ಹುಬ್ಬಳ್ಳಿ:- ಹೃದಯಾಘಾತದಿಂದ ವ್ಯಕ್ತಿಯೊರ್ವ ಸಾವನಪ್ಪಿರುವ ಘಟನೆ ಹುಬ್ಬಳ್ಳಿ ಸಾಯಿ ಬಾಬಾ ಮಂದಿರದ ಬಳಿ ಇಂದು ಮುಂಜಾನೆ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಬಂಡವಾಡ ಗ್ರಾಮದ ಮಲ್ಲಪ್ಪ ರೆಡ್ಡೇರ್ 60, ಎಂಬಾತ ಹೃದಯಾಘಾತದಿಂದ ಸಾವನಪ್ಪಿರುವ ವ್ಯಕ್ತಿ, ಇಂದು ಮುಂಜಾನೆ ಸಂತೆಗೆ ಬಂದಿದ್ದ ಮಲ್ಲಪ್ಪ ಸಾಯಿಬಾಬ ಮಂದಿರದ ಬಳಿ ಕುಸಿದ ಬಿದ್ದಿದ್ದಾರೆ.ಇನ್ನೂ ಸ್ಥಳೀಯರು ಆತನನ್ನು ಕಿಮ್ಸ್ ಗೆ ರವಾನಿಸಲು ಅಂಬುಲೇನ್ಸ್ ಗೆ ಕರೆ ಮಾಡಿದ್ರೂ ಸರಿಯಾದ ಸಮಯಕ್ಕೆ ಬಾರದ ಕಾರ ಆತನ ಜೀವ ಹಾರಿ …
Read More »ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ
ಬ್ರಿಟನ್: ಪ್ರಧಾನಿ ಚುನಾವಣೆಗೆ ನಡೆದಂತ ಫಲಿತಾಂಶ ಹೊರ ಬಿದ್ದಿದೆ. ಲಿಜ್ ಟ್ರಸ್ ಅವರು ರಿಷಿ ಸುನಕ್ ಅವರನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕ ಮತ್ತು ಬ್ರಿಟನ್ ನ ಮುಂದಿನ ಪ್ರಧಾನಿಯಾಗಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಸದಸ್ಯರು ಸೋಮವಾರ, ಸೆಪ್ಟೆಂಬರ್ 5 ರಂದು, ಲಿಜ್ ಟ್ರಸ್ ಅವರನ್ನು ತಮ್ಮ ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಿದರು, ಇದು ಅವರನ್ನು ಯುನೈಟೆಡ್ ಕಿಂಗ್ ಡಮ್ ನ …
Read More »ಜನತೆಗೆ ವಿವಿಧ ಭರವಸೆ ನೀಡಿದ ರಾಹುಲ್ ಗಾಂಧಿ
ಗುಜರಾತ್: ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಉಚಿತ ಕೊಡುಗೆಗಳೇ ಸದ್ದು ಮಾಡುತ್ತಿದೆ. ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಗುಜರಾತ್ನಲ್ಲಿ ಆಪ್ ಆಧಿಕಾರಕ್ಕೆ ಬಂದರೆ ಹಲವು ಉಚಿತ ಕೂಡುಗೆಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದೀಗ ಕಾಂಗ್ರೆಸ್ ಸರದಿ. ಗುಜರಾತ್ ಅಹಮ್ಮದಬಾದ್ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪರಿವರ್ತನಾ ಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಹಲವು ಕೊಡುಗೆ ಘೋಷಿಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನವ ಗುಜರಾತ್ ನಿರ್ಮಿಸುವುದಾಗಿ …
Read More »ಕಾರಿನಲ್ಲಿ ಸಂಚರಿಸುತ್ತಿದ್ದಾಗಲೇ ಬಿಜೆಪಿ ಶಾಸಕ ಸಾವು
ಉತ್ತರ ಪ್ರದೇಶ: ಹೃದಯಾಘಾತದಿಂದ ಕಾರಿನಲ್ಲಿ ಸಂಚರಿಸುತ್ತಿದ್ದಾಗಲೇ ಬಿಜೆಪಿ ಶಾಸಕ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗೋಲ ಗೋಕರನಾಥ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅರವಿಂದ ಗಿರಿ ಮೃತ ಶಾಸಕ. ಇವರು ಇಂದು (ಮಂಗಳವಾರ) ಮುಂಜಾನೆ ತಮ್ಮ ಕಾರಿನಲ್ಲಿ ಲಕ್ಕೋಗೆ ತೆರಳುತ್ತಿದ್ದಾಗ ಹೃದಯಾಘಾತವಾಗಿದೆ.ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಪ್ರಾಣಾಪಕ್ಷಿ ಹಾರಿ ಹೋಗಿದೆ.ಶಾಸಕ ಗಿರಿ ಸಾವಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪಸೂಚಿಸಿದ್ದಾರೆ.
Read More »ಮಾಜಿ ಸಚಿವ ಪ್ರಭಾಕರ ರಾಣೆ ನಿಧನ
ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ನಿಧನ ಹೊಂದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅಲ್ಪ ಕಾಲದ ಅಸ್ವಸ್ಥತೆ ಯಿಂದ ಬಳಲುತ್ತಿದ್ದರು. ಮರೆವಿನ(ಅಲ್ಜಮೇರಿಯಾ) ಸಹ ಅವರನ್ನು ಕಾಡುತ್ತಿತ್ತು. ಮಧ್ಯಾಹ್ನ 1.30 ಕ್ಕೆ ಕೊನೆಯುಸಿರೆಳೆದಿದ್ದಾರೆ. ಸಿದ್ಧರದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ಅವರು ಶಿಕ್ಷಕರನ್ನು ಸಂಘಟಿಸಿದ್ದರು. ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು. 1983 ರಿಂದ ಮೂರು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು. …
Read More »ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಮದುವೆ ಫಿಕ್ಸ್… ಹುಡುಗಿ ಯಾರು ಗೊತ್ತಾ !
ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್, ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿ ಜೊತೆ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಇವರಿಬ್ಬರ ಮದುವೆ ದಿನಾಂಕ ಫಿಕ್ಸ್ ಆಗಿದೆ ಎನ್ನಲಾಗಿದ್ದು, ಈ ವರ್ಷದ ಅಂತ್ಯದಲ್ಲಿ ಅಥವಾ 2023ರ ಜನವರಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈ ಹೊರ ವಲಯದಲ್ಲಿರುವ ಸುನಿಲ್ ಶೆಟ್ಟಿ ಅವರ ಖಂಡಾಲ ಬಂಗಲೆಯಲ್ಲಿ ಇವರಿಬ್ಬರ ವಿವಾಹ ನೆರವೇರಲಿದ್ದು, ಇದಕ್ಕಾಗಿ ಈಗಾಗಲೇ …
Read More »ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಾದ್ಯಂತ ಶಾಲೆಗಳಿಗೆ ಇಂದು ರಜೆ
ಧಾರವಾಡ : ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಬರುತ್ತಿವೆ ಮುಂಜಾಗ್ರತಾ ಕ್ರಮವಾಗಿ ,ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಶಾಲೆ ಕಾಲೇಜುಗಳಿಗೆ ಇಂದು ಸೆ.6 ರಂದು ಒಂದು ದಿನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ರಜೆ ಘೋಷಿಸಿದ್ದಾರೆ. ರೈತರು,ಸಾರ್ವಜನಿಕರು ಹಳ್ಳ,ಕೊಳ್ಳಗಳನ್ನು ದಾಟುವ ಸಾಹಸಗಳಿಗೆ ಕೈ ಹಾಕಬಾರದು.ಜಾನುವಾರುಗಳ ಸುರಕ್ಷತೆಗೂ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ
Read More »11 ಜಿಲ್ಲೆಗಳಲ್ಲಿ ಭಾರಿ ಮಳೆ : ಜನರ ಜೀವನ ಅಸ್ತವ್ಯಸ್ತ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಜಡಿಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅನೇಕ ನದಿ ತೊರೆಗಳು ತುಂಬಿ ಹರಿಯುತ್ತಿರುವುದರೊಂದಿಗೆ ಕೆರೆಗಳೂ ಕೋಡಿಹರಿದಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ, ಬೆಳೆಹಾನಿ ಸಂಭವಿಸಿದೆ. ಮಾತ್ರವಲ್ಲದೆ ಮಳೆ ಸಂಬಂಧಿ ಕಾರಣಗಳಿಗೆ ಮೂವರು ಬಲಿಯಾಗಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ.ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು …
Read More »ವಿದ್ಯುತ್ ತಂತಿ ತಗಲಿ ಇಬ್ಬರು ಸಾವು
ಬೆಳಗಾವಿ: ತಾಲ್ಲೂಕಿನ ಸುಳಗಾ ಗ್ರಾಮದಲ್ಲಿ ಸೋಮವಾರ ಸಂಜೆ ಮಳೆ ನೀರು ಸೋರದಂತೆ ಮನೆ ಮಾಳಿಗೆ ಮನೆಯ ಮೇಲೆ ತಗಡಿನ ಪತ್ರಾಗಳನ್ನು ಹಾಕುವ ವೇಳೆ ವಿದ್ಯುತ್ ತಂತಿ ತಗಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸುಳಗಾ ನಿವಾಸಿ ವಿನಾಯಕ ಕೃಷ್ಣ ಕಾಲಖಾಂಬಕರ (25), ಬೆನಕನಹಳ್ಳಿ ನಿವಾಸಿ ವಿಲಾಸ ಗೋಪಾಲ ಅಗಸಗೇಕರ (57) ಮೃತಪಟ್ಟವರು. ವಿನಾಯಕ ಅವರ ಮನೆ ಮಳೆಯಿಂದಾಗಿ ಸೋರುತ್ತಿತ್ತು. ಈಗಾಗಲೇ ಇದ್ದ ತಗಡಿನ ಚಾವಣಿ ಮೇಲೆ ಹೊಸ …
Read More »ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ : 35ಕ್ಕೂ ಹೆಚ್ಚು ಕಡೆ ದಾಳಿ
ಕೊಡಗು: ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಫೀಲ್ಡಿಗೆ ಇಳಿದಿದ್ದು, 35ಕ್ಕೂ ಹೆಚ್ಚು ಕಡೆ ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬೆಳ್ಳಾರೆ, ಸುಳ್ಯ, ಪುತ್ತೂರು, ಮಂಗಳೂರು, ಮಡಿಕೇರಿ ಸೇರಿದಂತೆ ಹಲವೆಡೆ ದಾಳಿ ಮಾಡಿ ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಯನ್ನ ಎನ್ಐಎ ಅಧಿಕಾರಿಗಳು ನಡೆಸುತ್ತಿದ್ದಾರೆ. ಪ್ರವೀಣ್ ಹತ್ಯೆಯಲ್ಲಿ ಕೆಲವು ಸಂಘಟನೆಗಳ ಕೈವಾಡದ ಮಾಹಿತಿ ಎಂಬ ಮಾಹಿತಿ ಸಿಕ್ಕಿದ್ಯಂತೆ. ಸ್ಥಳೀಯ ಮಟ್ಟದಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





