ಬೆಂಗಳೂರು: ಪ್ರೇಯಸಿ ಮಾತನಾಡುತ್ತಿಲ್ಲ ಎಂಬ ಬೇಸರದಿಂದ 41 ವರ್ಷದ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಯಾಲಿಕಾವಲ್ ಠಾಣೆ ವ್ಯಾಪ್ತಿಯ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಡಾರ್ಜಿಲಿಂಗ್ ಮೂಲದ ಸುದೀಪ್ (41) ಎಂದು ಗುರುತಿಸಲಾಗಿದೆ. ದೇವಸ್ಥಾನದ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹದ ಬಳಿ ಇದ್ದ ಸೂಟ್ಕೇಸ್ನಲ್ಲಿ ನಗದು ಹಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ …
Read More »ಅಡ್ಮಿಷನ್ಗೆ ₹20 ಸಾವಿರ ಲಂಚ ಕೇಳಿದ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ!
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹುಣಸೆಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್ ನಾಮದೇವ ಅವರು ವಿದ್ಯಾರ್ಥಿನಿಯ ದಾಖಲಾತಿಗೆ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. 7ನೇ ತರಗತಿಗೆ ದಾಖಲಾತಿ ಮಾಡಿಕೊಡಲು ಪೋಷಕರಿಂದ ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅವರು, ಮೊದಲ ಕಂತಿನ ₹10 ಸಾವಿರವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ …
Read More »ಆಪ್ನಲ್ಲಿ ಅಪ್ಸರೆಯರ ಆಸೆ ತೋರಿಸಿ ಹನಿಟ್ರ್ಯಾಪ್.. ಆಟೋದಲ್ಲಿ ಕಿಡ್ನ್ಯಾಪ್, ಆಮೇಲೆ ಬೆತ್ತಲೆಗೊಳಿಸಿ ವಿಕೃತಿ..!
ಬೆಂಗಳೂರು: ಲೋಕಾಂಟೊ ಆಪ್ನಲ್ಲಿ ಸುಂದರಿಯರ ಫೋಟೋ ಹಾಕಿ ಯುವಕರನ್ನು ಸೆಳೆದು, ಬಳಿಕ ಅಪಹರಿಸಿ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದ 11 ಮಂದಿ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತನೊಬ್ಬ ಹೆಚ್ಆರ್ಬಿಆರ್ ಲೇಔಟ್ಗೆ ಹೋದಾಗ, ಇಬ್ಬರು ಮಹಿಳೆಯರ ಮೂಲಕ ಆತನನ್ನು ಆಟೋದಲ್ಲಿ ಕೂರಿಸಿಕೊಂಡು ಗ್ಯಾಂಗ್ ಸದಸ್ಯರು ಅಪಹರಿಸಿ, ಪ್ರಾಣ ಬೆದರಿಕೆ ಹಾಕಿ ಚಿನ್ನದ ಸರ, ಮೊಬೈಲ್ ಹಾಗೂ ನಗದನ್ನು ಕಸಿದುಕೊಂಡಿದ್ದಾರೆ. ಬಳಿಕ ಆತನನ್ನು ಅವಮಾನಿಸಿ ಬಿಟ್ಟು ಹೋಗಿದ್ದಾರೆ. …
Read More »ವಾಟ್ಸಪ್ ಗೆ ಬಂದ ಮದುವೆ ಆಹ್ವಾನ ಪತ್ರಿಕೆ ಓಪನ್ ಮಾಡಿದ ಅರಣ್ಯಾಧಿಕಾರಿ – ಖಾತೆಯಲ್ಲಿದ್ದ 10 ಲಕ್ಷ ರೂ. ಮಂಗಮಾಯ!
ಬೆಂಗಳೂರು: ವಾಟ್ಸ್ಆಪ್ನಲ್ಲಿ ಸ್ನೇಹಿತನ ಸಂಖ್ಯೆಯಿಂದ ಬಂದ ನಕಲಿ ಎಂಗೇಜ್ಮೆಂಟ್ ಆಮಂತ್ರಣದ APK ಫೈಲ್ ಲಿಂಕ್ ಕ್ಲಿಕ್ ಮಾಡಿದ ಯಶವಂತಪುರದ ಡಿಆರ್ಎಫ್ಒ ರಮೇಶ್ ಬಾಬು ಅವರು ಸೈಬರ್ ವಂಚಕರಿಗೆ ₹9.96 ಲಕ್ಷ ಕಳೆದುಕೊಂಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರ ಮೊಬೈಲ್ ಹ್ಯಾಕ್ ಆಗಿದೆ. ಕೇವಲ 30 ನಿಮಿಷಗಳಲ್ಲಿ 7 ಬಾರಿ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದ್ದು, ಒಟ್ಟು ₹9,96,659 ವಂಚಕರ ಪಾಲಾಗಿದೆ. ಬಳಿಕ ಸ್ನೇಹಿತನ ಮೊಬೈಲ್ ಈಗಾಗಲೇ ಹ್ಯಾಕ್ …
Read More »ಬಸ್ನಲ್ಲಿ ಮಹಿಳೆ ಕಿರಿಕ್ – ಸೀಟ್ಗಾಗಿ ಜಗಳವಾಡಿ ಕಂಡಕ್ಟರ್ ಮೇಲೆಯೇ ಹಲ್ಲೆ, ಮಹಿಳೆಗೆ ಧರ್ಮದೇಟು!
ಬೆಂಗಳೂರು: ಮದ್ಯದ ಅಮಲಿನಲ್ಲಿ ಬಸ್ಗೆ ಹತ್ತಿದ ಮಹಿಳೆಯೊಬ್ಬರು ಸೀಟಿನ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ಜಗಳವಾಡಿ, ಸಮಾಧಾನಪಡಿಸಲು ಬಂದ ಮಹಿಳಾ ಕಂಡಕ್ಟರ್ ಮೇಲೆಯೇ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬಳಿಕ ಕಂಡಕ್ಟರ್ ಹಾಗೂ ಕೆಲ ಸಹ ಪ್ರಯಾಣಿಕರು ಮಹಿಳೆಯನ್ನು ತಡೆದು ಹೊಡೆದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ಮಹಿಳೆ ಬಸ್ನಲ್ಲಿ ಗಲಾಟೆ ನಡೆಸಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಕಂಡಕ್ಟರ್ ಮೇಲೆ …
Read More »ಡಿಜಿಟಲ್ ಅರೆಸ್ಟ್ ಪ್ರಕರಣ: ವೃದ್ಧ ನಾಗರಿಕರಿಬ್ಬರನ್ನು ಬೆದರಿಸಿ 74 ಲಕ್ಷ ರೂ. ಸುಲಿಗೆ
ಉಡುಪಿ ಜಿಲ್ಲೆಯ ಬ್ರಹ್ಮಾವರದ 66 ವರ್ಷದ ಶೀಲಾ ಅವರಿಗೆ ನಕಲಿ ಪೊಲೀಸ್ ಅಧಿಕಾರಿಗಳು ವಾಟ್ಸಪ್ ವಿಡಿಯೊ ಕರೆ ಮಾಡಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ₹65 ಲಕ್ಷ ವಂಚಿಸಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿರುವುದಾಗಿ ಹೇಳಿ, ಪರಿಶೀಲನೆ ನೆಪದಲ್ಲಿ ಹಲವು ದಿನಗಳ ಕಾಲ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಸಂಶಯಾಸ್ಪದ ಹಣ ವರ್ಗಾವಣೆಯ ಮಾಹಿತಿ ಪಡೆದ ಬ್ರಹ್ಮಾವರ ಪಿಎಸ್ಐ ಅಶೋಕ್ ಮಳಬಗಿ ತಕ್ಷಣ ಮಹಿಳೆಯ ಮನೆಗೆ ತೆರಳಿ ಮತ್ತಷ್ಟು ₹15 ಲಕ್ಷ …
Read More »ನಿರ್ಮಲಾ ಸೀತಾರಾಮನ್ ಡೀಪ್ಫೇಕ್ ವಿಡಿಯೋ ನಂಬಿ 6.88 ಲಕ್ಷ ರೂ. ಕಳೆದುಕೊಂಡ ನಿವೃತ್ತ ಉದ್ಯೋಗಿ!
ಬೆಂಗಳೂರುದಲ್ಲಿ ಡೀಪ್ಫೇಕ್ ವಿಡಿಯೊ ಮೂಲಕ ನಿವೃತ್ತ ಉದ್ಯೋಗಿಯೊಬ್ಬರಿಗೆ ₹6.88 ಲಕ್ಷ ಸೈಬರ್ ವಂಚನೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿರುವಂತೆ ನಕಲಿ ವಿಡಿಯೊ ಸೃಷ್ಟಿಸಿ, ಹೆಚ್ಚಿನ ಲಾಭದ ಹೂಡಿಕೆ ಯೋಜನೆ ಎಂದು ನಂಬಿಸಲಾಗಿದೆ. ವಾಟ್ಸ್ಆ್ಯಪ್ ಕರೆ ಹಾಗೂ ವಿಡಿಯೊದಲ್ಲಿದ್ದ ಲಿಂಕ್ ಮೂಲಕ ಸಂತ್ರಸ್ತರಿಂದ ಹಂತ ಹಂತವಾಗಿ ₹6.88 ಲಕ್ಷವನ್ನು ವಂಚಕರ ಖಾತೆಗೆ ವರ್ಗಾಯಿಸಲಾಗಿದೆ. ನಂತರ ಹಣವೂ ಮರಳದಿದ್ದಾಗ ಮತ್ತು ಮತ್ತಷ್ಟು ಹೂಡಿಕೆ ಮಾಡಲು ಒತ್ತಾಯಿಸಿದಾಗ ವಂಚನೆ ಬೆಳಕಿಗೆ …
Read More »ಸಾಲ ಕೊಡದ ಬೇಕರಿ ಮಾಲಿಕನ ಮೇಲೆ ಪುಡಿರೌಡಿಗಳಿಂದ ಭೀಕರ ಹಲ್ಲೆ!
ಬೆಂಗಳೂರು ಆರ್.ಟಿ.ನಗರದಲ್ಲಿ ಸಾಲ ನೀಡಲು ನಿರಾಕರಿಸಿದ ಕಾರಣಕ್ಕೆ ಬೇಕರಿ ಮಾಲೀಕರಾದ ಚಂದ್ರಶೇಖರ್ ಶೆಟ್ಟಿ ಮತ್ತು ರೂಪಾ ಶೆಟ್ಟಿ ದಂಪತಿಗಳ ಮೇಲೆ ಪುಡಿ ರೌಡಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿದೆ. ಅಂಗಡಿಯೊಳಗೆ ನುಗ್ಗಿದ ಆರೋಪಿಗಳು ಸಾಮಗ್ರಿಗಳನ್ನು ಧ್ವಂಸಗೊಳಿಸಿ ದಂಪತಿಗಳಿಗೂ ಹಲ್ಲೆ ಮಾಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟ ಸಂತ್ರಸ್ತರ ಪರವಾಗಿ ನಿಂತಿದ್ದು, ದಂಪತಿಗಳೊಂದಿಗೆ ಆರ್.ಟಿ.ನಗರ ಪೊಲೀಸ್ ಠಾಣೆಗೆ …
Read More »ಮೀನು ತಿನ್ನಲು ಹೋದವನಿಗೆ ಮಚ್ಚಿನೇಟು – ಅಮಾಯಕ ಯುವಕನ ಜೀವಕ್ಕೆ ಕುತ್ತು ತಂದ ಗ್ಯಾಂಗ್ ವಾರ್!
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ಗ್ಯಾಂಗ್ವಾರ್ ವೇಳೆ ಅಮಾಯಕ ಯುವಕ ರಕ್ಷಿತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಮೀನು ತಿನ್ನಲು ಹೋಗಿದ್ದ ಆತನನ್ನು ಎದುರಾಳಿ ಗ್ಯಾಂಗ್ ಸದಸ್ಯನೆಂದು ತಪ್ಪಾಗಿ ಭಾವಿಸಿ ಲಾಂಗು-ಮಚ್ಚುಗಳಿಂದ ದಾಳಿ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡ ರಕ್ಷಿತ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಬೊಮ್ಮಸಂದ್ರದ ಮಂಜುನಾಥ್ ಹಾಗೂ ಚಂದಾಪುರದ ಶಿವ ನಡುವಿನ ಹಳೆಯ ವೈಷಮ್ಯವೇ ಘಟನೆಗೆ ಕಾರಣವಾಗಿದೆ. ಶಿವನ ಗ್ಯಾಂಗ್ನವನನೆಂದು …
Read More »ತಲವಾರು ಝಳಪಿಸಿದ ಆರೋಪಿಗೆ ನ್ಯಾಯಾಂಗ ಬಂಧನ
ಮಂಗಳೂರು: ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಶನಿವಾರ ತಲವಾರು ಝಳಪಿಸಿ ಭಯದ ವಾತಾವರಣ ಉಂಟು ಮಾಡಿದ್ದ ಯುವಕ ಬಂಟ್ವಾಳ ಮೂಲದ ರಾಜೇಶ್ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಈತ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ತೆರಳಿ ಅಲ್ಲಿ ಗಲಾಟೆ ಮಾಡಿ ತಲವಾರು ಝಳಪಿಸಿದ್ದ. ಬಳಿಕ ಆತನನ್ನು ಅಲ್ಲಿದ್ದ ಕೆಲವು ಯುವಕರು ಉಪಾಯದಿಂದ ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದು ಬಳಿಕ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಅಮಲು ಪದಾರ್ಥ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





