Breaking News

BigTv News

ಬಳ್ಳಾರಿಯಲ್ಲಿ ಭೀಕರ ಜೋಡಿ ಕೊಲೆ, ಮಾತುಕತೆಗೆ ಪತ್ನಿ-ಮಾವನನ್ನು ಕರೆಸಿ ಕೊಂದೇ ಬಿಟ್ಟ!

ಬಳ್ಳಾರಿಯ ಗುಗ್ಗರಟ್ಟಿಯಲ್ಲಿ 24 ವರ್ಷದ ನಾಗಲಕ್ಷ್ಮೀ ಹಾಗೂ ಆಕೆಯ ತಂದೆ ಶ್ರೀನಿವಾಸ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಾಗಲಕ್ಷ್ಮಿಯ ಪತಿ ತೇಜಾ ಹಾಗೂ ಆತನ ತಂದೆ ಗುರುಶಂಕರ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕೌಟುಂಬಿಕ ಕಲಹದ ವಿಚಾರವಾಗಿ ಸಂಧಾನ ನಡೆಸೋಣ ಎಂದು ಮನೆಗೆ ಕರೆಸಿಕೊಂಡ ಬಳಿಕ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಆರೋಪಿಗಳು ಇಬ್ಬರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪತ್ನಿಯ ನಡತೆಯ …

Read More »

12 ವರ್ಷಗಳ ವಂಚನೆಯ ಆಟಕ್ಕೆ ಬಿತ್ತು ಬ್ರೇಕ್: ನಕಲಿ ಡಿವೈಎಸ್‌ಪಿ ಕೊನೆಗೂ ಅರೆಸ್ಟ್!

ವಿಜಯಪುರ: ಪೊಲೀಸ್ ಹಾಗೂ ಪಿಎಸ್‌ಐ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿ, 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕಲಿ ಡಿವೈಎಸ್‌ಪಿ ಗ್ಯಾನನಗೌಡ ಉರ್ಫ್ ಗಣೇಶನನ್ನು ಎಪಿಎಂಸಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ಖಾಕಿ ಸಮವಸ್ತ್ರ ಧರಿಸಿ ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡು ನಿರುದ್ಯೋಗಿ ಯುವಕರಿಂದ ಹಣ ಪಡೆದು ವಂಚಿಸುತ್ತಿದ್ದ. 2014ರಲ್ಲಿ ಹಣ ವಾಪಸ್ ಕೇಳಿದ್ದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಯತ್ನ ನಡೆಸಿದ ಆರೋಪವೂ ಈತನ ಮೇಲಿದೆ. ತಾಂತ್ರಿಕ ಮಾಹಿತಿಯ ಆಧಾರದ …

Read More »

ಕಾಡಿನ ಜಿಂಕೆ ಮನೆಗೆ ತಂದು ಸಾಕಿದ್ದ ಅರಣ್ಯ ಗಾರ್ಡ್ ಬಂಧನ: ಮನೆಯಲ್ಲಿ ಅಕ್ರಮ ಬಂದೂಕು ಪತ್ತೆ

ಹುಣಸೂರು: ಕಾಡಿನಿಂದ ಜಿಂಕೆ ಮರಿಗಳನ್ನು ತಂದು ಮನೆಯಲ್ಲಿ ಸಾಕಿದ್ದ ಆರೋಪದ ಮೇಲೆ ನಾಗರಹೊಳೆ ವನ್ಯಜೀವಿ ವಲಯದ ಬೀಟ್ ಗಾರ್ಡ್ ಪೊನ್ನಪ್ಪ ಅಲಿಯಾಸ್ ನವೀನ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ವಿಜಿಲೆನ್ಸ್, ಜಾಗೃತ ದಳ ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಆರೋಪಿಯು ಕೆಲ ತಿಂಗಳ ಹಿಂದೆ ಎರಡು ಜಿಂಕೆ ಮರಿಗಳನ್ನು ಮನೆಗೆ ತಂದಿದ್ದು, ಅವುಗಳಲ್ಲಿ ಒಂದನ್ನು ಕೊಂದು ಅದರ ಮಾಂಸವನ್ನು ಸೇವಿಸಿ …

Read More »

ಹೊಗೆಸೊಪ್ಪು ಬ್ಯಾರನ್ ಬೆಂಕಿಗಾಹುತಿ

ಹನಗೋಡು: ಹೋಬಳಿಯ ದೊಡ್ಡಹೆಜ್ಜೂರು ಗ್ರಾಮದಲ್ಲಿ ಸೋಮವಾರ ಸಂಜೆ ತಂಬಾಕು ಹದ ಮಾಡುವ ವೇಳೆ ಬ್ಯಾರನ್‌ಗೆ ಬೆಂಕಿ ತಗುಲಿ, ಹದಗೊಳಿಸುತ್ತಿದ್ದ ಹೊಗೆಸೊಪ್ಪು ಹಾಗೂ ಬ್ಯಾರನ್ ಸಂಪೂರ್ಣ ಸುಟ್ಟು ಹೋಗಿದೆ. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಬ್ಯಾರನ್‌ಗೆ ವ್ಯಾಪಿಸಿತು. ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ, ಅಷ್ಟರಲ್ಲೇ ಬ್ಯಾರನ್‌ನಲ್ಲಿದ್ದ ತಂಬಾಕು ಹಾಗೂ ಬ್ಯಾರನ್ …

Read More »

ಬೆಂಗಳೂರಲ್ಲಿ ರಕ್ತಪಾತ: ಬಾರ್‌ನಲ್ಲಿ ಗುರಾಯಿಸಿದ್ದೇ ತಪ್ಪಾಯ್ತು, ಯುವಕನ ಎದೆಗೆ ಬಾಟಲಿ ಚುಚ್ಚಿ ಹತ್ಯೆ

ಬೆಂಗಳೂರು ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನನ್ನು ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮೃತನನ್ನು ಉದಯ್ ಕುಮಾರ್ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಚೆಲುವ ಮತ್ತು ತೇಜ್ ಎಂಬುವರ ವಿರುದ್ಧ ಆರೋಪ ಕೇಳಿಬಂದಿದೆ. ಬಾರ್‌ನಲ್ಲಿ ಕುಳಿತಿದ್ದ ವೇಳೆ ಉದಯ್ ಆರೋಪಿಗಳ ಕಡೆಗೆ ಗುರಾಯಿಸಿದ್ದ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಆರೋಪಿಗಳು ಉದಯ್‌ನನ್ನು ಹಿಂಬಾಲಿಸಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ, ಒಡೆದ ಬಾಟಲಿಯಿಂದ …

Read More »

ಗುಡ್ಡದಲ್ಲಿ ಯುವತಿಯ ಸುಟ್ಟ ಮೃತದೇಹ ಪತ್ತೆ ಪ್ರಕರಣ ಭೇದಿಸಿದ ಬೆಳಕವಾಡಿ ಪೊಲೀಸರು

ಮಂಡ್ಯ ಜಿಲ್ಲೆಯ ಜವನಗಹಳ್ಳಿ ಗುಡ್ಡದ ಸಮೀಪ ಪತ್ತೆಯಾಗಿದ್ದ ಮಹಿಳೆಯ ಸುಟ್ಟ ಶವ ಪ್ರಕರಣವನ್ನು ಬೆಳಕವಾಡಿ ಪೊಲೀಸರು ಭೇದಿಸಿದ್ದಾರೆ. ನಳಿನಿ ಎಂಬ ಯುವತಿಯನ್ನು ಮದುವೆಗೆ ಒತ್ತಾಯಿಸುತ್ತಿದ್ದಳು ಎಂಬ ಕಾರಣಕ್ಕೆ ರಾಜಶೇಖರ್ ಕೊಲೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಕೈಗಡಿಯಾರ, ಉಂಗುರ, ಹೇರ್‌ಕ್ಲಿಪ್ ಹಾಗೂ ಮನೆಯ ಕೀ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಸಿಸಿಟಿವಿ ದೃಶ್ಯಗಳ ನೆರವಿನಿಂದ …

Read More »

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಟೋರಿಯಸ್ ದಲ್ಲಾಳಿ ಅರೆಸ್ಟ್!

ಬೆಂಗಳೂರು ನಗರದ ಮಾದನಾಯಕನಹಳ್ಳಿ ಪೊಲೀಸರು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವೇಶ್ಯಾವಾಟಿಕೆ ದಂಧೆಯ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಚೇತನ್ ಕುಮಾರ್ ಅಲಿಯಾಸ್ ಮಂಗಳಮುಖಿ ಚೇತನ್ (40) ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮಂಗಳಮುಖಿಯ ವೇಷ ಧರಿಸುತ್ತಿದ್ದ ಚೇತನ್, ದೆಹಲಿ ಹಾಗೂ ಮುಂಬೈ ಸೇರಿದಂತೆ ಹೊರರಾಜ್ಯಗಳಿಂದ ಯುವತಿಯರನ್ನು ಕರೆತಂದು ಅನೈತಿಕ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಜುಲೈ 6ರಂದು …

Read More »

10 ವರ್ಷದ ದ್ವೇಷಕ್ಕೆ ರೌಡಿಶೀಟರ್​ ಬರ್ಬರ ಹತ್ಯೆ, ಮಹಿಳೆ ಕೊಟ್ಟಳು ಸಾಥ್​, ಬಯಲಾಯ್ತು ಅಕ್ಷತಾ ಡೆಡ್ಲಿ ಗೇಮ್​!

ಬೆಂಗಳೂರು ಜೆಪಿ ನಗರದಲ್ಲಿ ರೌಡಿಶೀಟರ್ ರಾಜು ಅಲಿಯಾಸ್ ಹಲ್ಮುರ್ಕ ರಾಜು ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಹತ್ಯೆಗೆ ಸಹಕರಿಸಿದ ಆರೋಪದ ಮೇಲೆ ಅಕ್ಷತಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜು ಇದ್ದ ಸ್ಥಳವನ್ನು ಹಂತಕರಿಗೆ ತೋರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಅದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಪ್ರಮುಖ ಆರೋಪಿ ಬ್ಯಾಟ್ ಸಂತು ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಅಕ್ಷತಾ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. …

Read More »

ಚರ್ಚಿನಗುಡ್ಡದಲ್ಲಿ ಬೆಂಕಿ ಹಚ್ಚಿ ಕೊ*ಲೆ: ಆಸ್ತಿ ಗಲಾಟೆ ಹಿನ್ನೆಲೆ ಅಣ್ಣ, ಅಳಿಯನ ಬಂಧನ

ಕೊಪ್ಪಳ: ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಸಹೋದರ ಮತ್ತು ಅಳಿಯ ಸೇರಿ ಕೊಲೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಘಟನೆ ಕನಕಗಿರಿ ತಾಲೂಕಿನ ಕೆಸರಹಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ (33) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆತನ ಸಹೋದರ ಅಯ್ಯನಗೌಡ ಮಾಲಿ ಪಾಟೀಲ್ ಹಾಗೂ ಅಳಿಯ ಗಂಗಾಧರ ಆದ್ಯಪ್ಪ ಮಾಲಿ ಪಾಟೀಲ್ ಅವರನ್ನು ಕನಕಗಿರಿ ಪೊಲೀಸರು ಬಂಧಿಸಿದ್ದಾರೆ. ಜೂನ್ …

Read More »

ಚಿಂತಾಮಣಿಯಲ್ಲಿ ಡಬಲ್ ಮರ್ಡರ್ : ಕತ್ತು ಕೊಯ್ದು ಸಹೋದರಿಯರ ಹತ್ಯೆ ಮಾಡಿ ಆರೋಪಿ ಪರಾರಿ

ಚಿಂತಾಮಣಿ: ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ಪತ್ನಿ ಹಾಗೂ ನಾದಿನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿಂತಾಮಣಿ ಪಟ್ಟಣದ ಜೆಜೆ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಶಮಾ (30) ಮತ್ತು ಆಕೆಯ ಸಹೋದರಿ ರೇಷಾ (20) ಎಂದು ಗುರುತಿಸಲಾಗಿದೆ. ಆರೋಪಿ ಏಜಾಝ್‌ಖಾನ್‌ ಪತ್ನಿಯನ್ನು ಮಕ್ಕಳೊಂದಿಗೆ ಮನೆಗೆ ಕರೆತರುವ ವಿಚಾರವಾಗಿ ಜಗಳವಾಡಿ, ಬಳಿಕ ಪತ್ನಿ ಮತ್ತು ಮಧ್ಯೆ ಬಂದ ನಾದಿನಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಘಟನೆಯ ಬಳಿಕ ಆರೋಪಿ …

Read More »