ತುಮಕೂರು: ಚಿಕ್ಕನಾಯಕನಹಳ್ಳಿ ಪೊಲೀಸರು ಖೋಟಾ ನೋಟು ಜಾಲವನ್ನು ಭೇದಿಸಿ, ಕಿಂಗ್ಪಿನ್ ರುದ್ರೇಶ್ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹500 ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ 2ರಂದು ಹುಳಿಯಾರಿನ ಅಂಗಡಿಯಲ್ಲಿ ₹500ರ ನಕಲಿ ನೋಟು ಚಲಾವಣೆಯಾದ ಪ್ರಕರಣದ ಸುಳಿವಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬೆಂಗಳೂರಿನಲ್ಲಿ ನಕಲಿ ನೋಟು …
Read More »ಆಯಂಬುಲೆನ್ಸ್ಗೆ ದಾರಿ ಬಿಡದೆ ಬೈಕ್ ವ್ಹೀಲಿಂಗ್: 5 ಬಾಲಕರು ವಶಕ್ಕೆ
ಬೆಂಗಳೂರು: ಯಶವಂತಪುರ-ತುಮಕೂರು ರಸ್ತೆಯಲ್ಲಿ ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಬೈಕ್ಗಳಲ್ಲಿ ವ್ಹೀಲಿಂಗ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಸಂಚಾರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ, ಐವರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಯಶವಂತಪುರ ನಿವಾಸಿ ಹಾಗೂ ಮೆಕ್ಯಾನಿಕ್ ಸಾದೀಕ್ ಪಾಷ (21) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಬಳಸಿದ್ದ ಮೂರು ಬೈಕ್ಗಳನ್ನು ಜಪ್ತಿ ಮಾಡಲಾಗಿದ್ದು, ಅಪ್ರಾಪ್ತರ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಜುಲೈ 4ರ ರಾತ್ರಿ ಯಶವಂತಪುರದಲ್ಲಿ ಮೂರು ಬೈಕ್ಗಳಲ್ಲಿ …
Read More »ಬೆಂಗಳೂರಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಪೆಟ್ರೋಲ್ ಲಾರಿ ; ಕ್ಷಣಾರ್ಧದಲ್ಲಿ 2 ಲಾರಿಗಳು ಸುಟ್ಟು ಭಸ್ಮ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಲ್ಲೋಹಳ್ಳಿ ಸಮೀಪ ಗುರುವಾರ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪೆಟ್ರೋಲ್ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಪಕ್ಕದಲ್ಲಿದ್ದ ಹಾಲಿನ ಲಾರಿಯೂ ಬೆಂಕಿಗಾಹುತಿಯಾಗಿದೆ.ಘಟನೆಯಲ್ಲಿ ಎರಡು ಲಾರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಚಾಲಕರು ಸಮಯಪ್ರಜ್ಞೆಯಿಂದ ವಾಹನಗಳಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿಯ ಪ್ರಕಾರ, ಪೆಟ್ರೋಲ್ ತುಂಬಿದ್ದ ಲಾರಿಯು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, …
Read More »ಅರಬೈಲ್ ಘಾಟ್ ಅಪಘಾತದಲ್ಲಿ ಧಾರವಾಡದ 6 ಮಂದಿ ಸ್ಥಳದಲ್ಲೇ ದುರ್ಮರಣ
ಉತ್ತರ ಕನ್ನಡ: ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ನಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ ತೂಫಾನ್ ಕ್ರೂಸರ್ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಧಾರವಾಡ ಮೂಲದ ಯುವಕರಾಗಿದ್ದು, ಖಾಸಗಿ ಆಹಾರ ವಿತರಣೆ ಸಂಸ್ಥೆ ಸ್ವಿಗ್ಗಿ ಯಲ್ಲಿ ಪಾರ್ಟ್ಟೈಮ್ ಡೆಲಿವರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಒತ್ತಡದಿಂದ ವಿರಾಮ ಪಡೆಯಲು ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಪ್ರವಾಸಕ್ಕೆ …
Read More »ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಪ್ರಕರಣ ಭೇದಿಸಿದ ಚಿತ್ರದುರ್ಗ ಪೊಲೀಸರು; ನಾಲ್ವರು ಆರೋಪಿಗಳ ಬಂಧನ
ಚಿತ್ರದುರ್ಗ: ಇಂಗಳದಾಳ್ ಲಂಬಾಣಿಹಟ್ಟಿ ಸಮೀಪ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ಭೀಕರ ಕೊಲೆ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿದ್ದು, ಮೃತನ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ನಿವಾಸಿ ಹಾಗೂ ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ 38 ವರ್ಷದ ಶಿವಮೂರ್ತಿ ಜೂನ್ 26ರಂದು ಶಿವಮೊಗ್ಗಕ್ಕೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಬಳಿಕ ಅವರ ಕಾರು ಚನ್ನಗಿರಿ ಸಮೀಪ ಪತ್ತೆಯಾಗಿತ್ತು. ಜುಲೈ 1ರಂದು …
Read More »ಹೊಳಲ್ಕೆರೆಯಲ್ಲಿ ಪತಿ ಕೊಲೆ, ಪತ್ನಿ, ಮಗನ ಬಂಧನ
ಚಿತ್ರದುರ್ಗ: ಪತಿಯನ್ನು ಕೊಲೆ ಮಾಡಿ ಅಪಘಾತದಲ್ಲಿ ಮೃತಪಟ್ಟಂತೆ ನಾಟಕವಾಡಿದ್ದ ಪ್ರಕರಣವನ್ನು ಹೊಳಲ್ಕೆರೆ ಪೊಲೀಸರು ಭೇದಿಸಿದ್ದು, ಪತ್ನಿ ಕಾವ್ಯಾ, ಮಗ ಸಂತೋಷ ಹಾಗೂ ಪ್ರಿಯಕರ ತಿಪ್ಪೇಸ್ವಾಮಿ ಅವರನ್ನು ಬಂಧಿಸಿದ್ದಾರೆ. ಮೇ 8ರಂದು ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದ ವೀರೇಶಪ್ಪ ಗಾಯಗೊಂಡ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಮೃತಪಟ್ಟಿದ್ದರು. ಪತಿ ಎಲ್ಲಿಯೋ ಬಿದ್ದು ಗಾಯಗೊಂಡಿದ್ದಾರೆ ಎಂದು ಪತ್ನಿ ಕಾವ್ಯಾ ಹಾಗೂ ಮಗ ಸಂತೋಷ ಹೇಳಿದ್ದರು. ಆದರೆ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ …
Read More »ವೇಶ್ಯಾವಾಟಿಕೆ: ಇಬ್ಬರು ಮಹಿಳೆಯರ ಬಂಧನ
ಬೆಂಗಳೂರು: ಮನೆಗಳನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಇಬ್ಬರು ಮಹಿಳೆಯರನ್ನು ಬಂಧಿಸಿ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಜುಲೈ 3ರಂದು ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್.ಕೆ. ಹಳ್ಳಿ 2ನೇ ಮುಖ್ಯರಸ್ತೆ ಹಾಗೂ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ವಿ.ಜಿ. ನಗರದ ಬಂಡೆ ಗಣಪತಿ ದೇವಸ್ಥಾನದ ಸಮೀಪದ ಮನೆಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ …
Read More »ಯಲ್ಲಾಪುರ ಬಳಿ ಭೀಕರ ಅಪಘಾತ: ಕ್ರೂಸರ್ -ಲಾರಿ ಡಿಕ್ಕಿಯಾಗಿ 6 ಜನ ಸಾವು
ಕಾರವಾರ: ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಆರು ಜನ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಸಮೀಪ ಬಳಗಾರ್ ಬಳಿ ಅಪಘಾತ ಸಂಭವಿಸಿದೆ.ಪ್ರವಾಸಕ್ಕೆ ಹೊರಟಿದ್ದ ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಡಿಕ್ಕಿಯಾಗಿದೆ. ಕ್ರೂಸರ್ ವಾಹನದಲ್ಲಿದ್ದ ಆರು ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ಧಾರವಾಡ ಮೂಲದವರು ಎನ್ನಲಾಗಿದೆ. ಕ್ರೂಸರ್ ವಾಹನದ ಚಾಲಕ ಸಂಜೀವ್(33), ಬಸವರಾಜ್(48), ಅಭಿಷೇಕ್ ಈಶ್ವರ್(28), ಅಕ್ಷಯ್(26), ಅಭಿಷೇಕ್(26), ಮಂಜುನಾಥ್ ಅಶೋಕ್ …
Read More »ಆಸ್ತಿ ಪಾಲು ಕೇಳಿದ್ದಕ್ಕೆ ಹೆತ್ತ ಮಗಳ ಮೇಲೆಯೇ ತಂದೆಯಿಂದ ಭೀಕರ ಹಲ್ಲೆ!
ಬೆಂಗಳೂರು: ಆಸ್ತಿಯಲ್ಲಿ ಪಾಲು ಕೇಳಿದ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಸ್ವಂತ ತಂದೆ ಹಾಗೂ ಕುಟುಂಬಸ್ಥರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಚ್ಚಹಳ್ಳಿಯಲ್ಲಿ ನಡೆದಿದೆ. ಗಾಯಾಳು ಲಕ್ಷ್ಮಮ್ಮ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾನಸಿಕ ಅಸ್ವಸ್ಥನೊಂದಿಗೆ ಮದುವೆಯಾಗಿದ್ದ ಲಕ್ಷ್ಮಮ್ಮ, ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಬಂದರೂ ಕುಟುಂಬಸ್ಥರು ಮನೆಯೊಳಗೆ ಸೇರಿಸದೆ, ಕಳೆದ ನಾಲ್ಕು ತಿಂಗಳಿಂದ ಮನೆಯ ಕಾಂಪೌಂಡ್ನಲ್ಲೇ ವಾಸಿಸುತ್ತಿದ್ದರು. ಬಳಿಕ ಆಸ್ತಿಯಲ್ಲಿ ತನ್ನ …
Read More »10 ಲಕ್ಷ ರೂ. ಸಾಲ ಪಡೆದು ವಾಪಾಸ್ಸು ನೀಡದೆ ವಂಚನೆ: ಪ್ರಕರಣ ದಾಖಲು
ಉಡುಪಿ: ಉದ್ಯೋಗದ ಪರಿಚಯದ ಮೂಲಕ ನಂಬಿಕೆ ಗಳಿಸಿ 10 ಲಕ್ಷ ರೂ. ಸಾಲ ಪಡೆದು ವಾಪಸ್ ನೀಡದೇ ವಂಚಿಸಿರುವ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಬಲಪಾಡಿಯ ಸಜ್ಜನ್ ಶೆಟ್ಟಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸಿದ್ದಾರ್ಥ ಶೆಟ್ಟಿ ಹಾಗೂ ಆತನ ಕುಟುಂಬದ ಸದಸ್ಯರಾದ ಅಮರನಾಥ್ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಮತ್ತು ಸದಾಶಿವ ಶೆಟ್ಟಿ, ಐದು ತಿಂಗಳಲ್ಲಿ ಹಣ ಮರಳಿಸುವುದಾಗಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





