ಬೆಂಗಳೂರು: ಜಾತಿಗಣತಿ ಸದ್ಯ ರಾಜ್ಯದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಒಂದು ವರದಿಯನ್ನ ರಾಜ್ಯ ಸರ್ಕಾರ ನಾಳೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ. ಆದರೆ ಕ್ಯಾಬಿನೆಟ್ ಸಭೆಗೂ ಮುನ್ನವೇ ಜಾತಿ ಗಣತಿ ವರದಿಯ ಮಾಹಿತಿ ಲೀಕ್ ಆಗಿದೆ. ಗುರುವಾರ ಕ್ಯಾಬಿನೆಟ್ ಸಭೆಯಲ್ಲಿ ಮಂಡನೆ ಮಾಡಲು ಸಿದ್ದತೆ ನಡೆಸಲಾಗಿತ್ತು.
ಆದರೆ ವರದಿ ಜಾರಿಗೂ ಮೊದಲೇ ಮಾಹಿತಿ ಲೀಕ್ ಆಗಿರುವುದು ಆತಂಕ ಸೃಷ್ಟಿಸಿದೆ. ಹಾಗಾದ್ರೆ ಲೀಕ್ ಆಗಿರುವ ಜಾತಿ ಗಣತಿ ವರದಿಯಲ್ಲಿರುವ ಮಾಹಿತಿಗಳು ಏನೇನು ಗೊತ್ತಾ..?
ಜಾತಿ ಗಣತಿ ವರದಿ ಲೀಕ್ ಆಗಿದ್ದು ಯಾವ ಜಾತಿಯವರು ಹೆಚ್ಚಾಗಿದ್ದಾರೆ, ಯಾವ ಜಾತಿಯ ಜನಸಂಖ್ಯೆ ಎಷ್ಟು ಎಂಬುದನ್ನ ನೋಡೂದಾದ್ರೆ ಪರಿಶಿಷ್ಟ ಜಾತಿ ನಂ 1. ಸ್ಥಾನದಲ್ಲಿ ಇದೆ. ನಂತರದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರು 2ನೇ ಸ್ಥಾನದಲ್ಲಿದ್ದಾರೆ. ಲಿಂಗಾಯತ ಸಮುದಾಯ 3ನೇ ಸ್ಥಾನ ತಲುಪಿದೆ. 4ನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯ ಇದೆ ಎಂಬ ಮಾಹಿತಿ ಹೊರಬಿದ್ದಿದೆ.
2015ರಲ್ಲಿ ನಡೆದಿರುವ ಜಾತಿ ಗಣತಿ ವರದಿಯ ಮುಖ್ಯಾಂಶಗಳು ಅಧಿಕೃತ ವರದಿ ಬಿಡುಗಡೆಗೆ ಮುನ್ನವೇ ರಹಸ್ಯ ಮಾಹಿತಿ ಸೋರಿಕೆಯಾಗಿದೆ. ಜಾತಿ ಗಣತಿ ವಿರುದ್ಧ ಲಿಂಗಾಯತರು ಮತ್ತು ಒಕ್ಕಲಿಗರು ಧ್ವನಿ ಎತ್ತಿದ್ದಾರೆ. ವರದಿ ಅವೈಜ್ಞಾನಿಕವಾಗಿದೆ ಎಂದು ಲಿಂಗಾಯತ, ಒಕ್ಕಲಿಗ ಸಮುದಾಯ ಆಕ್ರೋಶ ಹೊರಹಾಕುತ್ತಿದೆ. ಇತ್ತೀಚೆಗಷ್ಟೇ ಜಾತಿ ಗಣತಿ ವರದಿ ಮಂಡಿಸಿಯೇ ಸಿದ್ಧ ಎಂದು ಘೋಷಿಸಿದ್ದರು ರಾಜ್ಯ ಸರ್ಕಾರ ಘೋಷಿಸಿತ್ತು. ಈಗ ಮತ್ತೊಮ್ಮೆ ಜಾತಿ ಗಣತಿ ವರದಿ ಸೋರಿಕೆ ಯಾಗಿರುವುದು ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ. ವರದಿ ಜಾರಿಯಾದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿಯೇ ಬಿರುಕು ಮೂಡುವ ಸಾಧ್ಯತೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

