Breaking News

BigTv News

ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದ ಬಾಲಕ ವಶಕ್ಕೆ

ಕಾಸರಗೋಡು: ವಾಹನ ಚಾಲನಾ ಪರವಾನಗಿ ನಕಲಿಯಾಗಿ ತಯಾರಿಸಿ ಕೊಡುವ ಜಾಲದ ಬಗ್ಗೆ ಲಭಿಸಿದ ಮಾಹಿತಿಯನ್ವಯ ವೆಳ್ಳರಿಕುಂಡು ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದು, ಜುವೆನೈಲ್ ಆಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಾರಿಗೆ ಇಲಾಖೆಯ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಮತ್ತು ವೆಳ್ಳರಿಕುಂಡು ಆರ್.ಟಿ.ಒ. ಕಚೇರಿಯ ಅಧಿಕಾರಿಗಳು ವೆಳ್ಳರಿಕುಂಡ್‌ನಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ಹಾದಿಯಾಗಿ ಆಗಮಿಸಿದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ಅದನ್ನು ಚಲಾಯಿಸುತ್ತಿದ್ದ ಅಪ್ರಾಪ್ತ ವಯಸ್ಕನ ಡ್ರೈವಿಂಗ್ …

Read More »

ಆಸ್ತಿ ವಿಚಾರಕ್ಕೆ ಗಲಾಟೆ, ತಂದೆಯನ್ನೇ ಕೊಲೆಗೈದ ಪುತ್ರ

ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗ್ರಾಮದ ಬಳಿ ತಂದೆಯನ್ನೇ ಪಾಪಿ ಪುತ್ರ ಕೊಲೆ ಮಾಡಿದ್ದಾನೆ. 65 ವರ್ಷದ ಚಂದ್ರಣ್ಣ ಕೊಲೆಯಾದವರು. ಪುತ್ರ ಪ್ರಸನ್ನ ತಂದೆಯನ್ನೇ ಕೊಲೆಗೈದ ಆರೋಪಿಯಾಗಿದ್ದಾನೆ. ಕೆಲವು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪ್ರಸನ್ನ ಮದುವೆಯಾದ ನಂತರ ಮನೆಯನ್ನು ತೊರೆದಿದ್ದ. ಅಪ್ಪನ ಹೆಸರಲ್ಲಿದ್ದ 5 ಎಕರೆ ಜಮೀನಿಗಾಗಿ ಗಲಾಟೆ ಮಾಡುತ್ತಿದ್ದ. ಚಿಕ್ಕಪ್ಪ ಅಜ್ಜಪ್ಪನ ಮಾತು ಕೇಳಿ ತಂದೆಯ ಜೊತೆಗೆ ಆಸ್ತಿಗಾಗಿ ಗಲಾಟೆ ಮಾಡಿದ್ದ. ಗಲಾಟೆಯ ವೇಳೆ ಕೋಲಿನಿಂದ ಹೊಡೆದು ತಂದೆಯನ್ನು …

Read More »

ಚಿಕ್ಕಮಗಳೂರು | ಅರ್ಚಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ : ಪ್ರಕರಣ ದಾಖಲು

ಚಿಕ್ಕಮಗಳೂರು ತಾಲೂಕಿನ ನೆರಡಿ ಗ್ರಾಮದ ಪಂಜುರ್ಲಿ ದೈವಸ್ಥಾನದ ಅರ್ಚಕನ ವಿರುದ್ಧ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರ್ಚಕ ಶ್ರೀಧರ್ (54) ಆರೋಪಿಯಾಗಿದ್ದಾನೆ. ಪೂಜೆಯ ನೆಪದಲ್ಲಿ ಯುವತಿಯನ್ನು ತನ್ನ ಬಾಡಿಗೆ ಮನೆಗೆ ಕರೆಸಿ, ಕುಟುಂಬದವರಿಗೆ ತೊಂದರೆ ಕೊಡುವುದಾಗಿ ಬೆದರಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಿರಂತರ ದೌರ್ಜನ್ಯದಿಂದ ಯುವತಿ ಈಗ ಏಳು ತಿಂಗಳ …

Read More »

ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ, ಹೈಡ್ರೋಗಾಂಜಾ ಸಹಿತ ಮೂವರ ಬಂಧನ

ಉಡುಪಿಯ ಶಿವಳ್ಳಿ ಗ್ರಾಮದ ಬುಡ್ನಾರ್‌ನಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಹೊಂದಿದ್ದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಎಂ.ಡಿ.ಎಂ.ಎ ಪೌಡರ್, ಎಂ.ಡಿ.ಎಂ.ಎ ಟ್ಯಾಬ್ಲೆಟ್, ಹೈಡ್ರೋ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ವಿಜಯ ಪೂಜಾರಿ (36), ಪಿ.ಎ. ಮುಹಮ್ಮದ್ ಶಮ್ಮಾಸ್ (24) ಹಾಗೂ ಆಕಾಶ್ ಶೆಟ್ಟಿ (20) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಮಾದಕ ವಸ್ತುಗಳ ಜೊತೆಗೆ ಅವುಗಳ …

Read More »

ಮಕ್ಕಳಾಗದ ವಿಚಾರಕ್ಕೆ ದಂಪತಿ ನಡುವೆ ಕಲಹ: ಗೃಹಿಣಿ ಆತ್ಮಹತ್ಯೆ, ಪತಿ ವಿರುದ್ಧ ಕೇಸ್ ದಾಖಲು!

ಬೆಂಗಳೂರು ಉತ್ತರ ತಾಲೂಕಿನ ತೊರೆನಾಗಸಂದ್ರ ಗ್ರಾಮದಲ್ಲಿ ಕೌಟುಂಬಿಕ ಕಲಹ ಹಾಗೂ ವರದಕ್ಷಿಣೆ ಕಿರುಕುಳದಿಂದ ಬೇಸತ್ತ 25 ವರ್ಷದ ಕಾವ್ಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾವ್ಯ ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನವರಾಗಿದ್ದು, ಮೂರು ವರ್ಷಗಳ ಹಿಂದೆ ನವೀನ್ ಜೊತೆ ವಿವಾಹವಾಗಿದ್ದರು. ವಿವಾಹವಾಗಿ ಮೂರು ವರ್ಷ ಕಳೆದರೂ ಮಕ್ಕಳಾಗದ ಕಾರಣ ಪತಿ ಹಾಗೂ ಕುಟುಂಬಸ್ಥರು ಜಗಳವಾಡುತ್ತಿದ್ದು, ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ …

Read More »

ಗುರಾಯಿಸಿದ ಕಾರಣಕ್ಕೆ ನೇಪಾಳ ಮೂಲದ ಯುವಕನ ಕೊಲೆ: ಐವರು ಆರೋಪಿಗಳ ಸೆರೆ

ಬೆಂಗಳೂರಿನ ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ನೇಪಾಳ ಮೂಲದ ಯುವಕ ಗಜೇಂದ್ರ ವಿಶ್ವಕರ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 13ರಂದು ವಾಲಿಬಾಲ್ ಆಡುತ್ತಿದ್ದ ವೇಳೆ ಆರೋಪಿಗಳು ಗಜೇಂದ್ರನ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ರಾತ್ರಿ ಮನೆ ಬಳಿ ಮಾರಕಾಸ್ತ್ರಗಳಿಂದ ಮತ್ತೆ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡ ಗಜೇಂದ್ರ ಚಿಕಿತ್ಸೆ ಫಲಕಾರಿಯಾಗದೆ ಜುಲೈ 15ರಂದು ಮೃತಪಟ್ಟಿದ್ದರು. ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಪರೋಕ್ಷವಾಗಿ ಸಹಕಾರ …

Read More »

ಸೈಬರ್​​ ವಂಚಕರ ಮಾತು ನಂಬಿ 22 ಲಕ್ಷ ರೂಪಾಯಿ ಕಳೆದುಕೊಂಡ ನಿವೃತ್ತ ಬ್ಯಾಂಕ್ ನೌಕರ

ಉಡುಪಿಯಲ್ಲಿ ಸೈಬರ್ ವಂಚಕರು ಪೊಲೀಸ್, ಇಡಿ ಹಾಗೂ ಸಿಬಿಐ ಅಧಿಕಾರಿಗಳೆಂದು ನಂಬಿಸಿ 76 ವರ್ಷದ ನಿವೃತ್ತ ಬ್ಯಾಂಕ್ ನೌಕರನಿಂದ ₹22 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸಾಪ್ ವಿಡಿಯೋ ಕರೆ ಮಾಡಿ, ಅವರ ಹೆಸರಿನಲ್ಲಿ ಮನಿ ಲಾಂಡರಿಂಗ್ ಪ್ರಕರಣವಿದೆ ಎಂದು ಸುಳ್ಳು ಹೇಳಿ ಭಯ ಹುಟ್ಟಿಸಿದ್ದಾರೆ. ಬಳಿಕ ಹಣ ಪರಿಶೀಲನೆ ಹೆಸರಿನಲ್ಲಿ ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸುವಂತೆ ನಂಬಿಸಿದ್ದಾರೆ. ಆರೋಪಿಗಳ ಸೂಚನೆಯಂತೆ ನಿವೃತ್ತ …

Read More »

ಮುಸ್ಲಿಂ ಯುವತಿ ಜತೆ ಹೋಗುತಿದ್ದ ಹಿಂದೂ ಯುವಕನ ಮೇಲೆ ಹಲ್ಲೆ

ನೆಲಮಂಗಲ: ಮುಸ್ಲಿಂ ಯುವತಿಯೊಂದಿಗೆ ಹಿಂದೂ ಯುವಕ ಓಡಾಡಿದ್ದಕ್ಕೆ ತಾಲೂಕಿನ ಸೋಂಪುರ ಹೋಬಳಿಯ ಲಕ್ಕೂರು ಗ್ರಾಮದ ಯುವಕನನ್ನು ಮೇಲೆ ಹಲ್ಲೆ ನಡೆಸಿ ವಿಡಿಯೋ ಮಾಡಿ ವೈರಲ್‌ ಮಾಡಿರುವ ಘಟನೆ ದಾಬಸ್‌ ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಿಂದ ಮನನೊಂದ ಯುವತಿ ವಿಷ ಸೇವನೆ ಮಾಡಿದ್ದು, ಗ್ರಾಮದ ತಹರೀಕ್‌ ಪಾಷ, ಸಯ್ಯದ್‌ ಕರೀಂ, ಸೋಹೇಲ್‌ ಪಾಷ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಹಿರಿಯರ ಸಮ್ಮುಖ ದಲ್ಲಿ ಠಾಣೆಯಲ್ಲಿ ರಾಜಿಸಂಧಾನ ನಡೆಸಲಾಗಿದೆ …

Read More »

ಬುದ್ಧಿವಾದ ಹೇಳಿದ ತಂದೆಯನ್ನೇ ಕೊಲೆಗೈದ ಪುತ್ರನಿಗೆ ಜೀವಾವಧಿ ಶಿಕ್ಷೆ

ಬೆಂಗಳೂರಿನಲ್ಲಿ ಬುದ್ಧಿವಾದ ಹೇಳಿದ ತಂದೆಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದ ಪುತ್ರ ರಘುಗೆ 68ನೇ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ. ಮದ್ಯದ ಚಟಕ್ಕೆ ಹಣ ನೀಡುವಂತೆ ಪೋಷಕರನ್ನು ಪೀಡಿಸುತ್ತಿದ್ದ ರಘುಗೆ, ಕೆಲಸಕ್ಕೆ ಹೋಗಿ ದುಡಿಯುವಂತೆ ತಂದೆ ರಾಮಚಂದ್ರ ಬುದ್ಧಿವಾದ ಹೇಳಿದ್ದರು. ಇದರಿಂದ ಕೋಪಗೊಂಡ ಆರೋಪಿ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ …

Read More »

45 ಗ್ರಾಂ ಚಿನ್ನ, ಬೈಕ್ ಕೊಟ್ಟರೂ ನಿಲ್ಲದ ವರದಕ್ಷಿಣೆ ಕಿರುಕುಳ : ಮನನೊಂದ ಮಹಿಳೆ ಆತ್ಮಹತ್ಯೆ!

ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 31 ವರ್ಷದ ಮೈಮೋನಿಸ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಗಂಡ ಜುನೈದ್ ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಮದುವೆ ವೇಳೆ 45 ಗ್ರಾಂ ಚಿನ್ನ ಹಾಗೂ ಬೈಕ್ ನೀಡಿದ್ದರೂ, ಇನ್ನಷ್ಟು ಚಿನ್ನ ಮತ್ತು ಹಣ ತರುವಂತೆ ಗಂಡ ಹಾಗೂ ಮಾವ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ನಿರಂತರ ಮಾನಸಿಕ ಕಿರುಕುಳ ಮತ್ತು …

Read More »