Breaking News

ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ: ಸದಾನಂದ ಗೌಡ.

ಬೆಂಗಳೂರು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಒಳ್ಳೆಯ ಆಡಳಿತ ಕೊಡಬೇಕು ಅಂತಿದ್ದಾರೆ. ಬ್ರಾಂಡ್ ಬೆಂಗಳೂರು ಮಾಡಬೇಕು ಅಂದ್ರೆ ಆ ಕೆಲಸ ಮಾಡಬೇಕು, ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ ಎಂದು ಮಾಜಿ ಸಿಎಂ ಹಾಗೂ ಸಂಸದ ಸದಾನಂದಗೌಡ ಕಿಡಿಕಾರಿದರು.
ನನ್ನ ಸಂಪರ್ಕದಲ್ಲಿ ಅನೇಕರು ಇದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿಕೆ ವಿಚಾರವಾಗಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರು ಮಾಡಬೇಕು ಅಂದ್ರೆ ಆ ಕೆಲಸ ಮಾಡಬೇಕು. ಆಡಳಿತ ಮಾಡುವುದು ಬಿಟ್ಟು, ಎಲ್ಲವನ್ನೂ ಡಿ ಕೆ ಶಿವಕುಮಾರ್‌ ಮಾಡ್ತಿದ್ದಾರೆ, ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ ಎಂದು ಸದಾನಂದ ಗೌಡ ಅವರು ಕುಟುಕಿದರು.

CWRC ಸಭೆಯಲ್ಲಿ ಮತ್ತೆ ನೀರು ಬಿಡುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮತ್ತೆ ವಾದ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ. ಟ್ರಿಬ್ಯೂನಲ್ ಪ್ರಕಾರ ಇಷ್ಟು ನೀರು ಬಿಡಬೇಕು ಅಂತ ಅವರ ವಾದ. ಆದರೆ, ನಮ್ಮಲ್ಲಿ ಮಳೆ‌ ಇಲ್ಲ, ನೀರಿಲ್ಲ ಅನ್ನೋದು ಸಮಸ್ಯೆ. ಕಾಂಗ್ರೆಸ್ ಅವರು ವಿದ್ಯುತ್ ಸಮಸ್ಯೆ ಅಂತಾರೆ, ಅದನ್ನ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ‌.

ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಸಚಿವರೇ ಇದಕ್ಕೆ ಹೊಣೆ. ಮಳೆ ಇಲ್ಲದಾಗ ರೈತರ ಹಿತಾಸಕ್ತಿ ಕಾಪಾಡಿಕೊಳ್ಳಬೇಕಿತ್ತು.ಆದರೆ, ರೈತರ ನಷ್ಟ ಪರಿಹಾರ ಕೊಡುವ ಬಗ್ಗೆಯೂ ಚರ್ಚೆ ಮಾಡಿಲ್ಲ‌.ಕೇಂದ್ರ ಬರ ಅಧ್ಯಯನ ಮಾಡಲು ಬಂಧ ಅಧಿಕಾರಿಗಳ ಬಳಿಯೂ ವಿಚಾರ ಸರಿಯಾಗಿ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *