ಯಾದಗಿರಿ: ಸೋಮವಾರ ಸಿಡಿಲು ಬಡಿದು ನಾಲ್ವರು ಮೃತಪಟ್ಟದ್ದರು ಇಂದು ಯಾದಗಿರಿ ತಾಲ್ಲೂಕಿನ ಜಿನಕೇರಾ ತಾಂಡಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ತಾಂಡಾಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇಂತಹ ಘಟನೆಗಳು ಆಗದಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಆ ಕುಟುಂಬದ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಸರ್ಕಾರದಿಂದ ಏನೆಲ್ಲ ಪರಿಹಾರ ಇದೆಯೋ ಅದನ್ನು ಆ ಕುಟುಂಬಗಳಿಗೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ …
Read More »ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳರ ಹಾವಳಿ
ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳ್ಳತನ ಪ್ರಕರಣಗಳಿಂದಾಗಿ ಜನರು ನಿದ್ರೆಗೆಡುವಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದ ಬೈಕ್ ಕಳವು, ಮನೆಯ ಮುಂದೆ ನಿಲ್ಲಿಸಿದ ಸರಕು ವಾಹನ ಕಳವು, ಕೃಷಿ ಪಂಪ್ಸೆಟ್ ಕಳ್ಳತನ, ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಮತ್ತು ಪುರುಷರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು, ಜೇಬುಗಳವು, ಮನೆಯ ಬೀಗ ಮುರಿದು ಒಡವೆಗಳ ಕಳವು, ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಹೀಗೆ ವಿವಿಧ …
Read More »ವಿಜಯಪುರದಲ್ಲಿ ಜಲಾವೃತಗೊಂಡ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ
ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ನಗರದ ಕೆಲ ಕಾಲೋನಿಗಳಲ್ಲಿ ಮನೆಗಳು ಜಲಾವೃತಗೊಂಡಿದ್ದು, ಜಿಲ್ಲಾಧಿಕಾರಿ ಟಿ.ಭೂಬಾಲನ್ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧಾರಾಕಾರ ಮಳೆಗೆ ಜನತೆ ತತ್ತರಿಸಿ ಹೋಗಿದ್ದಾರೆ, ಮನೆಗಳಿಗೆ ನೀರು ನುಗ್ಗಿ ಪರದಾಡುವಂತಾಗಿದೆ. ಹೀಗಾಗಿ ನಗರದ ಮುಜಾವರ್ ಕಾಲೋನಿ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದರು. ಇದೇ ವೇಳೆ, ಜಿಲ್ಲಾಧಿಕಾರಿಗಳ ವಾಹನ ಆಗಮಿಸಿತು. ಆಗ ರಸ್ತೆ ತಡೆಯುವವರ ಮನವೊಲಿಸಲು ಗನ್ ಮ್ಯಾನ್ ಪ್ರಯತ್ನಿಸಿದರು. ಇದರಿಂದ …
Read More »ಭಾರೀ ಮಳೆ: ಸಿಡಿಲಬ್ಬರಕ್ಕೆ ಐವರು ಸ್ಥಳದಲ್ಲೇ ಸಾವು
ಯಾದಗಿರಿ: ಯಾದಗಿರಿ ಜಿಲ್ಲೆಯಾದ್ಯಂತ ಸೋಮವಾರ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು, ಸಿಡಿಲ ಅಬ್ಬರಕ್ಕೆ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಜನಕೇರ ತಾಂಡದಲ್ಲಿ ದುರ್ಘಟನೆ ನಡೆದಿದೆ. ಚೇನು (22) ಕಿಶನ್ (30) ಸುಮಿ ಬಾಯಿ (30) ಚನ್ನಪ್ಪ ತಂದೆ ನ್ಯಾಮು ಮೃತ ದುರ್ದೈವಿಗಳು. ಮೃತರೆಲ್ಲರು ಜೀನಕೇರ ತಾಂಡದ ನಿವಾಸಿಗಳು. ಜಮೀನು ಕೆಲಸಕ್ಕೆ ಹೋದಾಗ ಬಿರುಗಾಳಿ ಸಹಿತ ಮಳೆಗೆ ಗುಡಿಯಲ್ಲಿ ಕುಳಿತ್ತಿದ್ದ ವೇಳೆ ಅವಘಡ ಸಂಭವಿಸಿದೆ. …
Read More »ಎಲ್ಲಾ ಮುಸ್ಲಿಂ ದೇಶಗಳು ಭಾರತದ ವಿರೋಧಿಗಳಲ್ಲ, ಕೆಲವು ದೇಶಗಳು ಉತ್ತಮ ಸ್ನೇಸಸಂಬಂಧ ಹೊಂದಿವೆ: ಸಚಿವ ಸತೀಶ ಜಾರಕಿಹೊಳಿ
ಚಿಕ್ಕೋಡಿ: ರಾಜ್ಯದ ಕೆಲವೆಡೆ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಪ್ಯಾಲಿಸ್ತೇನ್ ಧ್ವಜ ಹಾರಿಸಿ, ಪ್ಯಾಲಿಸ್ತೇನ್ ಪರ ಘೋಷಣೆ ಕೂಗಿದ್ದರು. ಪಾಕಿಸ್ತಾನ, ಇರಾನ್ ಧ್ವಜವನ್ನೂ ಹಾರಿಸಿದ್ದಾರೆ ಎನ್ನಲಾಗಿತ್ತು. ಇದೀಗ ಪ್ಯಾಲಿಸ್ತೇನ್ ಧ್ವಜ ಹಾರಾಟದ ಕುರಿತಂತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ವಿರೋಧಿ ದೇಶದ ಧ್ವಜ ಹಾರಾಡಿದ್ರೆ ಕ್ರಮ ಕೈಗೊಳ್ಳಬಹುದು. ಆದರೆ ಎಲ್ಲಾ ಮುಸ್ಲಿಂ ಕಂಟ್ರಿಗಳೂ ಭಾರತ ದೇಶದ ವಿರೋಧಿಗಳಲ್ಲ. ಭಾರತದ ಜೊತೆಗೆ ಕೆಲವು ಮುಸ್ಲಿಂ ದೇಶಗಳು ಸ್ನೇಹ …
Read More »ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸತತವಾಗಿ 5 ಗಂಟೆಗೂ ಅಧಿಕ ಕಾಲ ಭಾರೀ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತಗೊಂಡು, ಮನೆ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಪರದಾಡುವಂತಾಗಿದೆ. ಹಳ್ಳ ಕೊಳ್ಳಗಳು ತುಂಬಿದ್ದು, ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಸ್ಥಾನ ಜಲಾವೃತಗೊಂಡಿದೆ. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಆರಂಭವಾದ ಮಳೆ ಇಡೀ ರಾತ್ರಿ ಸತತವಾಗಿ ಅಬ್ಬರಿಸಿತು. ನಗರದಲ್ಲಿ ಜೋರು ಮಳೆ ಸುರಿದರೆ, ಜಿಲ್ಲೆಯ ವಿವಿಧೆಡೆ ಗುಡುಗು ಸಹಿತವಾಗಿ ಸುರಿಯಿತು. …
Read More »ಮಾನವೀಯತೆ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ ಹೊರತು ಯುದ್ಧಭೂಮಿಯಲ್ಲಿಲ್ಲ: ಪ್ರಧಾನಿ ಮೋದಿ
ನ್ಯೂಯಾರ್ಕ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದಾರೆ. 79ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡಿದ ಪಿಎಂ ನರೇಂದ್ರ ಮೋದಿ, ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆಯೇ ಹೊರತು ಯುದ್ಧಭೂಮಿಯಲ್ಲಿ ಇಲ್ಲ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಸಂಸ್ಥೆಗಳಲ್ಲಿನ ಸುಧಾರಣೆಗಳು ಮುಖ್ಯ ಎಂದು ಮೋದಿ ಹೇಳಿದ್ದಾರೆ. ಮೂರು ದಿನಗಳ ಭೇಟಿಗಾಗಿ ಅಮೇರಿಕಾದಲ್ಲಿರುವ ಪ್ರಧಾನಿ ಮೋದಿ ಅವರು ತಮ್ಮ ದ್ವಿಪಕ್ಷೀಯ ಮಾತುಕತೆಯ …
Read More »ತಾಲೂಕಿನ ವಿವಿಧೆಡೆ ಮಳೆ: ರೈತರ ಮೊಗದಲ್ಲಿ ಮಂದಹಾಸ
ಅಫಜಲಪುರ: ತಾಲ್ಲೂಕಿನ ವಿವಿಧೆಡೆ ಅಲ್ಲಲ್ಲಿ ಧಾರಾಕಾರ ಮಳೆ ಆಗಿದ್ದು ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲವಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ, ಹತ್ತಿ ಮತ್ತು ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ಮಳೆ ಅವಶ್ಯಕತೆ ಇತ್ತು. ಮಳೆ ಬಂದಿರುವುದು ಒಳ್ಳೆಯದಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು. ಮಾಶಾಳದ ರೈತರಾದ ಸಂತೋಷ ಗಂಜಿ, ಚಂದ್ರಶೇಖರ್ ಕರ್ಜಿಗಿ ಮತ್ತು ಚಂದ್ರರಾಮ ಬಳಗೊಂಡೆ ಮಳೆ ಬಗ್ಗೆ ಮಾಹಿತಿ ನೀಡಿ, ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆಯುತ್ತಾ ಬಂದರೂ …
Read More »ದೇವಸ್ಥಾನಗಳ ನಿರ್ವಹಣೆಗೆ ಸೂಕ್ತ ಕಾನೂನು ರಚನೆಯಾಗಬೇಕು: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ರಾಜ್ಯದಲ್ಲಿ 1.80 ಲಕ್ಷ ದೇವಸ್ಥಾನಗಳಿದ್ದು, ಇದರಲ್ಲಿ 34 ಸಾವಿರ ದೇವಸ್ಥಾನಗಳು ಮಾತ್ರ ಮುಜರಾಯಿ ಇಲಾಖೆ ಅಧೀನದಲ್ಲಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ಅಧೀನದಿಂದ ಹೊರಗೆ ಇಡಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ರೀತಿಯಲ್ಲಿ ಸರ್ಕಾರದ ಅಧೀನದಿಂದ ದೇವಸ್ಥಾನಗಳನ್ನು ಹೊರಗಿಡಬೇಕು ಎಂಬ ಮಠಾಧೀಶರ ಆಗ್ರಹಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ನಮ್ಮ ರಾಜ್ಯದಲ್ಲಿ ಯಾವುದೇ ಮಠಗಳು ಸರ್ಕಾರದ ಅಧೀನದಲ್ಲಿ ಇಲ್ಲ. …
Read More »ಕೋಲ್ಕತ್ತಾದಲ್ಲಿ ಹೊಸ ಸೆಮಿಕಂಡಕ್ಟರ್ ಘಟಕ ಸ್ಥಾಪನೆ
ನವದೆಹಲಿ: ಭಾರತದೊಂದಿಗೆ ಬಾಂಧವ್ಯವನ್ನು ಬಲಪಡಿಸಲು ಅಮೆರಿಕ ಉತ್ಸುಕವಾಗಿದೆ ಎಂದು ಸೂಚಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಮೆರಿಕದ ರಕ್ಷಣಾ ಸಂಸ್ಥೆ ಜನರಲ್ ಅಟಾಮಿಕ್ಸ್ನಿಂದ 31 ದೀರ್ಘಾವಧಿಯ ಎಂಕ್ಯೂ-9ಬಿ ಸಶಸ್ತ್ರ ಡ್ರೋನ್ಗಳ ಖರೀದಿ ಪ್ರಗತಿ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹೊಸ ಸೆಮಿಕಂಡಕ್ಟರ್ ಘಟಕ ಸ್ಥಾಪನೆ ಕುರಿತು ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂವಾದದಲ್ಲಿ ಜೋ ಬೈಡನ್, ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ವಿಲಿಟರಿ ನಂಟನ್ನು ಹೆಚ್ಚಿಸುವ ಮಾರ್ಗಗಳು ಸೇರಿದಂತೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





