

Read More »

ಕಳೆದ ವರ್ಷ ನವೆಂಬರ್​ 24ರಂದೇ ಸಾವನ್ನಪ್ಪಿದ್ರು ಅಂಬಿ ಸಹೋದರ..

ಬೆಂಗಳೂರು: ಒಡಹುಟ್ಟಿದವರು ಸಾವಿನಲ್ಲಿಯೂ ಒಂದಾಗ್ತಾರೆ ಅನ್ನೋ ಮಾತಿದೆ. ಈ ಮಾತು ರೆಬಲ್​ ಸ್ಟಾರ್​ ಅಂಬರೀಶ್ ಸಾವಿಲ್ಲೂ ನಿಜವಾಗಿದೆ. ಕಳೆದ ವರ್ಷ ಇದೇ ನವೆಂಬರ್​​ 24ರಂದು ಅಂಬರೀಶ್ ಸಹೋದರ ಹರೀಶ್ ವಿಧಿವಶರಾಗಿದ್ದರು. ಕಾಕತಾಳೀಯವೆಂಬಂತೆ ಈ ವರ್ಷ ಅದೇ ದಿನದಂದು ಅಂಬರೀಶ್ ಸಹ ಕೊನೆಯುಸಿರೆಳದಿದ್ದಾರೆ. ಹರೀಶ್ 35 ವರ್ಷದಿಂದ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿ ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ರು.

Read More »