ಬೆಂಗಳೂರು: ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಮಲವನ್ನು ಅರಳಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ಕೇಂದ್ರ ನಾಯಕರು ಸಂಪೂರ್ಣವಾಗಿ ಕರ್ನಾಟಕಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟಿರುವಂತೆ ಕಾಣುತ್ತಿದೆ. ಈಗಾಗಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯಕ್ಕೆ ಬಂದಿದ್ದು, ಬರುವ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹೌದು ಈ ವರ್ಷ ಆರಂಭವಾಗುತ್ತಿದ್ದಂತೆ ಎರಡು ಬಾರಿ ರಾಜ್ಯ ಪ್ರವಾಸ ಮಾಡಿರುವ ಪ್ರಧಾನಿ ಮೋದಿ ಫೆಬ್ರವರಿ 6ರಂದು ರಾಜ್ಯಕ್ಕೆ ಬರಲಿದ್ದಾರೆ. ವಿಶೇಷವೆಂದರೆ …
Read More »ಒಂದೊಂದು ರಾಜ್ಯಕ್ಕೆ ಒಂದೊಂದು ಸ್ಟ್ರ್ಯಾಟಜಿ ಇದೆ ಅದನ್ನ ನಮ್ಮ ಪಕ್ಷ ಮಾಡುತ್ತೆ.
ಹುಬ್ಬಳ್ಳಿ : ಚುನಾವಣೆ ಹೊಸ್ತಿಲಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಯ ಕಚೇರಿಯಲ್ಲಿ ಯಾವುದೇ ಅಧಿಕೃತ ಚರ್ಚೆ ಆಗಿಲ್ಲ, ಔಪಚಾರಿಕವಾಗಿ ಚರ್ಚೆ ನಡೆದಿದೆ, ಒಂದು ವೇಳೆ ಚರ್ಚೆ ಆಗಿದ್ದರೆ ನಾನು ಹೊಗುತ್ತಿದ್ದೆ . ಇಲ್ಲಿ ಹಿರಿಯ ನಾಯಕರ ಕಡೆ ಗಣನೆ ಆಗುವ ಪ್ರಶ್ನೆ ಬರಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಆಪರೇಷನ್ ಹಸ್ತ ಇದು ಮಾಧ್ಯಮ ಸೃಷ್ಟಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿಲ್ಲ, ಸಿದ್ದರಾಮಯ್ಯ ನವರು ಹೇಳಿಲ್ಲ. ಇದು …
Read More »ಆಸ್ತಿ ವಿಷಯ ಅಳಿಯನಿಂದಲ್ಲೇ ಮಾವನ ಕೊಲೆ, ಸಿಸಿ ಕ್ಯಾಮೆರಾದಲ್ಲಿ ಸೆರೆ
ಹುಬ್ಬಳ್ಳಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಅಳಿಯನೇ ಮಾವನನ್ನು ಭೀಕರವಾಗಿ 20 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸುಳ್ಳ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸುಳ್ಳದ ಗ್ರಾಮದ ಶಿವಪ್ಪ ಎಂಬಾತನ ಜೊತೆ ಆತನ ಅಳಿಯ ಆಸ್ತಿಯ ವಿಚಾರಕ್ಕೆ ಜಗಳ ತೆಗೆದಿದ್ದ ಇದೇ ವೇಳೆ ಊರಿನಲ್ಲಿರುವ ಹಾಲಿನ ಕೇಂದ್ರದ ಮುಂದೆಯೇ ಚಾಕುವಿನಿಂದ 22 ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ …
Read More »ಪೆಟ್ರೋಲ್ ಟ್ಯಾಂಕರ್ ಏಕಾಏಕಿ ವ್ಯಕ್ತಿಯೋರ್ವನಿಗೆ ಡಿಕ್ಕಿ, ವ್ಯಕ್ತಿ ಸ್ಥಳದಲ್ಲಿಯೇ ಸಾವು
ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದ ಬಳಿಯ ನವಲಗುಂದ ರಸ್ತೆಯಲ್ಲಿ ಪೆಟ್ರೋಲ್ ಟ್ಯಾಂಕರ್ ವೊಂದು ಏಕಾಏಕಿ ವ್ಯಕ್ತಿಯೋರ್ವನಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಥಳದಲ್ಲಿಯೇ ಅಸುನೀಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ನೂರಸಾಬ್ ಕಿರೇಸೂರ ಎಂಬ ವ್ಯಕ್ತಿಯೇ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಈತ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಜರುಗಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ …
Read More »ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮಾವೇಶ
ಬೆಳಗಾವಿ : ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮಾವೇಶ ನಡೆಸಿದ್ದು, ಸಮಾವೇಶದಲ್ಲಿ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಕದಲ್ಲೇ ಮೊದಗಾ ಗ್ರಾಮದಲ್ಲಿ ಒಂದು ಪೆಂಡಾಲ್ ಹಾಕಿ ಕುಕ್ಕರ್ ಕೊಡುತ್ತಿದ್ದಾರೆ ಎಂದು ಹೇಳಿದರು. ಈ ವೇಳೆ ಕುಕ್ಕರ್ ಅಲ್ಲ ಮಿಕ್ಸರ್ ಅಂತಾ ಜನ ಹೇಳಿದರು. ಒಂದು ಡಬ್ಬಿ ಕೊಟ್ಟಿದ್ದು ಅದು 70 ರಿಂದ 80 ರೂ. ಇರಬಹುದು. ಮಿಕ್ಸರ್ ಒಂದು ಆರು ಏಳೂ …
Read More »ಪಾರ್ಕಿಂಗ್ ಮಾಫಿಯಾ- ಟಿಕೆಟ್ ಜೊತೆಗೆ ಸಾರ್ವಜನಿಕರ ಜೇಬಿಗೆ ಕತ್ತರಿ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆ ಸಾರ್ವಜನಿಕರನ್ನು ಹೈರಾಣ ಮಾಡಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನಿಗದಿ ಮಾಡಿರುವ ದರ ಒಂದಾದರೇ ವಸೂಲಿ ಮಾಡುವ ದರವೇ ಬೇರೆಯಾಗಿದ್ದು, ಸಾರ್ವಜನಿಕರೇ ಸ್ಪೋಟಕ ಮಾಹಿತಿ ಹೊರಹಾಕಿದ್ದು, ಹಾಡಹಗಲೇ ನಡೆಯುತ್ತಿರುವ ಪಾರ್ಕಿಂಗ್ ಮಾಫಿಯಾ ಬಯಲಿಗೆ ಎಳೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸಾಕಷ್ಟು ಕಟ್ಟಡಗಳು ಪಾರ್ಕಿಂಗ್ ಜಾಗೆಯನ್ನು ನುಂಗಿ ನೀರು ಕುಡಿದಿವೆ. ಅಲ್ಲದೇ ವಾಹನ ಸವಾರರಿಗೆ ರಸ್ತೆಯಲ್ಲಿ ಕರವನ್ನು ವಸೂಲಿ ಮಾಡಿ ಪಾರ್ಕಿಂಗ್ ಮಾಡಲು ಟೆಂಡರ್ …
Read More »ಕಾಂಗ್ರೆಸ್ನವರು ಐಸಿಯುನಿಂದ ಹೊರಗೆ ಬರಬೇಕು-ಮಾಜಿ ಸಿಎಂ ಶೆಟ್ಟರ್
ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೋಡಿದ್ರೆ ಒಂದು ಸಣ್ಣ ಹುಡುಗ ಕೂಡಾ ಭಯ ಪಡುವುದಿಲ್ಲ, ಅದರಲ್ಲಿ ವಿಶ್ವದ ನಂಬರ್ ಒನ್ ನಾಯಕ ನರೇಂದ್ರ ಮೋದಿ ಅವರು ಭಯ ಪಡುತ್ತಾರೆಂದರೆ ಇದು ಈ ವರ್ಷದ ಜೋಕ್ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ನೋಡಿದ್ರೆ ನರೇಂದ್ರ ಮೋದಿ ಹಾಗೂ ಆರ್ಎಸ್ಎಸ್ನವರಿಗೆ ಭಯ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ …
Read More »11 ನೇ ಒಣಮೆಣಸಿನಕಾಯಿ ಮೇಳ ಉದ್ಘಾಟನೆ
ಹುಬ್ಬಳ್ಳಿ ಜನೇವರಿ 20 ರಿಂದ 22 ರವರೆಗೆ 3 ದಿನಗಳ ಕಾಲ ಒಣಮೆಣಸಿನಕಾಯಿ ಮೇಳ ನಡೆಯಲಿದೆ. ಒಣಮೆಣಸಿನಕಾಯಿ ಮೇಳದಿಂದ ಮೆಣಸಿನಕಾಯಿ ಬೆಳೆದ ರೈತರಿಗೆ ಯೋಗ್ಯ ಮಾರುಕಟ್ಟೆ ದೊರೆತಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು. ಇಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಅಮರಶಿವ …
Read More »ಜಿಲ್ಲಾ ರಸ್ತೆ ಸುರಕ್ಷತಾ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ
ಅವಳಿನಗರದ ಕಾಮಗಾರಿಗಳಿಗೆ ಖುದ್ದು ಭೇಟಿ, ಪರಿಶೀಲನೆ; ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಜ.26 ರಿಂದ ಡಿಜಿಟಲ್ ಪೇರ್ ಮೀಟರ್ ಅಳವಡಿಕೆ ಪರಶೀಲನಾ ಅಭಿಯಾನ, ತಪ್ಪಿದವರಿಗೆ ರೂ. 5 ಸಾವಿರ ದಂಡ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಧಾರವಾಡ : ಅವಳಿನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ.ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಮಹಾನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಗುರುತಿಸಿ, ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸದ್ಯದಲ್ಲಿಯೇ ಸಂಭಂದಿಸಿದ ಅಧಿಕಾರಿ ಮತ್ತು …
Read More »ಸಂಚಾರಿ ಪೊಲೀಸರಿಂದ ರಾಷ್ಟ್ರೀಯ ರಸ್ತೆ ಸುರಕ್ಷಿತ ಸಪ್ತಾಹ
ಧಾರವಾಡ: ಧಾರವಾಡ ಸಂಚಾರಿ ಪೊಲೀಸರಿಂದ ರಾಷ್ಟ್ರೀಯ ರಸ್ತೆ ಸುರಕ್ಷಿತ ಸಪ್ತಾಹ ಕಾರ್ಯಕ್ರಮವನ್ನು ಇಂದು ಧಾರವಾಡದ ಕಲಾಭವನದಿಂದ ಆರಂಭಿಸಲಾಯಿತು. ವಿವೇಕಾನಂದ ಸರ್ಕಲ್ ಮಾರ್ಗವಾಗಿ ಅಕ್ಕಿಪೇಟೆ ವರೆಗೂ ಸಂಚರಿಸಿ ಸಾರ್ವಜನಿಕರಿಗೆ ಸಂಚಾರಿ ಸುರಕ್ಷತಾ ಬಗ್ಗೆ ತಿಳುವಳಿಕೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಧಾರವಾಡ ಸಂಚಾರಿ ಸಿಬ್ಬಂದಿ ರಸ್ತೆ ಸುರಕ್ಷತಾ ಬಗ್ಗೆ ಮಾಹಿತಿ ನೀಡಿ ಎಲ್ಲಾ ವಿದ್ಯಾರ್ಥಿಗಳಿಗು ಕೂಡ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಸಂಚಾರಿ ಪೊಲೀಸ್ ಎಸಿಪಿ ವಿನೋದ್ ಮುಕ್ತದಾರ್, ಸಂಚಾರಿ ಠಾಣೆ ಸಿಪಿಐ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





