Breaking News

BigTv News

ವಿಜಯಾನಂದ ಶೆಟ್ಟಿ ಅವರ ತಂದೆ ನಿಧನ

ಹುಬ್ಬಳ್ಳಿ : ಭಾರತೀಯ ಜನತಾ ಪಕ್ಷ , ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲಾ ಪ್ರಧಾನಕಾರ್ಯದರ್ಶಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ ಅವರ ತಂದೆಯವರಾದ ಶ್ರೀ.ಶೇಖರ್ ಶೆಟ್ಟಿ ಅವರು ನಿಧನರಾಗಿದ್ದು ಭಗವಂತ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಮುಖಂಡ ರಾಮ ಹಿರೇಮಠ ಸಂತಾಪ ಸೂಚಿಸಿದ್ದಾರೆ .

Read More »

ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಕೇಂದ್ರ ಸಚಿವ ಭೇಟಿ

ಧಾರವಾಡ: ನಗರದ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಭೇಟಿ ನೀಡಿ , ದೇವಸ್ಥಾನದ ಮುಂದಿನ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಚರ್ಚಿಸಿದರು . ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಅರವಿಂದ ಬೆಲ್ಲದ್ ಮತ್ತು ಅಮೃತ ದೇಸಾಯಿ ಹಾಗೂ ದೇವಾಲಯದ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು .

Read More »

ಮೇಯರ್, ಉಪಮೇಯರ್ ಗೆ ಮಾಜಿ ಸಿಎಂಯಿಂದ ಸನ್ಮಾನ

ಹುಬ್ಬಳ್ಳಿ : ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಮಹಾಪೌರ ಸ್ಥಾನಕ್ಕೆ ಆಯ್ಕೆಯಾದ ಈರೇಶ್ ಅಂಚಟಗೇರಿ ಮತ್ತು ಉಪಮಹಾಪೌರ ಸ್ಥಾನಕ್ಕೆ ಆಯ್ಕೆಯಾದ ಶ್ರೀಮತಿ ಉಮಾ ಮುಕುಂದ ಅವರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಭಿನಂದಿಸಿ ಸನ್ಮಾನ ಮಾಡಿದರು . ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ , ಶ್ರೀ ಮಹೇಶ್ ಟೆಂಗಿನಕಾಯಿ , ಹಾಗೂ ಪಕ್ಷದ , ಮುಖಂಡರು , ಪದಾಧಿಕಾರಿಗಳು …

Read More »

ಮೇ . 30ರಂದು ಜನಸಂಪರ್ಕ ಕಾರ್ಯಾಲಯ ಆರಂಭ

ಧಾರವಾಡ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಗಣಿ ಮತ್ತು ಭೂವಿಜ್ಞಾನ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಅವರ ಜನಸಂಪರ್ಕ ಕಾರ್ಯಾಲಯವು ಮೇ . 30 ಸೋಮವಾರದಿಂದ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ವಾರ್ತಾಭವನದ ನೆಲಮಹಡಿಯಲ್ಲಿ ಪ್ರಾರಂಭವಾಗಲಿದೆ . ಜಿಲ್ಲೆಯ ಸಾರ್ವಜನಿಕರು ಸಚಿವರ ಸಂಪರ್ಕ , ಅಹವಾಲು ಸಲ್ಲಿಕೆಗೆ ಈ ಕಚೇರಿಯನ್ನು ಸಂಪರ್ಕಿಸಬಹುದು . ಕರ್ನಾಟಕ ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ …

Read More »

ಮತ್ತೇ ಶಾಲೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು : ತರಗತಿಗೆ ನಿರಾಕರಿಸಿದ ಪ್ರಾಂಶುಪಾಲೆ

ಮಂಗಳೂರು: ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ.ಈಗಾಗಲೇ ಹೈಕೋರ್ಟ್ ಶಾಲಾ- ಕಾಲೇಜುಗಳಿಗೆ ಹಿಜಾಬ್ ಧರಿಸಿ ಹೋಗುವಂತಿಲ್ಲ ಎಂದು ತೀರ್ಮಾನ ನೀಡಿದೆ. ಆದರೂ ಮಂಗಳೂರಿನ ವಿವಿ ಘಟಕ ಕಾಲೇಜಿಗೆ ಮುಸ್ಲಿಂ ಸಮುದಾಯದ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಬಾರದಂತೆ ಪ್ರವೇಶ ನಿರಾಕರಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದರು. ಅಲ್ಲೂ ವಿದ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ಧಿ ಹೇಳಿದ್ದಾರೆ. …

Read More »

ಜೂನ್‌ 5ರವರೆಗೆ ಮುಂಗಾರು ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ನಾನಾ ಕಾರಣಗಳಿಂದ ವಿಳಂಬಗೊಂಡಿದ್ದ ಬಹುನಿರೀಕ್ಷಿತ ಮುಂಗಾರು ಮಳೆ ಜೂನ್‌ 5ಕ್ಕೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ವೇಳೆ ಇನ್ನು ಕೇವಲ 2 ಅಥವಾ 3 ದಿನಗಳಲ್ಲಿ ನೆರೆ ರಾಜ್ಯ ಕೇರಳಕ್ಕೂ ಮುಂಗಾರು ಪ್ರವೇಶವಾಗಲಿದೆ ಎನ್ನಲಾಗಿದೆ.ಪ್ರಸ್ತುತ ಹವಾಮಾನದ ಅನ್ವಯ ಮೇ 30 ರಿಂದ ಜೂ.2 ರವರೆಗೆ ಮುಂಗಾರು ಮಾರುತಗಳ ಪ್ರವೇಶವಾಗಲಿದೆ ಎಂದು ಐಎಂಡಿ ಅಂದಾಜಿಸಿದೆ.

Read More »

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವಂದಿತಾ ಶರ್ಮಾ ನೇಮಕ

ಬೆಂಗಳೂರು : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವಂದಿತಾ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ ರವಿಕುಮಾರ್ ಅವರ ವಯೋ ನಿವೃತ್ತಿಯಿಂದ ಇದೇ ಮೇ 31 ರಂದು ತೆರವಾಗಲಿರುವ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986 ನೇ ಸಾಲಿನ ತಂಡದ ವಂದಿತಾ ಶರ್ಮಾ ಉತ್ತರಾಧಿಕಾರಿಯಾಗಲಿದ್ದಾರೆ.ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ

Read More »

2021 ಕೆಎಎಸ್ ವಿರುದ್ಧ ಸಿಡಿದೆದ್ದ ಸುರೇಶ್ ಕುಮಾರ್

ಬೆಂಗಳೂರು: 2021ರ ಕೆಎಎಸ್ ಮುಖ್ಯ ಪರೀಕ್ಷೆ ಮೌಲ್ಯಮಾಪನ ಕುರಿತಂತೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪತ್ರ ಬರೆದು ಮೌಲ್ಯ ಮಾಪನ ಆರಂಭಗೊಂಡಿದ್ಯಾ ಅಥವಾ ಇಲ್ಲವಾ ಎಂಬುದಾಗಿ ಕೋರಿದ್ದರು. ಆದ್ರೇ.. ಈವರೆಗೆ ಯಾವುದೇ ಉತ್ತರ ಕರ್ನಾಟಕ ಲೋಕಸೇವಾ ಆಯೋಗದಿಂದ ಬಾರದ ಕಾರಣ, ಕೆಪಿಎಸ್ಸಿ ವಿರುದ್ಧ ಸಿಡಿದೆದ್ದಿದ್ದಾರೆ. ಮೇ.31, 2022ರಂದು ಆಯೋಗದ ಮುಂದೆ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, 2021ರ ಫೆಬ್ರವರಿಯಲ್ಲಿ ನಡೆದಿದ್ದಂತ ಕೆಎಎಸ್ …

Read More »

ಕಾರ್ ರಿವರ್ಸ್ :ಚಕ್ರಕ್ಕೆ ಸಿಲುಕಿ ಮಗು ಸಾವು

ಶಿವಮೊಗ್ಗ: ಕಾರ್ ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಚಕ್ರಕ್ಕೆ ಸಿಲುಕಿ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಡೇಕಲ್ ನ ಶಮೀನಾ ಖಾನಂ ಅವರು ಮಕ್ಕಳೊಂದಿಗೆ ಸೂಳೆಬೈಲ್ ನಲ್ಲಿರುವ ಸಹೋದರಿ ಮನೆಗೆ ಸಹೋದರ ಇನಾಯತ್ ವುಲ್ಲಾ ಖಾನ್ ಅವರ ಕಾರ್ ನಲ್ಲಿ ಆಗಮಿಸಿದ್ದಾರೆ.ಸಹೋದರಿ ಮನೆ ಬಳಿ ಸೋದರಿ ಮತ್ತು ಮಕ್ಕಳನ್ನು ಇಳಿಸಿ ಮನೆಗೆ ಮರಳಲು ಇನಾಯತ್ ವುಲ್ಲಾ ಖಾನ್ ಅವರು ಕಾರ್ ತಿರುಗಿಸಿಕೊಳ್ಳುವ ವೇಳೆ ಮಗು ಬೀಬೀ ಲೀಜಾ …

Read More »

ಇಂದು ಸಂಜೆಯೊಳಗೆ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ತೀರ್ಮಾನ : ಬೊಮ್ಮಾಯಿ

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದ ಬಗ್ಗೆ ಇಂದು ಸಂಜೆಯೊಳಗೆ ತೀರ್ಮಾನವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಅಭ್ಯರ್ಥಿ ಆಯ್ಕೆ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಇಂದು ಸಂಜೆಯೊಳಗೆ ತೀರ್ಮಾನ ಮಾಡುತ್ತಾರೆ.ಮೂರನೇ ಅಭ್ಯರ್ಥಿಯ ಬಗ್ಗೆಯೂ ಇಂದು ಸಂಜೆಯೊಳಗೆ ತೀರ್ಮಾನವಾಗಲಿದೆ ಎಂದರು.

Read More »