Breaking News

BigTv News

ಉಡುಪಿ ನಗರಸಭೆ ಸಿಬ್ಬಂದಿಗೆ 10 ಲಕ್ಷ ರೂ. ನೀಡುವಂತೆ ಬೆದರಿಕೆ: ಮಹಿಳೆ ಸಹಿತ ಮೂವರು ಆರೋಪಿಗಳ ಬಂಧನ

ಉಡುಪಿ ನಗರಸಭೆಯ ಪೌರ ಕಾರ್ಮಿಕರ ಪ್ರಭಾರ ಮೇಲ್ವಿಚಾರಕರೊಬ್ಬರಿಗೆ ₹10 ಲಕ್ಷ ನೀಡುವಂತೆ ಬೇಡಿಕೆ ಇಟ್ಟು, ಇಲ್ಲದಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮೂವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಯೋಗೀಶ್ ಪ್ರಭು, ವಿನಯ ಕುಮಾರ್ ಹಾಗೂ ಸ್ಮಿತಾ ಬಿ. ಬಂಗೇರ ಬಂಧಿತರು. ಆರೋಪಿಗಳು ಕೆಲಸದಲ್ಲಿ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ, ಬಳಿಕ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಮೇಲ್ವಿಚಾರಕರು ₹2 ಲಕ್ಷ ನೀಡಿದ್ದು, …

Read More »

ಪ್ರೀತಿ ವಿಚಾರವಾಗಿ ಚಾಕುವಿನಿಂದ ಇರಿತು

ಬೇಲೂರು: ಪಟ್ಟಣದಲ್ಲಿ ಯುವತಿಯೊಬ್ಬಳನ್ನು ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಇಬ್ಬರು ಯುವಕರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಒಬ್ಬನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಜ್ವಲ್ ಬಂಧಿತ ಆರೋಪಿ. ಶರತ್ ಗಾಯಗೊಂಡಿದ್ದು, ಈತ ಬೇಲೂರು ಪಟ್ಟಣದ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಅದೇ ಯುವತಿಯನ್ನು ಪಟ್ಟಣದ ಮತ್ತೊಬ್ಬ ಯುವಕ ಆರೋಪಿ ಸಹ ಪ್ರೀತಿಸುತ್ತಿದ್ದನು. ಈ ವಿಚಾರವಾಗಿ ಇಬ್ಬರ ನಡುವೆ …

Read More »

ಸಾಕು ಪ್ರಾಣಿಗಳಿಗೆ ಹಿಂಸೆ: ಪ್ರಕರಣ ದಾಖಲು

ಕೋಟ:ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಹಿಂಭಾಗದ ಎನಿಮಲ್ ರೆಸ್ಕ್ಯೂ ಸೆಂಟರ್ ಎಂಬಲ್ಲಿ ಪ್ರಾಣಿಗಳನ್ನು ಅತ್ಯಂತ ಕಳಪೆ, ಅಮಾನವೀಯ ಮತ್ತು ಅಪಾಯಕಾರಿ ಪರಿಸ್ಥಿತಿಯಲ್ಲಿ ಇರಿಸಿದ ಸುಧೀಂದ್ರ ಐತಾಳ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.7ರಂದು ಪೇಟಾ ಇಂಡಿಯಾ ಸಂಸ್ಥೆಯ ಮಹೇಶ ಉಡುಪ ಎಂಬವರು ಸೆಂಟರ್‌ಗೆ ತೆರಳಿ ಪರಿಶೀಲಿಸಿದ್ದು, ಆಗ ಅಲ್ಲಿ ಸುಧೀಂದ್ರ ಐತಾಳ್, ಸಾಕು ಪ್ರಾಣಿಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸದೇ ಸಾಕು ಪ್ರಾಣಿಗಳಾದ ನಾಯಿಗಳು ಮತ್ತು ಬೆಕ್ಕುಗಳನ್ನು ಅತ್ಯಂತ …

Read More »

ನಾಪತ್ತೆಯಾಗಿದ್ದ ವಿವಾಹಿತೆ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆ!

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬದನೂರು ಗ್ರಾಮದ ಅನುಸೂಯಾ (30) ಅವರು ನಾಪತ್ತೆಯಾದ ನಾಲ್ಕು ದಿನಗಳ ಬಳಿಕ ಕಬ್ಬಿನ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಕೊಲೆಯ ಹಿಂದೆ ಅನೈತಿಕ ಸಂಬಂಧದ ಹಗೆತನವಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಿಯಕರ ಸೋಮಪ್ಪ ಹಳ್ಳಿ ವಿರುದ್ಧ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಬೀದರ್ ಜಿಲ್ಲೆಯ ಹಾಳಗೋರ್ಟಾ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಅನಿತಾ (32) ಅವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. …

Read More »

ಮಗುವನ್ನು ನೆಲಕ್ಕೆ ಬಡಿದು ಕೊಂದ ಪಾಪಿಗೆ ಗಲ್ಲು ಶಿಕ್ಷೆ: ಎಲ್ಲಾ ಪ್ರಕರಣವೂ ಇಷ್ಟು ಬೇಗ ಇತ್ಯರ್ಥವಾಗಬೇಕು ಎಂದ ಪಬ್ಲಿಕ್

ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯವು ಅಮಾಯಕ ಮಗುವಿನ ಕೊಲೆ ಪ್ರಕರಣದಲ್ಲಿ ಆರೋಪಿ ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್‌ಗೆ ಘಟನೆ ನಡೆದ ಕೇವಲ 41 ದಿನಗಳಲ್ಲಿ ಮರಣದಂಡನೆ ವಿಧಿಸಿದೆ. ಶೀಘ್ರ ವಿಚಾರಣೆ ನಡೆಸಿದ ನ್ಯಾಯಾಲಯ, ಮಗುವಿನ ಮೇಲಿನ ಕ್ರೂರ ಕೃತ್ಯ ಹಾಗೂ ಸಂತ್ರಸ್ತೆ ತಾಯಿಯ ಮೇಲಿನ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನಿನ ಅಡಿಯಲ್ಲಿ ಗರಿಷ್ಠ ಶಿಕ್ಷೆ ಪ್ರಕಟಿಸಿದೆ. ತನಿಖೆ ಪ್ರಕಾರ, ಮಗುವಿನ ತಾಯಿಯನ್ನು ಮದುವೆಯಾಗಲು ಬಯಸಿದ್ದ ವಿರಾಜ್‌ಗೆ ಮಗು ಅಡ್ಡಿಯಾಗಿತ್ತು. ಇದೇ ಕಾರಣಕ್ಕೆ …

Read More »

ಚಿಕ್ಕಬಳ್ಳಾಪುರ ನ್ಯಾಯಾಲಯದ ಜಡ್ಜ್ ಚೇರ್​​​ಗೆ ಮಾಟ-ಮಂತ್ರ, ವೃದ್ಧೆ ಅರೆಸ್ಟ್!

ಚಿಕ್ಕಬಳ್ಳಾಪುರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ಬರಲೆಂಬ ಮೂಢನಂಬಿಕೆಯಿಂದ ನ್ಯಾಯಾಧೀಶರ ಆಸನದ ಮೇಲೆ ಮಂತ್ರಿಸಿದ ಬಿಳಿ ಸಾಸಿವೆ ಚೆಲ್ಲಿ ವಾಮಾಚಾರ ನಡೆಸಿದ ಆರೋಪದಡಿ 65 ವರ್ಷದ ಮಂಜುಳಾ ಎಂಬ ವೃದ್ಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಈ ಕೃತ್ಯ ನ್ಯಾಯಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ. ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ …

Read More »

ಪ್ರಿಯಕರನ ಜೊತೆ ಹೆಂಡ್ತಿ ಪರಾರಿ: ಇಬ್ಬರು ಮಕ್ಕಳಿಗೆ ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿ ತಂದೆ ಆತ್ಮಹತ್ಯೆ!

ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಪತ್ನಿ ಬೇರೊಬ್ಬರೊಂದಿಗೆ ತೆರಳಿದ ಬಳಿಕ ಮಾನಸಿಕವಾಗಿ ನೊಂದಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಮಾರಿಯಾ ಮೈಕೆಲ್, ಪುತ್ರಿ ಮಾರಿಯಾ ನಿರೋಷಾ ಹಾಗೂ ಪುತ್ರ ಮಾರಿಯಾ ಕೆನಿಸ್ಟನ್ ಎಂದು ಗುರುತಿಸಲಾಗಿದೆ. ಕುಟುಂಬವು ಸವೇರಿಯಾರ್ಪುರಂ ಪ್ರದೇಶದಲ್ಲಿ ವಾಸವಾಗಿತ್ತು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಗುರುವಾರ ರಾತ್ರಿ ಊಟದ ಬಳಿಕ ಮೈಕೆಲ್ ಮಕ್ಕಳ ಕೈ-ಕಾಲುಗಳನ್ನು ವಿದ್ಯುತ್ ತಂತಿಯಿಂದ …

Read More »

ಅತ್ಯಾಚಾರ ಪ್ರಕರಣದಲ್ಲಿ ಮತ್ತೋರ್ವನ ಬಂಧನ

ರೋಣ ತಾಲೂಕಿನ ಗ್ರಾಮವೊಂದರಲ್ಲಿ ಬುದ್ಧಿಮಾಂದ್ಯೆ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಎರಡಕ್ಕೇರಿದೆ. ಬಂಧಿತನನ್ನು ನಾಗನಗೌಡ ಕಳಕನಗೌಡ್ರ ಎಂದು ಗುರುತಿಸಲಾಗಿದೆ. ಈ ಹಿಂದೆ ಬಂಧಿತನಾಗಿದ್ದ ದುರಗಪ್ಪ ಪೂಜಾರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡ ಇರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. ಇತ್ತ, ಬಂಧಿತ ನಾಗನಗೌಡ ಅವರ ಪುತ್ರ ಕುಮಾರಗೌಡ, ತಂದೆಯ ಬಂಧನ ಕುರಿತು …

Read More »

ಬೆಂಗಳೂರಲ್ಲಿ ಪೂಜೆ ನೆಪದಲ್ಲಿ ಜ್ಯೋತಿಷಿಯ ಕಿಡ್ನ್ಯಾಪ್‌ ಮಾಡಿ 4.5 ಲಕ್ಷ ರೂ. ದೋಚಿದ್ದ ನಾಲ್ವರ ಬಂಧನ

ಬೆಂಗಳೂರು: ಜ್ಯೋತಿಷಿಯನ್ನು ಅಪಹರಿಸಿ ಹಲ್ಲೆ ನಡೆಸಿ ಹಣ ದೋಚಿದ ಪ್ರಕರಣದಲ್ಲಿ ಸಂಪಿಗೆಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂನ್ ಅಂತ್ಯದಲ್ಲಿ ನಡೆದ ಈ ಕೃತ್ಯದಲ್ಲಿ ಆರೋಪಿಗಳು ಜ್ಯೋತಿಷಿಯನ್ನು ಕಾರಿನಲ್ಲಿ ಅಪಹರಿಸಿ ತುಮಕೂರು ಸಮೀಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ಯುಪಿಐ ಮೂಲಕ ಹಣ ವರ್ಗಾಯಿಸುವಂತೆ ಬೆದರಿಕೆ ಹಾಕಿದ್ದರು. ಬಂಧಿತ ಆರೋಪಿಗಳನ್ನು ಆರಿಫ್, ಆದಿಲ್, ಇಮ್ರಾನ್ ಹಾಗೂ ಕದೀರ್ ಎಂದು ಗುರುತಿಸಲಾಗಿದೆ. ಜ್ಯೋತಿಷಿ ನೀಡಿದ ಭರವಸೆಯಂತೆ ಜೀವನದಲ್ಲಿ ಬದಲಾವಣೆ ಆಗಿಲ್ಲ …

Read More »

ಗರ್ಭದಲ್ಲೇ ಕಣ್ಮುಚ್ಚಿದ 9 ತಿಂಗಳ ಕಂದಮ್ಮ, ಅಮ್ಮನೂ ಸಾವು -ಆರೋಪಿ ಅರೆಸ್ಟ್! ಆಗಿದ್ದೇನು?

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ 9 ತಿಂಗಳ ಗರ್ಭಿಣಿ ಸವಿತಾ (21) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನೇಪಾಳ ಮೂಲದ ದಂಪತಿ ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ವಾಸವಿದ್ದು, ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದರು. ಮೃತಳ ಸಾವು ಸಹಜವಲ್ಲ, ಪತಿ ಹೇಮರಾಜು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೂರ್ಯನಗರ ಠಾಣೆ ಪೊಲೀಸರು ಹೇಮರಾಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸವಿತಾ ಸಾವಿಗೆ ನಿಖರ ಕಾರಣ …

Read More »