ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರು ಉತ್ಸವ 2023ರ ಅಂಗವಾಗಿ ಆಯೋಜಿಸಲಾದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಈ ಕುರಿತು ಶುಕ್ರವಾರ ವಿಧಾನಸೌಧದಲ್ಲಿ ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ನಾರಿ ಕಿತ್ತೂರು ರಾಣಿ ಚನ್ನಮ್ಮ ಯುವಜನರಿಗೆ ಸ್ಪೂರ್ತಿ …
Read More »ಹಳೆಯ ಸಮಸ್ಯೆಗಳ ಜೊತೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿದೆ: ಕೆಂಪಣ್ಣ.
ಬೆಂಗಳೂರು: ಬಾಕಿ ಬಿಲ್ ಪಾವತಿ ಮಾಡುವಂತೆ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಇದುವರೆಗೆ ಪಾವತಿ ಮಾಡಿಲ್ಲ. ಬಾಕಿ ಬಿಲ್ ಪಾವತಿಗೆ ಜಿಎಸ್ಟಿ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಹೊಸ ಸರ್ಕಾರ ಬಂದ ಮೇಲೆ ಗುತ್ತಿಗೆದಾರರಿಗೆ ಹಲವು ಭಾಗ್ಯಗಳನ್ನೂ ಕರುಣಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೆವು. ಆದರೆ ಹಳೆಯ ಸಮಸ್ಯೆಗಳ ಜೊತೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ …
Read More »ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಅದ್ದೂರಿ ಮನರಂಜನಾ ಕಾರ್ಯಕ್ರಮ…
ಈ ಬಾರಿಯ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಂದು ಆರಂಭವಾಗಿತ್ತು. ಆದರೆ ಯಾವುದೇ ಮನರಂಜನಾ ಕಾರ್ಯಕ್ರಮಗಳು ಇಲ್ಲದೆ ಸರಳವಾಗಿ ಈ ಪಂದ್ಯ ನಡೆದಿತ್ತು. ಆದರೆ ಉದ್ಘಾಟನಾ ಪಂದ್ಯ ತಾಣವಾದ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು ಈ ಪಂದ್ಯಕ್ಕೂ ಮುನ್ನ ಅದ್ದೂರಿ ಮನರಂಜನಾ ಕಾರ್ಯಕ್ರಮವನ್ನು ಬಿಸಿಸಿಐ ಹಮ್ಮಿಕೊಂಡಿದೆ. ಈ ವಿಚಾರವನ್ನು ಬಿಸಿಸಿಐ ಅಧಿಕೃತವಾಗಿ ‘ಎಕ್’ನಲ್ಲಿ ಹಂಚಿಕೊಂಡಿದೆ. ಈ ಮನರಂಜನಾ ಕಾರ್ಯಕ್ರಮದ ಬಗ್ಗೆ ಬಿಸಿಸಿಐ ಎಕ್ಸ್ನಲ್ಲಿ ಮೂರು …
Read More »ಮೂರನೇ ಆರೋಪಿಯಾಗಿದ್ದ ಪರಮಶಿವಯ್ಯ ಅವರಿಗೆ ಜಾಮೀನು..
ಚಿತ್ರದುರ್ಗ: ನಗರ ಹೊರವಲಯದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿ ಬಂದಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿಯಾಗಿದ್ದ ಪರಮಶಿವಯ್ಯ ಅವರಿಗೆ ಜಾಮೀನು ಸಿಕ್ಕಿದೆ.ಹಲವು ತಿಂಗಳಿನಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿರುವ ಪರಮಶಿವಯ್ಯ ಅವರು ಅಕ್ಟೋಬರ್ 17ರಂದು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ಮುರುಘಾ ಮಠದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಿತ್ರದುರ್ಗದ ಕಾರಾಗೃಹದಲ್ಲಿರುವ ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ …
Read More »ಪರಿಶಿಷ್ಟ ಜಾತಿಯ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದ ಶಿಕ್ಷಕಿ….
ಹಿಂದುಳಿದ ವರ್ಗಗಳಲ್ಲಿ ಬರುವ ಮೊಗೇರ ಜಾತಿಗೆ ಸೇರಿದ್ದರೂ ಪರಿಶಿಷ್ಟ ಜಾತಿಯ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿಯಡಿ ಸಹಾಯಕ ಕನ್ನಡ ಶಿಕ್ಷಕರ ಹುದ್ದೆ ಪಡೆಯಲು ಮುಂದಾಗಿದ್ದ ಆರೋಪಿ ಶಿಕ್ಷಕಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಉತ್ತರ ಕನ್ನಡದ ಭಟ್ಕಳ ತಾಲೂಕಿನ ಬೆಂಗೆರೆ ನಿವಾಸಿ ಸರಸ್ವತಿ ಪ್ರಕರಣದ ಆರೋಪಿ. ಅವರು ಸಲ್ಲಿಸಿದ್ದ ಕ್ರಿಮಿನಲ್ ಮೆಲ್ಮನವಿ ಅರ್ಜಿಯನ್ನು ನ್ಯಾ ಜೆ ಖಾಜಿ ಅವರಿದ್ದ ಏಕ ಸದಸ್ಯ ಪೀಠ ತಿರಸ್ಕರಿಸಿದೆ. ಅರ್ಜಿದಾರರು ಹಿಂದುಳಿದ …
Read More »ವಿಪತ್ತು ಸಂಭವಿಸಿದಾಗ ದ್ವನಿಯ ಜೊತೆ ಮೊಬೈಲ್ ಕಂಪನವಾಗುತ್ತದೆ….
ಭಾರತದಲ್ಲಿ ವಿಪತ್ತು ಸಂಭವಿಸಿದಾಗ ಎಚ್ಚರಿಸುವ ಅಲರ್ಟ್ ಮೆಸೇಜ್ ನೀಡಲು ಇಂದಿನಿಂದ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಭಾರತದಲ್ಲಿ ತ್ವರಿತಗತಿಯಲ್ಲಿ ಜನರನ್ನು ಎಚ್ಚರಿಸುವ ಏಕ ಮಾತ್ರ ಸಾಧನ ಮೊಬೈಲ್ ಗಳಾಗಿವೆ. ಭಾರತದಲ್ಲಿ 120 ಕೋಟಿ ಮೊಬೈಲ್ ಬಳಕೆದಾರರಿದ್ದಾರೆ. ಈ ಪೈಕಿ 60 ಲಕ್ಷ ಜನ ಸ್ಮಾರ್ಟ್ ಪೋನಗಳನ್ನು ಬಳಕೆ ಮಾಡುತ್ತಿದ್ದಾರೆ. ವಿಪತ್ತು ಸಂಭವಿಸಿದಾಗ ದ್ವನಿಯ ಜೊತೆ ಮೊಬೈಲ್ ಕಂಪನವಾಗುತ್ತದೆ. ಕಂಪನವಾಗುವ ಸಂಧರ್ಭದಲ್ಲಿ ಮೊಬೈಲ್ ನಲ್ಲಿ ಸಂದೇಶಗಳು ಬರುತ್ತವೆ. ಘಟನೆಗಳು ಸಂಭವಿಸಿದಾಗ ತುರ್ತು ಎಚ್ಚರಿಕೆ …
Read More »ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ: ಸದಾನಂದ ಗೌಡ.
ಬೆಂಗಳೂರು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒಳ್ಳೆಯ ಆಡಳಿತ ಕೊಡಬೇಕು ಅಂತಿದ್ದಾರೆ. ಬ್ರಾಂಡ್ ಬೆಂಗಳೂರು ಮಾಡಬೇಕು ಅಂದ್ರೆ ಆ ಕೆಲಸ ಮಾಡಬೇಕು, ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ ಎಂದು ಮಾಜಿ ಸಿಎಂ ಹಾಗೂ ಸಂಸದ ಸದಾನಂದಗೌಡ ಕಿಡಿಕಾರಿದರು.ನನ್ನ ಸಂಪರ್ಕದಲ್ಲಿ ಅನೇಕರು ಇದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರು ಮಾಡಬೇಕು ಅಂದ್ರೆ ಆ ಕೆಲಸ …
Read More »ಜಸ್ಪ್ರೀತ್ ಬುಮ್ರಾ ತನ್ನ ಪ್ರದರ್ಶನದಿಂದ ಸಂತೋಷವಾಗಿಲ್ಲ ಎಂದು ಹೇಳಿದ್ದಾರೆ…..
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅತ್ಯತ್ತಮ ಪ್ರದರ್ಶನ ನೀಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಸ್ಪಿನ್ನರ್ ಗಳು ಉತ್ತಮ ಬೌಲಿಂಗ್ ಮಾಡಿದ್ದರೆ, ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ವೇಗಿಗಳು ಮಿಂಚಿದ್ದರು. ಜಸ್ಪ್ರೀತ್ ಬುಮ್ರಾ ಅಫ್ಘಾನಿಸ್ತಾನದ ವಿರುದ್ದದ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ ಅಫ್ಘಾನಿಸ್ತಾನವನ್ನು 272 ರನ್ಗಳಿಗೆ ಕಟ್ಟಿಹಾಕಿದರು. ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಎಂಟು ವಿಕೆಟ್ಗಳ ಭರ್ಜರಿ …
Read More »ಅಕ್ಟೋಬರ್ 13 ರಿಂದ ಹುಬ್ಬಳ್ಳಿಯಲ್ಲಿ ಉದ್ಭವ್ ಇವೆಂಟ್ ಕಾರ್ಯಕ್ರಮ!
ಹುಬ್ಬಳ್ಳಿ: ಮೀಠಾ ಭಾರತ ವತಿಯಿಂದ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಉದ್ಭವ್ -2023 ನ್ನು ಅಕ್ಟೋಬರ್ 13 ರಿಂದ ಮೂರು ದಿನಗಳವರೆಗೆ ಇಲ್ಲಿನ ಕೇಶ್ವಾಪುರದ ಶ್ರೀನಿವಾಸ್ ಗಾರ್ಡನ್’ನಲ್ಲಿ ಆಯೋಜಿಸಲಾಗಿದೆ ಎಂದು ಮೀಠಾ ಭಾರತ ಚೇರ್ಮನ್ ಪ್ರಕಾಶ ಕೋಠಾರಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಭವ -2023 ವಿಶಿಷ್ಠವಾದ ಕಾರ್ಯಕ್ರಮವಾಗಿದ್ದು, ಕಲಿಕೆ ಮತ್ತು ಗಳಿಸುವ ಸುವರ್ಣಕಾಶವನ್ನು ಯುವ ಉದ್ಯಮದಾರರಿಗೆ ನೀಡುತ್ತಿದೆ. ಜಿತೋ ಹುಬ್ಬಳ್ಳಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿವಿಧ ವಲಯಗಳಲ್ಲಿ ವ್ಯಾಪಿಸಿರುವ …
Read More »ಮೂರ್ಖರಿಗೆ ಬುದ್ಧಿ ಮಂದ ಎನ್ನುವುದು ಮಾತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೇ ಆಗಿದೆ…
ಬೆಂಗಳೂರು: ಮೂರ್ಖರಿಗೆ ಬುದ್ಧಿ ಮಂದ ಎನ್ನುವುದು ಮಾತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೇ ಆಗಿದೆ. ಅಧಿಕಾರದ ಮದದಿಂದ ಅದರ ಮಿದುಳಿಗೂ ಗೆದ್ದಲು ಹಿಡಿದಿದೆ. 4 ವರ್ಷದ ಹಿಂದೆ ಸರಕಾರ ಮಾಡಲು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರ ಮನೆಗೆ ಕುಮಾರಸ್ವಾಮಿ ಅವರು ಬಂದಿದ್ದರಾ? ಸುಳ್ಳು ಹೇಳುವುದಕ್ಕೆ ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ? ಎಂದು ಜೆಡಿಎಸ್ ಪ್ರಶ್ನಿಸಿದೆ.ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ರಾಜ್ಯ ಘಟಕ, 135 ಸೀಟು ಗೆದ್ದಿದ್ದೇವೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





