ನವದೆಹಲಿ : ಭಾರತವು ದೇಶದಲ್ಲಿ ಸಮತೋಲಿತ ಇಂಧನ ಬಳಕೆಯತ್ತ ಹೇಗೆ ಮುನ್ನಡೆಯುತ್ತಿದೆ . ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ನವೀಕರಿಸಬಹುದಾದ ಇಂಧನ ಮೂಲಗಳನ್ನು ಉತ್ತೇಜಿಸುವ ಮೂಲಕ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ವಿವಿಧ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ . ಭಾರತವು ತೀವ್ರ ಹವಾಮಾನ ಸವಾಲುಗಳನ್ನು ಎದುರಿಸುತ್ತಿದೆ ಎಂದು ಕೇಂದ್ರ ಸಚಿವ ಶ್ರೀ ಪ್ರಲಾದ ಜೋಶಿ ಹೇಳಿದರು.
ಮಿಂಟ್ ಸಸ್ಪೆನಬಿಲಿಟಿ ಸಮಿಟ್ ನ 3ನೇ ಆವೃತ್ತಿಯ ಅಧ್ಯಕ್ಷತೆ ವಹಿಸಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶವು ನವೀಕರಿಸಬಹುದಾದ ಶಕ್ತಿಯನ್ನು ಹೆಚ್ಚಿಸಲು ಹಾಗೂ ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಲು ಮೋದಿ ನೇತೃತ್ವದಸರಕಾರ ಹೆಚ್ಚಿನ ಆಧ್ಯತೆ ನೀಡುತ್ತಿದೆ ಎಂದರು. 2047 ರ ವೇಳೆಗೆ 25 MMT ಹಸಿರು ಜಲಜನಕ ಉತ್ಪಾದನೆಯೊಂದಿಗೆ 1800 GW ಪಳೆಯುಳಿಕೆ ರಹಿತ ಸಾಮರ್ಥ್ಯವನ್ನು ಸ್ಥಾಪಿಸುವ ನಮ್ಮ ದೀರ್ಘಾವಧಿಯ ದೃಷ್ಟಿಯನ್ನು ಇಂದಿನ ಸಮಿಟ್‌ನಲ್ಲಿ ಎಂದರು. ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

