ಕುಷ್ಟಗಿ: ಕುಷ್ಟಗಿ ಪಟ್ಟಣದ ಬಾಲಕರ ಪೌಢಶಾಲೆಯಲ್ಲಿ 8, ಹನುಮಸಾಗರ ಬಾಲಕಿಯರ ಪೌಢಶಾಲೆಯಲ್ಲಿ 6, ಚಳಗೇರಾ ಪ್ರಾಥಮಿಕ ಶಾಲೆಯಲ್ಲಿ 8 ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದ ಹಿನ್ನಲೆ ತಾಲೂಕಿನ ಮೂರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿರುವ ಹಿನ್ನೆಲೆಯಲ್ಲಿ ಸದರಿ ಶಾಲೆಗಳಿಗೆ 5 ದಿನಗಳ ರಜೆ ಘೋಷಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ, ಹೋಮ್ ಐಸೋಲೇಷನ್ಗೆ ಸಲಹೆ ನೀಡಲಾಗಿದ್ದು, ತಾಲೂಕಿನಲ್ಲಿ ಈ ಮೂರೂ ಶಾಲೆಗಳಿಗೆ ಡಿಡಿಪಿಐ ಆದೇಶದ ಮೇರೆಗೆ 5 ದಿನಗಳ ರಜೆ ಘೋಷಿಸಲಾಗಿದೆ. …
Read More »ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ
ಬೆಂಗಳೂರು: ಬೆಲೆ ಏರಿಕೆ ಬಿಸಿ ಮತ್ತೆ ಸಾರ್ವಜನಿಕರಿಗೆ ತಟ್ಟಲಿದೆಯೇ ಎಂಬ ಆತಂಕ ಎದುರಾಗಿದ್ದ ಬೆನ್ನಲ್ಲೇ ಇದೀಗ ಜನರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದಾರೆ. ಸಧ್ಯಕ್ಕೆ ಬೆಲೆ ಏರಿಕೆಯ ನಿರ್ಧಾರ ಇಲ್ಲ ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಹಾಲು, ನೀರು, ವಿದ್ಯುತ್ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾಪ ಬಂದಿದೆ. ಆಡಳಿತದಲ್ಲಿ ದರ ಏರಿಕೆ ಪ್ರಸ್ತಾಪ ಬರುವುದು ಸಹಜ. ಆದರೆ ದರ ಏರಿಕೆ ಬಗ್ಗೆ ಇನ್ನೂ ಯಾವುದೇ …
Read More »ರಾತ್ರೋರಾತ್ರಿ ಪ್ರತಿಭಟನೆಗಿಳಿದ ರೈತರು: ಬೇಗನೆ ಹೋಟೆಲ್ ಬಂದ್ ಮಾಡಿಸಿದ್ದಕ್ಕೆ ಉಟಕ್ಕಾಗಿ ಪರದಾಡಿದ ಅನ್ನದಾತನ….!
ಹುಬ್ಬಳ್ಳಿ: ಪೊಲೀಸರು ಬೇಗನೆ ಹೊಟೇಲುಗಳನ್ನು ಬಂದ್ ಮಾಡಿಸಿದ್ದರಿಂದ ಊಟ ಸಿಕ್ಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ನೂರಾರು ರೈತರು ಇಲ್ಲಿನ ಎಪಿಎಂಸಿ ಎದುರು ಹು-ಧಾ ಮುಖ್ಯ ರಸ್ತೆ ಹಾಗೂ ಬಿಆರ್ ಟಿಎಸ್ ರಸ್ತೆ ಬಂದ್ ಮಾಡಿ ರಾತ್ರಿ ಪ್ರತಿಭಟಿಸಿದರು. ಮೆಣಸಿನಕಾಯಿ ಮಾರಾಟಕ್ಕೆ ಧಾರವಾಡ ಸೇರಿದಂತೆ ಗದಗ, ಬಾಗಲಕೋಟೆ ಜಿಲ್ಲೆ ಹಾಗೂ ಬೇರೆ ಬೇರೆ ಊರುಗಳಿಂದ ರೈತರು ಬಂದಿದ್ದರು. ಮೆಣಸಿನಕಾಯಿ ತೂಕ ಆಗಿಲ್ಲ. ಪೊಲೀಸರು ಬೇಗನೇ ಎಲ್ಲ ಹೋಟೆಲ್ ಗಳನ್ನು ಬಂದ್ ಮಾಡಿಸಿದ್ದಾರೆ. ಹೀಗಾಗಿ …
Read More »ಸೋಪ್ಪು ಬೀದಿಗೆ ಎಸೆದಿದ್ದ ರೆಬಲ್ ರೈತನಿಗೆ ಸಚಿವ ಮುನಿರತ್ನ ಪರಿಹಾರ
ವಿಜಯಪುರ: ತರಕಾರಿ ಮಾರಲು ಪೊಲೀಸರು ತಡೆಯೊಡ್ಡಿದ್ದರು ಎಂದು ಆರೋಪಿಸಿ ರಸ್ತೆ ಮೇಲೆ ಸೊಪ್ಪು ಎಸೆದು ಪ್ರತಿಭಟಿಸಿದ್ದ ಡೋಮನಾಳ ಗ್ರಾಮದ ರೈತ ಭೀಮನಗೌಡ ಬಿರಾದಾರಗೆ ತೋಟಗಾರಿಕೆ ಸಚಿವ ಮುನಿರತ್ನ ಸೋಮವಾರ ವಿಡಿಯೊ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಸಾಂದರ್ಭಿಕ ಚಿತ್ರ ಸಚಿವರು ನನ್ನೊಂದಿಗೆ ಮಾತನಾಡಿ ವಿಷಾದಿಸಿದಿರು. ಸರ್ಕಾರ ರೈತರ ಪರವಾಗಿದೆ. ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿ, ಪರಿಹಾರವಾಗಿ ₹ 5 ಸಾವಿರವನ್ನು ಫೋನ್ ಪೇ ಮೂಲಕ ನೀಡಿದರು’ ಎಂದು ರೈತ ಬಿರಾದಾರ …
Read More »ಹೆಣ್ಣಿನ ವಿಷಯಕ್ಕೆ ಬಿತ್ತು ಯುವಕನ ಹೆಣ
ಧಾರವಾಡ : ಜಿಲ್ಲೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಸುಮಾರು ಎರಡು ವರ್ಷಗಳಿಂದ ಹೆಣ್ಣು ಮಗಳೊಂದಿಗೆ ಸಲಿಗೆಯಿಂದ ನಡೆದುಕೊಂಡಿದ್ದ ಕ್ಕಾಗಿ ಸಿಟ್ಟು ತಾಳಲಾರದೆ ಯುವಕನ ಜೊತೆಗೆ ಜಗಳವಾಡುತ್ತಿದ್ದಾಗ ಕಲ್ಲಿನಿಂದ ಹೊಡೆದ ಪರಿಣಾಮ ಯುವಕ ಮೂರ್ಛೆ ಬಿದ್ದಿದ್ದು ಅವನನ್ನು ಕೂಡಲೇ ಕೆಎಂಸಿಗೆ ದಾಖಲಿಸಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಮರಣ ಹೊಂದಿರುವ ಘಟನೆ ಇಂದು ನಡೆದಿದ್ದು ಈ ಪ್ರಕರಣ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಕಲಘಟಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ …
Read More »ಹಾಸನದ ಶಾಲೆಗಳಲ್ಲಿ ಕೊರೋನಾ ಮಹಾಸ್ಟೋಟ
ಹಾಸನ : ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಮಕ್ಕಳಿಗೆ ಮತ್ತು ಪೋಷಕರಿಗೆ ಕೊರೋನಾದಿಂದಾಗಿ ತೆಲೆ ನೋವು ಉಂಟಾಗಿದೆ. 20ಕ್ಕೂ ಹೆಚ್ಚು ಶಾಲೆಗಳಿಗೆ ಕೊರೊನಾ ಸೋಂಕು ಹರಡಿದೆ. ಪ್ರತಿ ಶಾಲೆಯಲ್ಲಿ 5ಕ್ಕಿಂತ ಹೆಚ್ಚು ಕೇಸ್ ಗಳು ಪತ್ತೆಯಾಗುತ್ತಿವೆ. ಶಾಲೆಗಳಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಒಂದೇ ದಿನದಲ್ಲಿ 383 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಆದಾಗ್ಯೂ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಿಸುವುದಾಗಲಿ, ಮಕ್ಕಳ …
Read More »ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ
ಬೆಂಗಳೂರು: ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಕಷ್ಟು ಬಾರಿ ಪ್ರತಿಭಟನೆಯ ಹಾದಿ ಹಿಡಿದಿದ್ದರು. ಇದೀಗ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಸಂಕ್ರಾಂತಿ ಹಬ್ಬದಂದು ವಿಶೇಷ ಸುದ್ದಿ ನೀಡಿದ್ದಾರೆ. ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಳ ಮಾಡಿ, ಸಚಿವ ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ. 11 ಸಾವಿರವಿದ್ದ ವೇತನವನ್ನ 28 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 13 ಸಾವಿರ ವಿದ್ಯಾರ್ಥಿ ವೇತನ ಇದ್ದವರಿಗೆ 32 ಸಾವಿರ ಮಾಡಲಾಗಿದೆ. ಇನ್ನು ಫುಲ್ ಟೈಮ್ …
Read More »ಪ್ರಸಾದ್ ಅಬ್ಬಯ್ಯ ಗೆ ಕೊರೊನಾ ದೃಢ
ಹುಬ್ಬಳ್ಳಿ: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು, ವೈದ್ಯರ ಸಲಹೆ ಮೇರೆಗೆ 1 ವಾರ ಕಾಲ ಹೋಂ ಕ್ವಾರಂಟೈನ್ ಆಗಿದ್ದಾರೆ.
Read More »ಶೂಟಿಂಗ್ ವೇಳೆ ನಟಿ ಉಮಾಶ್ರಿಗೆ ಗಾಯ
ಬೆಂಗಳೂರು: ನಟಿ ಉಮಾಶ್ರಿಗೆ ಅವರುಪುಟ್ಟಕ್ಕನ ಮಕ್ಕಳು ಧಾರವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಬಿಸಿ ನೀರು ಕಾಲಿಗೆ ಬಿದ್ದಿದ್ದರಿಂದಬೆಂಗಳೂರಿನ ತಲಘಟ್ಟಪುರದ ಶಂಕರ್ ಸ್ಟೆಷ್ಟಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶೂಟಿಂಗ್ ವೇಳೆ ಕಾಲಿಗೆ ಗಾಯವಾದ ಘಟನೆ ನಡೆದಿದೆ. ಹೀಗಾಗಿ ಗಾಯಕ್ಕೆ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಪಾದಯಾತ್ರೆಯಲ್ಲಿ ಉಮಾಶ್ರೀ ಭಾಗಿಯಾಗಿದ್ದು, ಸದ್ಯ ಕಾಲಿಗೆ ಗಾಯವಾದ ಕಾರಣ ಪಾದಯಾತ್ರೆಗೂ ಸಹ ಗೈರಾಗಿದ್ದಾರೆ.
Read More »ಭಾರತದಲ್ಲಿ ಒಂದೇ ದಿನದಲ್ಲಿ 1,94,720 ಕೋವಿಡ್ ಪತ್ತೆ
ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,94,720 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,94,720 ಕೊರೊನಾ ಕೇಸ್ ಪತ್ತೆಯಾಗಿದ್ದು, 442 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





