ಹುಬ್ಬಳ್ಳಿ : ಕೇಂದ್ರಿಯ ಲೋಕಸೇವಾ ಆಯೋಗದ ( ಯುಪಿಎಸ್ಸಿ ) ನಡೆಸುವ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021 ನೆ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಹುಬ್ಬಳ್ಳಿಯ ತಪ್ಪಿನ್ ಬಾನು ದವಡಿ 482 ನೇ ಬ್ಯಾಂಕ್ ಪಡೆದಿದ್ದಾರೆ. ಹುಬ್ಬಳ್ಳಿ ನಗರದ ಖಾದರ್ ಬಾಷಾ ಹಾಗೂ ಹಸೀನ ಬೇಗಂ ದಂಪತಿ ಪುತ್ರಿ ತಹೀನ್ ಬಾನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಮ್ ಯುವತಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣದಂದ ಪಿಯುಸಿವರೆಗೆ ಹುಬ್ಬಳ್ಳಿ ನಗರದಲ್ಲೇ ವ್ಯಾಸಂಗ ಮಾಡಿರುವ ತಪ್ಪಿನ್ ಬಾನು ಬಳಿಕ ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಬರೆದು ಆಯ್ಕೆಯಾದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

