Breaking News

ರ‍್ಯಾಗಿಂಗ್‌ಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ, ವಿಡಿಯೋ ಮಾಡಿ ಟಾಪರ್ ಸಾವು!!

ಕಾಲೇಜುಗಳಲ್ಲಿ ಎಷ್ಟೇ ಹೇಳಿದರೂ ಸಹ, ಅದೆಷ್ಟೇ ಕಠಿಣ ನಿಯಮಗಳನ್ನ ಜಾರಿಗೆ ತಂದರೂ ಸಹ ರ‍್ಯಾಗಿಂಗ್‌ ಮಾತ್ರ ಕಡಿಮೆ ಆಗುತ್ತಿಲ್ಲ. ಈ ರ‍್ಯಾಗಿಂಗ್‌ಗೆ ಹೆದರಿ ಈಗಾಗಲೇ ಅನೇಕ ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದೀಗ ಅದೇ ರೀತಿಯ ಪ್ರಕರಣವೊಂದು ನಡೆದಿದ್ದು, ನೆಲಮಂಗಲದ ನಂದರಾಮಯ್ಯನ ಪಾಳ್ಯದಲ್ಲಿ ರ‍್ಯಾಗಿಂಗ್‌ಗೆ ಹೆದರಿ ಆರ್ಕಿಟೆಕ್ಚರ್ ವಿದ್ಯಾರ್ಥಿ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಅರುಣ್ ಆರ್ಕಿಟೆಕ್ಚರ್ ವಿದ್ಯಾರ್ಥಿಯಾಗಿದ್ದು, ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ,.ಕಾಲೇಜಿನಲ್ಲಿ ಆಗುತ್ತಿದ್ದ ಹಿಂಸೆಯ ಬಗ್ಗೆ ಹೇಳಿಕೊಂಡಿದ್ದಾನೆ. ಸ್ನೇಹಿತರು ನನ್ನ ಬೆನ್ನ ಹಿಂದೆ ಕೆಟ್ಟ ಕೆಟ್ಟದಾಗಿ ಮಾತನಾಡುತ್ತಾರೆ ಎಂದೆಲ್ಲಾ ತನ್ನ ಕಷ್ಟವನ್ನ ಹೇಳಿಕೊಂಡಿದ್ದ. ಈ ವಿಡಿಯೋವನ್ನ ಕಾಲೇಜಿನ ಗ್ರೂಪ್‌ಗೆ ಹಾಕಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Share News

About BigTv News

Check Also

ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು

ಮೈಸೂರು: ಕೇರಳದಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಪಡೆದಿದ್ದ 31 ವರ್ಷದ ಧನೇಶ್ ಎಸ್. ನಾಯರ್ ಅಲಿಯಾಸ್ ಡ್ಯಾನಿ, ಮೈಸೂರಿನ …

Leave a Reply

Your email address will not be published. Required fields are marked *