Breaking News

BigTv News

ಮಳೆ ಸಂತ್ರಸ್ತರ ನೋವಿಗೆ ಸ್ಪಂದಿಸದ ಸರಕಾರ ; ಗ್ರಾಮ ವಾಸ್ತವ್ಯದಿಂದ ಪ್ರತ್ಯುತ್ತರ “

ಹುಬ್ಬಳ್ಳಿ : ಮಳೆಯಿಂದ ಬೆಂಗಳೂರಿನಷ್ಟೇ ನವಲಗುಂದ ಕ್ಷೇತ್ರದಲ್ಲೂ ಹಾನಿಯಾಗಿದೆ . ಈ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ , ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಆದ್ದರಿಂದ ಪರಿಹಾರ ಕೊಡುವವರೆಗೂ ಟ್ರ್ಯಾಕ್ಟರ್ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಹೇಳಿದರು . ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , ಪ್ರತಿಭಟನೆ ಮಾಡಿದ ನಂತರ ಕಾಳಜಿ ಕೇಂದ್ರ ತೆರೆದಿದ್ದಾರೆ . ಸತ್ಯ ದರ್ಶನ …

Read More »

ಧಾರವಾಡದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ

ಧಾರವಾಡ: ಹೊಯ್ಸಳನಗರದ ಇಸ್ಮಾಯಿಲ್ ಎಂಬುವವರಿಗೆ ಸೇರಿದ ದನ ಕೊಟ್ಟಿಗೆಯಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಈ ಹೆಬ್ಬಾವು ಆಹಾರ ಅರಸಿ ಬಂದು ದನದ ಕೊಟ್ಟಿಗೆಯಲ್ಲಿ ಅವಿತು ಕುಳಿತಿತ್ತು. ಇದನ್ನು ನೋಡಿದ ಮಾಲೀಕರು ಕೂಡಲೇ ಉರಗ ತಜ್ಞ ಸ್ನೇಕ್ ಮಾಸ್ಟರ್ ನಜೀರ್ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ನಜೀರ್ ಅವರು ಆ ಹೆಬ್ಬಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟು ಬರುವ ವ್ಯವಸ್ಥೆ ಮಾಡಿದರು.

Read More »

ಸಚಿವ ಉಮೇಶ ಕತ್ತಿಯವರ ನಿಧನಕ್ಕೆ ಜವಳಿ, ಕೈಮಗ್ಗ, ಸಕ್ಕರೆ, ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸಂತಾಪ

ರಾಜ್ಯದ ಹಿರಿಯ ರಾಜಕಾರಣಿ, ಅತಿ ಹೆಚ್ಚು ಬಾರಿ ಚುನಾವಣೆಯಲ್ಲಿ ಗೆದ್ದಿದ್ದ ಶ್ರೀ ಉಮೇಶ ಕತ್ತಿಯವರ ನಿಧನದಿಂದ ರಾಜ್ಯ ಬಡವಾಗಿದೆ.ಉಮೇಶ ಕತ್ತಿಯವರ ನಡೆ-ನುಡಿ, ನೇರ ಮಾತುಕತೆಯಿಂದ ರಾಜೀ ಇಲ್ಲದ ಜೀವನ ಸಾಗಿಸಿದ್ದರು. ನಾನು ರಾಜಕಾರಣಕ್ಕೆ ಬರುವುದಕ್ಕಿಂತಲೂ ಮೊದಲು ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೆ. ಬಹಳ ವರ್ಷದಿಂದ ಅವರನ್ನ ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ಉಮೇಶ ಕತ್ತಿಯವರ ನಿಧನದಿಂದ ಸಮಾಜಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದ ನೋವನ್ನ ಭರಿಸಿಕೊಳ್ಳುವ ಶಕ್ತಿಯನ್ನ …

Read More »

ನೇರ, ನಿಷ್ಠುರವಾಗಿ ಮಾತನಾಡುವ ವ್ಯಕ್ತಿ ಉಮೇಶ ಕತ್ತಿ: ಸಚಿವರ ನಿಧನಕ್ಕೆ ಶೆಟ್ಟರ್ ಸಂತಾಪ

ಹುಬ್ಬಳ್ಳಿ: ನಮ್ಮ ಜೊತೆಗೆ ಆತ್ಮೀಯವಾದ ಸಂಬಂಧ ಇತ್ತು. ನೇರವಾಗಿ ಮಾತನಾಡುವಂತ ವ್ಯಕ್ತಿತ್ವ ಅವರದ್ದು. ಮನಸ್ಸಿಗೆ ಬಂದಂತೆ, ಸ್ಪಷ್ಟವಾಗಿ ಹೇಳುವಂತ ವ್ಯಕ್ತಿ ಅವರು ಎಂದು ಸಚಿವ ಉಮೇಶ್ ಕತ್ತಿ ನಿಧನಕ್ಕೆ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ಬೆಳಗಾವಿ ಅಭಿವೃದ್ಧಿ ಬಗ್ಗೆ ಕನಸುಗಳನ್ನು ಕಂಡವರು ಅವರು. ಅವರ ಅಗಲಿಕೆ ರಾಜ್ಯಕ್ಕೆ ಬಹಳಷ್ಟು ನಷ್ಟವಾಗಿದೆ. ಅವರು ಸಾವು ನಮಗೆ ನೋವು ತಂದಿದೆ ಎಂದರು. …

Read More »

ಉಮೇಶ ಕತ್ತಿ ನಿಧನಕ್ಕೆ ಮೋದಿ ಸಂತಾಪ

ಬೆಂಗಳೂರು: ರಾಜ್ಯ ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಕರ್ನಾಟಕ ರಾಜ್ಯದಲ್ಲಿ 8 ಶಾಸಕ ಹಾಗೂ 4 ಬಾರಿ ಸಚಿವರಾಗಿದ್ದ ಉಮೇಶ್ ಕತ್ತಿ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಉಮೇಶ್​ ಕತ್ತಿಯೊಬ್ಬರು ಅನುಭವಿ ನಾಯಕರಾಗಿದ್ದರು. ಕರ್ನಾಟಕದ ಅಭಿವೃದ್ಧಿ ಸಾಕಷ್ಟು ಕೊಡುಗೆ ಕೊಟ್ಟವರು. ಅವರ ನಿಧನ ನನಗೆ ನೋವುಂಟು ಮಾಡಿದೆ. ಅವರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು …

Read More »

ಭಾರತ್ ಜೋಡೋ ಯಾತ್ರೆ’ಗೆ ಇಂದು ರಾಹುಲ್ ಗಾಂಧಿ ಚಾಲನೆ

ಚೆನ್ನೈ: 2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇಂದು ಕನ್ಯಾಕುಮಾರಿಯಿಂದ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ. 3,500 ಕಿಲೋಮೀಟರ್ ದೂರ ಸಾಗಲಿರುವ ಯಾತ್ರೆ ಸುಮಾರು 150 ದಿನಗಳಲ್ಲಿ ಕ್ರಮಿಸಲಿದೆ. ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ತಮ್ಮ ದಿನವನ್ನು ಆರಂಭಿಸಿದರು. 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಆತ್ಮಾಹುತಿ …

Read More »

ರಾಜ್ಯದಲ್ಲಿ 592 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 592 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, 889 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. 18 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.3.7 ರಷ್ಟು ದಾಖಲಾಗಿದೆ. ಸೋಮವಾರಕ್ಕೆ ಹೋಲಿದರೆ ಸೋಂಕು ಪರೀಕ್ಷೆ 6 ಸಾವಿರ ಹೆಚ್ಚು ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು 108 ಏರಿಕೆಯಾಗಿವೆ. (ಸೋಮವಾರ 484, ಪ್ರಕರಣಗಳು, ಸಾವು ಎರಡು). ಶಿವಮೊಗ್ಗದಲ್ಲಿ 55 ವರ್ಷದ ಪುರುಷ, ಕಲಬುರಗಿಯಲ್ಲಿ 76 ವರ್ಷದ ವೃದ್ಧೆ ಸೋಂಕಿನಿಂದ …

Read More »

ತಂದೆಯ ಸಮಾಧಿ ಪಕ್ಕದಲ್ಲೇ ಉಮೇಶ್​ ಕತ್ತಿ ಅಂತ್ಯಕ್ರಿಯೆ

ಬೆಳಗಾವಿ: ಮಂಗಳವಾರ ರಾತ್ರಿ ಹೃದಯಘಾತದಿಂದ ನಿಧನರಾಗಿರುವ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಏರ್​​ಲಿಫ್ಟ್ ಮಾಡಲಾಗುತ್ತಿದೆ. ತಂದೆಯ ಸಮಾಧಿ ಪಕ್ಕದಲ್ಲೇ ಉಮೇಶ್​ ಕತ್ತಿ ಅಂತ್ಯಕ್ರಿಯೆ ನಡೆಯಲಿದ್ದು ಈ ಹಿನ್ನೆಲೆ ಎರಡು ಎಕರೆ ಕಬ್ಬು ಕಟಾವು ಮಾಡಲಾಗಿದೆ. ಏರ್ ಅಂಬುಲೆನ್ಸ್ ಮೂಲಕ ಬೆಳಗಾವಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತಿದೆ. ಅಲ್ಲಿಂದ ಹುಕ್ಕೇರಿಯ ಬೆಲ್ಲದ ಬಾಗೇವಾಡಿಗೆ ರವಾನೆ ಮಾಡಲಾಗುತ್ತದೆ. ಮಧ್ಯಾಹ್ನ ಎರಡು ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ವಗ್ರಾಮ …

Read More »

ಗಣಪತಿ ವಿಸರ್ಜಿಸಿ ವೇಳೆ ವಿದ್ಯುತ್ ತಗಲಿ 3 ಜನ ಸಾವು

ಚಿಕ್ಕಮಗಳೂರು : ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್ ನಿಂದ ಮೂವರು ಸಾವನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್ ನಲ್ಲಿದ್ದ ಪೆಂಡಾಲ್ ಗೆ ವಿದ್ಯುತ್ ತಂತಿ ತಗುಲಿ ರಾಜು (47) ರಚನಾ (35) ಪಾರ್ವತಿ (26) ಸಾವನಪ್ಪಿದ್ದಾರೆ. ಗಂಭೀರ ಗಾಯಗೊಂಡ ಆರು ಜನ ಮೂಡಿಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಹಾಸನಕ್ಕೆ ರವಾನಿಸಲಾಗಿದೆ. ಇಂಜಿನ್ ಮೇಲೆ ಕೂತಿದ್ದ ಡ್ರೈವರ್ ಅಪಾಯದಿಂದ …

Read More »

ಉಮೇಶ್ ಕತ್ತಿ ನಿಧನ ಹಿನ್ನಲೆ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಬೆಳಗಾವಿ: ಆಹಾರ ಇಲಾಖೆಯ ಸಚಿವ ಉಮೇಶ್ ಕತ್ತಿ(61)  ವಿಧಿವಶ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೂ ರಜೆ ಘೋಷಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಸಚಿವ ಉಮೇಶ್ ಕತ್ತಿ ನಿಧನದ ಸುದ್ದಿ ತಿಳಿದು ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ, ಬಾಗೇವಾಡಿಗೆ ಕೊಂಡೊಯ್ದು 5 ಗಂಟೆಗೆ ಅವರ ತೋಟದಲ್ಲಿ‌ ಅಂತಿಮ ವಿಧಿ ವಿಧಾನ ನಡೆಸಲಾಗುತ್ತೆ. ಸಕಲ ಸರ್ಕಾರಿ ಗೌರವಗಳನ್ನ …

Read More »