ಬೆಂಗಳೂರು: ನಗರದಲ್ಲಿ ಕೆಲದಿನ ಗಳಿಂದ ಬಿಡುವು ನೀಡಿದ್ದ ಮಳೆ, ಧಾರಾಕಾರವಾಗಿ ಸುರಿಯಿತು. ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡು, ಸಂಜೆ ವೇಳೆ ಜೋರು ಮಳೆಯಾಯಿತು. ರಾಜ್ಯೋತ್ಸವ ದಿನವಾಗಿದ್ದರಿಂದ ನಗರದ ಹಲವೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜೋರು ಮಳೆಯಿಂದಾಗಿ ಕಾರ್ಯಕ್ರಮಗಳ ಆರಂಭಕ್ಕೆ ತೊಂದರೆ ಉಂಟಾಯಿತು. ಕೆಲವರು ಸುರಿಯುವ ಮಳೆಯಲ್ಲೇ ಕಾರ್ಯಕ್ರಮ ನಡೆಸಿದರು.
ಮೆಜೆಸ್ಟಿಕ್, ಗಾಂಧಿನಗರ, ಸಂಪಂಗಿ ರಾಮನಗರ, ಶಾಂತಿನಗರ, ವಿಲ್ಸನ್ ಗಾರ್ಡನ್, ಲಾಲ್‌ಬಾಗ್, ರಿಚ್ಮಂಡ್ ಟೌನ್, ಅಶೋಕನಗರ, ಎಂ.ಜಿ.ರಸ್ತೆ, ಶಿವಾಜಿನಗರ, ಹಲಸೂರು, ವಸಂತ ನಗರ, ಆರ್.ಟಿ.ನಗರ, ಹೆಬ್ಬಾಳ, ಸಂಜಯನಗರ, ಮತ್ತಿಕೆರೆ, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ವಿಜಯನಗರ, ದೀಪಾಂಜಲಿನಗರ ಹಾಗೂ ಸುತ್ತಮುತ್ತ ಜೋರು ಮಳೆ ಸುರಿಯಿತು.
‘ರಾಜರಾಜೇಶ್ವರಿನಗರ, ಕೆಂಗೇರಿ, ಗಿರಿನಗರ, ಬನಶಂಕರಿ, ಬಸವನಗುಡಿ, ಯಲಹಂಕ, ವಿದ್ಯಾರಣ್ಯಪುರ, ಹನು ಮಂತನಗರ, ಜಯನಗರ, ಜೆ.ಪಿ.ನಗರ, ಪುಟ್ಟೇನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಆಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

