ಕಾಸರಗೋಡು: ಬಟ್ಯಪದವಿನ ಜನರಲ್ ಸ್ಟೋರ್ ಮಾಲಕ ಶುಯೇಬ್ ಮೊಯಿನ್ ಶೇಖ್ ಅವರಿಗೆ ಬೆದರಿಕೆಯೊಡ್ಡಿದ ಬಳಿಕ ನಾಲ್ವರ ತಂಡ ಆಗಸದಲ್ಲಿ ಗುಂಡು ಹಾರಿಸಿ ಪರಾರಿಯಾದ ಘಟನೆ ಆ.17 ರಂದು ಸಂಭವಿಸಿದೆ. ಕಾರಿನಲ್ಲಿ ಬಂದ ರಹೀಂ ಖಾದರ್ ಹಾಗೂ ಇತರ ಇಬ್ಬರು ಸೇರಿ ಆಗಸಕ್ಕೆ ಗುಂಡು ಹಾರಿಸಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆರೋಪಿಗಳು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬ ಸಮಸ್ಯೆ ಘಟನೆಗೆ ಕಾರಣವೆನ್ನಲಾಗಿದೆ.
Read More »ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ
ಮಂಗಳೂರು: ಮಾರಾಟ ಮಾಡುವ ಉದ್ದೇಶದಿಂದ ಸ್ಕೂಟರ್ನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಜಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಳಲಿ ದ್ವಾರದ ಬಳಿ ವಾಹನ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ರಕ್ಷಿತ್ (23) ಹಾಗೂ ಅಕ್ಷಯ್ ಬಿ. (23) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಸುಮಾರು 1 ಕೆಜಿ 124 ಗ್ರಾಂ ಗಾಂಜಾ, ಡಿಜಿಟಲ್ ತೂಕದ ಯಂತ್ರ, ಜಿಪ್ಲಾಕ್ ಕವರ್ಗಳು, ಎರಡು ಮೊಬೈಲ್ಗಳು ಹಾಗೂ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಮಾರಿಪಳ್ಳದ ಶಾಕೀರ್ …
Read More »ವಿವಿಧೆಡೆ ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ: 7 ಜನ ಸೆರೆ; ಇಬ್ಬರು ಪರಾರಿ
ಉಡುಪಿ ಜಿಲ್ಲೆಯ ಕೊಡ್ಲಾಡಿ ಗ್ರಾಮದ ಮಾರ್ಡಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ಶಂಕರನಾರಾಯಣ ಠಾಣೆ ಪೊಲೀಸರು ದಾಳಿ ನಡೆಸಿ ಅಶೋಕ್ ಬೋವಿ, ಭಾಸ್ಕರ್ ನಾಯ್ಕ ಹಾಗೂ ಭಾಸ್ಕರ್ ಶೆಟ್ಟಿ ಎಂಬ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ₹1,390 ನಗದು ಹಾಗೂ ಇತರ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಇನ್ನೊಂದೆಡೆ ಮಡಾಮಕ್ಕಿ ಗ್ರಾಮದ ಅಡಿಕೆ ತೋಟದ ತೆರೆದ ಶೆಡ್ನಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಅಮಾಸೆಬೈಲು ಪೊಲೀಸರು ದಾಳಿ ನಡೆಸಿದ್ದಾರೆ. …
Read More »ಪ್ರಿಯಕರನ ಜೊತೆ ಸೇರಿ ನಾನೇ ಗಂಡ, ಮಗುವನ್ನು ಕೊಂದೆ – ಪೊಲೀಸರೆದುರು ವಿಷಕನ್ಯೆ ತಪ್ಪೊಪ್ಪಿಗೆ!
ಚಿಕ್ಕಬಾಣವಾರದಲ್ಲಿ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟ ತಂದೆ-ಮಗನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ಅಭಿನಂದನ್ ಹಾಗೂ ಆರು ವರ್ಷದ ಮಗ ಯದುವೀರ್ ಸಾವಿನ ಹಿಂದೆ ಪತ್ನಿ ಹರಿಣಿ ಹಾಗೂ ಆಕೆಯ ಪ್ರಿಯಕರ ವಿನಯ್ ಕೈವಾಡವಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರ ಪ್ರಕಾರ, ಘಟನೆ ನಡೆದ ರಾತ್ರಿ ಹರಿಣಿ ಮನೆಯ ಸಿಸಿ ಕ್ಯಾಮೆರಾಗಳನ್ನು ಆಫ್ ಮಾಡಿ ವಿನಯ್ನನ್ನು ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ಸೌಟ್ನಿಂದ ಅಭಿನಂದನ್ ತಲೆಗೆ …
Read More »ತರೀಕೆರೆ: ಕ್ಷುಲ್ಲಕ ಕಾರಣಕ್ಕೆ ತಮ್ಮನಿಂದ ಅಣ್ಣನ ಕೊಲೆ
ತರೀಕೆರೆ: ತಂಗಿಯ ಮಗಳ ಕೆನ್ನೆಗೆ ಹೊಡೆದನೆಂಬ ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನನ್ನು ಕೊಲೆಗೈದ ಘಟನೆ ಲಿಂಗದಹಳ್ಳಿ ಹೋಬಳಿಯ ನಂದಿಬಟ್ಟಲು ಕಾಲೊನಿಯಲ್ಲಿ ಭಾನುವಾರ ನಡೆದಿದೆ.ಕೃಷ್ಣ ನಾಯ್ಕ (38 ವರ್ಷ) ಕೊಲೆಯಾದವರು. ಕೃಷ್ಣನಾಯ್ಕನ ತಮ್ಮ ಯುವರಾಜನಾಯ್ಕ ತನ್ನ ಮನೆಯಲ್ಲಿ ತಂಗಿಯ ಮಗಳನ್ನು ಸಾಕಿಕೊಂಡಿದ್ದ. ಆಕೆಯನ್ನು ಭಾನುವಾರ ಬೆಳಗಿನ ವೇಳೆಯಲ್ಲಿ ಹಸಿವಾಗಿದೆ ಊಟ ಬಡಿಸು ಎಂದು ಕೃಷ್ಣನಾಯ್ಕ ಕೇಳಿದ್ದಾನೆ. ಊಟ ಬಡಿಸಲು ಬರದೆ ಹಗಲಿನ ವೇಳೆಯಲ್ಲಿ ನಿದ್ರೆ ಮಾಡುತ್ತಿದ್ದಾಳೆ ಎಂದು ಕುಪಿತಗೊಂಡ ಕೃಷ್ಣನಾಯ್ಕ ಬಾಲಕಿಯ …
Read More »ಮಧುಗಿರಿ ಬಳಿ ಗಾಂಜಾ ಮಾರಾಟ ಜಾಲ ಪತ್ತೆ, ಮೂವರ ಬಂಧನ!
ಮಧುಗಿರಿ: ತಾಲೂಕಿನ ಕಸಿನಾಯಕನಹಳ್ಳಿ ಗೇಟ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಕೊಡಿಗೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಿಲಾನ್ (30), ಕಲ್ಯಾಣಕುಮಾರ್ (27) ಹಾಗೂ ಚರಣ್ (26) ಬಂಧಿತ ಆರೋಪಿಗಳು. ಮಧುಗಿರಿ-ಹಿಂದೂಪುರ ಮುಖ್ಯ ರಸ್ತೆಯ ಕಸಿನಾಯಕನಹಳ್ಳಿ ಗೇಟ್ ಬಳಿ ಸಾರ್ವಜನಿಕರು ಹಾಗೂ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರನ್ನೂ ವಶಕ್ಕೆ ಪಡೆದು ಗಾಂಜಾ ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು …
Read More »ತಾಯಿ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ
ದಾವಣಗೆರೆ: ಜಮೀನು ವಿಚಾರವಾಗಿ ತಾಯಿಯನ್ನು ಕೊಲೆ ಮಾಡಿದ್ದ ಮಗ ಲೋಕೇಶ ನಾಯ್ಕ (45)ಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಿದೆ. 2023ರ ಅ.10ರಂದು ನೇರ್ಲಿಗೆ ಗ್ರಾಮದಲ್ಲಿ ಶಾಂತಿ ಬಾಯಿ (65) ಅವರನ್ನು ಕೊಲೆ ಮಾಡಲಾಗಿತ್ತು. ಶಾಂತಿ ಬಾಯಿ ಮತ್ತು ಪತಿ ಚಂದ್ರ ನಾಯ್ಕ ಅವರಿಗೆ ಮೂರು ಎಕರೆ ಜಮೀನಿತ್ತು. ಪುತ್ರಿ ಒಂದು ಎಕರೆ ಹಾಗೂ ಪುತ್ರ ಎರಡು ಎಕರೆ …
Read More »ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ಪ್ರಕರಣ, ಜೆಡಿಎಸ್ನ ಗೊಟ್ಟಿಗೆರೆ ಮಂಜುಗೆ ಜಾಮೀನು
ಬೆಂಗಳೂರು: ಕರ್ತವ್ಯನಿರತ ಸಂಚಾರ ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿ ಹಲ್ಲೆಗೆ ಯತ್ನಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜುಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹುಳಿಮಾವು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಅರುಣ್, ಮಂಜು ಅವರ ಕಾರನ್ನು ತಡೆದಿದ್ದರು. ಇದನ್ನು ಪ್ರಶ್ನಿಸಿದ ಮಂಜು ವಾಗ್ವಾದಕ್ಕಿಳಿದು, ಸಿಬ್ಬಂದಿಯ ಕಾಲರ್ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಘಟನೆಯ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ …
Read More »ರಜೆಯಲ್ಲಿ ಮಜಾ ಮಾಡಲು ಬಂದು ಕಂಬಿ ಎಣಿಸಿದ 6 ಜನ ಯುವಕರು
ಭಟ್ಕಳ: ಕಂಪನಿ ನೀಡಿದ್ದ ಸ್ವಾತಂತ್ರ್ಯೋತ್ಸವ ರಜೆಯಲ್ಲಿ ಮುರುಡೇಶ್ವರಕ್ಕೆ ಬಂದಿದ್ದ ಹುಬ್ಬಳ್ಳಿ ಹಾಗೂ ಗದಗ ಮೂಲದ ಆರು ಮಂದಿ ಗಾಂಜಾ ಸೇವಿಸಿ ಪೊಲೀಸರ ಅತಿಥಿಯಾಗಿದ್ದಾರೆ. ಮುರುಡೇಶ್ವರದ ವಿವಿಧೆಡೆ ಗಾಂಜಾ ಸೇವಿಸಿ ಕೆಲವರು ಅನುಚಿತವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಈ ಸಂಬಂಧ ಆರು ಮಂದಿಯ ವಿರುದ್ಧ …
Read More »ಅನೈತಿಕ ಸಂಬಂಧಕ್ಕೆ ಅಡ್ಡಿ; ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಂದ ಪಾಪಿ ಮಗಳು
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳದಲ್ಲಿ ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ (62) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ತಂದೆ ವಿರೋಧಿಸಿದ್ದಕ್ಕೆ ಪುತ್ರಿ ಪ್ರಿಯಾಂಕಾ ಸುರೇಶ ಮಸಳಿ (35) ತನ್ನ ಪ್ರಿಯಕರ ಸಂತೋಷ ಸಿಂಧೆ (32) ಜೊತೆ ಸೇರಿ ತಂದೆಯನ್ನು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. ಆಸ್ತಿ ವಿಚಾರವಾಗಿ ತಂದೆ-ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆಗಸ್ಟ್ 15ರಂದು ಮತ್ತೆ ಗಲಾಟೆ ನಡೆದ ಬಳಿಕ ಪ್ರಿಯಾಂಕಾ ತನ್ನ ಪ್ರಿಯಕರನನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





