ವಿಧಾನಸಭೆ ಚುನಾವಣೆ ಕಾವು ರಂಗೆರುತ್ತಿದ್ದು ಹುಬ್ಬಳ್ಳಿ -ಧಾರವಾಡದ ಕ್ಷೇತ್ರಗಳು ಇದಕ್ಕೆ ಕಮ್ಮಿ ಇಲ್ಲ ಅಂತಲೇ ಹೇಳಬಹುದು ..ಈಗಾಗಲೇ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಭಾರಿ ಪೈಪೋಟಿ ನಡೆದಿದ್ದು .ಕಾಂಗ್ರೆಸ್ ನ ಹಲವು ನಾಯಕರು ಮಾಜಿ ಮಂತ್ರಿ ಜಗದೀಶ್ ಶೆಟ್ಟರ್ ವಿರುದ್ದ

ಸೆಣಸಾಡಲು ಮುಂದೆ ಬರುತ್ತಿದ್ದಾರೆ ಸತತ ೬ಭಾರಿ ಸ್ಪರ್ಧಿಸಿ ಜಯಗಳಿಸಿರುವ ಜಗದೀಶ್ ಶೆಟ್ಟರ್ ಅವರ ಈ ಕ್ಷೇತ್ರದಲ್ಲಿ ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳನ್ನ ಇಳಿಸಲು ಹುಡುಕಾಟ ನಡೆಸಿ ಚುನಾವಣೆಯಲ್ಲಿ ನಿಲ್ಲಿಸುವ ಕಾಲ ಒಂದಿತ್ತು ..ಬದಲಾವಣೆಯೆ ಜಗದ ನಿಯಮ ಅನ್ನುವ ಹಾಗೆ ಇಂದು ಕಾಂಗ್ರೆಸ್ ನ ಅತಿ ಸುಲಭದ ಕ್ಷೇತ್ರವಾಗಿ ಮಾರ್ಪಟ್ಟಂತಿದೆ ಈ ಕ್ಷೇತ್ರ ..ಇನ್ನು ಈ ಕ್ಷೆತ್ರಕ್ಕೆ ಇದೆ ಮೊದಲ ಭಾರಿಗೆ ಅಲ್ಪಸಂಖ್ಯಾತ ನಾಯಕರ ಒಲವು ಮಾಡಿರುವದು ವಿಶೇಷ ವಾಗಿದೆ .ಸದ್ಯ ಹುಬ್ಬಳ್ಳಿ ಯ ಫಾರೂಕ್ ಅಬೂನವರ ಅವರು ಕಾಂಗ್ರೆಸ್ ನಲ್ಲಿ ತಮ್ಮದೆ ಆದ ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು.

ರಾಜಕೀಯ ಚಾಣಾಕ್ಷ ಅನ್ನೊ ಮಾತು ಕೇಳಿ ಬರ್ತಾ ಇದೆ ..ಫಾರೂಕ್ ಈ ಹಿಂದೆ ಧಾರವಾಡ ಜಿಲ್ಲಾ ಅಲ್ಪಸಂಖ್ಯಾತ ರ ಘಟಕದಲ್ಲಿ ಕೆಲಸಮಾಡಿದ ಅನುಭವ ದ ಜೊತೆಗೆ ..ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಾಂಗ್ರೆಸ್ನ ಒಬ್ಬ ನಿಷ್ಠಾವಂತ ಕಾರ್ಯಕರ್ತ ಅನ್ನೊ ಮಾತುಗಳು ಸಹ ಜನ ಸಾಮಾನ್ಯರ ಬಾಯಲ್ಲಿ ಕೇಳಿ ಬರ್ತಾ ಇದೆ ..ಇನ್ನು ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ರ ಕ್ಯಾಟೆಗೆರಿಯಲ್ಲಿ ಈ ಸಲ ಸೆಂಟ್ರಲ್ ಕ್ಷೇತ್ರಕ್ಕೆ ನಮಗೆ ಟಿಕೆಟ್ ಕೊಡಿ ಏಂದು ನಾಯಕರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿರುವ ಫಾರೂಕ್ ಶೇಟ್ಟರ್ ವಿರುದ್ದ ಸಮರಸಾರಲು ರೇಡಿ ಆಗಿದ್ದಾರೆ ಅಂತಲೇ ಹೇಳಬಹುದು..ಇನ್ನು ಫಾರೂಕ್ ಅಬೂನವರ ಪರ ವಿವಿಧ ಸಮಾಜದ ನಾಯಕರು ಹಾಗು ಧರ್ಮ ಗುರುಗಳ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿ ಈ ನಿರ್ಧಾರ ಮಾಡಿರುವೆ ಹಾಗು ಎಲ್ಲ ಸಮಾಜದ ಒಗ್ಗೊಟ್ಟಿನೊಂದಿಗೆ ನಾನು ಈ ಭಾರಿ ಚುನಾವಣೆಯಲ್ಲಿ ಸ್ಪರ್ದೆ ಮಾಡುವೆ ಅನ್ನೊ ಇಂಗಿತವನ್ನು

ವ್ಯಕ್ತಪಡಿಸಿದ್ದಾರೆ..ಪ್ರಥಮ ಭಾರಿಗೆ ಮುಸ್ಲಿಂ ನಾಯಕನೊಬ್ಬ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದು ಇತರ ಆಕಾಂಕ್ಷಿಗಳ ನಿದ್ದೆ ಗೆಡಿಸಿದೆ ಅಂತಲೇ ಹೇಳಬಹುದು ..ಜನಸಾಮಾನ್ಯರ ಜೊತೆ ಬೆರೆತು ತಮ್ಮದೆ ಛಾಪು ಮೂಡಿಸಿರುವ ಫಾರೂಕ್ ಗೆ ಈ ಸಲದ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಸಿಗುತ್ತಾ ? ಅನ್ನುವ ಪ್ರಶ್ನೆಗೆ ಹೈ ಕಮಾಂಡ ಗ್ರೀನ್ ಸಿಗ್ನಲ್ ತೊರಿಸುತ್ತಾ ಅನ್ನುವದನ್ನ ಕಾದು ನೋಡಬೇಕಾಗಿದೆ…

bigtvnews | Hubli Dharwad News | Kannada News | Karnataka News Hubli News | News In Hubli | Local news

