ಶಿವಮೊಗ್ಗದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಲಾರಿಯನ್ನು ಉಪನಗರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರ ಮಾಹಿತಿ ನೆರವಾಗಿದೆ. ಮಾಂಸದ ಮೂಲ ಮತ್ತು ಸಾಗಣೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನೊಂದೆಡೆ, ರಿಪ್ಪನ್ಪೇಟೆ ಭಾಗದಲ್ಲಿ ಗೋವು ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಂಡು ಪೊಲೀಸರು …
Read More »ಶಿವಮೊಗ್ಗದಲ್ಲಿ ಯುವತಿ ಆತ್ಮಹತ್ಯೆ; ತಾಯಿ ಜೊತೆ ಜಗಳ ಕಾರಣ ಶಂಕೆ
ಶಿವಮೊಗ್ಗ: ನಗರದ ಕೀರ್ತಿನಗರದ 1ನೇ ಕ್ರಾಸ್ನಲ್ಲಿ ಯುವತಿಯೊಬ್ಬರು ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಜಿತಾ (22) ಮೃತರು. ಮನೆಯ ಕೊಠಡಿಯಲ್ಲಿದ್ದ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾರೆ. ತಾಯಿ ಜೊತೆಗಿನ ಜಗಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ವಿನೋಬನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »12 ವರ್ಷದ ಬಾಲಕಿ ಅತ್ಯಾಚಾರ, ಅಪಹರಣ ಪ್ರಕರಣದಲ್ಲಿ ಮೂವರಿಗೆ ಜೈಲು
ಕಲಬುರಗಿಯಲ್ಲಿ 12 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಅಪಹರಣ ಪ್ರಕರಣದಲ್ಲಿ ಮೂವರು ಸ್ನೇಹಿತರಿಗೆ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಮುಖ ಆರೋಪಿ ನಾಗೇಶ ಅಲಿಯಾಸ್ ಬಾಬು ರಾಠೋಡಗೆ 25 ವರ್ಷ ಜೈಲು ಶಿಕ್ಷೆ ಮತ್ತು ₹45 ಸಾವಿರ ದಂಡ ವಿಧಿಸಲಾಗಿದೆ. ಆರೋಪಿ ನಾಗೇಶ ಪ್ರೀತಿಸುವುದಾಗಿ ನಂಬಿಸಿ ಬಾಲಕಿಯ ಮೇಲೆ ಮೂರು ಬಾರಿ ಅತ್ಯಾಚಾರ ಎಸಗಿದ್ದ. ಬಳಿಕ ಸ್ನೇಹಿತ ಶಿವರಾಜನೂ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದರೆ, …
Read More »ಅತ್ತಿಗೆಯಿಂದ ಇಬ್ಬರು ಮೈದುನರ ಕೊಲೆ; ಏಳು ಮಂದಿ ಬಂಧನ
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ನುಗ್ಗಾನಟ್ಟಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆ ನಡೆದ ದ್ವಿಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅತ್ತಿಗೆ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಪೊಲೀಸರ ಮಾಹಿತಿ ಪ್ರಕಾರ, ಮಗನಿಗೆ ಆಸ್ತಿಯಲ್ಲಿ ಪಾಲು ನೀಡುವ ವಿಚಾರವಾಗಿ ಉಂಟಾದ ಕೌಟುಂಬಿಕ ಕಲಹವೇ ಕೊಲೆಗೆ ಕಾರಣವಾಗಿದೆ. ಗ್ರಾಮದ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಮೂರು ತಿಂಗಳೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಎಸ್ಪಿ ಕೆ. ರಾಮರಾಜನ್ …
Read More »ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ
ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಬಳಿಕ ತೀವ್ರ ದುಃಖದಲ್ಲಿದ್ದ ದೇವೇಗೌಡರ ಪಕ್ಕದಲ್ಲೇ ಕುಳಿತು ಅವರ ಕೈ ಹಿಡಿದು ಆತ್ಮೀಯವಾಗಿ ಸಾಂತ್ವನ ಹೇಳಿದರು. ರಾಜಕೀಯವನ್ನು ಬದಿಗಿಟ್ಟು ಹಿರಿಯ ನಾಯಕನಿಗೆ ಧೈರ್ಯ ತುಂಬಿದ ಈ …
Read More »ದೇವಸ್ಥಾನದ ಚೆಕ್ ನಕಲಿ ಸಹಿ ಪ್ರಕರಣ: ಡಾಟಾ ಎಂಟ್ರಿ ಆಪರೇಟರ್ ಬಂಧನ
ಕಾರ್ಕಳ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್ಗಳಿಗೆ ನಕಲಿ ಸಹಿ ಮಾಡಿ ಹಣ ಪಡೆಯಲು ಯತ್ನಿಸಿದ ಆರೋಪದಡಿ ದೇವಸ್ಥಾನದ ಮಾಜಿ ಡಾಟಾ ಎಂಟ್ರಿ ಆಪರೇಟರ್ ಅಕ್ಷಯ ದೇವಾಡಿಗ (29) ಅವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ 2022ರಿಂದ 2026ರ ಮೇ 7ರವರೆಗೆ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದ. ಲೆಕ್ಕ ಪರಿಶೋಧನೆ ವೇಳೆ ಹಣಕಾಸು ಅಕ್ರಮ ಹಾಗೂ ಕರ್ತವ್ಯ ಲೋಪ ಬೆಳಕಿಗೆ ಬಂದ ಬಳಿಕ ವಿವರಣೆ ನೀಡದೆ ರಾಜೀನಾಮೆ ನೀಡಿ …
Read More »ವಿಕಲಾಂಗ ಮಹಿಳೆ ಮೇಲೆ ಹಲ್ಲೆ; ಪ್ರಕರಣ ದಾಖಲು
ಕೊಲ್ಲೂರು: ಇಲ್ಲಿನ ಹೆಗ್ಡೆಹಕ್ಲು ನಿವಾಸಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿರುವ ಚಂದ್ರಾವತಿ ಎಂಬ ವಿಕಲಾಂಗ ಮಹಿಳೆಯೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ಚಂದ್ರಾವತಿ ಅವರು ನೀಡಿದ ದೂರಿನ ಪ್ರಕಾರ, ತಮ್ಮ ಮನೆಯ ಸಮೀಪದ ಯಶೋಧ ಎನ್ನುವವರು ಮನೆಯ ಹತ್ತಿರ ಹೋಗುವ ದಾರಿಗೆ ಕಲ್ಲು-ಗಿಡ ಅಡ್ಡವಿಟ್ಟು, 3 ಚಕ್ರದ ಗಾಡಿ ತೆಗೆದುಕೊಂಡು ಹೋಗುವಾಗ ಚಕ್ರ ತಿರುಗಿ ಬಿಳುವ ಹಂತದಲ್ಲಿದ್ದು, ಅಡ್ಡವಿಟ್ಟ ಕಲ್ಲು ತೆಗೆಯಲು ಹೋದಾಗ, ಯಶೋಧ …
Read More »ಆಕಸ್ಮಿಕ ಬೆಂಕಿ: ಸ್ಕಾರ್ಪಿಯೋ ಕಾರು ಸುಟ್ಟು ಭಸ್ಮ
ವಿಜಯಪುರ: ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ (ಜು.18) ನಡೆದಿದೆ. ತಿಡಗುಂದಿಯ ದೇವದಾಸ್ ಜಾಧವ್ ಎಂಬುವವರಿಗೆ ಸೇರಿದ ಸ್ಕಾರ್ಪಿಯೋ ಕಾರು ಇದಾಗಿದ್ದು, ಮಾನಸ ಗಂಗೋತ್ರಿ ಶಾಲೆ ಎದುರು ನಿಲ್ಲಿಸಲಾಗಿತ್ತು. ಕಾರಿಗೆ ಬೆಂಕಿ ಬಿದ್ದ ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅಷ್ಟು ಹೊತ್ತಿಗಾಗಲೇ ಕಾರು ಸುಟ್ಟು ಭಸ್ಮವಾಗಿದೆ.
Read More »ತಲವಾರು ಹಿಡಿದು ಮೊಬೈಲ್ ಅಂಗಡಿಗೆ ನುಗ್ಗಿ ಆತಂಕ ಸೃಷ್ಟಿಸಿದ ಯುವಕ
ಮೂಡುಬಿದಿರೆ: ಬಸ್ ನಿಲ್ದಾಣದ ಮೊಬೈಲ್ ಅಂಗಡಿಗೆ ಶನಿವಾರ ಮಧ್ಯಾಹ್ನ ತಲವಾರು ಹಿಡಿದು ನುಗ್ಗಿದ ಯುವಕ ಗಲಾಟೆ ನಡೆಸಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದಾನೆ. ಗ್ರಾಹಕರು ಅಂಗಡಿಯಲ್ಲಿದ್ದ ವೇಳೆ ತಲವಾರು ಝಳಪಿಸಿದ ಯುವಕನನ್ನು ಸ್ಥಳೀಯ ಯುವಕರು ಸಮಯಪ್ರಜ್ಞೆಯಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರಂಭದಲ್ಲಿ ಪೆರಿಂಜೆಯವನು ಎಂದು ಹೇಳಿದ್ದ ಆತ, ಬಳಿಕ ಕೋಟೆಬಾಗಿಲಿನ ಸಂದೇಶ್ ಎಂಬಾತ ತಲವಾರು ನೀಡಿದ್ದಾನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ತಲವಾರು ಹಿಡಿದು ಅಂಗಡಿಗೆ ನುಗ್ಗಿ ಗಲಾಟೆ ನಡೆಸಿದ ದೃಶ್ಯ …
Read More »ಚಿನ್ನದ ಅಂಗಡಿ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಾಲೀಕನೇ ಕಳ್ಳ..!
ಬೆಳಗಾವಿ: ನಗರದ ರಾಮದೇವ ಗಲ್ಲಿಯ ‘ವಿ.ಪಿ. ವೇರ್ಣೇಕರ ಮತ್ತು ಸನ್ಸ್’ ಚಿನ್ನಾಭರಣ ಮಳಿಗೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ತನಿಖೆಯಲ್ಲಿ ಅಚ್ಚರಿಯ ತಿರುವು ಸಿಕ್ಕಿದೆ. ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಅಂಗಡಿ ಮಾಲೀಕ ಕೃಷ್ಣಾನಂದ ವಿಶ್ವನಾಥ ವೇರ್ಣೇಕರನೇ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜುಲೈ 17ರಂದು ಕಳ್ಳತನದ ದೂರು ದಾಖಲಿಸಿದ್ದ ಕೃಷ್ಣಾನಂದನ ಹೇಳಿಕೆಯಲ್ಲಿ ಅನುಮಾನ ಕಂಡ ಖಡೇಬಜಾರ್ ಪೊಲೀಸರು ಸ್ಥಳ ಪರಿಶೀಲನೆ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





