ಕರ್ನಾಟಕದ ನಾಡಹಬ್ಬ ದಸರಾ 2024ರ ಸಂಭ್ರಮ ಈಗಾಗಲೇ ಶುರುವಾಗಿದೆ. ಈ ನಿಟ್ಟಿನಲ್ಲಿ ‘ಗಜಪಯಣ ಕಾರ್ಯಕ್ರಮಕ್ಕೆ ಪ್ರಾರಂಭವಾಗಿದೆ. ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ನಾಲ್ಕು ಹೆಣ್ಣಾನೆ ಸೇರಿದಂತೆ ಒಟ್ಟು 14 ಆನೆಗಳು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಗೋಪಿ, ವರಲಕ್ಷ್ಮೀ, ಪ್ರಶಾಂತ, ಲಕ್ಷ್ಮೀ, ಧನಂಜಯ, ಸುಗ್ರೀಮ, ದೊಡ್ಡ ಹರವೆ ಲಕ್ಷ್ಮೀ, ಭೀಮ, ಕಂಜನ್, ಹಿರಣ್ಯಾ, ರೋಹಿತ, ಮಹೇಂದ್ರ ಹಾಗೂ ಹೊಸ ಆನೆ ಏಕಲವ್ಯ ಸಂಭ್ರಮದಲ್ಲಿ ಭಾಗಿಯಾಗಲಿವೆ.
Read More »ಅಭಿಮಾನಿಗಳಿಗೆ ರಿಷಬ್ ಶೆಟ್ಟಿ ಸಿಹಿ ಸುದ್ದಿ
ಕಾಂತಾರ ಸಿನಿಮಾ ಹಿಟ್ ಬಳಿಕ ಕಾಂತಾರ ಚಾಪ್ಟರ್ 1 ಚಿತ್ರಕ್ಕಾಗಿ ಕನ್ನಡ ಮಾತ್ರವಲ್ಲದೆ ಬೇರೆ ಚಿತ್ರರಂಗದವರು ಭಾರೀ ನಿರೀಕ್ಷೆ ಇಟ್ಟು ಕಾಯುತ್ತಿದ್ದಾರೆ. ಇದೀಗ ಅಭಿಮಾನಿಗಳಿಗೆ ರಿಷಬ್ ಶೆಟ್ಟಿ ಸಿಹಿ ಸುದ್ದಿ ನೀಡಿದ್ದಾರೆ. ಸಿನಿಮಾದ ಶೂಟಿಂಗ್ ಆರಂಭವಾಗಿದ್ದು ರಿಷಬ್ ಮಾಸ್ ಲುಕ್ ರಿವೀಲ್ ಆಗಿದೆ. ಚಿತ್ರತಂಡ ನಾಲ್ಕನೇ ಹಂತದ ಶೂಟಿಂಗ್ ಗೆ ತಯಾರಿ ನಡೆಸುತ್ತಿದೆ. ಕುಂದಾಪುರದಲ್ಲಿ ಸೆಟ್ ಹಾಕಿ ಆಗಿ ಶೂಟಿಂಗ್ ಮಾಡುತ್ತಿದ್ದಾರೆ. ಈ ಸಿನಿಮಾಗೆ ಶೂಟಿಂಗ್ ಕೊನೆಯ ಹಂತ ತಲುಪಿದೆ …
Read More »ವಿಶೇಷ ಬ್ಯಾಂಕ್ ಲೋಕ ಅದಾಲತ್
ಇಲ್ಲಿನ ಕೆನರಾ ಬ್ಯಾಂಕ್ನ ವೃತ್ತ ಕಛೇರಿಯಲ್ಲಿ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಡೆಟ್ಸ್ ರಿಕವರಿ ಟ್ರಿಬ್ಯುನಲ್ ಬೆಂಗಳೂರು ಹಾಗೂ ಕೆನರಾ ಬ್ಯಾಂಕ್ ಇವುಗಳ ಸಹಯೋಗದಲ್ಲಿ ವಿಶೇಷ ಬ್ಯಾಂಕ್ ಲೋಕ ಅದಾಲತ್ ನ್ನು ಆಯೋಜಿಸಲಾಗಿತ್ತು. ಲೋಕ್ ಅದಾಲತ್ನಲ್ಲಿ ಸಂಧಾನಕಾರರಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್. ಎಸ್. ಮಿಟ್ಟಲಕೋಡ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ಎನ್. ಸಿ. ಇಳಗೇರ್ ಹಾಗೂ ಪರಶುರಾಮ್ ಗೌಡರ ಭಾಗವಹಿಸಿದ್ದರು.
Read More »ಸುಧಾ ಮೂರ್ತಿ ದಂಪತಿ ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ ಮತ್ತು ಆಮೆ ಕೊಡುಗೆ
ಇನ್ಫೋಸಿಸ್ ಅಧ್ಯಕ್ಷರಾದ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ ಮತ್ತು ಆಮೆಯನ್ನು 2023ರ ಜುಲೈ 18ರಂದು ಕೊಡುಗೆಯಾಗಿ ನೀಡಿದ್ದಾರೆ. ಅಧಿಕ ಮಾಸದಲ್ಲಿ ದಾನಕ್ಕೆ ವಿಶೇಷ ಮಹತ್ವವಿರುವುದರಿಂದ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಚಿನ್ನದ ಶಂಖ ಮತ್ತು ಆಮೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇವೆರಡನ್ನೂ ದೇವರ ಪ್ರತಿಷ್ಠಾಪನೆಯಲ್ಲಿ ಬಳಸಲಾಗುತ್ತದೆ.
Read More »ರಾಜ್ಯಪಾಲರಿಗೆ ಅವಮಾನ ಮಾಡಿದ ಎಲ್ಲ ಕಾಂಗ್ರೆಸ್ಸಿಗರ ವಿರುದ್ಧ ಪ್ರಕರಣ ದೂರು ದಾಖಲು
ಬೆಂಗಳೂರು:ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಈ ಹಿನ್ನೆಲೆ ರಾಜ್ಯದ ಹಲವೆಡೆ ನಿನ್ನೆ ಪ್ರತಿಭಟನೆ ನಡೆದಿದೆ. ಈ ನಡುವೆ ರಾಜ್ಯಪಾಲರಿಗೆ ಅವಮಾನ ಮಾಡಿದ ಎಲ್ಲ ಕಾಂಗ್ರೆಸ್ಸಿಗರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ. ಇಂದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅವರು ದೂರು ಸಲ್ಲಿಸಿದರು. ಈ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
Read More »ಹಾವನ್ನೇ ಕಚ್ಚಿ ಸಾಯಿಸಿದ ಪುಟ್ಟ ಪೋರ
ಬಿಹಾರ: ಮೂರು ಅಡಿ ಉದ್ದದ ಹಾವನ್ನು ಒಂದು ವರ್ಷದ ಪುಟ್ಟ ಪೋರನೊಬ್ಬ ಕಚ್ಚಿ ಸಾಯಸಿದ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ಕಟ್ಟೇಪುರ ಗ್ರಾಮದಲ್ಲಿ ನಡೆದಿದೆ. ಪುಟ್ಟ ಹುಡುಗನ ತಾಯಿ ನೋಡುವವರೆಗೂ ಆತ ಹಾವನ್ನು ಕಚ್ಚುತ್ತಲೇ ಇದ್ದ. ದೃಶ್ಯ ಕಂಡು ಹೈರಾಣಾದ ತಾಯಿಯೇ ಮಗುವಿನ ಬಾಯಿಂದ ಹಾವನ್ನು ಕಿತ್ತೆಸೆದಿದ್ದಾರೆ ಎಂದು ವರದಿಯಾಗಿದೆ. ತಾಯಿ ಕೂಡಲೇ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಓಡಿದ್ದಾಳೆ. ಬಾಲಕನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Read More »ಸಮಾಜದ ತಾರತಮ್ಯಗಳನ್ನು ತೆಗೆದುಹಾಕಲು ನಾರಾಯಣ ಗುರು ಅವರು ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟಿದ್ದರು ; ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ.
ಧಾರವಾಡ : ಕೇರಳ ರಾಜ್ಯದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರು ಎಂಬ ಒಬ್ಬ ಸಮಾಜ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ತೆಗೆದುಹಾಕಲು ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ಹೇಳಿದ ತತ್ವ ಜಗತ್ತಿನಲ್ಲಿ ಇರುವುದು ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯ ವಾಕ್ಯವನ್ನು ಪ್ರತಿಪಾದಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಮಾತನಾಡಿದರು. ಅವರು ಕರ್ನಾಟಕ ಕುಲಪುರೋಹಿತ ಆಲೂರು …
Read More »ಮಂಗಳ ಮುಖಿಯರು ಯುವಕನ ಮೇಲೆ ಅಟ್ಟಹಾಸ
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಂಗಳ ಮುಖಿಯರು ಯುವಕನ ಮೇಲೆ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ. ಟೀ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾತನನ್ನು ಲಿಂಗ ಪರಿವರ್ತನೆ ಮಾಡಿ ಭಿಕ್ಷಾಟನೆಗೆ ಒತ್ತಾಯಿಸಿದ ಘಟನೆ ನಡೆದಿದೆ. ಅಕ್ರಮವಾಗಿ ಲಿಂಗ ಪರಿವರ್ತನೆ, ಅಶ್ಲೀಲ ಪೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಭಿಕ್ಷಾಟನೆ ಮಾಡುವಂತೆ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡಿ ನಾಲ್ವರು ಮಂಗಳಮುಖಿಯರು ಹುಡುಗನ ಲಿಂಗ …
Read More »ಸಿದ್ದರಾಮಯ್ಯ ಗೆ ಬೀಗ್ ರಿಲೀಫ್
ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್, ಆಗಸ್ಟ್ 29ಕ್ಕೆ ಮುಂದೂಡಿದೆ. ಸಿಎಂ ಪರ ವಕೀಲರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಸುಮಾರು ಒಂದೂವರೆ ಗಂಟೆ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ವಿಚಾರಣೆಯನ್ನು ಆಗಸ್ಟ್ 29 ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ. ಅಲ್ಲದೇ ಜನಪ್ರತಿನಿಧಿಗಳ ಕೋರ್ಟ್ನ …
Read More »ಶ್ರಮಿಕ ವರ್ಗದವರೊಂದಿಗೆ ಜನ್ಮ ದಿನಾಚರಣೆ ಆಚರಿಸಿ ಸರಳತೆ ಮೆರೆದ ಯಾಸೀರ್ ಖಾನ ಪಠಾಣ್
ಶಿಗ್ಗಾಂವ : ಸವಣೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾದ ಯಾಸೀರ್ ಅಹ್ಮದ ಖಾನ್ ಫಠಾಣ ಜನ್ಮ ದಿನಾಚರಣೆಯ ಇಂದು ಶಿಗ್ಗಾಂವ ಕ್ಷೇತ್ರದ ಜನತೆ ಆಚರಣೆ ಮಾಡುತ್ತಿದ್ದು ಈ ಭಾರಿ ಸರಳ ಹಾಗು ಸಮಾಜಕ್ಕೆ ಮಾದರಿ ನಡೆಯನ್ನ ಅನುಸರಿಸಲು ಮುಂದಾಗಿದ್ದರೆ.. ಫಠಾಣ ಅಭಿಮಾನಿ ಬಳಗದಿಂದ ಸುಮಾರು ಎರಡು ನೂರಕ್ಕು ಹೆಚ್ಚಿನ ಯುವ ಸಮೂದಾಯ ರಕ್ತದಾನ ಕ್ಕೆ ಮುಂದಾಗಿದ್ದು ಈ ಭಾರಿ ಕರುನಾಡಲ್ಲಿ ಡೆಂಗು ಜ್ವರದ ಹಾವಳಿಗೆ ಜನರು ತುತ್ತಾಗುತ್ತಿದ್ದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





