Breaking News

BigTv News

ಭೀಕರ ಅಪಘಾತ : ಕಾಂಗ್ರೆಸ್ ಮುಖಂಡ ಸಾವು

ಸಿದ್ದಾಪುರ (ಉತ್ತರ ಕನ್ನಡ): ಭೀಕರ ಅಪಘಾತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್​ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಘಟಕ ಅಧ್ಯಕ್ಷರಾಗಿದ್ದ ಮಂಜುನಾಥ ಬಿ. ಗೌಡ ಕಬ್ಬಿನ್ಮನೆ ಮೃತಪಟ್ಟಿದ್ದಾರೆ. ಮದುವೆ ದಿಬ್ಬಣದ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮದುವೆ ಮುಗಿಸಿ ದಿಬ್ಬಣದ ಜನರು ಕಾರಿನಲ್ಲಿ ತೆರಳುತ್ತಿದ್ದರು. ಇದು ಎದುರುಗಡೆ ಬರುತ್ತಿದ್ದ …

Read More »

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಆರ್ಭಟ

ಬೆಂಗಳೂರು: ಇನ್ನೂ ಎರಡು ದಿನ ಮಳೆ ಆರ್ಭಟ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಲಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Read More »

ತಾಳಿ ಕಟ್ಟು ವೇಳೆ ವಧುವಿನ ಹೈಡ್ರಾಮ : ಮಾತುಕತೆಯಲ್ಲಿ ಸುಖ್ಯಾಂತ ಕಂಡ ಮದುವೆ

ಮೈಸೂರು : ತಾಳಿ ಕಟ್ಟುವಾಗ ಒಲ್ಲೇ ಎಂದು ಮದುವೆ ನಿಲ್ಲಿಸಿದ್ದ ಪ್ರಕರಣ ಸುಖ್ಯಾಂತ ಕಂಡಿದೆ. ಎರಡು ಕುಟುಂಬಸ್ಥರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ವಧುವಿನ ಮನೆಯವರು ವರನ ಕಡೆಯವರು ನೀಡಿದ್ದ ಆಭರಣವನ್ನು ವಾಪಸ್ ನೀಡಿ, ಮದುವೆಯ ನಷ್ಟವನ್ನು ಭರಿಸಿದ್ದಾರೆ. ಹಣ ಹಾಗೂ ಚಿನ್ನಾಭರಣವನ್ನು ವಾಪಸ್ ಪಡೆದು ವರನ ಕುಟುಂಬಸ್ಥರು ಹೆಚ್.ಡಿ.ಕೋಟೆಗೆ ವಾಪಸ್ ಮರಳಿದ್ದಾರೆ. ವಧುವಿನ ಕುಟುಂಬಸ್ಥರು ಆಟೋದಲ್ಲಿ ಮನೆಗೆ ವಾಪಸ್ ಹೋಗಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಈಕೆಯ …

Read More »

ತೈಲ ಬೆಲೆ ಇಳಿಕೆ ಕುರಿತು ವ್ಯಂಗ್ಯ ಮಾಡಿದ ರಾಹುಲ್ ಗಾಂಧಿ

ಕೇಂದ್ರ ಸರ್ಕಾರದ ತೈಲ ಬೆಲೆ ಇಳಿಕೆಯ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದು, ಇನ್ನು ನಿತ್ಯ ಬೆಲೆ ಏರಿಕೆ ನೀರಿಕ್ಷಿಸಬಹುದು ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಇನ್ನು ಪುನಃ ಪ್ರತಿದಿನವೂ 0.8 ಮತ್ತು 0.3 ಏರಿಕೆಯನ್ನು ನಿರೀಕ್ಷಿಸಬಹುದು’ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕೇಂದ್ರ ಸರಕಾರದ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಮೇ 1, 2020ರಲ್ಲಿ ಒಂದು ಲೀಟರ್‌ ಪೆಟ್ರೋಲ್‌ …

Read More »

ಗಾಂಜಾ ಮಾರುತ್ತಿದ್ದ ನಾಲ್ವರ ಸೆರೆ

ಬೆಳಗಾವಿ: ಗೋಕಾಕ್​ನಲ್ಲಿ ಗಾಂಜಾ, ಹೆರಾಯಿನ್ ಮಾರುತ್ತಿದ್ದ ನಾಲ್ವರನ್ನು ಸೆರೆಹಿಡಿಯಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಮೂವರು ಗಾಂಜಾ, ಹೆರಾಯಿನ್​​​​​​ ಮಾರಲು ಬಂದಿದ್ದರು. ಗಾಂಜಾ, ಹೆರಾಯಿನ್ ಖರೀದಿಗೆ ಬಂದಿದ್ದ ಓರ್ವನನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 1 ಕಾರು, ಒಂದು ದ್ವಿಚಕ್ರ ವಾಹನ, 5 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.

Read More »

ವಿಗ್ರಹ ಕದ್ದ ಕಳ್ಳರು: ಸ್ಥಳಕ್ಕೆ ಪೋಲಿಸರು ಭೇಟಿ

ಬೆಳಗಾವಿ: ದೇವಸ್ಥಾನದ ಗರ್ಭಗುಡಿಯಲ್ಲಿದ್ದ ದೇವರ ವಿಗ್ರಹವನ್ನು ಕಳ್ಳರು ಕದ್ದಿರುವ ಘಟನೆ. ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ. ಕೊಕಟನೂರ ಗ್ರಾಮದ ಬೀರೇಶ್ವರ ದೇವಸ್ಥಾನದ ದೇವರ ವಿಗ್ರಹ ಕದ್ದು ಪರಾರಿಯಾಗಿದ್ದು, ತಡರಾತ್ರಿ ನಡೆದ ಈ ಘಟನೆ ಬೆಳಿಗ್ಗೆ ಪೂಜಾರಿ ಪೂಜೆಗೆ ಬಂದಾಗ ಬೆಳಕಿಗೆ ಬಂದಿದೆ. ವಾಮಾಚಾರಿಗಳು, ನಿಧಿಗಳ್ಳರು ದೇವರ ಮೂರ್ತಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Read More »

ಹೊರಟ್ಟಿಗೆ ಟಿಕೆಟ್ ಫೈನಲ್ ಶಾಸಕ ಅರವಿಂದ ಬೆಲ್ಲದ

ಧಾರವಾಡ : ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ವಿಚಾರವಾಗಿ ನಮ್ಮ ಪಾರ್ಟಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಿದೆಟಿಕೆಟ್ ಹೊರಟ್ಟಿ ಅವರಿಗೆ ಫೈನಲ್ ಆಗುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ . ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ಫೈನಲ್ ಆಗುತ್ತದೆ . ಮೋಹನ್ ಲಿಂಬಿಕಾಯಿ ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ .ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ . ಆದರೆ …

Read More »

ಕಲಘಟಗಿಯಲ್ಲಿ ಮನೆಗಳಿಗೆ ಹಾನಿ : ಅಧಿಕಾರಿಗಳು ಭೇಟಿ

ಕಲಘಟಗಿ: ಪಟ್ಟಣದ ಸುರಿದ ಭಾರಿ ಮಳೆಯಿಂದಾಗಿ ಈಗ ಹಲವಾರು ಮನೆಗಳು ಕುಸಿದು ಬಿದ್ದಿರುವ ಘಟನೆ ಪಟ್ಟಣದಲ್ಲಿಂದಿ ನಡೆದಿದೆ . ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಪರಿಣಾಮ ಜನಜೀವನ ಅಸ್ವಸ್ಥತಗೊಂಡಿದೆ . ಮೂವತ್ತಕ್ಕೂ ಹೆಚ್ಚು ಮನೆಗಳು ಕುಸಿತ ಕಂಡಿದ್ದು ಈಗ ಕುಟುಂಬಸ್ಥರು ಅಂಗನವಾಡಿ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ . ಇನ್ನೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡದ ಕಾರಣ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ .

Read More »

ಮನೆ ಕುಸಿತ : ಶಾಸಕರು ಭೇಟಿ

ನವಲಗುಂದ: ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿದ ಭಾರೀ ಮಳೆಗೆ ಹಾನಿಗೊಳಗಾದ ನೂರಾನಿ ಪ್ಲಾಟ್ ಬಳಿಯ ಗುರುನಾಥ ತಡಸಿ ಅವರ ಮನೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರೊಂದಿಗೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಬೇಗ ಇವರಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದರು .

Read More »

ವೈದ್ಯಾಧಿಕಾರಿಗಳು ಸಮಯ ಅಭಾವದಿಂದ ಹಸು ಸಾವು

ಕಲಘಟಗಿ: ಪಟ್ಟಣದ ಪಶು ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದಿರುವುದಕ್ಕೆ ಆಕಳೊಂದು ಮೃತಪಟ್ಟಿರುವ ಘಟನೆ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ . ದೇವರ ಹೆಸರಿನಲ್ಲಿ ಬಿಟ್ಟ ಆಕಳೊಂದು ಹಸು ಹಾಕುವ ಸಂದರ್ಭದಲ್ಲಿ ತೀವ್ರ ನೋವಿನಂದ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಕೂಡಲೇ ಪಶುವೈದ್ಯರಿಗೆ ಕರೆ ಮಾಡಿದ್ದಾರೆ . ಆದರೆ ವೈದ್ಯರು ಸೂಕ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸದಿರುವುದಕ್ಕೆ ಆಕಳು ಮೃತಪಟ್ಟಿದೆ . ಇನ್ನು ವೈದ್ಯರ ನಿರ್ಲಕ್ಷದಿಂದಲೇ ಆಕಳು ಮೃತಪಟ್ಟಿದೆ ಎಂದು …

Read More »