ಹುಬ್ಬಳ್ಳಿ : ಕೇಂದ್ರಿಯ ಲೋಕಸೇವಾ ಆಯೋಗದ ( ಯುಪಿಎಸ್ಸಿ ) ನಡೆಸುವ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021 ನೆ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಹುಬ್ಬಳ್ಳಿಯ ತಪ್ಪಿನ್ ಬಾನು ದವಡಿ 482 ನೇ ಬ್ಯಾಂಕ್ ಪಡೆದಿದ್ದಾರೆ. ಹುಬ್ಬಳ್ಳಿ ನಗರದ ಖಾದರ್ ಬಾಷಾ ಹಾಗೂ ಹಸೀನ ಬೇಗಂ ದಂಪತಿ ಪುತ್ರಿ ತಹೀನ್ ಬಾನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಮ್ ಯುವತಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣದಂದ ಪಿಯುಸಿವರೆಗೆ ಹುಬ್ಬಳ್ಳಿ …
Read More »ಟಿಕಾಯತ್ ಮುಖಕ್ಕೆ ಮಸಿ: ಧಾರವಾಡದಲ್ಲಿ ಪ್ರತಿಭಟನೆ
ಧಾರವಾಡ: ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣವನ್ನು ಖಂಡಿಸಿ ಧಾರವಾಡದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ಧಾರವಾಡದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಖಂಡರು, ಟಿಕಾಯತ್ ಅವರ ಮುಖಕ್ಕೆ ಮಸಿ ಬಳಿದವರ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ಅವರನ್ನು ಬಂಧಿಸಿ, ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಟಿಕಾಯತ್ ಅವರ ಮುಖಕ್ಕೆ ನಿನ್ನೆ …
Read More »ನಾನು ಹುಟ್ಟಿದ್ದು ಇತ್ತೀಚೆಗೆ, ಹಿರಿಯರಾದ ಸಿದ್ದರಾಮಯ್ಯನವರುರಿದ್ದಾರೆ: ಡಿಕೆಶಿ
ಬೆಂಗಳೂರು: ನಾನು ಹುಟ್ಟಿದ್ದು ಇತ್ತೀಚೆಗೆ. ನನಗೆ 60 ವರ್ಷ. ಸಿದ್ದರಾಮಯ್ಯನವರು ಹಿರಿಯರಿದ್ದಾರೆ. ಆರ್ಯ ದ್ರಾವಿಡ ವಿಚಾರಗಳ ಬಗ್ಗೆ ಪುಸ್ತಕಗಳನ್ನು ಓದಿಕೊಂಡು ಪ್ರತಿಕ್ರಿಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್ಅವರಿಗೆ ಆರ್ಯ ದ್ರಾವಿಡ ವಿಚಾರವಾಗಿ ಪ್ರಶ್ನೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ಸಿದ್ದರಾಮಯ್ಯ ನವರು ಹಿರಿಯರಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಿದ್ದಾರೆ. ನಾನು ಇದರ ಬಗ್ಗೆ ಹೆಚ್ಚು ಅಧ್ಯಯನ ಮಾಡಿಲ್ಲ. ನಾನು ಹುಟ್ಟಿದ್ದು …
Read More »ಸಿದ್ದಾರೂಢಸ್ವಾಮಿ ಮಠಕ್ಕೆ ಹರಿದ ಬಂದ ಭಕ್ತರ ಕಾಣಿಕೆ
ಹುಬ್ಬಳ್ಳಿ: ನಗರದ ಸಿದ್ದಾರೂಢಸ್ವಾಮಿ ಮಠದಲ್ಲಿ ಏ .20 ರಿಂದ ಮೇ . 25 ರ ವರೆಗಿನ ಕಾಣಿಕೆ ಪೆಟ್ಟಿಗೆಗಳನ್ನು ತೆರೆದು ಎಣಿಕೆ ಮಾಡಲಾಗಿದ್ದು , 27.13 ಲಕ್ಷ ಹಣ , 17,711 ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿ ಸಂಗ್ರಹವಾಗಿದೆ.ಮೇ .25 ರಂದು ಕಾಣಿಕೆ ಪೆಟ್ಟಿಗೆಗಳನ್ನು ಬ್ಯಾಂಕ್ ಆಫ್ ಇಂಡಿಯಾ , ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ಮತ್ತು ಭಕ್ತರ ಸಮ್ಮುಖದಲ್ಲಿ ತೆರೆದು ಎಣಿಕೆ ಮಾಡಲಾಗಿ 27 …
Read More »ಕ್ರಿಕೆಟ್ ಬೇಟಿಂಗ್ : ವ್ಯಕ್ತಿ ಬಂಧನ
ಹುಬ್ಬಳ್ಳಿ : ಗೋಕುಲ ರಸ್ತೆ ಯಾತ್ರಿ ಗಾರ್ಡನ್ ಎದುರು ರಾತ್ರಿ ಪುಣೆಯಲ್ಲಿ ನಡೆಯುತ್ತಿರುವ ಮಹಿಳೆಯರ ಕ್ರಿಕೆಟ್ ಪಂದ್ಯದ ವೇಳೆ ಮೊಬೈಲ್ ಮೂಲಕ ಬೆಟ್ಟಿಂಗ್ ಆಡುತ್ತಿದ್ದ ಸಂಭಾಜಿ ಲೇಔಟ್ನ ವಿಶಾಲ ಎಂಬಾತನನ್ನು ಗೋಕುಲ ರಸ್ತೆ ಪೊಲೀಸರು ಬಂಧಿಸಿ , ಒಂದು ಐಫೋನ್ ಮತ್ತು 2,500 ನಗದು ವಶಪಡಿಸಿಕೊಂಡಿದ್ದಾರೆ. ಗೋಕುಲ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Read More »ಉದ್ಯೋಗ ಕೊಡುವುದಾಗಿ ನಂಬಿಸಿ ವಂಚನೆ
ಧಾರವಾಡ:ನಗರದ ಕೆಯುಡಿ ಕ್ಯಾಂಪಸ್ನ ಮಹಿಳೆಯೊಬ್ಬರಿಗೆ ಅಪರಿಚಿತನೊಬ್ಬಕೆನಡಾದ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ , ವಿವಿಧ ಶುಲ್ಕಗಳ ನೆಪದಲ್ಲಿ ಆನ್ಲೈನ್ ಮೂಲಕ 4 , 31,800 ರೂ ವರ್ಗಾಯಿಸಿಕೊಂಡು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ ಸಮೀನ ಎಂಬುವರಿಗೆ ವಂಚಕನು 2021 ರ ಆ 5 ರಂದು ಕರೆಮಾಡಿ , ಕೆನಡಾದ ಕೊನ್ನನಿಗಲ್ ಗ್ರುಪ್ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಹಂತ ಹಂತವಾಗಿ ತನ್ನ ಬ್ಯಾಂಕ್ ಖಾತೆಗೆ ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು …
Read More »UPSC ಫಲಿತಾಂಶ : ಇಲ್ಲಿದೆ ನೋಡಿ ಕನ್ನಡಿಗರ ಟಾರ್ಪರ್ ಲಿಸ್ಟ್
ಬೆಂಗಳೂರು : ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. ಟಾಪ್ 10ರಲ್ಲಿ ಮೊದಲ ನಾಲ್ಕು Rank ಮಹಿಳೆಯರ ಪಾಲಾಗಿವೆ. ಕನ್ನಡಿಗರು ಸಹ ಸಾಧನೆಗೈದಿದ್ದಾರೆ. ದಾವಣಗೆರೆಯ ಅವಿನಾಶ್ 31ನೇ Rank ಪಡೆದಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವಿನಾಶ್ ಅವರು ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಕುಟುಂಬಸ್ಥರ ಸಂತಸಕ್ಕೆ ಕಾರಣವಾಗಿದೆ. ಕನ್ನಿಡಿರ 25 ಅಭ್ಯರ್ಥಿಗಳು ಮೇಲುಗೈ ದಾವಣಗೆರೆಯ ಅವಿನಾಶ್ …
Read More »ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ಸಾವು
ಬಳ್ಳಾರಿ: ಕೆರೆಯಲ್ಲಿ ಮುಳಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ಸಿರಗುಪ್ಪ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಸೋಪು ನೀರಿಗೆ ಬಿದ್ದಿದ್ದರಿಂದ ಸೋಪು ತೆಗೆಯಲು ಒಬ್ಬಕಿ ಮುಂದಾಗಿದ್ದಾಳೆ. ನೀರಿಗೆ ಜಾರಿ ಬಿದ್ದಿದ್ದಾಳೆ. ಆದರೆ ಅವಳಿಗೆ ಈಜು ಬಾರದೆ ಮುಳಗತೊಡಗಿದ್ದಾಳೆ. ಅದನ್ನು ಕಂಡು ಮತ್ತೊಬ್ಬ ಬಾಲಕಿ ಸಹಾಯಕ್ಕೆ ನೀರಿಗೆ ಇಳಿದಿದ್ದಾಳೆ. ಅಷ್ಟೇ… ಇಬ್ಬರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶ್ರೀಧರಗಡ್ಡೆ ಗ್ರಾಮದ …
Read More »ಮೇಳಕ್ಕೆ ಬಂದಿದ್ದ ಇಬ್ಬರು ಸಮುದ್ರದ ಪಾಲು
ಮಂಗಳೂರ: ಪಣಂಬೂರು ಬೀಚ್ ನಲ್ಲಿ ಮುಳುಗಿ ಇಬ್ಬರು ಜಲಸಮಾಧಿಯಾಗಿರುವ ಘಟನೆ ನಡೆದಿದೆ. ಮೈಸೂರಿನ ದಿವಾಕರ ಆರಾಧ್ಯ (40), ನಿಂಗಪ್ಪ(65) ಮೃತರು. ಇವರಿಬ್ಬರೂ ಮಂಗಳೂರಿನ ಹಲಸಿನ ಮೇಳಕ್ಕೆ ಬಂದಿದ್ದವರು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ರೆಸ್ಟೋರೆಂಟ್ನಲ್ಲಿ ಯುವಕನ ಬರ್ಬರ ಕೊಲೆ
ಬೆಂಗಳೂರ: R.R.ನಗರದ ರೆಸ್ಟೋರೆಂಟ್ನಲ್ಲಿ ಯುವಕನ ಬರ್ಬರ ಕೊಲೆಯಾಗಿದೆ. ಚಾಕುವಿನಿಂದ ಇರಿದು ಮಿಲನ್ ಬರ್ಲಾ (25) ಎಂಬ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ ಆರ್ಯನ್ ಪುಷ್ಕರ್ (20) ಎಂಬುವನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





