ಬೆಂಗಳೂರು: ಕುರುಬ ಸಮಾಜದವರ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಹಳ ಪ್ರೀತಿ ಬಂದಿದೆ. ಹಾಗಾಗಿ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಸಿಎಂ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಮೀಸಲಾತಿ ಹೆಚ್ಚಳದ ವಿರೋಧಿಗಳು ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಇದೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎಂದರು. ಸಿದ್ದರಾಮಯ್ಯಗೆ ಕುರುಬರ ಮೇಲೆ …
Read More »ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ನಿಧನ
ಚೆನ್ನೈ (ತಮಿಳುನಾಡು): ತಮಿಳು ಕಿರುತರೆಯಲ್ಲಿ ಭಾರಿ ದುರಂತ ನಡೆದಿದೆ. ಪ್ಯಾಲಿಯೋ ಡಯಟ್ನಿಂದ ಜನಪ್ರಿಯ ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ (43) ಸಾವನ್ನಪ್ಪಿದ್ದಾರೆ. ಭರತ್ ಕಲ್ಯಾಣ್ ದಿವಂಗತ ಕನ್ನಡದ ಖ್ಯಾತ ನಟ ಕಲ್ಯಾಣ್ ಕುಮಾರ್ ಅವರ ಪುತ್ರ. ಸದ್ಯ ಭರತ್ ಕಲ್ಯಾಣ್ ತಮಿಳು ಸಿನಿಮಾ ಮತ್ತು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಕನ್ನಡದ ಜೆಂಟಲ್ಮ್ಯಾನ್, ಆದಿಲಕ್ಷ್ಮಿ ಪುರಾಣ ಚಿತ್ರಗಳಲ್ಲೂ ನಟಿಸಿರುವ ಭರತ್, ಪ್ರಸ್ತುತ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ …
Read More »ಮಳೆರಾಯನ್ನ ಆರ್ಭಟಕ್ಕೆ ಸುಸ್ತಾದ ಬೆಂಗಳೂರು ಜನ
ಬೆಂಗಳೂರು: ನಗರದಲ್ಲಿ ಕೆಲದಿನ ಗಳಿಂದ ಬಿಡುವು ನೀಡಿದ್ದ ಮಳೆ, ಧಾರಾಕಾರವಾಗಿ ಸುರಿಯಿತು. ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡು, ಸಂಜೆ ವೇಳೆ ಜೋರು ಮಳೆಯಾಯಿತು. ರಾಜ್ಯೋತ್ಸವ ದಿನವಾಗಿದ್ದರಿಂದ ನಗರದ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೋರು ಮಳೆಯಿಂದಾಗಿ ಕಾರ್ಯಕ್ರಮಗಳ ಆರಂಭಕ್ಕೆ ತೊಂದರೆ ಉಂಟಾಯಿತು. ಕೆಲವರು ಸುರಿಯುವ ಮಳೆಯಲ್ಲೇ ಕಾರ್ಯಕ್ರಮ ನಡೆಸಿದರು. ಮೆಜೆಸ್ಟಿಕ್, ಗಾಂಧಿನಗರ, ಸಂಪಂಗಿ ರಾಮನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್ಬಾಗ್, ರಿಚ್ಮಂಡ್ ಟೌನ್, ಅಶೋಕನಗರ, ಎಂ.ಜಿ.ರಸ್ತೆ, ಶಿವಾಜಿನಗರ, …
Read More »ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನಕ್ಕೆ ಗಣ್ಯರ ಆಗಮನ : ರಜನಿಕಾಂತ್, ಜ್ಯೂ.ಎನ್.ಟಿ.ಆರ್ ಗೆ ಧನ್ಯವಾದ ತಿಳಿಸಿದ ಸಿಎಂ
ಬೆಂಗಳೂರು : ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಜ್ಯೂ.ಎನ್.ಟಿ.ಆರ್ ಗೆ ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಸಿಎಂ ಬೊಮ್ಮಾಯಿ ನಮ್ಮ ಪ್ರೀತಿಯ ಕರೆಗೆ ಓಗೊಟ್ಟು, ದಿ. ಪುನೀತ್ ರಾಜ್ ಕುಮಾರ್ ರವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲು ಕರ್ನಾಟಕ್ಕೆ ಆಗಮಿಸಿ, ಕನ್ನಡದಲ್ಲಿಯೇ ಮಾತನಾಡಿ ತಮ್ಮ ಕನ್ನಡ ಪ್ರೀತಿ ತೋರಿದ ಮಹಾನ ನಟರಾದ …
Read More »ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿದ NIA
ದಕ್ಷಿಣ ಕನ್ನಡ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಘೋಷಿಸಿದೆ. ಕಳೆದ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಅವರ ಪತ್ತೆಗಾಗಿ ಈಗ ಎನ್ಐಎ ಬಹುಮಾನವಾಗಿ ನಗದು ಘೋಷಿಸಿದೆ. ಪ್ರಮುಖ ಆರೋಪಿಗಳಾದ ಬೆಳ್ಳಾರೆಯ ಮಹಮ್ಮದ್ ಮುಸ್ತಾಫಾ ಮತ್ತು …
Read More »ಬಸ್ ನಲ್ಲಿಯೇ ಕಂಡಕ್ಟರ್ ಹೃದಯಾಘಾತದಿಂದ ಸಾವು
ಹುಬ್ಬಳ್ಳಿ: ನಗರ ಸಾರಿಗೆಯಲ್ಲಿ ಬಸ್ ಸಂಚರಿಸುತ್ತಿದ್ದಾಗಲೇ ತಪಾಸಣಾ ಅಧಿಕಾರಿ ಬಂದ ಕೆಲವೇ ಕ್ಷಣಗಳಲ್ಲಿ ನಿರ್ವಾಹಕ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ವಿದ್ಯಾನಗರದಲ್ಲಿ ಸಂಭವಿಸಿದೆ. ಮಹೇಶ್ ಹೂಗಾರ ಎಂಬ ನಿರ್ವಾಹಕ ಹೃದಯಾಘಾತದಿಂದ ಸಾವಿಗೀಡಾದವರು. ಹುಬ್ಬಳ್ಳಿಯ ಬಂಡಿವಾಡ ಅಗಸಿಯಿಂದ ಗಾಮನಗಟ್ಟಿಗೆ ಬಸ್ ಹೊರಟಿತ್ತು. ತಪಾಸಣಾ ಅಧಿಕಾರಿ ವಿದ್ಯಾನಗರದ ಬಳಿ ಬಸ್ ನಿಲ್ಲಿಸಿ ಟಿಕೆಟ್ ಬುಕ್ ಪಡೆಯುತ್ತಿದ್ದ ಹಾಗೆ ಕಂಡಕ್ಟರ್ ಮಹೇಶ್ ಹೂಗಾರ ಎದೆ ನೋವಿನಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ತಪಾಸಣಾ ಅಧಿಕಾರಿ ಅಲ್ಲಿಂದ ಪರಾರಿಯಾಗಿದ್ದಾರೆ. …
Read More »ರಂಭಾ ಕಾರು ಅಪಘಾತ : ಮಗಳ ಸ್ಥಿತಿ ಗಂಭೀರ
ಬೆಂಗಳೂರು: ಬಹುಭಾಷಾ ನಟಿ ರಂಭಾ ಕಾರು ಅಪಘಾತಕ್ಕೀಡಾಗಿದ್ದು, ನಟಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ರಂಭಾ ವಿವಾಹದ ಬಳಿಕ ವಿದೇಶದಲ್ಲಿ ವಾಸವಾಗಿದ್ದು, ಅಲ್ಲಿಯೇ ಅವರ ಕಾರು ಅಪಘಾತವಾಗಿದೆ.ಈ ಕುರಿತು ರಂಭಾ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಕ್ಕಳನ್ನು ಶಾಲೆಯಿಂದ ಕರೆತರುತ್ತಿದ್ದಾಗ ತಮ್ಮ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ತಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಆದರೆ ಮಗಳು ಸಶಾ ಗಂಭೀರವಾಗಿ ಗಾಯಗೊಂಡಿದ್ದು, …
Read More »ನಾನಾಗಿಯೇ ಹು-ಧಾ ಕೇಂದ್ರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀನಿ ಅಂತ ಹೇಳಿರಲಿಲ್ಲ : ಉಲ್ಟಾ ಹೊಡೆದ ಶೆಟ್ಟರ್
ಹುಬ್ಬಳ್ಳಿ: ನೀವು ಕೇಳಿದ ಪ್ರಶ್ನೆಗೆ ಮಾತ್ರ ನಾನು ಉತ್ತರಿಸಿದ್ದೇನೆ. ನೀವೇ ಎಬ್ಬಿಸಿ ಕೊಡ್ತೀರಿ ನಂತರ ಹಂಗೇಕೆ ಹೇಳ್ತೀರಿ ಅಂತ ಪ್ರಶ್ನಿಸ್ತೀರಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉಲ್ಟಾ ಹೊಡೆದಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೇನೆ ಅಂತ ಯಾರೂ ಹೇಳಂಗಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಹೇಳಿಕೆಗೆ ಶೆಟ್ಟರ್ ಪ್ರತಿಕ್ರಿಯಿಸಿದ ಅವರು ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡರು.ಕೇಂದ್ರದ ಎಸ್ ಎಸ್ ಸಿ ಪರೀಕ್ಷೆ ಯಲ್ಲಿ ಕನ್ನಡದ ಕಡೆಗಣನೆ …
Read More »ಮೊರ್ಬಿ ನದಿಯ ಪ್ರಕರಣದ ದೂಷಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ : ಪ್ರಧಾನಿ ಮೋದಿ
ಕೆವಾಡಿ: ನಿನ್ನೆ ಸಂಜೆ 6.30 ಸಮಯದಲ್ಲಿ ಮುರ್ಬಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆ ಕುಸಿದು ನೂರಾರು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ನದಿಯಲ್ಲಿ ಸಿಲುಕಿದ 117 ಜನರನ್ನು ರಕ್ಷಣೆ ಮಾಡಲಾಗಿತ್ತು, ಸಾವಿನ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಈ ಸಂಬಂಧ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಮೂರು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ಮೊರ್ಬಿ ನದಿಯ ಘಟನೆ ತೀರ್ವ ದುಃಖವನ್ನುಂಟು ಮಾಡಿದೆ. ಈ ಘಟನೆಯ ದೂಷಿಗಳನ್ನು ಯಾವುದೇ …
Read More »ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಜನೆತೆಗೆ ಬಿಗ್ ಶಾಕ್
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ಅಬ್ಬರಿಸಿದ್ದು, ಇದರಿಂದ ಜನ ತತ್ತರಿಸಿ ಹೋಗಿದ್ದರು. ಧಾರಾಕಾರವಾಗಿ ಸುರಿದ ಮಳೆಯ ಕಾರಣಕ್ಕೆ ಹಳ್ಳ ಕೊಳ್ಳಗಳು, ಕೆರೆ ನದಿಗಳು ತುಂಬಿ ಹರಿದಿದ್ದು, ರಸ್ತೆಗಳು ಜಲಾವೃತವಾಗಿದ್ದವು. ಅಲ್ಲದೇ ನೂರಾರು ಎಕರೆ ಪ್ರದೇಶದ ಹೊಲಗದ್ದೆಗಳಲ್ಲಿ ನೀರು ನಿಂತ ಪರಿಣಾಮ ಬೆಳೆ ಹಾನಿಯೂ ಸಂಭವಿಸಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಳೆ ಬಿಡುವ ನೀಡಿದ್ದು, ಇದೀಗ ನಾಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





