Breaking News

BigTv News

ಬೆಂಗಳೂರು: ಡಿಸಿಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ವಜ್ರಹನುಮಾನ ನಗರದ ನಿವಾಸಿಗಳು, ವಸತಿ ನಿರ್ಮಾಣಕ್ಕೆ ಪಡೆದ ಪರವಾನಗಿಯನ್ನು ದುರುಪಯೋಗಪಡಿಸಿಕೊಂಡು ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಸಿಟಿ ಸರ್ವೆ ನಂ. 1878/K/158ರ ಪ್ಲಾಟ್‌ನಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಧಾರ್ಮಿಕ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಮನವಿಯಲ್ಲಿ, ಈ ವಿಷಯವಾಗಿ ಪ್ರಶ್ನಿಸಿದಾಗ ಸಂಬಂಧಪಟ್ಟವರು ಸಮರ್ಪಕ ಉತ್ತರ ನೀಡಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಬೆಳವಣಿಗೆಯಿಂದ ಸುತ್ತಮುತ್ತಲಿನ …

Read More »

ಬೆಂಗಳೂರು: ಡಿಸಿಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ವಂಚಕರು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಾಣಸವಾಡಿ ನಿವಾಸಿಯೊಬ್ಬರು ₹40 ಸಾವಿರ ಕಳೆದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಚಕರು ಡಿಸಿಪಿ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಸಿಆರ್‌ಪಿಎಫ್‌ನಿಂದ ನಿವೃತ್ತಿಯಾಗುತ್ತಿರುವ ಅಧಿಕಾರಿಯ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡಲಾಗುತ್ತಿದೆ ಎಂದು ನಂಬಿಸಿ …

Read More »

10 ರೂ.ವಿಷಯದಲ್ಲಿ ಜಗಳ : ಚಹಾ ವ್ಯಾಪಾರಿಯಿಂದ ಕಾರ್ಮಿಕನ ಹತ್ಯೆ

ನಾಗ್ಪುರ (ಮಹಾರಾಷ್ಟ್ರ),ಜು.13: ನಾಗ್ಪುರದ ಕಪಿಲ್‌ನಗರ ಪ್ರದೇಶದಲ್ಲಿ ರವಿವಾರ ಕೇವಲ 10 ರೂ.ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾರ್ಮಿಕನೋರ್ವನನ್ನು ಚಹಾ ವ್ಯಾಪಾರಿಯೊಬ್ಬ ಚಾಕುವಿನಿಂದ ಇರಿದು ಕೊಂದಿದ್ದು, ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.ಮೈದಾನವೊಂದರಲ್ಲಿ ನಡೆದಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ವೇದಿಕೆಯನ್ನು ಕಾರ್ಮಿಕರು ಬಿಚ್ಚಲು ಪ್ರಾರಂಭಿಸಿದ ಕೆಲವೇ ಹೊತ್ತಿನಲ್ಲಿ, ಅಂದರೆ ಮಧ್ಯಾಹ್ನ ಸುಮಾರು 3.30ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ಮನೋಜ್ ವಿಶ್ವನಾಥ್ ಯಾದವ್‌(45) ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಮೀಪದ …

Read More »

ಏಳು ಜನ ಜೂಜುಕೋರರ ಬಂಧನ

ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಚಾನೆಲ್ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ಅಕ್ರಮವಾಗಿ ಜೂಜಾಡುತ್ತಿದ್ದ ಏಳು ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಬಸ್ತೀಪುರ ನಿವಾಸಿ ವಿಜಯ್ ಕುಮಾರ(42), ಮಹೇಶ(34), ಕುಮಾರ( 30), ರಾಜು ( 28) ಕೆಂಪನಪಾಳ್ಯ ಗ್ರಾಮದ ಮಹದೇವಸ್ವಾಮಿ ( 70), ಹೊಂಡರಬಾಳು ಗ್ರಾಮದ ಕುಮಾರ್( 35), ಕೊಳ್ಳೇಗಾಲ ಪಟ್ಟಣದ ಮಂಜುನಾಥ ನಗರದ ಮಹೇಶ (52) ಬಂಧಿತರು. ಹೊಂಡರಬಾಳು ಗ್ರಾಮದ ಚಾನೆಲ್ ರಸ್ತೆಯಲ್ಲಿ ಜೂಜಾಡುತ್ತಿರುವ ಖಚಿತ ಮಾಹಿತಿ …

Read More »

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮಹಿಳೆ ಬಂಧನ

ಹೊಳೆನರಸೀಪುರ: ತಾಲೂಕಿನ ಕಬ್ಬೂರು ಗ್ರಾಮದ ಸಮೀಪ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ, 7 ಕೆಜಿ ಗಾಂಜಾ, ಸ್ಕೂಟಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೇಲೂರು ಗ್ರಾಮದ ಶೀಲಾ ಎಂದು ಗುರುತಿಸಲಾಗಿದ್ದು, ಆಕೆಯೊಂದಿಗೆ ಇದ್ದ ಜಬಿ ಎಂಬಾತ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ಶೀಲಾ ಕೆಎ-04-ಎಲ್‌ಸಿ-7204 ಸಂಖ್ಯೆಯ ಸ್ಕೂಟಿಯಲ್ಲಿ ಹಾಗೂ ಜಬಿ ಕೆಎ-11-ಎಂ-8783 ಸಂಖ್ಯೆಯ ಕಾರಿನಲ್ಲಿ …

Read More »

ಮದುವೆ ಮನೆಯಲ್ಲಿ ಊಟದ ವೇಳೆ ಕುರ್ಚಿ ವಿಚಾರಕ್ಕೆ ಚಾಕುವಿನಿಂದ ಹಲ್ಲೆ: ರೌಡಿಶೀಟರ್ ವಶಕ್ಕೆ

ಹಾಸನ: ಮದುವೆ ಮನೆಯಲ್ಲಿ ಕುರ್ಚಿ ವಿಚಾರಕ್ಕೆ ರೌಡಿಶೀಟರ್ ಕಿರಿಕ್ ಮಾಡಿದ್ದಾನೆ. ಊಟದ ಬಳಿಕ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದಿವಾಕರ ಎಂಬಾತನ ಮೇಲೆ ರೌಡಿಶೀಟರ್ ಭರತ್ ಹಲ್ಲೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಬೇಲೂರಿನ ಜೆಪಿ ನಗರದ ಬಳಿ ಘಟನೆ ನಡೆದಿದೆ. ತಂಡೆಕೆರೆ ಗ್ರಾಮದ ದಿವಾಕರ್ ಮೇಲೆ ರಾಮೇನಹಳ್ಳಿಯ ಭರತ್ ಹಲ್ಲೆ ಮಾಡಿದ್ದಾನೆ. ಊಟಕ್ಕೆ ಕುಳಿತಾಗ ಸ್ನೇಹಿತನಿಗೆ ದಿವಾಕರ ಸೀಟ್ ಹಿಡಿದುಕೊಂಡಿದ್ದ. ಈ ವೇಳೆ ತನಗೆ ಕುರ್ಚಿ ಬಿಡುವಂತೆ ರೌಡಿಶೀಟರ್ …

Read More »

JMC ಸರ್ವೇಗೆ ಹೋದ ಅಧಿಕಾರಿಗಳ ಮೇಲೆ ದಾಳಿ, ಮಹಿಳೆಯರಿಂದ ಪೊರಕೆ ಏಟು, ಭುಗಿಲೆದ್ದ ಪ್ರತಿಭಟನೆ

ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ಸರ್ಕಾರದ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು. ಜೆಎಂಸಿ ಸರ್ವೇಗೆ ಆಗಮಿಸಿದ್ದ ಅಧಿಕಾರಿಗಳನ್ನು ಮಹಿಳಾ ರೈತರು ತಡೆದು, ಅವರ ಕಾರಿನ ಮೇಲೆ ದಾಳಿ ನಡೆಸಿದರು. ಕೆಲವರು ಪೊರಕೆಯಿಂದ ಅಧಿಕಾರಿಗಳನ್ನು ಓಡಿಸಲು ಯತ್ನಿಸಿದರೆ, ಕಲ್ಲು ಮತ್ತು ದೊಣ್ಣೆ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಮಂಡಲಹಳ್ಳಿ ಗ್ರಾಮದಲ್ಲಿ ಸರ್ವೇ ನಡೆಸಲು ಅಧಿಕಾರಿಗಳು ಮುಂದಾದ ವೇಳೆ ಸ್ಥಳೀಯರು ತೀವ್ರ ವಿರೋಧ …

Read More »

ಬೆಂಗಳೂರಿನಲ್ಲಿ ಮದುವೆಯಾದ ನಾಲ್ಕೇ ತಿಂಗಳಿಗೆ ಯುವತಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಶಾಕಿಂಗ್ ವಿಚಾರ

ರಾಜಧಾನಿ ಬೆಂಗಳೂರಿನ ಶೂಂಕರದಕಟ್ಟೆಯಲ್ಲಿ 25 ವರ್ಷದ ಶ್ವೇತಾ ಎಂಬ ಶಿಕ್ಷಕಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ವೇತಾ, ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರಿಗೆ ಶ್ವೇತಾ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್ ಲಭ್ಯವಾಗಿದೆ. ಈ ಡೆತ್ ನ ಫೋಟೋ …

Read More »

ಸ್ನಾನದ ವಿಡಿಯೋ ಇಟ್ಟುಕೊಂಡು ಕಾಟ ಕೊಡ್ತಿದ್ದ ಕಾಮುಕನಿಗೆ ಯಮಲೋಕ ದರ್ಶನ ; ಸ್ಕೆಚ್ ಹಾಕಿ ನೆರೆಮನೆ ಯುವಕನ ಕೊಂದ ದಂಪತಿ ಅರೆಸ್ಟ್ !

ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ಖಾಸಗಿ ವಿಡಿಯೋ ಇಟ್ಟುಕೊಂಡು ವಿವಾಹಿತ ಮಹಿಳೆಯನ್ನು ಲೈಂಗಿಕ ಸಂಪರ್ಕಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 20 ವರ್ಷದ ಯುವಕನನ್ನು ದಂಪತಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಯುವಕ ಎರಡು ತಿಂಗಳ ಹಿಂದೆ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿ, ಅದನ್ನು ತೋರಿಸಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಹಿಳೆ ಈ ವಿಚಾರವನ್ನು ತನ್ನ ಪತಿಗೆ ತಿಳಿಸಿದ ಬಳಿಕ ಇಬ್ಬರೂ ಸೇರಿ ಹತ್ಯೆಯ ಸಂಚು ರೂಪಿಸಿದ್ದರು. ಶನಿವಾರ …

Read More »

ಖಾಕಿ ಪಡೆಗೆ ಶಾಕ್: ಅರೆಸ್ಟ್ ಆದ 6 ಗಂಟೆಯಲ್ಲೇ ಪೊಲೀಸ್ ಠಾಣೆಯಿಂದ ಆರೋಪಿ ಪರಾರಿ!

ಬೀದರ್: ಜಿಲ್ಲೆಯ ಖಟಕಚಿಂಚೊಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ಬಂಧನಕ್ಕೊಳಗಾಗಿದ್ದ ಕೈಲಾಶ್ ಎಂಬ ಆರೋಪಿ ಅರೆಸ್ಟ್ ಆದ ಕೇವಲ ಆರು ಗಂಟೆಗಳಲ್ಲೇ ಠಾಣೆಯಿಂದಲೇ ಪರಾರಿಯಾಗಿದ್ದಾನೆ. ಠಾಣೆಯಲ್ಲಿದ್ದ ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ಸೂಕ್ತ ಕಾವಲು ಕೊರತೆಯೇ ಆರೋಪಿಯ ಎಸ್ಕೇಪ್‌ಗೆ ಕಾರಣ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣದ ಕುರಿತು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಆರೋಪಿ ಪರಾರಿಯಾದ ಬಳಿಕ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ …

Read More »