ಹುಬ್ಬಳ್ಳಿ : ಮಳೆಯಿಂದ ಬೆಂಗಳೂರಿನಷ್ಟೇ ನವಲಗುಂದ ಕ್ಷೇತ್ರದಲ್ಲೂ ಹಾನಿಯಾಗಿದೆ . ಈ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ ,
ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಆದ್ದರಿಂದ ಪರಿಹಾರ ಕೊಡುವವರೆಗೂ ಟ್ರ್ಯಾಕ್ಟರ್ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಹೇಳಿದರು .
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , ಪ್ರತಿಭಟನೆ ಮಾಡಿದ ನಂತರ ಕಾಳಜಿ ಕೇಂದ್ರ ತೆರೆದಿದ್ದಾರೆ . ಸತ್ಯ ದರ್ಶನ ಮಾಡಲು ಗ್ರಾಮ ವಾಸ್ತವ್ಯ ಮಾಡುತ್ತೇನೆ . ಮನೆ ಕಳೆದುಕೊಂಡವರಿಗೆ ತಕ್ಷಣ ಹತ್ತು ಸಾವಿರ ಪರಿಹಾರ ನೀಡಬೇಕು
ಆದರೆ , ಮನೆ ಕಳೆದುಕೊಂಡವರಿಗೆ ಈ ಸರ್ಕಾರ ಪರಿಹಾರ ನೀಡಿಲ್ಲ . ಬೆಂಗಳೂರಿನಲ್ಲಿ ಪರಿಹಾರ ನೀಡುತ್ತಾರೆ . ಆದರೆ , ಧಾರವಾಡ ಜಿಲ್ಲೆಯಲ್ಲಿ ಏಕೆ ಪರಿಹಾರವಿಲ್ಲ ? ಎಂದು ಕ್ಷೇತ್ರದ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು
ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಹಾಲಪ್ಪ ಆಚಾರ್ಯ ಭೇಟಿ ನೀಡಿ ಕೈ ತೊಳೆದುಕೊಂಡಿದ್ದಾರೆ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ . ಕ್ಷೇತ್ರದಲ್ಲಿ 200 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿವೆ . ಪರಿಹಾರಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯ ಆಗಿದೆ . ನಾನು ಗ್ರಾಮ ವಾಸ್ತವ್ಯದ ಮೂಲಕ ಹೋರಾಟ ಮಾಡಿ , ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಣ್ಣು ತೆರೆಸುತ್ತೇನೆ . ಪರಿಹಾರ ನೀಡುವವರೆಗೂ ನಿರಂತರ ಹೋರಾಟ ಮಾಡುತ್ತೇನೆ ಎಂದರು
bigtvnews | Hubli Dharwad News | Kannada News | Karnataka News Hubli News | News In Hubli | Local news

