Breaking News

ಚಿಕ್ಕಮಗಳೂರು | ಅರ್ಚಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ : ಪ್ರಕರಣ ದಾಖಲು

ಚಿಕ್ಕಮಗಳೂರು ತಾಲೂಕಿನ ನೆರಡಿ ಗ್ರಾಮದ ಪಂಜುರ್ಲಿ ದೈವಸ್ಥಾನದ ಅರ್ಚಕನ ವಿರುದ್ಧ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರ್ಚಕ ಶ್ರೀಧರ್ (54) ಆರೋಪಿಯಾಗಿದ್ದಾನೆ. ಪೂಜೆಯ ನೆಪದಲ್ಲಿ ಯುವತಿಯನ್ನು ತನ್ನ ಬಾಡಿಗೆ ಮನೆಗೆ ಕರೆಸಿ, ಕುಟುಂಬದವರಿಗೆ ತೊಂದರೆ ಕೊಡುವುದಾಗಿ ಬೆದರಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಿರಂತರ ದೌರ್ಜನ್ಯದಿಂದ ಯುವತಿ ಈಗ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಯ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *