Breaking News

BigTv News

ನಾನು ಮನಸ್ಸು ಮಾಡಿದರೆ ಮುಂದೊಂದು ದಿನ ಸಿಎಂ ಆಗ್ತಾನೆ : ಜನಾರ್ದನ ರೆಡ್ಡಿ

ಬಳ್ಳಾರಿ : ನಾನು ಮನಸ್ಸು ಮಾಡಿದರೆ ಮುಂದೊಂದು ದಿನ ಸಿಎಂ ಆಗ್ತಾನೆ. ಮನಸ್ಸು ಮಾಡಿದ್ರೆ ಯಾವಗ ಬೇಕಾದ್ರೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರೆಡ್ಡಿ, ರಾಮುಲು ಸೋದರರಿಗೆ ಹಣದ ಅವಶ್ಯಕತೆ ಇಲ್ಲ. ನನಗೆ ಶಾಸಕ, ಮಂತ್ರಿ ಆಗಬೇಕು ಎಂಬ ಆಸೆ ಇಲ್ಲ. ನನಗಂತೂ ಯಾರಿಗೂ ಕೊಡಲಾರದ ಕಷ್ಟ ಕೊಟ್ಟಿದ್ದಾರೆ.ಆದರೂ ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಇಂತಹ ವಿಶೇಷ …

Read More »

ಸ್ಯಾಂಡಲ್​ವುಡ್​ ನಟನಿಗೆ ಕುತ್ತಿಗೆಗೆ ಏಟು : ಆಸ್ಪತ್ರೆಗೆ ದಾಖಲು

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿಗಂತ್​​ ದೂದ್​ಪೇಡ ಅಂತಲೇ ಹೆಸರುವಾಸಿಯಾಗಿರುವ ನಟ. ಮಲೆನಾಡಿನ ಸಾಗರದವರಾದ ದಿಗಂತ್​​ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಖ್ಯಾತಿಯನ್ನು ಗಳಿಸಿರುವ ನಟ. ಗೋವಾದಲ್ಲಿ ಕುಟುಂಬಸ್ಥರ ಜೊತೆಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಈ ನಟ ಸಮ್ಮರ್​ ಶಾಟ್​ ಮಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಬಲವಾದ ಪೆಟ್ಟನ್ನು ಮಾಡಿಕೊಂಡಿದ್ದಾರೆ. ಕತ್ತಿಗೆ ಬಲವಾದ ಏಟು ಮಾಡಿಕೊಂಡಿರುವ ನಟ ದಿಗಂತ್​ ಮಣಿಪಾಲ್​ ಆಸ್ಪತ್ರೆಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ದಾಖಲಾಗಲಿದ್ದಾರೆ. ನಟ ದಿಗಂತ್​ ಈ …

Read More »

ಮಾಜಿ ಸಿಎಂ ಹೇಳಿಕೆಗೆ ಸಿಎಂ ತಿರುಗೇಟು

ಬೆಂಗಳೂರು: ಪ್ರವಾಹ ಬಂದಾಗ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ನೀಡದ ಪ್ರಧಾನಿ ಮೋದಿ, ಈಗ ಯೋಗ ಮಾಡಲು ರಾಜ್ಯಕ್ಕೆ ಬಂದಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ದೇಶ ಕೊರೊನಾ ಸೋಂಕನ್ನು ಯಶಸ್ವಿಯಾಗಿ ಎದುರಿಸಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಮೋದಿ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ಕೋವಿಡ್ ಅನ್ನು ಇಡೀ ದೇಶದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದರೆ ಅದಕ್ಕೆ …

Read More »

ಒಡಿಶಾದ ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

ಒಡಿಶಾದ ಖ್ಯಾತ ಕಿರುತೆರೆ ನಟಿ ರಶ್ಮಿರೇಖಾ ಓಜಾ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ನಯಪಲ್ಲಿಯಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನಟಿಯ ಶವ ಪತ್ತೆಯಾಗಿದ್ದು, ಸಾವಿಗೆ ಸರಿಯಾದ ಕಾರಣ ಈವರೆಗೂ ತಿಳಿದುಬಂದಿಲ್ಲ. ಇದರ ನಡುವೆ ರಶ್ಮಿ ಸಾವಿನ ಬಗ್ಗೆ ಅನೇಕ ಅನುಮಾನ ವ್ಯಕ್ತವಾಗಿದೆ. ಜೊತೆಗೆ ರಶ್ಮಿರೇಖಾ ಸಾವಿನ ಹಿಂದೆ ಬಾಯ್‌ಫ್ರೆಂಡ್ ಸಂತೋಷ್ ಕೈವಾಡವಿದೆ ಎಂದು ನಟಿಯ ತಂದೆ ಆರೋಪಿಸಿದ್ದಾರೆ. ಆದರೆ ಸಾವಿಗೆ ಪ್ರೇಮ ವೈಫಲ್ಯ ಕಾರಣ …

Read More »

ತಾಯಿಯ ಮಡಿಲಿಗೆ ಮಗಳನ್ನು ಸೇರಿಸಿ ಮಾನವೀಯತೆ ಮೆರೆದ ಪೋಲಿಸರು

ಬೆಂಗಳೂರು: ಮಗಳನ್ನು ಹುಡುಕಿ ಬೆಂಗಳೂರಿಗೆ ಬಂದಿದ್ದ ವೃದ್ಧೆ ತಾಯಿಗೆ ಮಗಳನ್ನು ಒಪ್ಪಿಸಿ ಪುಲಿಕೇಶಿನಗರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಮೊಬೈಲ್ ಅನ್ನು ತಮಿಳುನಾಡಿನಲ್ಲಿಯೇ ಬಿಟ್ಟು ಮಗಳನ್ನ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ವೃದ್ದೆಯು, ಮಗಳ ಹೆಸರು ಬಿಟ್ಟು ಬೇರೇನು ಗೊತ್ತಿಲ್ಲದೇ ರಸ್ತೆಯಲ್ಲಿ ಹುಡುಕಾಡುತ್ತಾ ಕಣ್ಣೀರು ಹಾಕುತ್ತಿದ್ದರು. ಇದನ್ನು ಗಮನಿಸಿದ ಪುಲಕೇಶಿ ನಗರದ ಹೊಯ್ಸಳ ಸಿಬ್ಬಂದಿಯು, ಪುಲಿಕೇಶಿನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ವೃದ್ದೆಯ ಮಗಳನ್ನ ಸ್ಥಳೀಯರ ಸಹಾಯದಿಂದ ಸಂಪರ್ಕಿಸಿ ತಾಯಿಯನ್ನು ಮಗಳಿಗೆ ಒಪ್ಪಿಸಿದ್ದಾರೆ. …

Read More »

ಭಾರತದ ಪ್ರಗತಿಯಲ್ಲಿ ಮೋದಿ ಶ್ರೀಕೃಷ್ಣನ ಅವತಾರದಲ್ಲಿ ಬಂದಿದ್ದಾರೆ : ಶ್ರೀರಾಮುಲು

ಕೊಪ್ಪಳ: ಮಹಾಭಾರತದಲ್ಲಿ ಶ್ರೀ ಕೃಷ್ಣ ಹೇಗೆ ಅವತಾರ ತಾಳಿದ್ದನೋ ಹಾಗೆ ಭಾರತದ ಪ್ರಗತಿಯಲ್ಲಿ ಮೋದಿ ಶ್ರೀಕೃಷ್ಣನ ಅವತಾರದಲ್ಲಿ ಬಂದಿದ್ದಾರೆ ಎಂದು ಸಚಿವ ಶ್ರೀರಾಮುಲು ಅವರು ಹೇಳಿದರು. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ನವ ಭಾರತ ನಿರ್ಮಾಣಕ್ಕೆ ಮೋದಿ ಬಹಳ ಶ್ರಮಿಸುತ್ತಾರೆ. ಮೋದಿ ಜನಪ್ರೀಯತೆ ಸಹಿಸದೆ ಸಿದ್ದರಾಮಯ್ಯ ಅವರು ಮೂರ್ಖರ ರೀತಿ ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಮೋದಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ‌. ಅಧಿಕಾರಕ್ಕೆ ಬರುವುದಿಲ್ಲ ಎಂಬ ಹತಾಶೆ …

Read More »

ಮಾಧ್ಯಮ ಪ್ರತಿನಿಧಿಗಳ ಕರೆ ಕೂಡಲೆ ಸ್ಪಂದಿಸಬೇಕು : ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಡಿಸಿ ಸೂಚನೆ

ಧಾರವಾಡ : ತಮ್ಮ ಇಲಾಖೆ ಯೋಜನೆಗಳ ಮತ್ತು ಇಲಾಖೆಗೆ ಸಂಬಂದಿತ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ, ಮಾಧ್ಯಮ ಪ್ರತಿನಿಧಿಗಳಿಂದ ಕರೆ ಬಂದಾಗ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಧಾರವಾಡ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ತಮಗೆ ಕಾರ್ಯ ಒತ್ತಡವಿದ್ದಲ್ಲಿ ತಮ್ಮ ಅಧೀನ ಅಧಿಕಾರಿಗಳಿಂದ ಮಾಹಿತಿ ನೀಡಲು ಕ್ರಮವಹಿಸಬೇಕು. ಸಾರ್ವಜನಿಕ ಹಿತಾಸಕ್ತಿ ಸಂಬಂದಿಸಿದಂತೆ ಪ್ರಕಟಣೆ, ಸುದ್ದಿಗಳಿದ್ದಲ್ಲಿ ವಾರ್ತಾ ಇಲಾಖೆ ಮೂಲಕ ನೀಡಬಹುದು. ಅಧಿಕಾರಿಗಳು ಸಾರ್ವಜನಿಕರ ಕರೆಗಳನ್ನು ತಕ್ಷಣಕ್ಕೆ ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಜಿಲ್ಲಾಡಳಿತಕ್ಕೆ …

Read More »

ದಾವಣಗೆರೆ ಯಲ್ಲಿ‌ ಲೈವ್ ಮರ್ಡರ್; ಬೆಚ್ಚಿಬಿದ್ದ ಚನ್ನಗಿರಿ ಜನ..!

ದಾವಣಗೆರೆ : ಚಾಕುವಿನಿಂದ ಚುಚ್ಚಿ ಖಾಸಗಿ ಬಸ್ ಏಜೆಂಟರನ್ನ ಕೊಚ್ಚಿ ಬರ್ಬರವಾಗಿ ಹತ್ಯೆಯಾದ ಘಟನೆ ದಾವಣಗೆರೆ ಜಿ. ಚನ್ನಗಿರಿ ಪಟ್ಟಣದ ಕೈ ಮರದಲ್ಲಿ ಘಟನೆ ನಡೆದಿದೆ. ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಜಾಕೀರ್ ಏಜೆಂಟ್ ಹತ್ಯೆಗೀಡಾದ ಯುವಕ.ಜಾಕೀರ್ ಆಗಮಿಸುತ್ತಿದ್ದಂತೆ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬನಿಂದ ಏಕಾಏಕಿಯಾಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಮನ ಬಂದಂತೆ ವ್ಯಕ್ತಿ ಚುಚ್ಚಿದ್ದಾನೆ. ರಕ್ತಸಿಕ್ತವಾಗಿ ಬಿದ್ದಿದ್ದರೂ ಚುಚ್ಚಿ …

Read More »

ಕಾಂಗ್ರೆಸ್‌ನ ಹಿರಿಯ ನಾಯಕರ ನಿಯೋಗ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರನ್ನು ಭೇಟಿ

ಹೊಸದಿಲ್ಲಿ: ನ್ಯಾಶನಲ್‌ ಹೆರಾಲ್ಡ್‌ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು 4ನೇ ದಿನವಾದ ಸೋಮವಾರವೂ ವಿಚಾರಣೆಗೆ ಹಾಜರಾಗಿದ್ದಾರೆ. ಇದರ ನಡುವೆಯೇ, ಇತ್ತೀಚೆಗೆ ರಾಹುಲ್‌ ವಿಚಾರಣೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಪಕ್ಷದ ನಾಯಕ ರೊಂದಿಗೆ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಹಿರಿಯ ನಾಯಕರ ನಿಯೋಗ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರನ್ನು ಭೇಟಿ ಯಾಗಿ ದೂರು ಸಲ್ಲಿಸಿತು.

Read More »

ಪಿಎಸ್ ಐ ಹಗರಣ : ಮತ್ತೋರ್ವ ಅರೆಸ್ಟ್

ಕಲಬುರ್ಗಿ: ಇದೀಗ ಪರೀಕ್ಷೆ ಅಕ್ರಮದಲ್ಲಿ ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು, ಮೊದಲ Rank ಪಡೆದು ಆಯ್ಕೆಯಾಗಿದ್ದಂತ ಆರೋಪಿಯನ್ನು ಬಂಧಿಸಲಾಗಿದೆ. ಮಾಜಿ ಸೈನಿಕರ ಕೋಟಾದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಪರೀಕ್ಷೆ ಬರೆದು, ಅಕ್ರಮವಾಗಿ ಮೊದಲ Rank ಪಡೆದು ಆಯ್ಕೆಯಾಗಿದ್ದಂತ ವಿಶ್ವನಾಥ ಮಾನೆ (38) ಎಂಬಾತನನ್ನು ಸಿಐಡಿ ಬಂಧಿಸಿದೆ. ಬಂಧಿತ ವಿಶ್ವನಾಥ್, ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದ ನಿವಾಸಿಯಾಗಿದ್ದಾರೆ. ಅಂದಹಾಗೇ ವಿಶ್ವನಾಥ್ ಮಾನೆಯವರು ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ರುದ್ರಗೌಡ …

Read More »