Breaking News

BigTv News

ಮಿಂಟ್ ಸಸ್ಪೆನಬಿಲಿಟಿ ಸಮಿಟ್ ನ 3ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿದ ಜೋಶಿ

ನವದೆಹಲಿ : ಭಾರತವು ದೇಶದಲ್ಲಿ ಸಮತೋಲಿತ ಇಂಧನ ಬಳಕೆಯತ್ತ ಹೇಗೆ ಮುನ್ನಡೆಯುತ್ತಿದೆ . ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ನವೀಕರಿಸಬಹುದಾದ ಇಂಧನ ಮೂಲಗಳನ್ನು ಉತ್ತೇಜಿಸುವ ಮೂಲಕ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ವಿವಿಧ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ . ಭಾರತವು ತೀವ್ರ ಹವಾಮಾನ ಸವಾಲುಗಳನ್ನು ಎದುರಿಸುತ್ತಿದೆ ಎಂದು ಕೇಂದ್ರ ಸಚಿವ ಶ್ರೀ ಪ್ರಲಾದ ಜೋಶಿ ಹೇಳಿದರು. ಮಿಂಟ್ ಸಸ್ಪೆನಬಿಲಿಟಿ ಸಮಿಟ್ ನ 3ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿ …

Read More »

ನಿಮಿಷಕ್ಕೆ 4.50 ಕೋಟಿ ರೂಪಾಯಿ ಸಂಭಾವನೆ ಪಡೆದು ಅಜಯ್ ದೇವಗನ್

ಸಿನಿರಂಗದಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ರಾಜಮೌಳಿ ನಿರ್ದೇಶನದ RRR ನಲ್ಲಿ ನಟಿಸಿದ್ದ ಅಜಯ್ ದೇವಗನ್, ಚಿತ್ರದಲ್ಲಿ ಕೇವಲ 8 ನಿಮಿಷ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರಕ್ಕೆ 35 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ನಿಮಿಷಕ್ಕೆ 4.50 ಕೋಟಿ ರೂಪಾಯಿ ಸಂಭಾವನೆ ಪಡೆದು ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ. ಅಮೀರ್ ಖಾನ್, ಶಾರುಖ್ ಖಾನ್, ಪ್ರಭಾಸ್, ರಜನಿಕಾಂತ್, ಸಲ್ಮಾನ್ ಖಾನ್ ಮತ್ತು ದಳಪತಿ ವಿಜಯ್ ಪ್ರತಿ …

Read More »

ಕಣಿವೆಗೆ ಬಿದ್ದ ಟ್ರಕ್: ಮೂವರು ಯೋಧರು ಬಲಿ

ಅರುಣಾಚಲ : ಪ್ರದೇಶದ ಸುಬನ್ನಿರಿ ಜಿಲ್ಲೆಯಲ್ಲಿ ಟ್ರಕ್ ಕಣಿವೆಗೆ ಬಿದ್ದ ಪರಿಣಾಮ ಮೂವರು ಯೋಧರು ಮೃತಪಟ್ಟಿದ್ದಾರೆ. ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಹವಾಲ್ದಾರ್ ನಖತ್ ಸಿಂಗ್, ನಾಯಕ್‌ ಮುಖೇಶ್ ಕುಮಾರ್ ಮತ್ತು ಗ್ರೆನೇಡಿಯರ್ ಆಶಿಶ್ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆಯು ಮೃತರ ಕುಟುಂಬಗಳಿಗೆ ಬೆಂಬಲವಾಗಿ ನಿಂತಿದೆ ಎಂದು ಈಸ್ಟರ್ನ್ ಕಮಾಂಡ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

Read More »

ಸುಡಾನ್‌ನಲ್ಲಿ ಭಾರೀ ಮಳೆ: 60 ಜನ ಸಾವು

ಸುಡಾನ್: ಯುದ್ಧ ಪೀಡಿತ ಸುಡಾನ್‌ನಲ್ಲಿ ಭಾರೀ ಮಳೆಯಿಂದಾಗಿ ಅಣೆಕಟ್ಟು ಒಡೆದು ಕನಿಷ್ಠ 60 ಜನರು ಸಾವನ್ನಪ್ಪಿದ್ದು, ಹಲವು ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಧಾರಾಕಾರ ಮಳೆಯಿಂದಾಗಿ ಕೆಂಪು ಸಮುದ್ರದ ಸಮೀಪದಲ್ಲಿದ್ದ ಅರ್ಬತ್ ಅಣೆಕಟ್ಟು ಕೊಚ್ಚಿಹೋಗಿದೆ. ನೀರು ಸುಮಾರು 20 ಹಳ್ಳಿಗಳಿಗೆ ನುಗ್ಗಿದ್ದು 50 ಸಾವಿರ ಮನೆಗಳು ಕೊಚ್ಚಿ ಹೋಗಿದೆ ಎಂದು ವರದಿಯಾಗಿದೆ. ಅರ್ಬತ್ ಅಣೆಕಟ್ಟು 25 ಮಿಲಿಯನ್ ಕ್ಯೂಬಿಕ್ ಮೀಟರ್ ಸಾಮರ್ಥ್ಯವನ್ನು ಹೊಂದಿತ್ತು. ಕರಾವಳಿ ನಗರವಾದ ಪೋರ್ಟ್ ಸುಡಾನ್‌ನ ಕುಡಿಯುವ …

Read More »

ಎಮರ್ಜೆನ್ಸಿ ಬಿಡುಗಡೆಗೆ ಸಿದ್ಧ :ಮಾರ್ಕೆಟಿಂಗ್ ವೇಳೆ ನಟಿಗೆ ಬೆದರಿಕೆ

ಮುಂಬೈ: ಕಂಗನಾ ರಣಾವತ್ ಎಮರ್ಜೆನ್ಸಿ ಬಿಡುಗಡೆಗೆ ಸಿದ್ದರಾಗಿದ್ದಾರೆ ಮತ್ತು ಚಿತ್ರದ ಮಾರ್ಕೆಟಿಂಗ್ ಸಮಯದಲ್ಲಿ ತನಗೆ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಪೊಲೀಸರನ್ನು ಕೇಳಿಕೊಂಡಿದ್ದಾರೆ. ಕಂಗನಾ ರನೌತ್, ‘ಎಮರ್ಜೆನ್ಸಿ’ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಆದರೆ ಸಿನಿಮಾ ಬಿಡುಗಡೆ ಮಾಡಬಾರದೆಂದು ಕೆಲವರು ಒತ್ತಾಯ ಮಾಡಿದ್ದು, ಕೊಲೆ ಬೆದರಿಕೆಗಳು ಸಹ ಬಂದಿವೆ. ನಟಿ ಕಂಗನಾ …

Read More »

ಟ್ರ್ಯಾಕ್ಟರ್‌ ಕೆಳಗೆ ಸಿಲುಕಿ ರೈತ ಸಾವು

ಚಿಕ್ಕಬಳ್ಳಾಪುರ: ಗದ್ದೆಯಲ್ಲಿ ಉಳುಮೆ ಮಾಡುವ ವೇಳೆ ಟ್ರ್ಯಾಕ್ಟರ್‌ ಕೆಳಗೆ ಸಿಲುಕಿ ರೈತ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದ ಚೇಳೂರು ತಾಲ್ಲೂಕಿನ ದಿಗವಪ್ಯಯಲವಾರಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಂಕರ್ ರೆಡ್ಡಿ (40) ಮೃತ ದುರ್ದೈವಿ. ಶಂಕರ್ ರೆಡ್ಡಿ ಟ್ರ್ಯಾಕ್ಟ‌ರ್ ಚಾಲನೆ ಮಾಡುತ್ತಾ ಕೆಸರು ಗದ್ದೆ ಉಳುಮೆ ಮಾಡುತ್ತಿದ್ದರು. ಈ ವೇಳೆ ಕೆಸರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್ ಮೇಲೆತ್ತಲು ಪ್ರಯತ್ನ ಪಟ್ಟಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರ ಅಡಿ ಸಿಲುಕಿ ಮೃತಪಟ್ಟರು. ಅಲ್ಲಿದ್ದವರು ಸ್ಥಳೀಯರು ಜೆಸಿಬಿ ಮೂಲಕ ಟ್ರ್ಯಾಕ್ಟರ್‌ನಡಿಯಲ್ಲಿದ್ದ …

Read More »

ಟೆಲಿಗ್ರಾಮ್ನ ಸ್ಥಾಪಕ ಬಂಧನ

ಕಳೆದ ಪಾವೆಲ್ ಡುರೊವ್ ತನ್ನ ಖಾಸಗಿ ಜೆಟ್ನಲ್ಲಿ ಫ್ರಾನ್ಸೆ ಆಗಮಿಸಿದಾಗ, ಪೊಲೀಸರು ಅವರನ್ನು ಸ್ವಾಗತಿಸಿದರು, ಬಳಿಕ ತಕ್ಷಣ ಅವರನ್ನು ಬಂಧಿಸಿದ್ದಾರೆ. ನೇರ ಮೆಸೇಜಿಂಗ್ ಪ್ಲಾಟ್ಸಾರ್ಮ್ ಟೆಲಿಗ್ರಾಮ್ನ ಸ್ಥಾಪಕರಾಗಿ, ಅದರ ಮೇಲೆ ನಡೆದ ವ್ಯಾಪಕ ಅಪರಾಧಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಆರೋಪಿಸಲಾಗಿದೆ. ಫ್ರೆಂಚ್ ನ್ಯಾಯಾಧೀಶರು ಡುರೊವ್ ಅವರ ಆರಂಭಿಕ ಬಂಧನದ ಅವಧಿಯನ್ನು ವಿಸ್ತರಿಸಿದರು, ಪೊಲೀಸರಿಗೆ ಅವರನ್ನು 96 ಗಂಟೆಗಳವರೆಗೆ ಬಂಧಿಸಲು ಅವಕಾಶ ನೀಡಿದ್ದಾರೆ. ಇನ್ನುಈ ಪ್ರಕರಣವು ಟೆಲಿಗ್ರಾಮ್ಲ ಮಾತ್ರವಲ್ಲದೇ, ಇತರ ಜಾಗತಿಕ ತಂತ್ರಜ್ಞಾನ, …

Read More »

ಅತ್ಯಾಚಾರ ಪ್ರಕರಣ : ಮೂರನೇ ಆರೋಪಿ ಬಂಧನ

ಉಡುಪಿ:ಕಾರ್ಕಳದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸೋಮವಾರ(ಆ 26) ಮೂರನೇ ಆರೋಪಿ ಅಭಯ್(23) ಕಾರ್ಕಳ ಎಂಬಾತನನ್ನು ಬಂಧಿಸಲಾಗಿದೆ. ಅಭಯ್ ಪ್ರಕರಣದ ಪ್ರಥಮ ಆರೋಪಿ ಅಲ್ತಾಫ್ ಗೆ ಮಾದಕ ವಸ್ತು ಕೊಟ್ಟಿದ್ದಾನೆ ಎಂದು ನಮಗೆ ಪ್ರಥಮವಾಗಿ ತನಿಖೆಯಲ್ಲಿ ಕಂಡುಬಂದಿದೆ. ಕೃತ್ಯ ಎಸಗಿದ ಮೇಲೆ, ಪ್ರಥಮ ಆರೋಪಿ ತಪ್ಪಿಸಿಕೊಳ್ಳಲು ಸಹಕಾರ ಮಾಡುವುದಕ್ಕೆ ಪ್ರಯತ್ನ ಮಾಡಿರುವುದು ನಮಗೆ ತನಿಖೆಯಲ್ಲಿ ಕಂಡುಬಂದಿರುತ್ತದೆ. ಈಗ …

Read More »

‘ಸ್ತ್ರೀ 2’ ಸಿನಿಮಾಗೆ ಭರ್ಜರಿ ಕಲೆಕ್ಷನ್

‘ಸ್ತ್ರೀ 2’ ಸಿನಿಮಾ ಪ್ರೇಕ್ಷಕರ ಬಹುನಿರೀಕ್ಷಿತ ಚಿತ್ರವಾಗಿತ್ತು. ರಾಜ್ ಕುಮಾರ್ ರಾವ್ ಶ್ರದ್ದಾಕಪೂ‌ರ್ ನಟನೆಯ ‘ಸ್ತ್ರೀ 2’ ಸಿನಿಮಾ ಗೆಲ್ಲುತ್ತದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಸ್ಟಾರ್ ನಟರ ಸಿನಿಮಾಗಳನ್ನೂ ಮೀರಿಸುವ ರೀತಿಯಲ್ಲಿ ಕಲೆಕ್ಷನ್ ಮಾಡಲಿದೆ ಎಂದು ಬಹುತೇಕರು ಊಹಿಸಿರಲಿಲ್ಲ. ‘ಸ್ತ್ರೀ 2’ ಸಿನಿಮಾ ಬಿಡುಗಡೆಯಾಗಿ 12 ದಿನ ಕಳೆದಿದೆ. ಈ ಚಿತ್ರಕ್ಕೆ ವಿಶ್ವಾದ್ಯಂತ ಬರೋಬ್ಬರಿ 560 ಕೋಟಿ ರೂಪಾಯಿ ಕಮಾಯಿ ಆಗಿದೆ. ‘ಸ್ತ್ರೀ ಚಿತ್ರದ ಮೊದಲ ಪಾರ್ಟ್ ಎಲ್ಲರ …

Read More »

ಶವ ಸಾಗಿಸುತ್ತಿದ್ದ ಅಂಬುಲೆನ್ಸ್‌ ಲಾರಿಗೆ ಡಿಕ್ಕಿ : ಮಹಿಳೆ ಸಾವು

ಚಿತ್ರದುರ್ಗ: ಶವ ಸಾಗಿಸುತ್ತಿದ್ದ ಅಂಬುಲೆನ್ಸ್‌ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಚಿತ್ರದುರ್ಗ ತಾಲೂಕಿನ ಬಳೆಕಟ್ಟೆ ಗ್ರಾಮದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹಾವೇರಿಯ ಶಿವಬಸವ (50) ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನೆಲೆ ಖಾಸಗಿ ಅಂಬುಲೆನ್ಸ್‌ನಲ್ಲಿ ಶಿವಬಸವ ಅವರ ಮೃತದೇಹವನ್ನು ಹಾವೇರಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಬಳೆಕಟ್ಟೆ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಅಂಬುಲೆನ್ಸ್‌ನಲ್ಲಿದ್ದ …

Read More »