Breaking News

ಯತ್ನಾಳ್‌ಗೆ ಎಚ್ಚರಿಕೆ ನೀಡಿದ ಇಸ್ಮಾಯಿಲ್ ತಮಟಗಾರ

ಧಾರವಾಡ: ಯತ್ನಾಳ್‌ಗೆ ತಾಕತ್ತಿದ್ದರೆ ಧಾರವಾಡಕ್ಕೆ ಬಂದು ಮಾತಾಡಲಿ. ಅವರ ಚೊಣ್ಣ ಬಿಚ್ಚಿ ಹೊಡೆಯದಿದ್ದರೆ ನನ್ನ ಹೆಸರು ಇಸ್ಮಾಯಿಲ್ ಅಲ್ಲ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಸವಾಲ್ ಹಾಕಿದ್ದಾರೆ.

ಮುಸ್ಲಿಂ ಮಹಿಳೆಯರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿತಾಗಿ ಮಾತಾಡಿದ್ದನ್ನು ಖಂಡಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಇಸ್ಮಾಯಿಲ್ ತಮಟಗಾರ, ಬಿಜೆಪಿಯವರು ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ, ಹಿಂದೆ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದಿದ್ದರು. ತ್ರಿಬಲ್ ತಲಾಖ್ ಬ್ಯಾನ್ ಮಾಡಿದಾಗ ಬಹಳ ಹೇಳಿಕೊಂಡಿದ್ದರು. ಆಗ ಇದೇ ಹಿಜಾಬ್ ಮಹಿಳೆಯರನ್ನು ಕರೆದುಕೊಂಡು ಸಿಹಿ ಹಂಚಿದ್ದರು. ಹಿಂದಿನ ವಿಡಿಯೋ ಬೇಕಾದರೆ ತೆಗೆದು ನೋಡಿ ಎಂದು ಅಂಜುಮನ್ ಎ ಇಸ್ಲಾಂ ಧಾರವಾಡ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ತಿರಗೇಟು ನೀಡಿದರು..

ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇವೆ ಎಂದೆಲ್ಲ ಹೇಳಿದ್ದರು, ಆದರೆ ಈಗ ಮುಸ್ಲಿಂ ಮಹಿಳೆಯರ ಬಗ್ಗೆ ಚಿಂತನೆ ಇಲ್ಲವೇ, ತ್ರಿಬಲ್ ತಲಾಖ್ ಬಗ್ಗೆ ಜಗತ್ತಿನೊಳಗೆ ಪ್ರಚಾರ ಮಾಡಿದ್ದರೆ. ಮುಸ್ಲಿಂ ಮಹಿಳೆಯರ ಹಿಜಾಬ್ ಪರ ಬಿಲ್ ಮಾಡಬಹುದಲ್ವಾ? ಬಿಜೆಪಿಯ ಕೆಲ ಮುಖಂಡರು ಅಗೌರವದಿಂದ ಮಾತನಾಡುವುದು ನಿಲ್ಲಿಸಲಿ, ನೀವು ಮಾತನಾಡಿದ್ದು ನಿಮ್ಮ ತಾಯಿ-ತಂಗಿಗೂ ಹತ್ತುತ್ತದೆ. ನಮ್ಮ ತಾಳ್ಮೆ ಪರೀಕ್ಷೆಯನ್ನು ಮಾಡಬೇಡಿ, ಬಾಬರಿ ಮಸೀದಿ ತೀರ್ಪು ಬಂದಾಗಲೂ ಗಲಾಟೆ ಮಾಡಿಲ್ಲ. ನ್ಯಾಯಾಲಯದ ತೀರ್ಪು ಪಾಲನೆ ಮಾಡಿದ್ದೇವೆ, ಹಿಜಾಬ್ ವಿಷಯದಲ್ಲಿಯೂ ನ್ಯಾಯಾಲಯದ ತೀರ್ಪು ಪಾಲನೆ ಮಾಡುತ್ತೇವೆ. ಆದರೆ ಅವಹೇಳನಕಾರಿ ಮಾತನಾಡಿ ತಾಳ್ಮೆ ಒಡೆಯಬೇಡಿ, ನಿಮ್ಮ ತಂಗಿಯರೂ ನಮ್ಮ ತಂಗಿಯರಿದ್ದಂತೆ. ನಾವು ತಾಳ್ಮೆಯಿಂದ ಇದ್ದೇವೆ. ನಿಮಗಿಂತ ಹತ್ತು ಪಟ್ಟು ಬೈಗುಳ ನಮಗೂ ಬರುತ್ತವೆ. ಯತ್ನಾಳ ಮಾತನಾಡುವುದಾದರೆ ಧಾರವಾಡಕ್ಕೆ ಬಂದು ಮಾತನಾಡಲಿ, ಮುಸ್ಲಿಂ ಮಹಿಳೆಯರ ಬಗ್ಗೆ ಬಂದು ಮಾತನಾಡಿ ತೋರಿಸು, ಆಗ ನಿನ್ನ ಚೊಣ್ಣ(ಚಡ್ಡಿ) ಬಿಚ್ಚಿ ಹೊಡೆಯದಿದ್ದರೆ ನನ್ನ ಹೆಸರು ಇಸ್ಮಾಯಿಲ್ ಅಲ್ಲ ಎಂದು ಹೇಳಿದರು ಎಚ್ಚರಿಕೆ ನೀಡಿದ್ದಾರೆ.

Share News

About admin

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *