ಬೆಂಗಳೂರು: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನವ್ಯ ಸಮಿತಿಯ ಮಹತ್ವದ ಸಭೆ ಶುಕ್ರವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಕುಮಾರಕೃಪಾದಲ್ಲಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಾಯಕರ ಪ್ರಮುಖ ಹೇಳಿಕೆಗಳು, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಬಗ್ಗೆ ಮಹತ್ವದ ಚರ್ಚೆಗಳು ನಡೆಯಲಿದೆ. ಇದಲ್ಲದೆ, ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ, ಸಿದ್ದರಾಮಯ್ಯ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಲ್ಲಿನ ಅಕ್ಕಿ ವಿತರಣೆ …
Read More »ನೋಟು ನಿಷೇಧ, ರಫೇಲ್ ಒಪ್ಪಂದ ಮೋದಿ ಸರ್ಕಾರದ ಅತೀ ದೊಡ್ಡ ಪ್ರಮಾದ ಹಾಗೂ ಲೂಟಿ: ಕಾಂಗ್ರೆಸ್.
ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಬೆಂಗಳೂರು: ನೋಟು ನಿಷೇಧ ಹಾಗೂ ರಫೇಲ್ ಒಪ್ಪಂದ ಕುರಿತಂತೆ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರು ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರದ ವಿರುದ್ಧ ಗುರುವಾರ ತೀವ್ರವಾಗಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಕೆ ಮಾತನಾಡಿದ ಅವರು, ನೋಟು ನಿಷೇಧ ಅತೀ ದೊಡ್ಡ ಪ್ರಮಾದವಾಗಿದ್ದು, ರಫೇಲ್ ಒಪ್ಪಂದ ಮೋದಿ ಸರ್ಕಾರದ ಅತೀ ದೊಡ್ಡ ಲೂಟಿಯಾಗಿದೆ …
Read More »Google ನೀಡುತ್ತಿದೆ ಒಂದು ಲಕ್ಷ ರೂ. ಗೆಲ್ಲುವ ಅವಕಾಶ..
ಗೂಗಲ್ ಕಳೆದ ವರ್ಷ ಭಾರತದಲ್ಲಿ Tez ಕಂಪನಿಯನ್ನು ಪ್ರಾರಂಭಿಸಿತು. ಗೂಗಲ್ Tez ನಂತೆಯೇ Google ನಿಂದ, ಬಿಗ್ ಬಜಾರ್ ಮತ್ತು ಇತರ ಕಂಪನಿಗಳಂತಹ ದೊಡ್ಡ ಬ್ರಾಂಡ್ಗಳನ್ನು ಪಾವತಿ ಆಯ್ಕೆಯಂತೆ ಸೇರಿಸುವ ಕುರಿತು ಮಾತನಾಡುತ್ತಿದ್ದಾರೆ. ಗೂಗಲ್ 15 ಸಾವಿರಕ್ಕೂ ಹೆಚ್ಚಿನ ಚಿಲ್ಲರೆ ವ್ಯಾಪಾರ ಮಳಿಗೆಗಳನ್ನು ಮತ್ತು 20,000 ಕ್ಕಿಂತ ಹೆಚ್ಚು ಉದ್ಯಮಿಗಳನ್ನು ತಲುಪುವ ಗುರಿ ಹೊಂದಿದೆ. 15 ಸಾವಿರಕ್ಕೂ ಹೆಚ್ಚಿನ ಚಿಲ್ಲರೆ ಅಂಗಡಿಗಳನ್ನು ತಲುಪಲು ಟಾರ್ಗೆಟ್ ದೊಡ್ಡ ಸರ್ಚ್ ಎಂಜಿನ್ ಗೂಗಲ್ …
Read More »ದಾಖಲೆ ಮಟ್ಟಕ್ಕೆ ಏರಿಕೆಯಾಯ್ತು ಡೀಸೆಲ್ ದರ, ಪೆಟ್ರೋಲ್ ಸಹ ದುಬಾರಿ
ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಪೆಟ್ರೋಲ್ ಲೀಟರಿಗೆ 22 ಪೈಸೆ ಹೆಚ್ಚಾದರೆ, ಡೀಸೆಲ್ ಲೀಟರಿಗೆ 28 ಪೈಸೆ ಏರಿಕೆಯಾಗಿದೆ. ಈ ಹೆಚ್ಚಳದ ನಂತರ, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 78.52 ಮತ್ತು ಡೀಸೆಲ್ಗೆ 70.21 ರೂ. ಇದು ಇದುವರೆಗಿನ ಅತ್ಯುನ್ನತ ದಾಖಲೆಯಾಗಿದೆ. ಇದಕ್ಕೆ ಮೊದಲು, ಆಗಸ್ಟ್ …
Read More »3 ಮಹಾನಗರ ಪಾಲಿಕೆ, 102 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ..
ಬೆಂಗಳೂರು: ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳು ಮತ್ತು ಇತರ 102 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರರು ಸೇರಿ ಒಟ್ಟು 9121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇವಿಎಂಗಳನ್ನು ಬಳಸಲಾಗುತ್ತಿದೆ. ಮತದಾನ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 5 ರವರೆಗೆ ನಡೆಯಲಿದೆ. ವಿವಿಧ ನಗರ ಸಭೆಗಳ 12 ವಾರ್ಡ್ಗಳು …
Read More »ಇನ್ನು ಮುಂದೆ ಟ್ರಾಫಿಕ್ ಪೊಲೀಸರಿಗೆ ದಿನಕ್ಕೆ 8 ಗಂಟೆ ಅವಧಿ ಡ್ಯೂಟಿ, ವಾರದ ರಜೆ ಕಡ್ಡಾಯ..
ಬೆಂಗಳೂರು: ಸಿಬ್ಬಂದಿ ಕೊರತೆ, ಕೆಲಸದಲ್ಲಿ ತೀವ್ರ ಒತ್ತಡ, ವಾರದ ರಜೆ ಇಲ್ಲ ಎಂದು ಹೇಳುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಸ್ವಲ್ಪ ನಿರಾಳತೆ ನೀಡಲು ಸಂಚಾರಿ ಪೊಲೀಸ್ ಇಲಾಖೆ ನಿರ್ಧರಿಸಿದೆ. ಸಂಚಾರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ಆರ್ ಹಿತೇಂದ್ರ ಸಭೆ ನಡೆಸಿ ಕಾನ್ಸ್ಟೇಬಲ್ ಗಳಿಗೆ ವಾರದ ರಜೆ ನೀಡದೆ ದುಡಿಸಿಕೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು ಮುಂದೆ ವಾರಕ್ಕೆ ಒಂದು ಕಡ್ಡಾಯವಾಗಿ ರಜೆ ನೀಡಬೇಕೆಂದು …
Read More »ಬಹುಕೋಟಿ ಮೇವು ಹಗರಣದ ಅಪರಾಧಿ ಲಾಲೂ ಮರಳಿ ಜೈಲಿಗೆ
ನವದೆಹಲಿ: ಬಹು ಕೋಟಿ ಮೇವು ಹಗರಣದ ಅಪರಾಧಿ ಆರ್ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಪೆರೋಲ್ ಅವಧಿ ಮುಗಿಯುವ ಮುನ್ನವೇ ಗುರುವಾರ ಪೊಲೀಸರಿಗೆ ಶರಣಾಗಿದ್ದಾರೆ. ಅನಾರೋಗ್ಯದ ಕಾರಣದ ಮೇಲೆ ರಾಂಚಿ ಕೋರ್ಟ್’ನಿಂದ ಆರು ವಾರಗಳ ಜಾಮೀನು ಪಡೆದಿದ್ದ ಲಾಲೂ ಪ್ರಸಾದ್ ಯಾದವ್ ಅವರು ರಾಂಚಿಯ ರಾಜೇಂದ್ರ ವೈದ್ಯಕೀಯ ಶಿಕ್ಷಣ ಸಂಸ್ಥೆ (ರಿಮ್ಸ್)ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹೆಚ್ಚುವರಿ ಚಿಕಿತ್ಸೆಗಾಗಿ ಅನಾರೋಗ್ಯದ ಆಧಾರದ …
Read More »ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಎಸ್ಐಟಿ ವಶಕ್ಕೆ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಎಸ್ಐಟಿ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ. ಬೆಳಗಾವಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಎಸ್ಐಟಿ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ. ಬೆಳಗಾವಿಯ ಗಣೇಶಪುರದ ನಿವಾಸಿ ಸಾಗರ ಲಾಖೆ(30) ಎಂಬಾತನನ್ನು ಬುಧವಾರ ತಡರಾತ್ರಿ ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಹತ್ಯೆ ಆರೋಪಿಗಳಿಗೆ ರೆಸಾರ್ಟ್’ನಲ್ಲಿ ಆಶ್ರಯ ನೀಡಿದ ಆರೋಪದ ಮೇಲೆ ಬೆಳಗಾವಿಯಲ್ಲಿ ಭರತ ಕರ್ನೆ ಎಂಬಾತನನ್ನು ಈ …
Read More »ಕೊಡಗು ನೆರೆ ಪರಿಹಾರಕ್ಕೆ NDRF ನಿಧಿಯಿಂದ ನೆರವು ನೀಡಿ: ಕೇಂದ್ರ ಗೃಹ ಸಚಿವರಿಗೆ ಸಿಎಂ ಕುಮಾರಸ್ವಾಮಿ ಮನವಿ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಕೊಡಗು ಪ್ರವಾಹ ಪರಿಹಾರಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿದರು. ನವದೆಹಲಿ: ರಾಜ್ಯದಲ್ಲಿ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ನೆರೆ ಪರಿಹಾರಕ್ಕೆ ಎನ್ಡಿಆರ್ಎಫ್ ನಿಧಿಯಿಂದ ಪರಿಹಾರ ನೀಡುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ನಿವಾಸದಲ್ಲಿ ಕೇಂದ್ರ ಗೃಹ …
Read More »ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಖಾಕಿ ಮಾಸ್ಟರ್ ಪ್ಲಾನ್..
ಅತ್ತ ರಾಪರ್ ಚಂದನ್ ಶೆಟ್ಟಿ ಗಾಂಜಾ ಸಾಂಗ್ ಹಾಡಿನ ರಾದ್ಧಾಂತ ಈಗ ತಣ್ಣಗಾಗಿದೆ. ಆದ್ರೇ, ಹುಬ್ಬಳ್ಳಿ-ಧಾರವಾಡದಲ್ಲೂ ಗಾಂಜಾ, ಡ್ರಗ್ಸ್ ಜಾಲ ಇರೋದೇನೂ ಸುಳ್ಳಲ್ಲ. ಏನೇ ಮುಂಜಾಗರೂಕತಾ ಕ್ರಮಕೈಗೊಂಡ್ರೂ ಯುವಕರೂ ಇದರ ಬಲೆಗೆ ಬೀಳೋದನ್ನ ತಪ್ಪಿಸೋದಕ್ಕಾಗ್ತಿಲ್ಲ. ಆದ್ರೀಗ ಹುಬ್ಬಳ್ಳಿ-ಧಾರವಾಡ ಪೊಲೀಸರು ಮಾದಕ ದ್ರವ್ಯ ಜಾಲಕ್ಕೆ ಕೊಳ್ಳಿ ಇಡೋಕೆ ಮುಂದಾಗಿದಾರೆ. ಧಮ್ ಮಾರೋ ಧಮ್.. ಅಂತ ಹಾಡು ಕೇಳೋಕೆ ಚೆಂದಗಿದ್ರೂ ಧಮ್ ಜಾಸ್ತಿ ಹೊಡೆದ್ರೇ ಹೊಗೆ ಹಾಕಿಸಿಕೊಳ್ಳೋದ್ ಗ್ಯಾರಂಟಿ. ಅರಿವಿನ ಕೊರತೆಯೋ ವ್ಯಸನದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





