ಕೊಪ್ಪಳ ಕ್ಷೇತ್ರದ ಶಾಸಕ ಕುರುಬ ಸಮುದಾಯದ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ಸಿಗದ್ದಕ್ಕೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಅಶೋಕ ವೃತ್ತದಲ್ಲಿ ಸೋಮವಾರ ಹಿಟ್ನಾಳ ಬೆಂಬಲಿಗರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹಾಗೂ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳ ಕ್ಷೇತ್ರಕ್ಕೆ ಸಚಿವ ಸ್ಥಾನ ತಪ್ಪಲು ಸಿದ್ದರಾಮಯ್ಯ ಕಾರಣ. ರಾಘವೇಂದ್ರ ಹಿಟ್ನಾಳ ಸತತ ಮೂರು ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನ ಕೊಟ್ಟಿಲ್ಲ …
Read More »ಭ್ರಷ್ಟರೊಡನೆ ವೇದಿಕೆಯೇರಲ್ಲ ಎಂದ ಪೊಲೀಸ್ – ಶಾಸಕನ ಮಗನಿಂದ ಹಲ್ಲೆ!
ಭದ್ರಾವತಿಯ ಜನ್ನಾಪುರದ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಎಸ್. ಜಾನಕಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಉಮೇಶ್ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ಶಾಸಕರ ಮಗ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದ ವೇಳೆ, ಉಮೇಶ್ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಆದರೆ, “ನಾನು ಭ್ರಷ್ಟರ ಜೊತೆ ಒಂದೇ ವೇದಿಕೆಯಲ್ಲಿ ಕೂರುವುದಿಲ್ಲ” ಎಂದು ಉಮೇಶ್ ಆಹ್ವಾನ ನಿರಾಕರಿಸಿದ್ದರಿಂದ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ. ಬಳಿಕ ಶಾಸಕರ ಬೆಂಬಲಿಗರು ಉಮೇಶ್ ಹಾಗೂ ಅವರ ಸಂಬಂಧಿ ಸುಹಾಸ್ …
Read More »ಟೋಲ್ ಸಿಬ್ಬಂದಿಗೆ ಗನ್, ಲಾಂಗ್ ತೋರಿಸಿ ಬೆದರಿಕೆ; ಬ್ಯಾರಿಕೇಡ್ ಗೆ ಕಾರು ಗುದ್ದಿಸಿ ಹೋದ ಪುಂಡರು
ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಚೌಲಗೆರೆ ಟೋಲ್ಪ್ಲಾಜಾದಲ್ಲಿ ಸುಂಕ ಪಾವತಿಸಲು ನಿರಾಕರಿಸಿದ ಐವರು ಪುಂಡರು ಟೋಲ್ ಸಿಬ್ಬಂದಿಗೆ ಗನ್ ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಮಾರುತಿ 800 ಕಾರಿನಲ್ಲಿ ಬಂದ ಆರೋಪಿಗಳು ಟೋಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಆರೋಪಿಗಳು ಗನ್ ಹಾಗೂ ಲಾಂಗ್ ತೋರಿಸಿ ಟೋಲ್ ಬ್ಯಾರಿಯರ್ ತೆರೆಯುವಂತೆ ಬೆದರಿಕೆ ಹಾಕಿದ್ದಾರೆ. ಯಾವುದೇ ಸುಂಕ ಪಾವತಿಸದೇ ಕಾರನ್ನು …
Read More »ತುಮಕೂರು ಸೈಬರ್ ವಂಚನೆ ₹20 ಲಕ್ಷ ಕಳೆದುಕೊಂಡ ವ್ಯಕ್ತಿ
ತುಮಕೂರು: ಅಧಿಕ ಲಾಭದ ಆಮಿಷ ತೋರಿಸಿ ಸೈಬರ್ ವಂಚಕರು ಕೊರಟಗೆರೆ ತಾಲೂಕಿನ ಸಿಂಗ್ರಿಹಳ್ಳಿಯ ಎಸ್.ಕೆ. ಮಂಜುನಾಥ್ ಅವರಿಂದ ₹20.37 ಲಕ್ಷ ವಂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಷೇರು ಮಾರುಕಟ್ಟೆ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರನ್ನು ವಾಟ್ಸ್ಆಪ್ ಗುಂಪಿಗೆ ಸೇರಿಸಿ ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು. ಆರೋಪಿಗಳ ಸೂಚನೆಯಂತೆ ಮಂಜುನಾಥ್ ಹಂತ ಹಂತವಾಗಿ ₹21.12 ಲಕ್ಷವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು, ಕೇವಲ ₹75 ಸಾವಿರ ಮಾತ್ರ ಮರಳಿದೆ. ಬಳಿಕ ಟ್ರೇಡಿಂಗ್ …
Read More »ಮಹಿಳೆಗೆ ವೀಡಿಯೋ ಕರೆ ಮಾಡಿ ಖಾಸಗಿ ಅಂಗ ಪ್ರದರ್ಶನ – ವಿಕೃತಕಾಮಿ ಅರೆಸ್ಟ್!
ಬೆಂಗಳೂರು: ಫೇಸ್ಬುಕ್ನಲ್ಲಿ ಪರಿಚಯವಾದ ಮಹಿಳೆಗೆ ವೀಡಿಯೋ ಕರೆ ಮಾಡಿ ಖಾಸಗಿ ಅಂಗ ಪ್ರದರ್ಶಿಸಿ ಅಶ್ಲೀಲವಾಗಿ ವರ್ತಿಸಿದ್ದ ತಮಿಳುನಾಡು ಮೂಲದ ಯುವಕನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತ್ಯಾಗರಾಜನಗರ ನಿವಾಸಿ 34 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಫೇಸ್ಬುಕ್ನಲ್ಲಿದ್ದ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಮೊದಲು ಸಂದೇಶ ಕಳುಹಿಸಿದ್ದ. ಬಳಿಕ ಜುಲೈ 30ರಂದು ವೀಡಿಯೋ ಕರೆ ಮಾಡಿ ಅಶ್ಲೀಲವಾಗಿ ವರ್ತಿಸಿ ಮಹಿಳೆಗೆ …
Read More »ಹುಣ್ಣಿಮೆ ದಿನವೇ ನಡೀತು ಘೋರ ಕೃತ್ಯ; ಹಸಿರು ಸೀರೆ, ಬಳೆ ಜೊತೆ ಅರೆಬೆಂದ ಸ್ಥಿತಿಯಲ್ಲಿ ಯುವತಿ ಶವ, ಅಸಲಿಗೆ ಅಲ್ಲಿ ಆಗಿದ್ದೇನು?
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಅಶ್ರಿಹಾಳ್ ಗ್ರಾಮದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಹುಣ್ಣಿಮೆಯ ಮರುದಿನ ಶಿವಕುಮಾರ್ ಎಂಬುವರ ಜಮೀನಿನಲ್ಲಿ ಶವ ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯುವತಿಯನ್ನು ವಾಮಾಚಾರಕ್ಕೆ ಬಲಿ ಕೊಟ್ಟಿರಬಹುದೇ ಅಥವಾ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಸುಟ್ಟು ಹಾಕಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಪ್ರದೇಶ ಬೆಟ್ಟಗುಡ್ಡಗಳಿಂದ ಕೂಡಿದ್ದು, ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ ತನಿಖೆ ಪೊಲೀಸರಿಗೆ ಸವಾಲಾಗಿದೆ. …
Read More »ಮದುವೆಯಾಗಿ ಮೂರೇ ತಿಂಗಳು, ಆಷಾಢದ ಬಳಿಕ ಗಂಡನ ಜೊತೆ ಹೋದವಳು ಹೆಣವಾದಳು, ನವವಿವಾಹಿತೆ ಬಾಳಲ್ಲಿ ವಿಧಿಯಾಟ
ಯಾದಗಿರಿ: ಮದುವೆಯಾಗಿ ಕೇವಲ ಮೂರು ತಿಂಗಳಾಗಿದ್ದ ನವವಿವಾಹಿತೆ ಕಾಲುವೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಸಾಯಿನಗರ ಗ್ರಾಮದಲ್ಲಿ ನಡೆದಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ತಾಯಿ ಮನೆಗೆ ಹೋಗಿದ್ದ ರೇಣುಕಾ, ಗಂಡ ಕರೆಪ್ಪ ಯಾಳಗಿ ಜೊತೆ ಅತ್ತೆ ಮನೆಗೆ ಮರಳುವ ವೇಳೆ ಬೈಕ್ ನಿಯಂತ್ರಣ ತಪ್ಪಿ ಎಡದಂಡೆ ಕಾಲುವೆಗೆ ಬಿದ್ದಿದೆ. ಈಜು ಬಲ್ಲಿದ್ದ ಕರೆಪ್ಪ ದಡ ಸೇರಿದ್ದರೆ, ರೇಣುಕಾ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾಳೆ. ಆಕೆಯ ಮೃತದೇಹಕ್ಕಾಗಿ ಶೋಧ …
Read More »ಹೆಂಡ್ತಿ ಕೊಂದು ಸಾವನ್ನಪ್ಪಿದ ಗಂಡ! ಇನ್ನೂ ಸಿಗದ ಮೃತದೇಹ, ಅಕ್ಕನ ಬಗ್ಗೆ ಕಣ್ಣೀರು ಹಾಕಿ ತಮ್ಮ ಹೇಳಿದ್ದೇನು?
ಹಾಸನ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ವಿಡಿಯೋ ಸಂದೇಶ ಬಿಟ್ಟು, ಬಳಿಕ ರಘು ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಕೆಸಗೋಡು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಬಳಿಕ ಪತ್ನಿ ಗಗನಾ ನಾಪತ್ತೆಯಾಗಿದ್ದು, ಆಕೆಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ನಡುವೆ ಮೃತ ಗಗನಾಳ ಸಹೋದರ ಯೋಗೇಶ್ ವಿಡಿಯೋ ಬಿಡುಗಡೆ ಮಾಡಿ, ರಘು …
Read More »ಅಂದರ್ ಬಾಹರ್ ಅಡ್ಡೆ ಮೇಲೆ ಬೆಳಗಾವಿ ಪೊಲೀಸರ ದಾಳಿ: 15 ಜನ ವಶಕ್ಕೆ*
ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟಿ ಇಸ್ಪೀಟ ಆಡುತ್ತಿದ್ದವರ ಮೇಲೆ ಬೆಳಗಾವಿ ಗ್ರಾಮೀಣ ಪೊಲೀಸರು ದಾಳಿ ನಡೆಸಿ 15 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಾಘವಾಡೆ ಗ್ರಾಮದ ಮಾರ್ಖಂಡೆಯ ನಗರದಲ್ಲಿ ನಡೆದ ದಾಳಿಯಲ್ಲಿ ಆರೋಪಿಗಳಿಂದ ₹69,150 ನಗದು ಹಾಗೂ ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಲಾಗಿದೆ. ಪಿಎಸ್ಐ ಸಂತೋಷ ದಳವಾಯಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 87 ಅಡಿಯಲ್ಲಿ ಪ್ರಕರಣ …
Read More »ಡೇಟಿಂಗ್ ಆಪ್ನಲ್ಲಿ ಪರಿಚಯ, ಸಲಿಂಗ ಕಾಮದ ಆಮಿಷವೊಡ್ಡಿ ದರೋಡೆ: ಪೊಲೀಸರ ಬಲೆಗೆ ಬಿತ್ತು ಖತರ್ನಾಕ್ ಗ್ಯಾಂಗ್!
ಬೆಂಗಳೂರು: ಡೇಟಿಂಗ್ ಆ್ಯಪ್ಗಳ ಮೂಲಕ ಯುವಕರನ್ನು ಪರಿಚಯಿಸಿಕೊಂಡು ನಿರ್ಜನ ಪ್ರದೇಶಗಳಿಗೆ ಕರೆಸಿಕೊಂಡು ದರೋಡೆ ಮಾಡುತ್ತಿದ್ದ ಗ್ಯಾಂಗ್ನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ನ ವಿಶಾಲ್, ಅಜಯ್, ಸಂಜಯ್ ಹಾಗೂ ಸೂರ್ಯ ಬಂಧಿತರಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತರನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ. ‘ಗ್ರೈಂಡರ್’ ಆ್ಯಪ್ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿ ಬಂದಿದ್ದ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜೀವ ಬೆದರಿಕೆ ಹಾಕಿ ₹45 ಸಾವಿರವನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡು, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





