ಮಹಾ ನಗರದಲ್ಲಿ 26 ಪ್ರತಿಪಕ್ಷ ನಾಯಕರು ಸೇರುತ್ತಿದ್ದೇವೆ. 2ನೇ ಸಭೆ ಇದಾಗಿದೆ ಎಂದು ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು “ನಾವು ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ. ಇದೊಂದು ಗೇಮ್ ಚೇಂಜರ್ ಸಭೆಯಾಗಲಿದೆ.
ಇಲ್ಲಿ ಅಸೆಂಬ್ಲಿ ಸಮಾವೇಶ ನಡೆಯುತ್ತಿದೆ. ರಾಷ್ಟ್ರೀಯ ಪ್ರತಿಪಕ್ಷ ನಾಯಕರೆಲ್ಲ ಭಾಗವಹಿಸುತ್ತಿದ್ದು, ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದೇವೆ” ಎಂದು ತಿಳಿಸಿದರು.ಪಕ್ಷಗಳು ಒಂದೇ ಸಾಮಾನ್ಯ ವಿಷಯಕ್ಕಾಗಿ ಸೇರುತ್ತಿದ್ದೇವೆ. ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಮೂಲಭೂತ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕಿದೆ. ಬಿಜೆಪಿ ಸಿಬಿಐ, ಇಡಿ ಮೂಲಕ ವಿಪಕ್ಷಗಳ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಮಹಾರಾಷ್ಟ್ರ ರಾಜಕಾರಣದ ಬೆಳವಣಿಗೆ ಕೂಡ ಇದರ ಭಾಗ ಎಂದು ಅವರು ವಿವರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





