ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜಕೀಯ ಪಕ್ಷಗಳು ಮತದಾರರ ಮನ ಮುಟ್ಟಲು ಜಾಹೀರಾತುಗಳ ಮೊರೆ ಹೋಗುತ್ತಿವೆ. ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಜಾಹೀರಾತುಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಚುನಾವಣೆ ನಡೆಯುವ ದಿನ ಹಾಗೂ ಅದಕ್ಕೂ ಹಿಂದಿನ ದಿನ ಯಾವುದೇ ಜಾಹೀರಾತು ಪ್ರಕಟಿಸದಂತೆ ಆಯೋಗ ಸೂಚಿಸಿದೆ.ದೇಶದಲ್ಲಿ ಒಟ್ಟಾರೆಯಾಗಿ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ 7 ಹಂತಗಳಲ್ಲೂ ಚುನಾವಣೆ ನಡೆಯುವ ದಿನದ ಹಾಗೂ …
Read More »ಪೊಲೀಸ್ ಅಧಿಕಾರಿಗಳ ಟ್ರಾನ್ಸ್ಫರ್; ಚುನಾವಣಾ ಆಯೋಗದ ವಿರುದ್ಧ ‘ದೀದಿ’ ಕಿಡಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ವರ್ಗಾವಣೆ ಮಾಡಿದ್ದಕ್ಕೆ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಪಕ್ಷಪಾತ ಮಾಡುವ ಮೂಲಕ ಹಿರಿಯ ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡಲಾಗಿದೆ. ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ ಅಂತಾ ಆಯೋಗಕ್ಕೆ ಬರೆದ ಪತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯೋಗದ ನಡವಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಂವಿಧಾನ ಬದ್ಧವಾಗಿ ಚುನಾವಣೆ ನಡೆಸಲು ಆಯೋಗ ಇದೆಯಾ ಅಥವಾ ಬಿಜೆಪಿ …
Read More »ವೋಟ್ ಹಾಕಿದ್ರೆ ನಿಮ್ಮ ಮಕ್ಕಳಿಗೆ 10 ಮಾರ್ಕ್ಸ್ ಎಕ್ಸ್ಟ್ರಾ…!
ಲಖನೌ: 2019ರ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲು ಚುನಾವಣೆಯ ದಿನಾಂಕ ಹತ್ತಿರವಾದಂತೆಲ್ಲಾ ಇದರ ರಂಗು ಮತ್ತಷ್ಟು ಹೆಚ್ಚಾಗುತ್ತಿದೆ. ಒಂದೆಡೆ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳೂ ಮತದಾರರನ್ನ ಓಲೈಸೋಕೆ ನಾನಾ ಸರ್ಕಸ್ ಮಾಡ್ತಿವೆ. ಇನ್ನು, ಅಭ್ಯರ್ಥಿಗಳಂತೂ ಮನೆ ಮನೆ ಪ್ರಚಾರವನ್ನೂ ನಡೆಸ್ತಿದ್ದಾರೆ. ಮತ್ತೊಂದೆಡೆ ಸರ್ಕಾರ, ಚುನಾವಣಾ ಆಯೋಗ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿವೆ.ಈ ನಡುವೆ ಜನ ಸಾಮಾನ್ಯರು, ಸಂಘ …
Read More »ಸಂಕಲ್ಪ ಪತ್ರ’ ಇದು ಇಂದು ಬಿಡುಗಡೆಯಾಗಲಿರೋ ಬಿಜೆಪಿ ಪ್ರಣಾಳಿಕೆ
ನವದೆಹಲಿ: ಲೋಕಸಭಾ ಚುನಾವಣೆಯ ಮಹಾಸಮರದಲ್ಲಿ ಈಗಾಗಲೇ ಅಖಾಡಕ್ಕಿಳಿದಿರುವ ಸರ್ವಪಕ್ಷಗಳು ಸೀಟು ಗೆದ್ದು ಸಿಹಿ ತಿನ್ನಲು ರಣತಂತ್ರ ರೂಪಿಸುತ್ತಿವೆ. ಅದ್ರಲ್ಲೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮತದಾರರಿಗೆ ಭರ್ಜರಿ ಆಫರ್ ಒಡ್ಡಿವೆ. ಈಗ ಮತ್ತೆ ದೇಶದ ಜನರನ್ನ ತನ್ನತ್ತ ಸೆಳೆದುಕೊಳ್ಳಲು ಪ್ರಣಾಳಿಕೆ ಬಿಡುಗಡೆಗೊಳಿಸುವ ಸರದಿ ಬಿಜೆಪಿಯದ್ದು. ‘ಸಂಕಲ್ಪ ಪತ್ರ’ ಎಂಬ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಪಕ್ಷದ …
Read More »ವಿಕಾಸಕ್ಕಾಗಿ ಎನ್ಡಿಎ ಜೊತೆ ಮೈತ್ರಿ: ಮುಖ್ಯಮಂತ್ರಿ ನಿತೀಶ್ ಕುಮಾರ್
ಜಮುಯಿ: ಬಿಹಾರದ ಹಿತ ದೃಷ್ಟಿಯಿಂದ, ರಾಜ್ಯದ ವಿಕಾಸಕ್ಕಾಗಿ ನಾವು ಮತ್ತೊಮ್ಮೆ ಎನ್ ಡಿ ಎ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಜಮುಯಿಯ ಚಕಾಯಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಕಾಸಕ್ಕಾಗಿ ಶ್ರಮಿಸುತ್ತಿದೆ. ಇದರಿಂದ ದೇಶದ ಪ್ರತಿಷ್ಠೆ ಹೆಚ್ಚಿದೆ. ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು.ಭಾನುವಾರ ಚಕಾಯಿಯಲ್ಲಿನ ಹೈ ಸ್ಕೂಲ್ ಮೈದಾನದಲ್ಲಿ …
Read More »ನಕಲಿ ಮಹಿಳಾ IFS ಅಧಿಕಾರಿ ಅರೆಸ್ಟ್, ಬೆಚ್ಚಿ ಬೀಳಿಸುತ್ತೆ ಐನಾತಿಯ ಅಸಲಿ ಕಹಾನಿ…
ನೊಯಿಡಾ: ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು, ಆಕಾಂಕ್ಷಿಗಳು ಹಗಲು ರಾತ್ರಿಯೆನ್ನದೇ ಓದುತ್ತಾರೆ. ಇಷ್ಟೆಲ್ಲ ಓದಿದ್ರೂ ಯುಪಿಎಸ್ಸಿ ಪರೀಕ್ಷೆ ಪಾಸ್ ಆಗೋದು ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬ ಮಹಿಳೆ ತಾನು ಅಮೆರಿಕಾದಲ್ಲಿ ಐಎಫ್ಎಸ್ ಅಧಿಕಾರಿ ಅಂತಾ ಹೇಳಿಕೊಂಡು ಓಡಾಡ್ತಿದ್ದಳು, ಆಕೆಯನ್ನ ಗ್ರೇಟರ್ ನೊಯಿಡಾ ಪೊಲೀಸರು ಬಂಧಿಸಿದ್ದಾರೆ.ಝೊಯಾ ಖಾನ್(34) ಮತ್ತು ಈಕೆಯ ಪತಿ ಹರ್ಷಲ್ ಪ್ರತಾಪ್ ಸಿಂಗ್ (36) ಪೊಲೀಸರ ಬಲೆಗೆ ಬಿದ್ದ ಆರೋಪಿಗಳು. ಹಲವು ತಿಂಗಳುಗಳಿಂದ ನಕಲಿ ದಾಖಲೆಗಳನ್ನ ಸೃಷ್ಠಿಸಿ ಸೀನಿಯರ್ ಆಫೀಸರ್ …
Read More »ಹೈದರಾಬಾದಿನಲ್ಲಿ 9.45 ಕೋಟಿ ರೂ. ನಗದು, 40 ಕೆಜಿ ಗಾಂಜಾ ವಶ
ಹೈದರಾಬಾದ್: 9.45 ಕೋಟಿ ರೂ. ನಗದು, 3.73 ಲಕ್ಷ ರೂ. ಮೌಲ್ಯದ ಮಾದಕ ವಸ್ತು, 9.15 ಲಕ್ಷ ಮೌಲ್ಯದ ಚಿನ್ನ, 135 ಲೀಟರ್ ಮದ್ಯ, 40 ಕೆಜಿ ಗಾಂಜಾ ಮತ್ತು 11 ಚೀಲ ಗುಟ್ಕಾವನ್ನು ಹೈದರಾಬಾದ್ ಪೊಲೀಸರು ಈ ತಿಂಗಳಿನಲ್ಲಿ ವಶಪಡಿಸಿಕೊಂಡಿದ್ದಾರೆ.ಗುರುವಾರ, ಬಂಜಾರ ಹಿಲ್ಸ್ ಎಸಿಪಿ ಕೆ.ಎಸ್. ರಾವ್ ಮತ್ತು ಅವರ ತಂಡ ಖಚಿತ ಮಾಹಿತಿ ಆಧಾರದ ಮೇಲ್ ಎರಡು ಸ್ಥಳಗಳಲ್ಲಿ ದಾಳಿ ನಡೆಸಿ ಝಹೀರಾ ನಗರದಲ್ಲಿ ಒಂದು ಕೋಟಿ …
Read More »ಮತದಾನದ ಆಧಾರದಲ್ಲಿ ಇದು ದೇಶದಲ್ಲೇ ಅತಿ ಚಿಕ್ಕ ಸಂಸದೀಯ ಕ್ಷೇತ್ರ
ನವದೆಹಲಿ: ಲಕ್ಷದ್ವೀಪ ಲೋಕಸಭಾ ಕ್ಷೇತ್ರವು ಒಂದು ವಿಶಿಷ್ಟವಾದ ಸಂಸದೀಯ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದೆ. ಏಪ್ರಿಲ್ 11 ರಂದು ಮೊದಲ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ. 2014 ರ ಪ್ರಕಾರ, ಮತದಾರರ ಸಂಖ್ಯೆಯ ಆಧಾರದ ಮೇಲೆ ಇದು ದೇಶದಲ್ಲಿ ಅತಿ ಚಿಕ್ಕ ಸಂಸದೀಯ ಕ್ಷೇತ್ರವಾಗಿದೆ.1967 ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಚುನಾವಣೆ ನಡೆಸಲಾಯಿತು. ಇದಕ್ಕೆ ಮುಂಚೆ, ಇಲ್ಲಿ ಪ್ರತಿನಿಧಿಯು ಅಧ್ಯಕ್ಷರಿಂದ ಆಯ್ಕೆಯಾಗುತ್ತಿದ್ದರು. 1957 ರಿಂದ 1967 …
Read More »ಧಾರವಾಡ ಆಯ್ತು, ಈಗ ಬೆಂಗಳೂರು ಸರದಿ, ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರ ಸಾವು! ಎಪಿಎಂಸಿ ವತಿಯಿಂದ ಪಾರ್ಕಿಂಗ್ ಗಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡ, ದುರಂತಕ್ಕೆ ಕಳಪೆ ಕಾಮಗಾರಿ ಕಾರಣ
ಬೆಂಗಳೂರು: ಧಾರವಾಡ ಕಟ್ಟಡ ಕುಸಿತ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ಬೆಂಗಳೂರಿನಲ್ಲೂ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.ಬೆಂಗಳೂರಿನ ಆರ್ ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿಗೆ ಕಟ್ಟಡದ ಸೆಟ್ರಿಂಗ್ ಕುಸಿದ ಪರಿಣಾಮ ಅಲ್ಲಿದ್ದ ಹಲವು ಕಟ್ಟಡ ಕಾರ್ಮಿಕರು ಅವಶೇಷಗಳಡಿಯಲ್ಲಿ ಕುಸಿದಿದ್ದರು. ಈ ಪೈಕಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮೃತರನ್ನು ರಾಕೇಶ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ.ರಾಕೇಶ್ ಹಾಗೂ …
Read More »ಇಂದು ಪ್ರಿಯಾಂಕಾ ಗಾಂಧಿ ರೋಡ್ ಶೋ
ಘಜಿಯಾಬಾದ್: ಎಪ್ರಿಲ್ 11ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಜಯಕ್ಕಾಗಿ ಪಣತೊಟ್ಟಿದ್ದಾರೆ. ಉತ್ತರ ಪ್ರದೇಶದ ಘಜಿಯಾಬಾದ್ ಕ್ಷೇತ್ರದಿಂದ ಡಾಲಿ ಶರ್ಮಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಏಪ್ರಿಲ್ 5 ರಂದು ಶುಕ್ರವಾರ ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸಿ ಅವರ ಪರ ಮತ ಯಾಚಿಸಲಿದ್ದಾರೆ.ಮಾಹಿತಿ ಪ್ರಕಾರ ಘಂತಾಘರ್ ಪ್ರದೇಶದಲ್ಲಿರುವ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





