Breaking News

10 ರೂ.ವಿಷಯದಲ್ಲಿ ಜಗಳ : ಚಹಾ ವ್ಯಾಪಾರಿಯಿಂದ ಕಾರ್ಮಿಕನ ಹತ್ಯೆ

ನಾಗ್ಪುರ (ಮಹಾರಾಷ್ಟ್ರ),ಜು.13: ನಾಗ್ಪುರದ ಕಪಿಲ್‌ನಗರ ಪ್ರದೇಶದಲ್ಲಿ ರವಿವಾರ ಕೇವಲ 10 ರೂ.ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾರ್ಮಿಕನೋರ್ವನನ್ನು ಚಹಾ ವ್ಯಾಪಾರಿಯೊಬ್ಬ ಚಾಕುವಿನಿಂದ ಇರಿದು ಕೊಂದಿದ್ದು, ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.ಮೈದಾನವೊಂದರಲ್ಲಿ ನಡೆದಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ವೇದಿಕೆಯನ್ನು ಕಾರ್ಮಿಕರು ಬಿಚ್ಚಲು ಪ್ರಾರಂಭಿಸಿದ ಕೆಲವೇ ಹೊತ್ತಿನಲ್ಲಿ, ಅಂದರೆ ಮಧ್ಯಾಹ್ನ ಸುಮಾರು 3.30ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ಮನೋಜ್ ವಿಶ್ವನಾಥ್ ಯಾದವ್‌(45) ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಮೀಪದ ಚಹಾ ಅಂಗಡಿಗೆ ಹೋಗಿದ್ದರು. ಚಹಾ ವ್ಯಾಪಾರಿ ಕೈಲಾಶ್ ಲಾಲ್ಚಂದ್ ಗನ್ವೀರ್ (42) ಚಹಾ ಮತ್ತು ತಂಬಾಕಿಗಾಗಿ 10 ರೂ.ಕೇಳಿದಾಗ ಇಬ್ಬರ ನಡುವೆ ವಾಗ್ವಾದ ಆರಂಭವಾಗಿತ್ತು. ಜಗಳದ ನಡುವೆ ಯಾದವ್‌ ಪತ್ನಿಯ ಮುಂದೆಯೇ ಗನ್ವೀರ್‌ಗೆ ಕಪಾಳಮೋಕ್ಷ ಮಾಡಿದ್ದ.ಇದರಿಂದ ಆಕ್ರೋಶಗೊಂಡ ಗನ್ವೀರ್ ಅಂಗಡಿಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಯಾದವ್‌ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ. ತಕ್ಷಣ ಅವರನ್ನು ಮೇಯೋ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *