Breaking News

ಚರ್ಚಿನಗುಡ್ಡದಲ್ಲಿ ಬೆಂಕಿ ಹಚ್ಚಿ ಕೊ*ಲೆ: ಆಸ್ತಿ ಗಲಾಟೆ ಹಿನ್ನೆಲೆ ಅಣ್ಣ, ಅಳಿಯನ ಬಂಧನ

ಕೊಪ್ಪಳ: ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಸಹೋದರ ಮತ್ತು ಅಳಿಯ ಸೇರಿ ಕೊಲೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಘಟನೆ ಕನಕಗಿರಿ ತಾಲೂಕಿನ ಕೆಸರಹಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತರನ್ನು ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ (33) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆತನ ಸಹೋದರ ಅಯ್ಯನಗೌಡ ಮಾಲಿ ಪಾಟೀಲ್ ಹಾಗೂ ಅಳಿಯ ಗಂಗಾಧರ ಆದ್ಯಪ್ಪ ಮಾಲಿ ಪಾಟೀಲ್ ಅವರನ್ನು ಕನಕಗಿರಿ ಪೊಲೀಸರು ಬಂಧಿಸಿದ್ದಾರೆ. ಜೂನ್ 28ರಂದು ಆಸ್ತಿ ವಿಚಾರವಾಗಿ ನಡೆದ ಜಗಳದ ವೇಳೆ ಹಲ್ಲೆ ನಡೆಸಿ ಮಲ್ಲಿಕಾರ್ಜುನನನ್ನು ಕೊಲೆ ಮಾಡಿದ್ದ ಆರೋಪಿಗಳು, ಬಳಿಕ ಶವವನ್ನು ಗುಡ್ಡಗಾಡು ಪ್ರದೇಶಕ್ಕೆ ಕೊಂಡೊಯ್ದು ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದರು ಎನ್ನಲಾಗಿದೆ. ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾದ ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *